ನೋಕಿಯಾದ ಸೋಲಿಗೆ ಪ್ರಮುಖವಾಗಿರುವ 8 ಕಾರಣಗಳು

Written By:

ಒಂದು ಕಾಲದಲ್ಲಿ ಮೊಬೈಲ್ ಜಗತ್ತನ್ನು ಆಳಿದ ನೋಕಿಯಾ ಹಠಾತ್ತನೇ ಪಾತಾಳಕ್ಕೆ ಕುಸಿಯಿತು. ಇತರ ಪ್ರಸಿದ್ಧ ಕಂಪೆನಿಗಳ ಪೈಪೋಟಿಯಿಂದಾಗಿ ನೋಕಿಯಾ ನೆಲಕಚ್ಚಿದ್ದು ಇದೀಗ ಇತಿಹಾಸವಾಗಿದೆ. ಬಳಕೆದಾರರ ಕಣ್ಮಣಿ ಎಂದೆನಿಸಿದ್ದ ನೋಕಿಯಾ ಪ್ರಪಾತ ಕಂಡಿದ್ದಾದರೂ ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡಲಿರುವೆವು.

ಹೌದು ಟಾಪ್ ಸಾಲುಗಳಲ್ಲಿ ಎಂದಿಗೂ ಮಿಂಚುತ್ತಿದ್ದ ನೋಕಿಯಾ ತಳ ಕಂಡಿದ್ದಾರೂ ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನೋಡಲಿರುವೆವು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ ಫೋನ್‌ಗಳಲ್ಲಿ ಇದೀಗ ವಿಂಡೋಸ್ ಚಾಲನೆ

ನೋಕಿಯಾ ಫೋನ್‌ಗಳಲ್ಲಿ ಇದೀಗ ವಿಂಡೋಸ್ ಚಾಲನೆ

ನೋಕಿಯಾದ ಸೋಲಿಗೆ ಪ್ರಮುಖವಾಗಿರುವ 8 ಕಾರಣಗಳು

ನೋಕಿಯಾ ಇದೀಗ ವಿಂಡೋಸ್ ಮತ್ತು ಮೈಕ್ರೋಸಾಫ್ಟ್‌ನೊಂದಿಗೆ ಸಂಯೋಜನೆಗೊಂಡಿದೆ. ನೋಕಿಯಾವನ್ನೇ ಮೆಚ್ಚಿದ್ದ ಹೆಚ್ಚಿನ ಜನರಿಗೆ ಫೋನ್‌ಗಳು ವಿಂಡೋಸ್ ಮತ್ತು ಮೈಕ್ರೋಸಾಫ್ಟ್ ಆವೃತ್ತಿಯಲ್ಲಿ ಬರುತ್ತಿದ್ದುದು ಗೊಂದಲವನ್ನುಂಟು ಮಾಡಿತು.

ನೋಕಿಯಾ ಆಂಡ್ರಾಯ್ಡ್ ಅಥವಾ ಆಪಲ್‌ನಂತಲ್ಲ

ನೋಕಿಯಾ ಆಂಡ್ರಾಯ್ಡ್ ಅಥವಾ ಆಪಲ್‌ನಂತಲ್ಲ

ನೋಕಿಯಾದ ಸೋಲಿಗೆ ಪ್ರಮುಖವಾಗಿರುವ 8 ಕಾರಣಗಳು

ಇನ್ನು ನೋಕಿಯಾಗಿದ್ದ ಪ್ರಮುಖ ಸ್ಪರ್ಧಿಗಳು ಎಂದರೆ ಆಂಡ್ರಾಯ್ಡ್ ಮತ್ತು ಆಪಲ್. ಎಲ್ಲರೂ ಆಂಡ್ರಾಯ್ಡ್‌ನಿಂದ ಆಪಲ್‌ಗೆ ಅಥವಾ ಆಪಲ್‌ನಿಂದ ಆಂಡ್ರಾಯ್ಡ್‌ಗೆ ಬದಲಾಗುವುದನ್ನು ಕುರಿತು ಮಾತನಾಡುತ್ತಾರೆಯೇ ವಿನಃ ನೋಕಿಯಾವನ್ನು ತುಂಬಾ ಕಡಿಮೆ ಜನ ಆರಿಸಿಕೊಳ್ಳುತ್ತಾರೆ.

ನಾರ್ತ್ ಅಮೇರಿಕಾದಲ್ಲಿ ಪಟ್ಟ ಕಷ್ಟ

ನಾರ್ತ್ ಅಮೇರಿಕಾದಲ್ಲಿ ಪಟ್ಟ ಕಷ್ಟ

ನೋಕಿಯಾದ ಸೋಲಿಗೆ ಪ್ರಮುಖವಾಗಿರುವ 8 ಕಾರಣಗಳು

ಯುರೋಪ್ ಮತ್ತು ಇತರ ಅಭಿವೃದ್ಧಿಯಲ್ಲಿರುವ ಮಾರುಕಟ್ಟೆಗಳು ನೋಕಿಯಾದ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡಿದವು. ಆಪಲ್ ಬ್ಲ್ಯಾಕ್‌ಬೆರ್ರಿ ಮತ್ತು ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳನ್ನು ಹೆಚ್ಚಿನ ಅಮೇರಿಕನ್ನರು ಇಷ್ಟಪಟ್ಟಿದ್ದರು. ಆದರೆ ನೋಕಿಯಾ ಅಮೇರಿಕಾದಲ್ಲಿ ದೃಢ ಹೆಜ್ಜೆಯನ್ನು ಇಡಲೇ ಇಲ್ಲ.

ಮಾರುಕಟ್ಟೆ ಉಳಿಸಲಿಲ್ಲ

ಮಾರುಕಟ್ಟೆ ಉಳಿಸಲಿಲ್ಲ

ನೋಕಿಯಾದ ಸೋಲಿಗೆ ಪ್ರಮುಖವಾಗಿರುವ 8 ಕಾರಣಗಳು

ಮಾರುಕಟ್ಟೆ ಬೆಳವಣಿಗೆಯನ್ನು ಕಂಡುಕೊಳ್ಳದೇ ನೋಕಿಯಾ ಕಂಪೆನಿ ಅಧಃ ಪತನವನ್ನು ಕಂಡಿತು ಎಂದೇ ಹೇಳಬಹುದು. ಇನ್ನು ನೋಕಿಯಾ ಫೋನ್‌ಗಳು ವೈಶಿಷ್ಟ್ಯತೆಗಳು ಕಡಿಮೆ ಇರುವುದರಿಂದ ಮಾರುಕಟ್ಟೆಯಲ್ಲಿ ಪರಿಗಣನೆಯನ್ನು ಪಡೆದುಕೊಳ್ಳಲಿಲ್ಲ.

 ಟ್ಯಾಬ್ಲೆಟ್ ಬಲ ಇರಲಿಲ್ಲ

ಟ್ಯಾಬ್ಲೆಟ್ ಬಲ ಇರಲಿಲ್ಲ

ನೋಕಿಯಾದ ಸೋಲಿಗೆ ಪ್ರಮುಖವಾಗಿರುವ 8 ಕಾರಣಗಳು

ಇನ್ನು ನೋಕಿಯಾ ಅಷ್ಟೊಂದು ಪರಿಣಾಮಕಾರಿಯಾಗಿ ಟ್ಯಾಬ್ಲೆಟ್‌ಗಳ ಉತ್ಪಾದನೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿಲ್ಲ.ನೋಕಿಯಾ ಟ್ಯಾಬ್ಲೆಟ್ ಅನ್ನು ಹೊರತಂದಿದ್ದರೂ ಅದು ಬಳಕೆದಾರರ ಮೇಲೆ ಅಷ್ಟೊಂದು ಪರಿಣಾಮವನ್ನು ಬೀರಲಿಲ್ಲ.

