ಕುಬೇರರನ್ನು ನಾಚಿಸುವ ವಿಶ್ವದ ಟೆಕ್ ದಿಗ್ಗಜರೆಲ್ಲರೂ ಅರ್ಧಕ್ಕೆ ಕಾಲೇಜು ಬಿಟ್ಟವರು!!

|

ನಮ್ಮಲ್ಲಿ ಹೆಚ್ಚಿನವರಿಗೆ, ಒಂದು ಕಾಲೇಜು ಪದವಿಯನ್ನು ಶಿಕ್ಷಣವನ್ನು ಪಡೆದು ಉತ್ತಮ ಸರ್ಕಾರಿ ಕೆಲಸವನ್ನು ಗಿಟ್ಟಿಸಿಕೊಂಡರೆ ಸಾಕು ಎಂಬ ಯೋಚನೆ ಮತ್ತು ಯೋಜನೆ ಹೆಚ್ಚಿರುತ್ತದೆ. ನಮ್ಮೆಲ್ಲರ ಮನೆಗಳಲ್ಲಿ ಮತ್ತು ನಮ್ಮ ಸಮುದಾಯವೂ ಕೂಡ ಅದನ್ನೇ ಅಪೇಕ್ಷಿಸುವುದರಿಂದ, ಎಲ್ಲರೂ ಕೂಡ ಶಿಕ್ಷಣ ಪಡೆದು ಸರ್ಕಾರಿ ಹುದ್ದೆ ಪಡೆಯಲು ಹೋರಾಡುತ್ತಿದ್ದಾರೆ. ಅಲ್ಲವೆ?.

ಹಾಗಾಗಿಯೇ, ಭಾರತದಂತಹ ದೇಶದಲ್ಲಿ ಶಿಕ್ಷಣ ಎಂಬುದು ಒಂದು ಹುದ್ದೆ ಪಡೆಯುವಂತಹ ಮಾರ್ಗವಾಗಿ ಬದಲಾಗಿದೆ ಎನ್ನಬಹುದು. ಆದರೆ, ಇಂದಿನ ವಿಷಯ ಇದಲ್ಲ. ಬದಲಾಗಿ, ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ, ಕಾಲೇಜು ಪದವಿಯನ್ನು ಹೊಂದಿರದಿದ್ದರೂ ಸಹ ವಿಶ್ವದ ದೊಡ್ಡ ದೊಡ್ಡ ತಂತ್ರಜ್ಞಾನ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರ ಕಥೆಯನ್ನು ನಾವು ನಿಮಗೆ ಹೇಳುತ್ತಿದ್ದೇವೆ.

ಕುಬೇರರನ್ನು ನಾಚಿಸುವ ವಿಶ್ವದ ಟೆಕ್ ದಿಗ್ಗಜರೆಲ್ಲರೂ ಅರ್ಧಕ್ಕೆ ಕಾಲೇಜು ಬಿಟ್ಟವರು!

ಪುಸ್ತಕದ ಹುಳುವಾಗದೇ ತಮ್ಮ ಯೋಚನೆ ಮತ್ತು ಕಾರ್ಯಗಳಿಂದ ವಿಶ್ವದ ದಿಗ್ಗಜರಾಗಿರುವ ಇವರೆಲ್ಲರೂ ಅರ್ಧಕ್ಕೆ ಶಿಕ್ಷಣ ಬಿಟ್ಟರೂ ಸಹ ಸಾಧನೆಯೆಂಬ ಶಿಖರವನ್ನು ಏರಿದ್ದಾರೆ. ಹಾಗಾಗಿ, ಇಂದಿನ ಲೇಖನದಲ್ಲಿ ಉತ್ಕೃಷ್ಟ ಶಿಕ್ಷಣ ಪಡೆಯದೇ ಕುಬೇರರನ್ನು ನಾಚಿಸುವಂತಹ ವಿಶ್ವದ ಟಾಪ್ ಟೆಕ್ ಉದ್ಯಮಿಗಳು ಯಾರೆಲ್ಲಾ ಇದ್ದಾರೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಬಿಲ್‌ ಗೇಟ್ಸ್‌!

ಬಿಲ್‌ ಗೇಟ್ಸ್‌!

20 ನೇ ಶತಮಾನದಲ್ಲಿ ಹಲವು ವರ್ಷಗಳ ತನಕ ವಿಶ್ವದ ನಂಬರ್ 1 ಶ್ರೀಮಂತನಾಗಿದ್ದ ಬಿಲ್‌ ಗೇಟ್ಸ್‌ ಅವರು 20ನೇ ವಯಸ್ಸಿನಲ್ಲಿಯೇ 1975 ರಲ್ಲಿ ಹಾರ್ವರ್ಡ್ ಯುನಿವರ್ಸಿಟಿಯ ನ್ನು ತೊರೆದಿದ್ದರು. ಬಿಎ 2ನೇ ವರ್ಷದಲ್ಲೇ ಕಾಲೇಜಿಗೆ ವಿದಾಯ ಹೇಳಿದ ಗೇಟ್ಸ್‌ ಇವತ್ತು ಕಂಪ್ಯೂಟರ್‌ ಜಗತ್ತಿನ ದಿಗ್ಗಜ. ಅವರು ಹುಟ್ಟಿಹಾಕಿದ ಮೈಕ್ರೋಸಾಫ್ಟ್‌ ಕೂಡ ದಿಗ್ಗಜ ಕಂಪೆನಿ.

ಸ್ಟೀವ್‌ ಜಾಬ್ಸ್!

ಸ್ಟೀವ್‌ ಜಾಬ್ಸ್!

ಇಂದು ಜಗತ್ತಿನ ಅತ್ಯುತ್ತಮ ಮೊಬೈಲ್ ಕಂಪೆನಿಯ( ಆಪಲ್) ಒಡೆಯನಾಗಿರುವ ಸ್ಟೀವ್‌ ಜಾಬ್ಸ್ 1972 ರಲ್ಲಿ ಕೇವಲ 19 ವರ್ಷ ವಯಸ್ಸಿನಲ್ಲಿಯೇ ಕಾಲೇಜು ಬಿಟ್ಟಿದ್ದರು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವದೇ ಮನ ಎಂಬಂತೆ ಸ್ಟೀವ್‌ ಜಾಬ್ ಐಫೋನ್, ಐಪಾಡ್‌, ಮ್ಯಾಕ್‌ ಸಿಸ್ಟೆಮ್ಸ್ ಗಳನ್ನು ಆವಿಷ್ಕರಿಸಲು ತೆರಳಿದ್ದರು.

ಮಾರ್ಕ್ ಜೂಕರ್ ಬರ್ಗ್!

ಮಾರ್ಕ್ ಜೂಕರ್ ಬರ್ಗ್!

ವಿಶ್ವ ಸಾಮಾಜಿಕ ಜಾಲತಾಣಗಳ ಒಡೆಯ ಎಂದು ಕರೆಸಿಕೊಳ್ಳುತ್ತಿರುವ ಫೇಸ್‌ಬುಕ್ ಮಾಲಿಕ ಮಾರ್ಕ್ ಜೂಕರ್ ಬರ್ಗ್ ಯಾರಿಗೆ ಗೊತ್ತಿಲ್ಲಾ ಹೇಳಿ.? ಇವತ್ತು ಸಾಮಾಜಿಕ ಜಾಲತಾಣಗಳಿಂದಲೇ ಬಿಲಿಯನ್‌ಗಟ್ಟಲೆ ಆಸ್ತಿಗೆ ಒಡೆಯನಾಗಿರುವ ಜೂಕರ್ ಬರ್ಗ್ 20ರ ಹರೆಯದಲ್ಲೇ ಕಾಲೇಜಿಗೆ ಗುಡ್‌ಬೈ ಹೇಳಿದ್ದರು.

ಮೈಕಲ್‌ ಡೆಲ್‌

ಮೈಕಲ್‌ ಡೆಲ್‌

ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಲ್ಯಾಪ್‌ಟಾಪ್‌ಗಳು ಎಂಬ ಹೆಸರನ್ನು ಪಡೆದಿರುವ ಡೆಲ್ ಕಂಪ್ಯೂಟರ್‌ಗಳನ್ನು ನೀವೆಲ್ಲಾ ಬಳಸುತ್ತಿರಬಹುದು. ಈ ಡೆಲ್‌ ಕಂಪ್ಯೂಟರ್‌ ಕಂಪನಿಯ ಸ್ಥಾಪಕ ಮೈಕಲ್‌ ಡೆಲ್‌ ಅವರು ಟೆಕ್ಸಾಸ್‌ ಯೂನಿವರ್ಸಿಟಿಯಲ್ಲಿ ಅರ್ಧಕ್ಕೆ ಶಿಕ್ಷಣವನ್ನು ತೊರೆದರು. ಇಂದು ಪಾರ್ಚುನ್ 500 ಲಿಸ್ಟ್‌ನಲ್ಲಿ ತಮ್ಮ ಕಂಪನಿ ಹೆಸರನ್ನು ಸೇರಿಸಿಕೊಂಡಿದ್ದಾರೆ.

ಟ್ರಾವಿಸ್ ಕಲಾನಿಕ್.!

ಟ್ರಾವಿಸ್ ಕಲಾನಿಕ್.!

ಇಂದು ವಿಶ್ವದ ಅತಿದೊಡ್ಡ ಆಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುವ ಉಬರ್ ಹುಟ್ಟುಹಾಕಿದವರು ಈ ಟ್ರಾವಿಸ್ ಕಲಾನಿಕ್. ಇಂಟರ್‌ನೆಟ್ ಸಹಾಯದಿಂದ ಕ್ಯಾನ್ ಸೇವೆಗಳನ್ನು ಹೇಗೆ ಪಡೆಯಬಹುದು ಎಂದು ತೋರಿಸಿಕೊಟ್ಟ 'ಟ್ರಾವಿಸ್ ಕಲಾನಿಕ್' ಅವರು ಕಾಬ್ ಪ್ರಪಂಚದ ದಿಕ್ಕನ್ನೇ ಬಲಿಸಿದರು. ಇವರು ಕೂಡ ಡಿಗ್ರಿ ಪೂರ್ಣ ಗೊಳಿಸದೇ ಹೊರಬಿದ್ದವರು.

ಲಾರಿ ಎಲಿಸನ್‌!

ಲಾರಿ ಎಲಿಸನ್‌!

ಇವತ್ತು ವಿಶ್ವದ ಶ್ರೇಷ್ಠ ಸಾಪ್ಟ್‌ವೇರ್‌ ಕಂಪನಿಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ 'ಒರಾಕಲ್' ಕಂಪೆನಿ ಬಗ್ಗೆ ನೀವು ತಿಳಿದಿರಬಹುದು. ತನ್ನ ತಾಯಿಯ ಮರಣಾನಂತರ ಇಲಿನಾಯಿಸ್ ಯೂನಿವರ್ಸಿಟಿಯಲ್ಲಿ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಹೊಟ್ಟೆಪಾಡಿಗೆ ಕೆಲಸ ಆರಂಭಿಸಿದ 'ಲಾರಿ ಎಲಿಸನ್‌' 1977 ರಲ್ಲಿ ಒರಾಕಲ್ ಸಂಸ್ಥೆಯನ್ನು ಸ್ಥಾಪಿಸಿದರು.

ಜಾನ್‌ ಕೌಮ್!

ಜಾನ್‌ ಕೌಮ್!

ನೀವು ಪ್ರಖ್ಯಾತ ಇನ್‌ಸ್ಟಂಟ್ ಮೆಸೇಂಜಿಂಗ್ ಆಪ್ 'ವಾಟ್ಸ್‌ಆಪ್' ಅನ್ನು ಬಳಕೆ ಮಾಡುತ್ತಿದ್ದರೆ ಜಾನ್‌ ಕೌಮ್ ಯಾರು ಎಂಬುದನ್ನು ತಿಳಿದಿರಬೇಕು. 21 ನೇ ವಯಸ್ಸಿನಲ್ಲೇ ಓದು ನಿಲ್ಲಿಸಿದ ಜಾನ್‌ ಜಾನ್‌ ಜೋಸೆ ಯುನಿವರ್ಸಿಟಿಗೆ ಬೈ ಬೈ ಹೇಳಿ ಯಾಹೂದಲ್ಲಿ ಕೆಲಸ ಪಡೆದಿದ್ದರು. ನಂತರ ಕೆಲಸಕ್ಕೆ ರಾಜಿನಾಮೆ ನೀಡಿ ವಾಟ್ಸ್ ಆಪ್‌ ಅನ್ನು ಕಂಡುಹಿಡಿದಿದ್ದರು. ಈಗ ವಾಟ್ಸ್‌ಆಪ್ ಜೂಕರ್ ಬರ್ಗ್ ವಶವಾಗಿದೆ.

ಜಾಕ್ ಡಾರ್ಸೆ

ಜಾಕ್ ಡಾರ್ಸೆ

ಮೈಕ್ರೋಬ್ಲಾಗಿಂಗ್ ವೆಬ್ಸೈಟ್ ಟ್ವಿಟರ್‌ಗೆ CEO ಆಗಿರುವ ಜ್ಯಾಕ್ ಡಾರ್ಸೆ ಕೂಡ ಅರ್ಧಕ್ಕೆ ಶಿಕ್ಷಣವನ್ನು ತೊರೆದವರು. ಯುನಿವರ್ಸಿಟಿ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಶಿಕ್ಷಣ ಪಡೆಯುವಾಗಲೇ , ನ್ಯೂಯಾರ್ಕ್ ವಿಶ್ವವಿದ್ಯಾನಿಲಯಕ್ಕೆ ವರ್ಗಾವಣೆಗೊಂಡ ಇವರು ಅಂತಿಮವಾಗಿ ಟ್ವಿಟ್ಟರ್ ರಚಿಸಲು ಹೊರಬಂದರು.

Best Mobiles in India

English summary
Especially in the technology industry, there have been many visionaries who created something new and different that took the world by storm. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X