ನಿಮ್ಮ ಫಿಂಗರ್ ಪ್ರಿಂಟ್ ಬಳಸಿ ಇನ್ನು ಮುಂದೆ ಕಾರ್ ಸ್ಟಾರ್ಟ್ ಮಾಡಿ

|

ಕಳೆದ ಕೆಲವು ವರ್ಷಗಳಲ್ಲಿ ಸ್ಮಾರ್ಟ್ ಫೋನ್ ನಿಂದ ಹಿಡಿದು ಟ್ಯಾಬ್ಲೆಟ್, ಪಿಸಿ ಅಷ್ಟೇ ಯಾಕೆ ಮನೆಯ ಬಾಗಿಲನ್ನೂ ಕೂಡ ಫಿಂಗರ್ ಪ್ರಿಂಟ್ ಬಳಸಿ ಅನ್ ಲಾಕ್ ಮಾಡುವ ಸೌಲಭ್ಯವು ಪ್ರಸಿದ್ಧಿಯಾಗುತ್ತಲೇ ಇದೆ. ಇದೀಗ ಈ ತಂತ್ರಜ್ಞಾನವು ಒಂದು ಹಂತ ಮುಂದಕ್ಕೆ ಸಾಗುತ್ತಿದೆ. ಹಾಗಾದ್ರೆ ಎಲ್ಲಿಗೆ ಎಂದು ಕೇಳುತ್ತಿದ್ದೀರಾ? ಮುಂದೆ ಓದಿ.

ನಿಮ್ಮ ಫಿಂಗರ್ ಪ್ರಿಂಟ್ ಬಳಸಿ ಇನ್ನು ಮುಂದೆ ಕಾರ್ ಸ್ಟಾರ್ಟ್ ಮಾಡಿ

ಈ ನಿಮ್ಮ ಕನಸಿನ ಕಾರು ಯಾವುದು? ಕನಸಿನ ಕಾರು ಹೇಗಿರಬೇಕು? ಒಂದು ಕಾಲದಲ್ಲಿ ಕೇವಲ ಅಂಬಾಸಿಡರ್ ಕಾರುಗಳು ರಸ್ತೆಯಲ್ಲಿರುತ್ತಿದ್ದವು. ಇದೀಗ ಯಾವ ಮಟ್ಟಕ್ಕೆ ಕಾರುಗಳ ಜಗತ್ತು ಬದಲಾಗಿ ಬಿಟ್ಟಿದೆ ಅಲ್ವಾ? ಎಂತೆಂತ ಕಾರುಗಳು ಈಗ ರಸ್ತೆಯಲ್ಲಿ ಸಂಚರಿಸುತ್ತಿವೆ. ಆದರೆ ಟೆಕ್ನಾಲಜಿ ಇನ್ನೂ ಮುಂದುವರಿಯುತ್ತಿದೆ. ತಂತ್ರಗಾರಿಕೆಯ ಅಭಿವೃದ್ಧಿ ಮತ್ತಷ್ಟು ಹೆಚ್ಚುತ್ತಿದೆ ಎಂಬುದಕ್ಕೆ ಸಾಕ್ಷಿ ಈ ಸ್ಟೋರಿ. ಈಗ ನೀವು ನೋಡುತ್ತಿರುವ ಕಾರುಗಳು ಇನ್ನು ಕೆಲವೇ ವರ್ಷಗಳಲ್ಲಿ ಹಳೆಯದು ಅನ್ನಿಸಿಕೊಂಡು ಬಿಡುತ್ತವೆ.

ಕಾರುಗಳಲ್ಲಿ ಬರಲಿದೆ ಫಿಂಗರ್ ಪ್ರಿಂಟ್ ತಂತ್ರಜ್ಞಾನ:

ಕಾರುಗಳಲ್ಲಿ ಬರಲಿದೆ ಫಿಂಗರ್ ಪ್ರಿಂಟ್ ತಂತ್ರಜ್ಞಾನ:

