ಜಿಯೋ, ಏರ್‌ಟೆಲ್ ಸೇರಿ ಟೆಲಿಕಾಂ ಕಂಪೆನಿಗಳು ಮಕ್ಮಲ್ ಟೋಪಿ ಹಾಕೋ 9 ಪ್ಲಾನ್‌ಗಳಿವು!

|

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಸ್ಪರ್ಧೆ ಯಾವಾಗಲೂ ನಡೆಯುತ್ತಲೇ ಇರುತ್ತದೆ. ಪ್ರೈವೇಟ್ ಟೆಲಿಕಾಂ ಆಪರೇಟ್ ಗಳಾದ ಏರ್ ಟೆಲ್, ವಡಾಫೋನ್, ರಿಲಯನ್ಸ್ ಜಿಯೋ ಮತ್ತು ಐಡಿಯಾ ಗಳು ತಮ್ಮ ಹೊಸ ಡಾಟಾ ಪ್ಲಾನ್ ಗಳನ್ನು ಮತ್ತು ಸೇವೆಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ಪಡೆದುಕೊಳ್ಳುವುದು ಮತ್ತು ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿರುತ್ತದೆ. ಹೊಸ ಹೊಸ ಆಕರ್ಷಕ ಪ್ಲಾನ್ ಗಳನ್ನು ಪರಿಚಯಿಸುವ ಭರದಲ್ಲಿ ಕೆಲವು ಕೆಟ್ಟ ಪ್ಲಾನ್ ಗಳನ್ನು ಕೂಡ ಈ ಕಂಪೆನಿಗಳು ಪರಿಚಯಿಸಿದೆ.

ಜಿಯೋ, ಏರ್‌ಟೆಲ್ ಸೇರಿ ಟೆಲಿಕಾಂ ಕಂಪೆನಿಗಳು ಮಕ್ಮಲ್ ಟೋಪಿ ಹಾಕೋ 9 ಪ್ಲಾನ್‌ಗಳಿವು!

ಒಂದು ವೇಳೆ ನೀವು ನಿಮ್ಮ ಸದ್ಯದ ಪ್ಲಾನ್ ಬಗ್ಗೆ ಸಮಾಧಾನವಿಲ್ಲದೇ ಇದ್ದಲ್ಲಿ ನಾವು ಕೊಡುವ ಈ ಮಾಹಿತಿಗಳನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ಕೆಲವು ಕೆಟ್ಟ ಪ್ಲಾನ್ ಗಳ ಜೊತೆಗೆ ಪರ್ಯಾಯ ಪ್ಲಾನ್ ಗಳನ್ನು ಕೂಡ ಈ ಸಂಸ್ಥೆಗಳು ಪರಿಚಯಿಸಿದ್ದು ನಿಮ್ಮ ಹಣವನ್ನು ಉಳಿತಾಯ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ ಮತ್ತು ಹೆಚ್ಚು ಲಾಭ ಪಡೆಯುವುದಕ್ಕೂ ಕೂಡ ಸಾಧ್ಯವಾಗುತ್ತದೆ. ನಾವಿಲ್ಲಿ ಏರ್ ಟೆಲ್, ವಡಾಫೋನ್-ಐಡಿಯಾ, ರಿಲಯನ್ಸ್ ಜಿಯೋ ಮತ್ತು ಬಿಎಸ್ಎನ್ಎಲ್ ಪರಿಚಯಿಸಿರುವ 18 ಕೆಟ್ಟ ಪ್ಲಾನ್ ಗಳ ಬಗ್ಗೆ ವಿವರಿಸಿದ್ದೇವೆ.

ಕೆಟ್ಟ ಪ್ಲಾನ್: ಏರ್ ಟೆಲ್ ರೂ. 299 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ಏರ್ ಟೆಲ್ ರೂ. 249 ಪ್ಯಾಕ್

ಕೆಟ್ಟ ಪ್ಲಾನ್: ಏರ್ ಟೆಲ್ ರೂ. 299 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ಏರ್ ಟೆಲ್ ರೂ. 249 ಪ್ಯಾಕ್

ಏರ್ ಟೆಲ್ ನ ರೂಪಾಯಿ 299 ಪ್ಲಾನ್ ನಲ್ಲಿ ಅನಿಯಮಿತ ಕರೆಗಳು 45 ದಿನಗಳ ಅವಧಿಗೆ ಉಚಿತವಾಗಿರುತ್ತದೆ. ಆದರೆ ಈ ಪ್ಲಾನ್ ನಲ್ಲಿ ಯಾವುದೇ ಡಾಟಾ ಸೌಲಭ್ಯವಿರುವುದಿಲ್ಲ. ಇದರ ಬದಲಾಗಿ ಕಂಪೆನಿಯ 249 ಪ್ಲಾನ್ ನ್ನು ಗ್ರಾಹಕರು ಪಡೆದುಕೊಂಡರೆ ಅನಿಯಮಿತ ಕರೆಗಳು 28 ದಿನಗಳ ಅವಧಿಗೆ ಸಿಗುತ್ತದೆ ಮತ್ತು 2ಜಿಬಿ ಡಾಟಾ ಪ್ರತಿದಿನ ಉಚಿತವಾಗಿರುತ್ತದೆ ಅಂದರೆ 56ಜಿಬಿ ಡಾಟಾವನ್ನು ಈ ವ್ಯಾಲಿಡಿಟಿ ಅವಧಿಯಲ್ಲಿ ಬಳಸಲು ಅವಕಾಶವಿರುತ್ತದೆ.

ಕೆಟ್ಟ ಪ್ಲಾನ್: ರಿಲಯನ್ಸ್ ಜಿಯೋ ರೂ. 4,999 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ರೂ. 1699 ಪ್ಯಾಕ್

ಕೆಟ್ಟ ಪ್ಲಾನ್: ರಿಲಯನ್ಸ್ ಜಿಯೋ ರೂ. 4,999 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ರೂ. 1699 ಪ್ಯಾಕ್

ರುಪಾಯಿ 4,999 ಯ ರಿಲಯನ್ಸ್ ಜಿಯೋ ವಾರ್ಷಿಕ ಪ್ಲಾನ್ 360 ದಿನದ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್ ನಲ್ಲಿ 350ಜಿಬಿ ಡಾಟಾ ಪ್ರತಿದಿನ ಜೊತೆಗೆ ನೋ ಎಫ್ ಯುಪಿ ಲಿಮಿಟ್ ಮತ್ತು ಅನಿಯಮಿತ ಕರೆಗಳ ಅವಕಾಶವಿರುತ್ತದೆ. ಇದಕ್ಕೆ ಹೋಲಿಸಿದರೆ ಬೆಟರ್ ಪ್ಲಾನ್ ಜಿಯೋ ನೀಡುತ್ತಿದ್ದು ಅದುವೇ ರುಪಾಯಿ 1,699 ಪ್ಲಾನ್( ಡಿಸೆಂಬರ್ 31,2018ರ ವರೆಗೆ ಮಾತ್ರವೇ ಅವಧಿ).ರುಪಾಯಿ 1,699 ರುಪಾಯಿ ಪ್ಲಾನ್ 365 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು 547.5ಜಿಬಿ ಡಾಟಾವನ್ನು ಜೊತೆಗೆ ಪ್ರತಿದಿ1.5ಜಿಬಿ FUP ಲಿಮಿಟ್ ನ್ನು ಹೊಂದಿದೆ ಮತ್ತು ಉಚಿತ ಧ್ವನಿ ಕರೆಗಳಿಗೂ ಅವಕಾಶವನ್ನು ಈ ಪ್ಲಾನ್ ನೀಡುತ್ತದೆ.

ಕೆಟ್ಟ ಪ್ಲಾನ್: ಬಿಎಸ್ಎನ್ಎಲ್ ರೂ. 3,998 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ಬಿಎಸ್ಎನ್ಎಲ್ ರೂ. 2,798 ಪ್ಯಾಕ್

ಕೆಟ್ಟ ಪ್ಲಾನ್: ಬಿಎಸ್ಎನ್ಎಲ್ ರೂ. 3,998 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ಬಿಎಸ್ಎನ್ಎಲ್ ರೂ. 2,798 ಪ್ಯಾಕ್

ಬಿಎಸ್ಎನ್ಎಲ್ ನ ವಾರ್ಷಿಕ ಪ್ರೀಪೇಯ್ಡ್ ಪ್ಲಾನ್ 1.5ಜಿಬಿ ಡಾಟಾ ಪ್ರತಿದಿನ ಮತ್ತು ಅನಿಯಮಿತ ಕರೆಗಳ ಲಾಭವನ್ನು ನೀಡುತ್ತದೆ. ಆದರೆ ಮತ್ತೊಂದು ಪರ್ಯಾಯ ಪ್ಲಾನ್ ವೊಂದು ಇದ್ದು ಅದೂ ಕೂಡ ಒಂದು ವರ್ಷಧ ಅವಧಿಯನ್ನೇ ಹೊಂದಿದೆ ಮತ್ತು ನಿಮ್ಮ 1,200 ರುಪಾಯಿಯನ್ನು ಉಳಿಸುತ್ತದೆ. 2,798 ರುಪಾಯಿಯ ಬಿಎಸ್ಎನ್ಎಲ್ ಪ್ಲಾನ್ 1ಜಿಬಿ ಡಾಟಾ ಪ್ರತಿ ದಿನ ಜೊತೆಗೆ ಅನಿಯಮಿತ ಕರೆಗಳ ಬೆನಿಫಿಟ್ ನ್ನು 365 ದಿನಗಳ ಅವಧಿಗೆ ನೀಡುತ್ತದೆ.

ಕೆಟ್ಟ ಪ್ಲಾನ್: ವಡಾಫೋನ್ ರೂ. 509 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ರೂ. 458 ಪ್ಯಾಕ್

ಕೆಟ್ಟ ಪ್ಲಾನ್: ವಡಾಫೋನ್ ರೂ. 509 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ರೂ. 458 ಪ್ಯಾಕ್

ವಡಾಫೋನಿನ 509 ರುಪಾಯಿ ಪ್ಲಾನ್ 91 ದಿನಗಳ ಅವಧಿಯ ವ್ಯಾಲಿಡಿಟಿಯನ್ನು ಹೊಂದಿದ್ದು 1.4ಜಿಬಿ ಡಾಟಾ ಪ್ರತಿದಿನ ಮತ್ತು ಅನಿಯಮಿತ ಕರೆಗಳು ಮತ್ತು 100ಎಸ್ಎಂಎಸ್ ಗಳನ್ನು ಉಚಿತವಾಗಿ ನೀಡುತ್ತದೆ.ಇದರ ಬದಲಾಗಿ 458 ರುಪಾಯಿ ಪ್ಲಾನ್ ಪಡೆದರೆ ಇದೇ ಆಫರ್ ಮತ್ತು ಕರೆಗಳ ಬೆನಿಫಿಟ್ 84 ದಿನಗಳ ಅವಧಿಗೆ ಲಭ್ಯವಾಗುತ್ತದೆ.

ಕೆಟ್ಟ ಪ್ಲಾನ್: ಬಿಎಸ್ಎನ್ಎಲ್ ರೂ. 291 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ರೂ. 198 ಪ್ಯಾಕ್

ಕೆಟ್ಟ ಪ್ಲಾನ್: ಬಿಎಸ್ಎನ್ಎಲ್ ರೂ. 291 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ರೂ. 198 ಪ್ಯಾಕ್

ಬಿಎಸ್ಎನ್ಎಲ್ ನ 291 ರುಪಾಯಿ ಪ್ಲಾನ್ 25 ದಿನಗಳ ಅವಧಿಯನ್ನು ಹೊಂದಿದೆ. ಪ್ರತಿ ದಿನ 1.5 ಜಿಬಿ ಡಾಟಾ ಮತ್ತು ಅನಿಯಮಿತ ಕರೆಗಳು ಮತ್ತು ಉಚಿತ ಹಲೋ ಟ್ಯೂನ್ ನ್ನು ಇದು ನೀಡುತ್ತದೆ. ಇನ್ನೊಂದೆಡೆ ಬಿಎಸ್ಎನ್ಎಲ್ ನ 198 ರುಪಾಯಿ ಪ್ಲಾನ್ ನಲ್ಲಿ ಹೆಚ್ಚಿನ ಅವಧಿಯ ವ್ಯಾಲಿಡಿಟಿ ಲಭ್ಯವಾಗಲಿದ್ದು ಸೇಮ್ ಡಾಟಾ ಪಡೆದುಕೊಳ್ಳಬಹುದು. 198 ರುಪಾಯಿ ಪ್ಲಾನ್ 28 ದಿನಗಳ ಅವಧಿಯ ವ್ಯಾಲಿಡಿಟಿ ಹೊಂದಿದ್ದು 1.5 ಜಿಬಿ ಡಾಟಾ ಪ್ರತಿದಿನ ಮತ್ತು ಉಚಿತ ಹಲೋ ಟ್ಯೂನ್ ಫೆಸಿಲಿಟಿಯನ್ನು ನೀಡುತ್ತದೆ.

ಕೆಟ್ಟ ಪ್ಲಾನ್: ಐಡಿಯಾ ಸೆಲ್ಯೂಲರ್ ರೂ. 345 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ಐಡಿಯಾ ಸೆಲ್ಯೂಲರ್ ರೂ. 309 ಪ್ಯಾಕ್

ಕೆಟ್ಟ ಪ್ಲಾನ್: ಐಡಿಯಾ ಸೆಲ್ಯೂಲರ್ ರೂ. 345 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ಐಡಿಯಾ ಸೆಲ್ಯೂಲರ್ ರೂ. 309 ಪ್ಯಾಕ್

ಐಡಿಯಾ ಸೆಲ್ಯೂಲರ್ ತನ್ನ ರುಪಾಯಿ 345 ರುಪಾಯಿ ಪ್ಲಾನ್ ನಲ್ಲಿ 28 ದಿನಗಳ ಅವಧಿಗೆ 1ಜಿಬಿ ಡಾಟಾ ಪ್ರತಿದಿನ ಜೊತೆಗೆ ಅನಿಯಮಿತ ಕರೆಗಳು ಸ್ಥಳೀಯ ಮತ್ತು ಎಸ್ಡ ಟಿಡಿ ಕರೆಗಳ ಲಾಭವನ್ನು ನೀಡುತ್ತದೆ. ಇದಕ್ಕಿಂತ ಕಂಪೆನಿಯ ಬೆಸ್ಟ್ ಪ್ಲಾನ್ ಯಾವುದೆಂದರೆ ರುಪಾಯಿ 309 ರ ಪ್ಲಾನ್ ಆಗಿದ್ದು 1ಜಿಬಿ ಡಾಟಾ ಪ್ರತಿದಿನ ಜೊತೆಗೆ 100ಎಸ್ಎಂಎಸ್ ಉಚಿತ ಮತ್ತು ಅನಿಯಮಿತ ಕರೆಗಳ ಲಾಭವನ್ನು 28 ದಿನಗಳ ಅವಧಿಗೆ ನೀಡುತ್ತದೆ.

ಕೆಟ್ಟ ಪ್ಲಾನ್: ಐಡಿಯಾ ಸೆಲ್ಯೂಲರ್ ರೂ. 786 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ರೂ. 509 ಪ್ಯಾಕ್

ಕೆಟ್ಟ ಪ್ಲಾನ್: ಐಡಿಯಾ ಸೆಲ್ಯೂಲರ್ ರೂ. 786 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ರೂ. 509 ಪ್ಯಾಕ್

ರುಪಾಯಿ 786 ರ ಪ್ಲಾನ್ ನಲ್ಲಿ ಐಡಿಯಾ 1.4ಜಿಬಿ ಡಾಟಾ ಪ್ರತಿದಿನ ಜೊತೆಗೆ ಅನಿಯಮಿತ ಕರೆಗಳು ಮತ್ತು 100ಎಸ್ಎಂಎಸ್ ಗಳನ್ನು ನೀಡುತ್ತದೆ.ಈ ಪ್ಲಾನಿನ ಅವಧಿ 90 ದಿನಗಳು. ಇನ್ನೊಂದೆಡೆ 509 ರುಪಾಯಿಯ ಪ್ಲಾನ್ ಸೇಮ್ ಬೆನಿಫಿಟ್ ಗಳನ್ನು ನೀಡಲಿದ್ದು ಅದೂ ಕೂಡ 90 ದಿನದ ಅವಧಿಯನ್ನೇ ಹೊಂದಿದೆ.

ಕೆಟ್ಟ ಪ್ಲಾನ್: ಏರ್ ಟೆಲ್ ರೂ. 448 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ಏರ್ ಟೆಲ್ ರೂ. 449 ಪ್ಯಾಕ್

ಕೆಟ್ಟ ಪ್ಲಾನ್: ಏರ್ ಟೆಲ್ ರೂ. 448 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ಏರ್ ಟೆಲ್ ರೂ. 449 ಪ್ಯಾಕ್

ಏರ್ ಟೆಲ್ ನ ರುಪಾಯಿ 448 ರ ಪ್ಲಾನ್ 1.4 ಜಿಬಿ ಡಾಟಾ ಪ್ರತಿದಿನ ಮತ್ತು ಅನಿಯಮಿತ ಕರೆಗಳು ಮತ್ತು 100ಎಸ್ಎಂಎಸ್ ಗಳನ್ನು ಉಚಿತವಾಗಿ ನೀಡುತ್ತದೆ. ಈ ಪ್ಲಾನಿನ ಅವಧಿ ಒಟ್ಟು 82 ದಿನಗಳು.ಇದೇ ರೀತಿಯ ಮತ್ತೊಂದು ಪ್ಲಾನ್ ಕೂಡ ಏರ್ ಟೆಲ್ ನಲ್ಲಿದ್ದು ಅದುವೇ ರುಪಾಯಿ 449 ರ ಪ್ಲಾನ್. ಈ ಪ್ಲಾನ್ ನಲ್ಲಿ ಬಳಕೆದಾರರಿಗೆ ಹೆಚ್ಚು ಡಾಟಾ ಲಭ್ಯವಾಗುತ್ತದೆ.449 ರುಪಾಯಿ ಪ್ಲಾನ್ ನ ಅಡಿಯಲ್ಲಿ ಏರ್ ಟೆಲ್ ನಲ್ಲಿ 2ಜಿಬಿ ಡಾಟಾ ಪ್ರತಿದಿನ ಮತ್ತು ಅನಿಯಮಿತ ಕರೆಗಳು, 100ಎಸ್ಎಂಎಸ್ ಗಳು 70 ದಿನಗಳ ಅವಧಿಗೆ ಲಭ್ಯವಾಗುತ್ತದೆ.

ಕೆಟ್ಟ ಪ್ಲಾನ್: ಏರ್ ಟೆಲ್ ರೂ. 159 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ಏರ್ ಟೆಲ್ ರೂ. 149 ಪ್ಯಾಕ್

ಕೆಟ್ಟ ಪ್ಲಾನ್: ಏರ್ ಟೆಲ್ ರೂ. 159 ಪ್ಯಾಕ್; ಹೋಲಿಕೆಯ ಬೆಸ್ಟ್ ಪ್ಲಾನ್: ಏರ್ ಟೆಲ್ ರೂ. 149 ಪ್ಯಾಕ್

ಏರ್ ಟೆಲ್ ನ 159 ರುಪಾಯಿ ಪ್ಲಾನ್ 21 ದಿನಗಳ ಅವಧಿಯನ್ನು ಹೊಂದಿದ್ದು 1ಜಿಬಿ ಡಾಟಾ ಮತ್ತು 100 ಎಸ್ಎಂಎಸ್ ಪ್ರತಿ ದಿನ ಉಚಿತವಾಗಿರುತ್ತದೆ ಮತ್ತು ಅನಿಯಮಿತ ಕರೆಗಳಿಗೂ ಅವಕಾಶವಿದೆ.ಇದನ್ನೇ ಕಂಪೆನಿಯ ಬೆಟರ್ ಪ್ಲಾನ್ ಜೊತೆಗೆ ಹೋಲಿಸುವುದಾದರೆ 149 ರುಪಾಯಿಯ ಏರ್ ಟೆಲ್ ಪ್ಲಾನ್ ಇನ್ನೂ ಹೆಚ್ಚಿನ ಲಾಭ ನೀಡುತ್ತದೆ. ಈ ಪ್ಲಾನ್ ಕೇವಲ ಡಾಟಾವನ್ನು ಮಾತ್ರ ಅಧಿಕವಾಗಿ ಆಫರ್ ಮಾಡುವುದಲ್ಲ ಬದಲಾಗಿ ಹೆಚ್ಚು ದಿನದ ಅವಧಿಯನ್ನೂ ಹೊಂದಿದೆ. ಹೌದು 149 ರುಪಾಯಿಯ ಏರ್ ಟೆಲ್ ಪ್ಲಾನ್ ಅನಿಯಮಿತ ಕರೆಗಳು, 100ಎಸ್ಎಂಎಸ್ ಪ್ರತಿದಿನ, 1ಜಿಬಿ ಡಾಟಾ ಪ್ರತಿದಿನ ಅಂದರೆ ಹೆಚ್ಚುವರಿಯಾಗಿ 10ಜಿಬಿ ಡಾಟಾವನ್ನು 28 ದಿನಗಳ ಅವಧಿಗೆ ನೀಡುತ್ತದೆ.

Best Mobiles in India

English summary
ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಒಂದು ಸ್ಪರ್ಧೆ ಯಾವಾಗಲೂ ನಡೆಯುತ್ತಲೇ ಇರುತ್ತದೆ. ಪ್ರೈವೇಟ್ ಟೆಲಿಕಾಂ ಆಪರೇಟ್ ಗಳಾದ ಏರ್ ಟೆಲ್, ವಡಾಫೋನ್, ರಿಲಯನ್ಸ್ ಜಿಯೋ ಮತ್ತು ಐಡಿಯಾ ಗಳು ತಮ್ಮ ಹೊಸ ಡಾಟಾ ಪ್ಲಾನ್ ಗಳನ್ನು ಮತ್ತು ಸೇವೆಗಳನ್ನು ಪರಿಚಯಿಸುವ ಮೂಲಕ ಗ್ರಾಹಕರನ್ನು ಪಡೆದುಕೊಳ್ಳುವುದು ಮತ್ತು ಕಳೆದುಕೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿರುತ್ತದೆ.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X