ನಿಮ್ಮ ದಾಂಪತ್ಯ ಜೀವನ ಸುಖವಾಗಿರಬೇಕಾದರೆ ಈ ಒಂದು ತಪ್ಪು ಮಾಡಲೇಬೇಡಿ!

|

ಅತಿಯಾದರೆ ಅಮೃತವೂ ಕೂಡ ವಿಷವಾಗುತ್ತದೆ ಎಂಬ ಗಾದೆ ಮಾತಿದೆ. ಆದರೆ ಇಂದಿನ ಜಮಾನದಲ್ಲಿ ಅತಿಯಾದ ಸ್ಮಾರ್ಟ್‌ಫೋನ್‌ ಬಳಕೆ ನಿಮ್ಮ ಸಂಸಾರವನ್ನು ಹಾಳು ಮಾಡಲಿದೆ ಎಂದು ಹೇಳಬಹುದಾಗಿದೆ. ಇದಕ್ಕೆ ತಕ್ಕಂತೆ ಹೊಸ ಅಧ್ಯಯನವೊಂದು ಅಚ್ಚರಿಯ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಈ ವರದಿಯ ಪ್ರಕಾರ ಭಾರತದಲ್ಲಿ 88% ವಿವಾಹಿತರ ಸ್ಮಾರ್ಟ್‌ಫೋನ್‌ಗಳ ಬಳಕೆಯಿಂದಲೇ ತಮ್ಮ ಸಂಬಂಧವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ವಿವಾಹಿತರು

ಹೌದು, ಭಾರತದಲ್ಲಿ 88% ವಿವಾಹಿತರು ತಮ್ಮ ಸಂಬಂಧಗಳು ಹಾಳಾಗುವುದಕ್ಕೆ ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆಯೆ ಕಾರಣ ಎಂದಿದ್ದಾರೆ. ಅದರಲ್ಲೂ ಗಂಡ ಹೆಂಡತಿ ನಡುವಿನ ಕಿತ್ತಾಟಕ್ಕೆ ಸ್ಮಾರ್ಟ್‌ಫೋನ್‌ಗಳೇ ಮೂಲ ಕಾರಣ ಎನ್ನಲಾಗಿದೆ. ವಿವೋ ಕಂಪೆನಿ ನಡೆಸಿರುವ ಸ್ವಿಚ್‌ ಆಫ್‌ ಅಧ್ಯಯನದಲ್ಲಿ ಈ ವರದಿ ಬಹಿರಂಗವಾಗಿದೆ. ಹಾಗಾದ್ರೆ ಈ ಅಧ್ಯಯನದಲ್ಲಿ ಏನೆಲ್ಲಾ ವರದಿಯಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ದಾಂಪತ್ಯ ಕಲಹಕ್ಕೆ ಸ್ಮಾರ್ಟ್‌ಫೋನ್‌ ಮೂಲ ಕಾರಣ!

ದಾಂಪತ್ಯ ಕಲಹಕ್ಕೆ ಸ್ಮಾರ್ಟ್‌ಫೋನ್‌ ಮೂಲ ಕಾರಣ!

ವಿವೋ ಕಂಪೆನಿ ಸಂಗಾತಿ ಸಂಬಂಧಗಳ ಮೇಲೆ ಸ್ಮಾರ್ಟ್‌ಫೋನ್‌ಗಳ ಪ್ರಭಾವ ಎನ್ನುವ ಶಿ‍ರ್ಷಿಕೆಯಲ್ಲಿ ಹೊಸ ಅಧ್ಯಯನವೊಂದನ್ನು ನಡಸಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳ ಬಳಕೆಯಿಂದ ಸಂಸಾರಗಳ ಮೇಲೆ ಬೀಳುವ ಪ್ರಭಾವ ಹೇಗಿದೆ ಅನ್ನೊದನ್ನ ಬಹಿರಂಗಪಡಿಸಲಾಗಿದೆ. ಇದರಲ್ಲಿ 88% ವಿವಾಹಿತರು ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಾದಂತೆ ಸಂಬಂಧ ಹಾಳಾಗುತ್ತಿದೆ ಎಂದು ಭಾವಿಸಿದ್ದಾರೆ. ಇನ್ನು ಈ ಅಧ್ಯಯನಕ್ಕಾಗಿ, ವಿವೋ ಕಂಪನಿಯು ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಹೈದರಾಬಾದ್, ಬೆಂಗಳೂರು, ಅಹಮದಾಬಾದ್ ಮತ್ತು ಪುಣೆಯಾದ್ಯಂತ 1000 ಕ್ಕೂ ಹೆಚ್ಚು ಗ್ರಾಹಕರನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಿದೆ.