ಹೌದು ನಿಮ್ಮ ಕನಸಿನ ಭವಿಷ್ಯದ ಕಾರುಗಳು ರೂಪುಗೊಳ್ಳುತ್ತಿದೆ. ಕೊರಿಯನ್ ಹೆರಾಲ್ಡ್ ವರದಿಯೊಂದು ಹೇಳಿರುವ ಪ್ರಕಾರ ಸೌತ್ ಕೊರಿಯಾದ ಅಟೋಸಂಸ್ಥೆ ಹೊಂಡೈ ಹೊಸ ಕಾರೊಂದನ್ನು ಪ್ರದರ್ಶಿಸಿದ್ದು ಅದರಲ್ಲಿ ಡ್ರೈವರ್ ಗಳು ವೆಹಿಕಲ್ ನ್ನು ತಮ್ಮ ಫಿಂಗರ್ ಪ್ರಿಂಟ್ ಬಳಸಿ ಅನ್ ಲಾಕ್ ಮಾಡುವ ಮತ್ತು ಕಾರನ್ನು ಸ್ಟಾರ್ಟ್ ಮಾಡುವ ತಂತ್ರಗಾರಿಕೆಯನ್ನು ಅಳವಡಿಸಲಾಗುತ್ತಿದೆ.ಚೀನಾದಲ್ಲಿ ನಡೆದ ಆಟೋ ಶೋ ಕಾರ್ಯಕ್ರಮವೊಂದರಲ್ಲಿ ಸಂಸ್ಥೆಯು ಇದನ್ನು ಪ್ರದರ್ಶನ ಮಾಡಿದೆ.

ಕಾರಿನಲ್ಲಿ ಫಿಂಗರ್ ಪ್ರಿಂಟ್ ತಂತ್ರಗಾರಿಕೆ ಹೇಗೆ ಕೆಲಸ ನಿರ್ವಹಿಸುತ್ತದೆ?

ಕಾರಿನಲ್ಲಿ ಫಿಂಗರ್ ಪ್ರಿಂಟ್ ತಂತ್ರಗಾರಿಕೆ ಹೇಗೆ ಕೆಲಸ ನಿರ್ವಹಿಸುತ್ತದೆ?

ಫಿಂಗರ್ ಪ್ರಿಂಟ್ ತಂತ್ರಗಾರಿಕೆಯು ಕಾರಿನ ಡೋರ್ ನಲ್ಲಿ ಅಳವಡಿಸಲಾಗಿರುತ್ತದೆ ಮತ್ತು ಇಗ್ನೀಷನ್ ಪಾಯಿಂಟ್ ನಲ್ಲೂ ಅಳವಡಿಸಲಾಗಿರುತ್ತದೆ. ಹಲವು ಡ್ರೈವರ್ ಗಳ ಫಿಂಗರ್ ಪ್ರಿಂಟ್ ನ್ನು ಇದಕ್ಕೆ ಅಳವಡಿಸಲು ಸಾಧ್ಯವಿದ್ದು, ಯಾರ ಫಿಂಗರ್ ಪ್ರಿಂಟ್ ಕಾರಿನಲ್ಲಿ ಅಳವಡಿಸಲಾಗಿರುತ್ತದೆಯೋ ಆ ಎಲ್ಲಾ ಡ್ರೈವರ್ ಗಳು ಕಾರನ್ನು ಚಲಾಯಿಸಲು ಅವಕಾಶವಿರುತ್ತದೆ.

ಸೆನ್ಸರ್ ನಿಂದಲೇ ಸೀಟ್, ಕನ್ನಡಿ ಅಡ್ಜೆಸ್ಟ್ ಮೆಂಟ್:

ಸೆನ್ಸರ್ ನಿಂದಲೇ ಸೀಟ್, ಕನ್ನಡಿ ಅಡ್ಜೆಸ್ಟ್ ಮೆಂಟ್:

ಯಾವ ಡ್ರೈವರ್ ಕೂರುತ್ತಾರೋ ಎಂಬುದನ್ನು ಫಿಂಗರ್ ಪ್ರಿಂಟ್ ಸೆನ್ಸರ್ ನಿಂದಲೇ ಅರ್ಥಮಾಡಿಕೊಳ್ಳುವ ಕಾರು ಕೂಡಲೇ ಹಿಂಭಾಗದ ಕನ್ನಡಿಗಳನ್ನು ಮತ್ತು ಡ್ರೈವಿಂಗ್ ಸೀಟನ್ನು ಅವರಿಗೆ ತಕ್ಕಂತೆ ಹೊಂದಿಸಿಬಿಡುತ್ತದೆ.

ಹ್ಯಾಕಿಂಗ್ ಗೆ ಅವಕಾಶವಿಲ್ಲ:

ಹ್ಯಾಕಿಂಗ್ ಗೆ ಅವಕಾಶವಿಲ್ಲ:

ಸದ್ಯಕ್ಕೆ ಈ ವೈಶಿಷ್ಟ್ಯತೆಯು ಚೀನಾದ ಹೊಂಡೈ ಸಂತಾ ಫೇ ನಲ್ಲಿ ಬರಲಿದ್ದು 2019 ರಲ್ಲಿ ಚರ್ಚೆಗೊಳ್ಳುವ ನಿರೀಕ್ಷೆ ಇದೆ. ನಕಲಿ ಫಿಂಗರ್ ಪ್ರಿಂಟ್ ಅಥವಾ ಯಾರೂ ಹ್ಯಾಕ್ ಮಾಡಲು ಅವಕಾಶವಿಲ್ಲದಂತೆ "ಮಾನವ ಧಾರಣೆ" ಅಥವಾ " ಹ್ಯೂಮನ್ ಕೆಪಾಸಿಟೆನ್ಸ್" ನ್ನು ಕೂಡ ಅಳವಡಿಸಲಾಗಿರುತ್ತದೆ.

ದೋಷದ ದರ:

ದೋಷದ ದರ:

ಹೊಂಡೈ ಹೇಳುವ ಪ್ರಕಾರ ಈ ವ್ಯವಸ್ಥೆಯ ದೋಷದ ದರ 50,000ದಲ್ಲಿ 1 ಇರುತ್ತದೆ ಎಂದು ಹೇಳುತ್ತಿದೆ. ಇನ್ನು ಚೀನಾದಲ್ಲಿ ಹೊಸ ಸಂತಾ ಫೇ ಕೂಡ ವಾಯ್ಸ್ ರೆಕಗ್ನಿಷನ್ ಮತ್ತು ವಯರ್ ಲೆಸ್ ಮೊಬೈಲ್ ಚಾರ್ಜರ್ ನ್ನು ಕೂಡ ನೀಡುತ್ತದೆ.

ಫಿಂಗರ್ ಪ್ರಿಂಟ್ ತಂತ್ರಗಾರಿಕೆ ಅಳವಡಿಸುವ ಮೊದಲ ಸಂಸ್ಥೆ:

ಫಿಂಗರ್ ಪ್ರಿಂಟ್ ತಂತ್ರಗಾರಿಕೆ ಅಳವಡಿಸುವ ಮೊದಲ ಸಂಸ್ಥೆ:

ಇದು ಸಂಪೂರ್ಣ ಯಶಸ್ವಿಯಾಗಿ ಮಾರುಕಟ್ಟೆಗೆ ಬಂದಲ್ಲಿ ಫಿಂಗರ್ ಪ್ರಿಂಟ್ ತಂತ್ರಗಾರಿಕೆಯನ್ನು ಕಾರಿನ ಬಾಗಿಲಿನಲ್ಲಿ ಅಳವಡಿಸುವ ವಿಶ್ವದ ಮೊದಲ ಸಂಸ್ಥೆ ಹೊಂಡೈ ಆಗಿ ಗುರುತಿಸಿಕೊಳ್ಳಲಿದೆ.

2019 ರಲ್ಲಿ ರೋಡಿನಲ್ಲಿ ಸಂಚರಿಸಲಿದೆ:

2019 ರಲ್ಲಿ ರೋಡಿನಲ್ಲಿ ಸಂಚರಿಸಲಿದೆ:

ಕಾರಿನಲ್ಲಿ ಚೀನಾದ ಅಂತರ್ಜಾಲ ದೈತ್ಯ ಬೈದುವಿನ ವಾಯ್ಸ್ ರೆಕಗ್ನಿಷನ್ ಸಿಸ್ಟಮ್ ಮತ್ತು ವಯರ್ ಲೆಸ್ ಫೋನ್ ಚಾರ್ಜರ್ ವ್ಯವಸ್ಥೆಯು ಕೂಡ ಅಳವಡಿಸಲಾಗಿರುತ್ತದೆ.ಸದ್ಯಕ್ಕೆ ಹೊಂಡೈ ಈ ಕಾರನ್ನು ಕೇವಲ ಚೀನಾದಲ್ಲಿ ಮಾತ್ರವೇ ಬಿಡುಗಡೆಗೊಳಿಸಲಿದೆ. 2019 ರಲ್ಲಿ ಈ ಕಾರುಗಳು ರಸ್ತೆಗಿಳಿಯುವ ಸಾಧ್ಯತೆ ಇದೆ.

Best Mobiles in India

Read more about:
English summary
A car that can be unlocked with your fingerprint

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X