ಗೂಗಲ್ 'ಆಂಡ್ರಾಯ್ಡ್ ಪೈ' ಹೊಂದಿರುವ ಈ ಎಲ್ಲಾ ವಿಶೇಷತೆಗಳು ನಿಮಗೆ ಗೊತ್ತಾ?!

|

ಗೂಗಲ್ ಬಿಡುಗಡೆ ಮಾಡುತ್ತಿರುವ ಹೊಸ 'ಆಂಡ್ರಾಯ್ಡ್ ಪಿ' ಆವೃತ್ತಿಗೆ 'ಆಂಡ್ರಾಯ್ಡ್ ಪೈ' ಎಂದು ಅಧಿಕೃತವಾಗಿ ಹೆಸರಿಡಲಾಗಿದೆ. 'ಪೈ' ಎನ್ನುವುದು ಹಣ್ಣನ್ನು ಹುದುಗಿ ಬೇಯಿಸಿದ ಹೂರಣ ಎಂಬುದರ ಸೂಚಕವಾಗಿದ್ದು, ಹೂರಣದ ಕಡುಬಿನಂತಹ ಸಿಹಿತಿಂಡಿಯ ಹೆಸರು ಇದಾಗಿದೆ. ಹಾಗಾದರೆ, ಈ ಹೂರಣದ ಸಿಹಿತಿಂಡಿಯನ್ನು ನಾವು ತಿಂದರೆ ಹೇಗಿರುತ್ತದೆ.?

ಅಯ್ಯೋ ಖುಷಿ ಒಡಬೇಡಿ. ಆ ಸಿಹಿ ತಿಂಡಿಯನ್ನು ತಿಂದು ರುಚಿ ನೋಡಿ ಹೇಳುವ ಆಯ್ಕೆ ನಮ್ಮಲ್ಲಿಲ್ಲ. ಆದರೆ, ಹೂರಣದ ಹೆಸರನ್ನು ಹೊತ್ತಿರುವ 'ಆಂಡ್ರಾಯ್ಡ್ ಪೈ' ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಏನೆಲ್ಲಾ ಬದಲಾವಣೆಗಳನ್ನು ತರಬಹುದು? ಬಳಕೆದಾರರಿಗೆ ಈ ಆಂಡ್ರಾಯ್ಡ್ ಆವೃತ್ತಿ ಏನೆಲ್ಲಾ ಸೇವೆಗಳನ್ನು ನೀಡಬಹುದು ಎಂಬುದರ ಸಿಹಿ ಸುದ್ದಿಯನ್ನು ನಾವಿಂದು ನಿಮಗೆ ನೀಡುತ್ತೇವೆ.

ಗೂಗಲ್ 'ಆಂಡ್ರಾಯ್ಡ್ ಪೈ' ಹೊಂದಿರುವ ಈ ಎಲ್ಲಾ ವಿಶೇಷತೆಗಳು ನಿಮಗೆ ಗೊತ್ತಾ?!

ನಿರೀಕ್ಷೆಯ ಹೊಸ ಆವೃತ್ತಿ 'ಆಂಡ್ರಾಯ್ಡ್ ಪೈ' ಸದ್ಯದಲ್ಲೇ ಹೊರಬರಲಿರುವುದರಿಂದ ಇದರ ವಿಶೇಷತೆಗಳನ್ನು ಎಲ್ಲಾ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್ ಬಳಕೆದಾರರು ತಿಳಿಯಲೇಬೇಕಾಗಿದೆ. ಹಾಗಾದರೆ, 'ಆಂಡ್ರಾಯ್ಡ್ ಪೈ' ಆಪರೇಟಿಂಗ್ ಸಿಸ್ಟಮ್ ಫೀಚರ್ಸ್ ಯಾವುವು? ಬಳಕೆಗೆ ಬಂದರೆ ಬಳಕೆದಾರರಿಗೆ ಏನೆಲ್ಲಾ ಲಾಭವಿದೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಹೆಚ್ಚುವರಿ ಭದ್ರತೆಗಾಗಿ ಲಾಕ್‌ಡೌನ್ ಮೋಡ್

ಹೆಚ್ಚುವರಿ ಭದ್ರತೆಗಾಗಿ ಲಾಕ್‌ಡೌನ್ ಮೋಡ್

ಆಂಡ್ರಾಯ್ಡ್ ಪೈ ಸೆಟ್ಟಿಂಗ್ಸ್‌ನಲ್ಲಿ ಒಂದು ಹೊಸ ವೈಶಿಷ್ಟ್ಯ ಕಾಣಿಸಿಕೊಂಡಿದೆ. 'ಶೋ ಲ್ಯಾಕ್‌ಡೌನ್ ಆಫ್ಷನ್' ಅನ್ನು ಸೆಟ್ಟಿಂಗ್ಸ್‌ನಲ್ಲಿ ಸಕ್ರಿಯಗೊಳಿಸಿದರೆ, ಇದು ಫಿಂಗರ್ಪ್ರಿಂಟ್ ಸಂವೇದಕ ಅಥವಾ ಧ್ವನಿ ಅನ್ಲಾಕ್ ಅನ್ನು ನಿಷ್ಕ್ರಿಯಗೊಳಿಸಲು ಅನುಮತಿಸುತ್ತದೆ (PIN ಅಥವಾ ಮಾದರಿಯಂತಹ ನಿಮ್ಮ ಬ್ಯಾಕಪ್ ಅನ್ಲಾಕ್ ವಿಧಾನಗಳಿಗೆ ಹಿಂತಿರುಗಿಸುತ್ತದೆ).

ಸ್ಮಾರ್ಟ್‌ಫೋನ್ ರೊಟೇಟ್ ಆಯ್ಕೆ!

ಸ್ಮಾರ್ಟ್‌ಫೋನ್ ರೊಟೇಟ್ ಆಯ್ಕೆ!

ಆಂಡ್ರಾಯ್ಡ್ ಬಳಕೆದಾರರು ವಿಡಿಯೋ ವೀಕ್ಷಣೆಯಲ್ಲಿ ಈ ಮೊದಲು ಅನುಭವಿಸುತ್ತಿದ್ದ ಕಿರಿಕಿರಿಯನ್ನು 'ಆಂಡ್ರಾಯ್ಡ್ ಪೈ' ತಪ್ಪಿಸಲಿದೆ. ವಿಡಿಯೋ ಅಥವಾ ಗೇಮಿಂಗ್ ಸಮಯದಲ್ಲಿ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮೇಲ್ಬಾಗದಲ್ಲಿಯೇ ಸ್ಮಾರ್ಟ್‌ಫೋನ್ ರೊಟೇಟ್ ಅನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಬಳಕೆದಾರರಿಗೆ ಲಭ್ಯವಾಗಲಿದೆ.

ಹೊಸದಾದ ಲುಕ್ ಮತ್ತು ನೋಟಿಫಿಕೇಷನ್.

ಹೊಸದಾದ ಲುಕ್ ಮತ್ತು ನೋಟಿಫಿಕೇಷನ್.

'ಆಂಡ್ರಾಯ್ಡ್ ಪೈ'ನಲ್ಲಿನ ಹೊಸ ಬದಲಾವಣೆಗಳಲ್ಲಿ ನೋಟಿಫಿಕೇಷನ್ ಬಾರ್ ಹೆಚ್ಚಿನದನ್ನು ಪಡೆದಿದೆ. ಸೆಟ್ಟಿಂಗ್ಸ್ ಮೆನುವಿನಲ್ಲಿ ಹಲವು ಬಣ್ಣಗಳನ್ನು ನೀಡಲಾಗಿದ್ದು, ಐಒಎಸ್‌ಗೆ ಪೈಪೋಟಿ ನೀಡುವ ನೋಟಿಫಿಕೇಷನ್ ಬಾರ್ ಅನ್ನು ಗೂಗಲ್ ನೀಡುತ್ತಿದೆ. ಈ ನೋಟಿಫಿಕೇಷನ್ ಬಾರ್ ಸ್ಮಾರ್ಟ್‌ ರಿಪ್ಲೈ, ಮೆಸೇಜಿಂಗ್ ಆಪ್, ಶೇಡ್ ಲೈಕ್‌ನಂತಹ ಫೀಚರ್ಸ್ ಅನ್ನು ಹೊಂದಿದೆ.

ಅಧಿಕೃತ ಡಾರ್ಕ್ ಮೋಡ್.

ಅಧಿಕೃತ ಡಾರ್ಕ್ ಮೋಡ್.

ಬಳಕೆದಾರರು ವರ್ಷಗಳ ಕಾಲ ಕೇಳುತ್ತಿದ್ದ ಒಂದು ಫೀಚರ್ಸ್ ಅನ್ನು ಗೂಗಲ್ ಈಗ ಒದಗಿಸಿದೆ. ಗೂಗಲ್ ಇದೇ ಮೊದಲ ಬಾರಿಗೆ ಅಧಿಕೃತವಾಗಿ ಡಾರ್ಕ್ ಮೋಡ್ ಅನ್ನು ತನ್ನ ಸೆಟ್ಟಿಂಗ್ಸ್ ಆಪ್‌ನಲ್ಲಿ ನೀಡಿದೆ. ಹಾಗಾಗಿ, ಬಳಕೆದಾರರು ಈಗ ಯಾವಾಗಲೂ ಡಾರ್ಕ್ ಮೋಡ್ ಅಥವಾ ಲೈಟ್ ಮೋಡ್‌ನಲ್ಲಿ ಇಡುವುದನ್ನು ಸ್ವತಃ ನಿರ್ಧರಿಸಬಹುದಾಗಿದೆ.

ಸ್ಕ್ರೀನ್ ಶಾಟ್ ಟೂಲ್ಸ್!

ಸ್ಕ್ರೀನ್ ಶಾಟ್ ಟೂಲ್ಸ್!

ಪವರ್ ಮತ್ತು ವಾಲ್ಯೂಮ್ ಬಟನ್ ಅನ್ನು ಒಮ್ಮಲೆ ಒತ್ತಿ ಹಿಡಿದರೆ ಸುಲಭವಾಗಿ ಸ್ಕ್ರೀನ್ ಶಾಟ್ ಚಿತ್ರವನ್ನು ಪಡೆಯಬಹುದು. ಆದರೆ, ಸ್ಕ್ರೀನ್ ಶಾಟ್ ಚಿತ್ರವನ್ನು ಸುಲಭವಾಗಿ ಎಡಿಟ್ ಮಾಡುವ ಆಯ್ಕೆ ಈಗಷ್ಟೆ ಲಭ್ಯವಾಗಿದೆ. 'ಆಂಡ್ರಾಯ್ಡ್ ಪೈ'ನಲ್ಲಿ ಸ್ಕ್ರೀನ್ ಶಾಟ್ ಚಿತ್ರವನ್ನು ತೆಗೆದ ಕೂಡಲೇ ಚಿತ್ರವನ್ನು ಎಡಿಟ್ ಮಾಡುವ ಆಯ್ಕೆ ಲಭ್ಯವಾಗಲಿದೆ.

ಫೋನ್ ವ್ಯಸನ ನಿಗ್ರಹ?

ಫೋನ್ ವ್ಯಸನ ನಿಗ್ರಹ?

ಸ್ಮಾರ್ಟ್‌ಫೋನ್ ವ್ಯಸನವನ್ನು ನಿಗ್ರಹಿಸುವ ಗೂಗಲ್‌ನ ಯೋಜನೆಯು ಯೋಗಕ್ಷೇಮ ಕಾರ್ಯಕ್ರಮದ ಮೂಲಕ ಹೊಸದೊಂದು ಪ್ರೋಗ್ರಾಂ ಅನ್ನು ಗೂಗಲ್ ರೂಪಿಸುತ್ತಿದೆ. ಈ ಪ್ರೋಗ್ರಾಂ ಇನ್ನೂ ರೋಲ್ಔಟ್‌ಗೆ ಸಿದ್ಧವಾಗಿಲ್ಲ, ಆದರೆ, ಪಿಕ್ಸೆಲ್ ಸ್ಮಾರ್ಟ್‌ಫೋನ್ ಬಳಕೆದಾರರು ಡಿಜಿಟಲ್ ಯೋಗಕ್ಷೇಮ ಬೀಟಾದಲ್ಲಿ ಭಾಗವಹಿಸಲು ಸೈನ್ ಅಪ್ ಮಾಡಬಹುದು.

Best Mobiles in India

English summary
Android 9.0 Pie is now available Pixel users. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X