ವಿವಾಹಿತರ

ವಿವಾಹಿತರ ನಡುವೆ ಜಗಳಗಳು ಶುರುವಾಗುವುದಕ್ಕೆ ಸ್ಮಾರ್ಟ್‌ಫೋನ್‌ಗಳ ಕಾರಣಕ್ಕೆ. ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆ, ಸ್ಮಾರ್ಟ್‌ಫೋನ್‌ಗಳಲ್ಲಿರುವ ಗೌಪ್ಯ ಮಾಹಿತಿ ಸೇರಿದಂತೆ ಅನೇಕ ವಿಚಾರಗಳು ಮನಸ್ತಾಪಕ್ಕೆ ಕಾರಣವಾಗುತ್ತಿವೆ ಎನ್ನಲಾಗಿದೆ. ಅದರಲ್ಲೂ ಹೈದರಾಬಾದ್, ಬೆಂಗಳೂರು, ಅಹಮದಾಬಾದ್ ಮತ್ತು ಪುಣೆಯಲ್ಲಿ, ಸ್ಮಾರ್ಟ್‌ಫೋನ್ ಸಾಧನಗಳ ಅತಿಯಾದ ಬಳಕೆಯಿಂದಾಗಿ ವಿವಾಹಿತ ದಂಪತಿಗಳ ಸಂಬಂಧಗಳಲ್ಲಿನ ನಡವಳಿಕೆ ಮತ್ತು ಮಾನಸಿಕ ಬದಲಾವಣೆಗಳು ಆಗಿವೆ ಅನ್ನೊದನ್ನ ಈ ಅಧ್ಯಯನವು ಒತ್ತಿ ಹೇಳಿದೆ.

ವಿವಾಹಿತರು ಹೇಳಿದ್ದೇನು?

ವಿವಾಹಿತರು ಹೇಳಿದ್ದೇನು?

ಇನ್ನು ಈ ಅಧ್ಯಯನದ ಸಮಯದಲ್ಲಿ, ಸಮೀಕ್ಷೆಗೆ ಒಳಗಾದ 67% ಭಾರತೀಯ ವಿವಾಹಿತ ದಂಪತಿಗಳು ಸಂಗಾತಿಯೊಂದಿಗೆ ಕಾಲ ಕಳೆಯುವಾಗಲೂ ಸ್ಮಾರ್ಟ್‌ಫೋನ್‌ ಬಳಕೆ ಅಡ್ಡಿಯಾಗುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಇದಲ್ಲದೆ 66% ರಷ್ಟು ಜನರು ಸ್ಮಾರ್ಟ್‌ಫೋನ್‌ಗಳಿಂದ ತಮ್ಮ ಸಂಗಾತಿಯೊಂದಿಗಿನ ಸಂಬಂಧವನ್ನು ಹಾಳುಮಾಡಿಕೊಂಡಿರುವುದಾಗಿಯೂ ಒಪ್ಪಿಕೊಂಡಿದ್ದಾರೆ. ಜೊತೆಗೆ ಸುಮಾರು 70% ಜನರು ತಮ್ಮ ಸ್ಮಾರ್ಟ್‌ಫೋನ್ ಬಳಸುವಾಗ ತಮ್ಮ ಸಂಗಾತಿ ಅಡ್ಡಿಪಡಿಸಿದರೆ ಕೋಪಗೊಳ್ಳುವುದಾಗಿಯೂ ಹೇಳಿದ್ದಾರೆ.

ಮಾತನಾಡುವಾಗ

ಇದರ ನಡುವೆ 69% ದಂಪತಿಗಳು ತಮ್ಮ ಸಂಗಾತಿಯೊಂದಿಗೆ ಮಾತನಾಡುವಾಗ ಸ್ಮಾರ್ಟ್‌ಫೋನ್‌ ಬಗ್ಗೆ ಗಮನ ಹರಿಸುವುದಿಲ್ಲ ಎಂದಿದ್ದಾರೆ. ಇನ್ನು 84% ಜನರು ತಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುವುದಾಗಿಯೂ ಹೇಳಿದ್ದಾರೆ. ಅಂದರೆ ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದಂತೆ ದಾಂಪತ್ಯ ಕಲಹಗಳು ಕೂಡ ಹೆಚ್ಚಾಗುತ್ತಿವೆ ಅನ್ನೊದು ಬಹಿರಂಗವಾಗಿದೆ. ಸ್ಮಾರ್ಟ್‌ಫೋನ್‌ಗಳಿಗೆ ಕೊಡುವ ಸಮಯವನ್ನು ಸಂಗಾತಿಗೆ ನೀಡುವುದರಲ್ಲಿ ವಿವಾಹಿತರು ಎಡವುತ್ತಿದ್ದಾರೆ ಎಂದು ಅಧ್ಯಯನದಲ್ಲಿ ಬಹಿರಂಗವಾಗಿದೆ.

ಸ್ಮಾರ್ಟ್‌ಫೋನ್‌ ಬಳಕೆಯಿಂದ ಪ್ರಯೋಜನವೇನು?

ಸ್ಮಾರ್ಟ್‌ಫೋನ್‌ ಬಳಕೆಯಿಂದ ಪ್ರಯೋಜನವೇನು?

ಇನ್ನು ಸ್ಮಾರ್ಟ್‌ಫೋನ್‌ಗಳ ಅತಿಯಾದ ಬಳಕೆ ದಾಂಪತ್ಯ ಜೀವನವನ್ನು ಹಾಳುಮಾಡುತ್ತಿದೆ ಎಂದು ಅಧ್ಯಯನದಲ್ಲಿ ವರದಿಯಾಗಿದೆ. ಆದರೆ ಸ್ಮಾರ್ಟ್‌ಫೋನ್‌ ಬಳಕೆಯಿಂದ ಪ್ರಯೋಜನಗಳು ಕೂಡ ಇವೆ ಅನ್ನೊದನ್ನ 60%ಜನರು ಒಪ್ಪಿಕೊಂಡಿದ್ದಾರೆ. 60% ಜನರು ಪ್ರೀತಿಪಾತ್ರರ ಜೊತೆ ಸಂಪರ್ಕದಲ್ಲಿರಲು ಸ್ಮಾರ್ಟ್‌ಫೋನ್‌ ಸಹಾಯ ಮಾಡುತ್ತಿವೆ ಎಂದು ಹೇಳಿದ್ದಾರೆ. ಅಲ್ಲದೆ ಸಮೀಕ್ಷೆಯಲ್ಲಿ ಭಾಗವಹಿಸಿದ 59% ಜನರು ಸ್ಮಾರ್ಟ್‌ಫೋನ್‌ಗಳಿಂದ ತಮ್ಮ ಜ್ಞಾನದ ಮಟ್ಟ ಸುಧಾರಿಸಿದೆ ಎಂದಿದ್ದಾರೆ.

ಒಟ್ಟಾರೆ

ಒಟ್ಟಾರೆ ನೋಡುವುದಾದರೆ ಸಂಗಾತಿಯ ಜೊತೆಗೆ ಕಾಲ ಕಳೆಯುವಾಗ ಸ್ಮಾರ್ಟ್‌ಫೋನ್‌ ಮೇಲೆ ಹೆಚ್ಚಿನ ಗಮನ ನೀಡುವುದು ದಾಂಪತ್ಯ ಕಲಹಗಳಿಗೆ ಮೂಲ ಕಾರಣವಾಗುತ್ತಿದೆ. ಆದರಿಂದ, ಜನರು ಸ್ಮಾರ್ಟ್‌ಫೋನ್‌ಗಳೊಂದಿಗೆ ಹೆಚ್ಚಿನ ಸಮಯ ಕಳೆಯುವ ಬದಲು ತಮ್ಮ ಪ್ರೀತಿ ಪಾತ್ರರ ಜೊತೆಗೂ ಕೂಡ ಸಮಯ ನೀಡುವುದು ಸೂಕ್ತವಾಗಿದೆ. ಸ್ಮಾರ್ಟ್‌ಫೋನ್‌ಗಳು ಬಹಳಷ್ಟು ವಿಷಯಗಳಲ್ಲಿ ಸಹಾಯ ಮಾಡುತ್ತವೆ, ಹಾಗೆಯೇ ಬಹಳಷ್ಟು ಸಂದರ್ಭದಲ್ಲಿ ಇಲ್ಲದ ತೊಂದರೆಯನ್ನು ಕೂಡ ತಂದಿಡುತ್ತವೆ. ಆದರಿಂದ ನಿಮ್ಮ ಪ್ರೀತಿಪಾತ್ರರ ಮೇಲೆ ಕೂಡ ಆದ್ಯತೆ ನೀಡುವುದು ಅತ್ಯಗತ್ಯವಾಗಿದೆ.

Best Mobiles in India

English summary
88% married Indians feel that Smartphone addiction is hurting their relationship

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X