ಇಕೋ ಸಿಸ್ಟಮ್ ಹೊಂದಿರಲಿಲ್ಲ

ಇಕೋ ಸಿಸ್ಟಮ್ ಹೊಂದಿರಲಿಲ್ಲ

ನೋಕಿಯಾದ ಸೋಲಿಗೆ ಪ್ರಮುಖವಾಗಿರುವ 8 ಕಾರಣಗಳು

ಗೂಗಲ್ ಇಕೋ ಸಿಸ್ಟಮ್, ಆಪಲ್ ಇಕೋ ಸಿಸ್ಟಮ್ ಮತ್ತು ಮೈಕ್ರೋಸಾಫ್ಟ್ ಇಕೋ ಸಿಸ್ಟಮ್ ಇದ್ದಂತೆ ನೋಕಿಯಾ ತನ್ನ ಇಕೋ ಸಿಸ್ಟಮ್ ಅನ್ನು ಹೊಂದಿರಲಿಲ್ಲ. ಇಕೋಸಿಸ್ಟಮ್ ಬಳಸಿ ಮಾಹಿತಿಗಳನ್ನು ಇನ್ನೊಂದು ಡಿವೈಸ್‌ಗೆ ವರ್ಗಾಯಿಸಬಹುದಾಗಿದೆ. ನೋಕಿಯಾ ಇಂತಹ ವ್ಯವಸ್ಥೆಯನ್ನು ಹೊಂದಿರಲಿಲ್ಲ.

ಮಾರುಕಟ್ಟೆ ಕುಸಿತ

ಮಾರುಕಟ್ಟೆ ಕುಸಿತ

ನೋಕಿಯಾದ ಸೋಲಿಗೆ ಪ್ರಮುಖವಾಗಿರುವ 8 ಕಾರಣಗಳು

ನೋಕಿಯಾ ಉತ್ಪನ್ನಗಳು ಮಾರುಕಟ್ಟೆ ಮೌಲ್ಯವನ್ನು ಪಡೆಯುವಲ್ಲಿ ವಿಫಲವಾದವು ಎಂಬುದು ಗಮನಾರ್ಹ ಅಂಶವಾಗಿದೆ. ಕಂಪೆನಿ ಬಿಡುಗಡೆ ಮಾಡಿದ ಉತ್ಪನ್ನಗಳು ಗ್ರಾಹಕರನ್ನು ಸೆಳೆಯದೇ ಮಾರುಕಟ್ಟೆಯಲ್ಲಿ ಕೊಳೆಯುವಂತಾಯಿತು. ಕಂಪೆನಿ ಸಮಯ ವ್ಯರ್ಥಮಾಡಿತು ಎಂಬುದು ಇದರಿಂದ ತಿಳಿಯುತ್ತದೆ.

ಬ್ರ್ಯಾಂಡ್ ತಿರಸ್ಕಾರ

ಬ್ರ್ಯಾಂಡ್ ತಿರಸ್ಕಾರ

ನೋಕಿಯಾದ ಸೋಲಿಗೆ ಪ್ರಮುಖವಾಗಿರುವ 8 ಕಾರಣಗಳು

ಒಂದು ಕಾಲದಲ್ಲಿ ಮಾರುಕಟ್ಟೆಯಲ್ಲಿ ಮಿಂಚಿದ್ದ ನೋಕಿಯಾ ಬ್ರ್ಯಾಂಡ್ ಮೆಲ್ಲಮೆಲ್ಲನೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಆರಂಭಿಸಿತು. ತನ್ನ ಬ್ರ್ಯಾಂಡ್‌ನಿಂದಲೇ ಗುರುತನ್ನು ಹೊಂದಿದ್ದು ನೋಕಿಯಾ ಮಾರುಕಟ್ಟೆಯಲ್ಲಿ ಮರೆಯಾಯಿತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about 8 Reasons Why Nokia Will Fail.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot