Subscribe to Gizbot

ಸ್ಯಾಮ್‌ಸಂಗ್ ಮಾರುಕಟ್ಟೆಗೆ ಬಿಡುಗಡೆ ಮಾಡಲಿರುವ ಟಾಪ್ ಉತ್ಪನ್ನಗಳು

Written By:

ಬಾರ್ಸಿಲೋನಾದಲ್ಲಿ ನಡೆಯಲಿರುವ ಜಗತ್ತಿನ ಅತ್ಯಂತ ದೊಡ್ಡ ಟೆಕ್ ಶೋಗೆ ಕೇವಲ 13 ದಿನಗಳು ಬಾಕಿ ಉಳಿದಿವೆ. ಇನ್ನು ಪ್ರಸಿದ್ಧ ಡಿವೈಸ್‌ಗಳು ಈ ಈವೆಂಟ್‌ನಲ್ಲಿ ತಮ್ಮ ಉತ್ಪನ್ನಗಳನ್ನು ಲಾಂಚ್ ಮಾಡಲಿದ್ದು ಈ ಟೆಕ್ ಶೋ ಜಗತ್ತಿನ ಮಾರುಕಟ್ಟೆಯ ನೋಟವನ್ನೇ ಬದಲಾಯಿಸಲಿದೆ.

ಇನ್ನು ಬ್ಯಾಂಕಾಕ್‌ನಲ್ಲಿ ನಡೆಯುತ್ತಿರುವ ಟೆಕ್ ಶೋದಲ್ಲಿ ಸ್ಯಾಮ್‌ಸಂಗ್ ಅದ್ಭುತ ಉತ್ಪನ್ನಗಳನ್ನು ಲಾಂಚ್ ಮಾಡಿದೆ. ಇಂದಿನ ಲೇಖನದಲ್ಲಿ ಆ ಉತ್ಪನ್ನಗಳು ಯಾವುವು ಬೆಲೆ, ವಿಶೇಷತೆಗಳ ಕಡೆ ನೋಟ ಹರಿಸೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆ ರೂ: 30,499

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7

ಮೊಬೈಲ್ ವಿಭಾಗದಲ್ಲೇ ಮೊದಲ ಘೋಷಣೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ7 ನದಾಗಿತ್ತು. ಇದು ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದ್ದು 5.5 ಇಂಚಿನ ಪೂರ್ಣ ಎಚ್‌ಡಿ, ಡ್ಯುಯಲ್ ಸಿಮ್, 13 ಎಮ್‌ಪಿ ರಿಯರ್ ಕ್ಯಾಮೆರಾ, 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಹೊಂದಿದೆ. 16 ಜಿಬಿ ಮೆಮೊರಿ ಇದರಲ್ಲಿದ್ದು, 2 ಜಿಬಿ RAM ಫೋನ್‌ನಲ್ಲಿದೆ.

ಬೆಲೆ ರೂ 9,900

ಸ್ಯಾಮ್‌ಸಂಗ್ ಗ್ಯಾಲಕ್ಸಿ ಗ್ರ್ಯಾಂಡ್ ಪ್ರೈಮ್ 4ಜಿ

4 ಜಿ ನಿಮ್ಮ ಆಯ್ಕೆಯಾಗಿದ್ದರೆ, ಸ್ಯಾಮ್‌ಸಂಗ್ 3 ಫೋನ್‌ಗಳನ್ನು ಲಾಂಚ್ ಮಾಡಿದೆ. ಈ ಫೋನ್ 5 ಇಂಚಿನ ಕ್ಯುಎಚ್‌ಡಿ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, 5 ಎಮ್‌ಪಿ ಮುಂಭಾಗ ಕ್ಯಾಮೆರಾವನ್ನು ಹೊಂದಿದ್ದು ರಿಯರ್ ಕ್ಯಾಮೆರಾ ಸಾಮರ್ಥ್ಯ 8 ಎಮ್‌ಪಿಯಾಗಿದೆ.

ಬೆಲೆ ರೂ 9,900

ಸ್ಯಾಮ್‌ಸಂಗ್ ಗ್ಯಾಲಕ್ಸಿ ಕೋರ್ ಪ್ರೈಮ್ 4 ಜಿ

ಇನ್ನೊಂದು 4ಜಿ ಸ್ಮಾರ್ಟ್‌ಫೋನ್ ಇದಾಗಿದ್ದು ಒಂದೇ ಬೆಲೆಯಲ್ಲಿ ಸಮಾನ ರೀತಿಯ ವಿಶೇಷತೆಗಳನ್ನು ಒಳಗೊಂಡು ಬಂದಿದೆ. ಇದು 4.5 ಇಂಚಿನ WVGA PLS TFT LCD ಸ್ಕ್ರೀನ್ ಅನ್ನು ಹೊಂದಿದ್ದು, 1.2GHz ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದೆ. ಫೋನ್ 1 ಜಿಬಿ RAM ಅನ್ನು ಪಡೆದುಕೊಂಡು ಬಂದಿದ್ದು, 8 ಜಿಬಿ ಆಂತರಿಕ ಸಂಗ್ರಹ ಇದರಲ್ಲಿದೆ. ಇದನ್ನು 64 ಜಿಬಿಗೆ ವಿಸ್ತರಿಸಬಹುದು ಕ್ಯಾಮೆರಾ 5 ಎಮ್‌ಪಿ ರಿಯರ್ ಆಗಿದ್ದು 2 ಎಮ್‌ಪಿ ಮುಂಭಾಗವಾಗಿದೆ.

ಬೆಲೆ ರೂ 9,900

ಸ್ಯಾಮ್‌ಸಂಗ್ ಗ್ಯಾಲಕ್ಸಿ J1 4ಜಿ

4ಜಿ ಶ್ರೇಣಿಯಲ್ಲಿ ಬರುವ ಅತ್ಯಂತ ಸಣ್ಣ ಫೋನ್ ಇದಾಗಿದ್ದು, 4.3 ಇಂಚಿನ WVGA TFT ಡಿಸ್‌ಪ್ಲೇಯನ್ನು ಡಿವೈಸ್ ಪಡೆದುಕೊಂಡಿದೆ. 5 ಎಮ್‌ಪಿ ಆಟೊ ಫೋಕಸ್ ರಿಯರ್ ಕ್ಯಾಮೆರಾ, 2 ಎಮ್‌ಪಿ ಮುಂಭಾಗ ಕ್ಯಾಮೆರಾ ಇದರಲ್ಲಿದೆ.

ಬೆಲೆ ರೂ 52,000

ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಆಕ್ಟೀವ್

ಇದು ನೀರು ಮತ್ತು ಧೂಳು ಪ್ರತಿರೋಧಕವಾಗಿದ್ದು, ಇದು 52,000 ರೂಪಾಯಿಗಳಲ್ಲಿ ಮಾರುಕಟ್ಟೆಗೆ ಅಡಿಯಿಡುತ್ತಿದೆ. 8 ಇಂಚಿನ ಎಚ್‌ಡಿ ಟ್ಯಾಬ್ಲೆಟ್ ಇದಾಗಿದ್ದು, 1.2GHz ಕ್ವಾಡ್ ಕೋರ್ ಕ್ವಾಲ್‌ಕಾಮ್ APQ 8026 ಪ್ರೊಸೆಸರ್ ಜೊತೆಗೆ 1.5 ಜಿಬಿ ಮೆಮೊರಿ ಹಾಗೂ 16 ಜಿಬಿ ಆಂತರಿಕ ಸಂಗ್ರಹ ಫೋನ್‌ನಲ್ಲಿದೆ. ಇದನ್ನು 64 ಜಿಬಿಗೆ ವಿಸ್ತರಿಸಬಹುದಾಗಿದೆ.

ಸ್ಯಾಮ್‌ಸಂಗ್ ಉತ್ಪನ್ನಗಳು

ಸ್ಯಾಮ್‌ಸಂಗ್ ಸ್ಮಾರ್ಟ್ ಸೈನೇಜ್ ಟಿವಿ

ಸ್ಯಾಮ್‌ಸಂಗ್ ಸ್ಮಾರ್ಟ್ ಸೈನೇಜ್ ಟಿವಿಯನ್ನು ಲಾಂಚ್ ಮಾಡಿದ್ದು, ಇದನ್ನು ವ್ಯವಹಾರಿಕ ಉದ್ದೇಶಗಳಿಗಾಗಿ ರೂಪಿಸಲಾಗಿದೆ ಮನೆ ಮತ್ತು ಕಚೇರಿಗಳಿಗೆ ಕೂಡ ಉತ್ತಮ ಆಯ್ಕೆ ಈ ಟಿವಿಯಾಗಿದ್ದು ಸಣ್ಣ ಮತ್ತು ಮಧ್ಯಮ ವ್ಯವಹಾರಗಳಿಗೆ ಅತ್ಯುತ್ತಮವಾಗಿದೆ.

ಕರ್ವ್ ಮಾನಿಟರ್

ಸ್ಯಾಮ್‌ಸಂಗ್ ಕರ್ವ್ ಮಾನಿಟರ್

ಈ ಈವೆಂಟ್‌ನಲ್ಲಿ ಸ್ಯಾಮ್‌ಸಂಗ್ ಅತ್ಯುನ್ನತ ಹಾಗೂ ಹೊಸದಾದ ಕರ್ವ್ ಮಾನಿಟರ್, ಮಾಡೆಲ್ SE790C ಅನ್ನು ಬಿಡುಗಡೆ ಮಾಡಿದೆ.

ಬ್ಲ್ಯೂಟೂತ್

ಬ್ಲ್ಯೂಟೂತ್ ಸೌಂಡ್‌ ಬಾರ್

ಭಾರತಕ್ಕೆ ಸದ್ಯದಲ್ಲೇ ಬರಲಿರುವ ಈ ಸ್ಲೀಕ್ ಬ್ಲ್ಯೂಟೂತ್, ಸ್ಯಾಮ್‌ಸಂಗ್ SUHD TV ಶ್ರೇಣಿ 55" ಮತ್ತು 65" ಗೆ ಹೇಳಿಮಾಡಿಸಿದ್ದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 8 Devices Launched for Indian Market at Samsung Forum 2015.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot