ಅಬ್ಬಾ ಆಶ್ಚರ್ಯ! ವಾಟ್ಸಾಪ್ ಉದ್ಯೋಗಿಗಳು ಮಿಲಿಯಾಧಿಪತಿಗಳೇ

Written By:

ಮೊಬೈಲ್ ಮೆಸೇಜಿಂಗ್ ಎಂದು ಹೇಳುವಾಗ ನಮ್ಮ ಮನದಲ್ಲಿ ಮೂಡುವುದು ವಾಟ್ಸಾಪ್ ಮೊಬೈಲ್ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಹೌದು ಈ ತ್ವರಿತ ಮೊಬೈಲ್ ಮೆಸೇಜಿಂಗ್ ಅಪ್ಲಿಕೇಶನ್ ಬಳಕೆದಾರರ ಮನದಲ್ಲಿ ಅಷ್ಟು ಪ್ರಖರವಾಗಿ ಅಚ್ಚೊತ್ತಿದೆ ಎಂದೇ ಹೇಳಬಹುದು. ವಾಟ್ಸಾಪ್‌ನ ಹುಟ್ಟು 2009 ರಲ್ಲಿ ಆಯಿತು. ಇದರ ನಂತರ ಎಲ್ಲಿಯೂ ಬಗ್ಗದೆ ದಿನದಿಂದ ದಿನಕ್ಕೆ ಪ್ರಗತಿಯನ್ನು ಹೊಂದುತ್ತಿರುವ ವಾಟ್ಸಾಪ್ ಅನ್ನು ಫೇಸ್‌ಬುಕ್ ಖರೀದಿಸಿ ಇನ್ನೊಂದು ಯಶಸ್ಸಿನ ಗರಿಯನ್ನು ತೊಡಿಸಿದೆ.

ಇದನ್ನೂ ಓದಿ: ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ಸ್: ಹೀಗೆ ಮಾಡಿ! ಎಂಜಾಯ್ ಮಾಡಿ!

ಇಂದಿನ ಲೇಖನದಲ್ಲಿ ಈ ಮೊಬೈಲ್ ಮೆಸೇಜಿಂಗ್ ಅಪ್ಲಿಕೇಶನ್ ಕುರಿತ ಇನ್ನಷ್ಟು ವೈವಿಧ್ಯಮಯ ಫೀಚರ್‌ಗಳನ್ನು ನಿಮ್ಮ ಮುಂದೆ ನಾವು ಇರಿಸಲಿದ್ದು ವಾಟ್ಸಾಪ್ ಬಳಕೆಯನ್ನು ಇನ್ನಷ್ಟು ಪರಿಣಾಮಕಾರಿ ಅಂತೆಯೇ ಇನ್ನಷ್ಟು ಸರಳಗೊಳಿಸಲಿರುವುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವರಮಾನ
  

ಜಗತ್ತಿನ ಅತ್ಯಂತ ದೊಡ್ಡ ಕಂಪೆನಿಯಾಗಿರುವ ಅಮೇರಿಕನ್ ಏರ್‌ಲೈನ್ಸ್‌ಗಿಂತಲೂ ವಾಟ್ಸಾಪ್ ವರಮಾನ ಅತ್ಯಧಿಕವಾಗಿದೆ. ಅಮೇರಿಕನ್ ಏರ್‌ಲೈನ್ಸ್‌ 12 ಬಿಲಿಯನ್ ಡಾಲರ್ ವರಮಾನವನ್ನು ಗಳಿಸುತ್ತದೆ.

ವಾಟ್ಸಾಪ್ ಸ್ಥಾಪಕ
  

ಮೆಸೇಜಿಂಗ್ ಅಪ್ಲಿಕೇಶನ್ ಸಹಸ್ಥಾಪಕರಾದ ಜಾನ್ ಕೋಮ್ ತಮ್ಮ 16 ರ ಹರೆಯದಲ್ಲೇ ಉಕ್ರೇನ್‌ನಿಂದ ಯುಎಸ್‌ಗೆ ತೆರಳಿದರು.

ವಾಟ್ಸಾಪ್ ಮೌಲ್ಯ
  

ಜಮೈಕಾ, ಐಸ್‌ಲ್ಯಾಂಡ್ ಮತ್ತು ಉತ್ತರಕೊರಿಯಾ ದೇಶಗಳಿಗಿಂತಲೂ ವಾಟ್ಸಾಪ್ ಮೌಲ್ಯ ಅಧಿಕವಾಗಿದೆ.

ವಾಟ್ಸಾಪ್ ಬಳಕೆದಾರರು
  

ವಾಟ್ಸಾಪ್ ತಿಂಗಳಿಗೇ ಅರ್ಧ ಬಿಲಿಯನ್ ಬಳಕೆದಾರರನ್ನು ಹೊಂದಿದೆ.

ವಾಟ್ಸಾಪ್ ಉದ್ಯೋಗಿಗಳು
  

ವಾಟ್ಸಾಪ್ ಮಾತ್ರವೇ 55 ಉದ್ಯೋಗಿಗಳನ್ನು ಹೊಂದಿದ್ದು ಇವರಲ್ಲಿ ಹೆಚ್ಚಿನವರು ಮಿಲಿಯಾಧಿಪತಿಗಳಾಗಿದ್ದಾರೆ ಅಲ್ಲದೆ ಇದರ ಸ್ಥಾಪಕರಾದ ಬ್ರೈನ್ ಏಕ್ಟನ್ ಮತ್ತು ಜಾನ್ ಕೋಮ್ ಬಿಲಿಯಾಧಿಪತಿಗಳಾಗಿದ್ದಾರೆ.

ಹೊಸ ಬಳಕೆದಾರರು
  

ಪ್ರತೀ ದಿನ 1 ಮಿಲಿಯನ್ ಹೊಸ ಬಳಕೆದಾರರನ್ನು ವಾಟ್ಸಾಪ್ ಸರ್ವರ್‌ಗಳಿಗೆ ಸೇರಿಸಲಾಗುತ್ತಿದೆ ಅಂದರೆ ದಿನಂಪ್ರತಿ 1 ಮಿಲಿಯನ್ ಹೊಸ ಬಳಕೆದಾರರು ವಾಟ್ಸಾಪ್‌ಗೆ ಸೇರುತ್ತಿದ್ದಾರೆ.

ಫೋಟೋಗಳ ಹಂಚಿಕೆ
  

500 ಮಿಲಿಯನ್ ಫೋಟೋಗಳನ್ನು ನಿತ್ಯವೂ ವಾಟ್ಸಾಪ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ.

ನಾಸಾಕ್ಕಿಂತಲೂ ಮೇಲ್ಮಟ್ಟದ ಬಜೆಟ್
  

ನಾಸಾದ ಸಂಪೂರ್ಣ ವಾರ್ಷಿಕ ಬಜೆಟ್ 17 ಬಿಲಿಯನ್ ಡಾಲರ್‌ಗಿಂತಲೂ ವಾಟ್ಸಾಪ್ ಕಂಪೆನಿ ಮೌಲ್ಯವುಳ್ಳದ್ದಾಗಿದೆ.

ಬ್ರಿಯಾನ್ ಆಕ್ಟನ್
  

ವಾಟ್ಸಾಪ್ ಸಹಸ್ಥಾಪಕರಾದ ಬ್ರಿಯಾನ್ ಆಕ್ಟನ್‌ಗೆ ಟ್ವಿಟ್ಟರ್ ಮತ್ತು ಫೇಸ್‌ಬುಕ್ ಉದ್ಯೋಗ ನೀಡಲು ನಿರಾಕರಿಸಿತ್ತು. 2009 ರಲ್ಲಿ ವಾಟ್ಸಾಪ್ ಅನ್ನು ಅವರು ಪ್ರಾರಂಭಿಸಿದ ನಂತರ ಮತ್ತೆಲ್ಲವೂ ಇತಿಹಾಸದಂತೆ ನಡೆಯಿತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Mobile Messaging! What comes to our minds on reading these two words? Oh come on, you got to be kidding if it is not WhatsApp that crossed your mind. WhatsApp has been a widely used mobile messaging app since it was launched back in 2009.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot