ವಾಟ್ಸಾಪ್‌ಗೆ ಬಂದ ಲಿಂಕ್‌ ಕ್ಲಿಕ್‌ ಮಾಡಿ, 9.5 ಲಕ್ಷ ರೂ. ಕಳೆದುಕೊಂಡ ಬ್ಯಾಂಕ್‌ ನೌಕರ!

|

ಆನ್‌ಲೈನ್ ಬ್ಯಾಂಕಿಂಗ್‌ ವಹಿವಾಟು ನಡೆಸುವ ಮಂದಿ ಈ ಸುದ್ದಿಯನ್ನು ಗಮನಿಸಲೇಬೇಕು. ವಾಟ್ಸಾಪ್‌ ಬ್ಯಾಂಕಿಂಗ್‌ ಮಾಡೋರು ಕೂಡ ಈ ವರದಿಯನ್ನು ಓದಲೇಬೇಕು. ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ವಂಚನೆ ಪ್ರಕರಣಗಳು ನಡೆಯುತ್ತಲೇ ಇವೆ. ಆದರೆ ಈ ಪ್ರಕರಣ ನಿಮ್ಮನ್ನು ಒಂದು ಕ್ಷಣ ದಂಗಾಗುವಂತೆ ಮಾಡೋದು ಖಂಡಿತ. ಯಾಕಂದ್ರೆ ಈ ಪ್ರಕರಣದಲ್ಲಿ ಮೋಸ ಹೋಗಿರುವುದು ನಿವೃತ್ತ ಬ್ಯಾಂಕ್‌ ಉದ್ಯೋಗಿ. ಅಲ್ಲದೆ ಮೋಸ ಹೋಗಿರುವುದು ಕೂಡ ಬ್ಯಾಂಕಿಂಗ್‌ ವಿಚಾರದಲ್ಲಿ ಅನ್ನೊದು ಇಂಟ್ರೆಸ್ಟಿಂಗ್‌ ವಿಚಾರ.

ನಿವೃತ್ತ

ಹೌದು, ಮುಂಬೈನ ನಿವೃತ್ತ ಬ್ಯಾಂಕ್‌ ಉದ್ಯೋಗಿಯೊಬ್ಬರು, ಆನ್‌ಲೈನ್‌ ಬ್ಯಾಂಕಿಂಗ್‌ ಮಾಡಲು ಹೋಗಿ ಮೋಸ ಹೋಗಿರುವ ಘಟನೆ ನಡೆದಿದೆ. ಯೂನಿಯನ್‌ ಬ್ಯಾಂಕ್‌ನ ಮಾಜಿ ಉದ್ಯೋಗಿಯಾಗಿರುವ ಮುಂಬೈನ ಪುಷ್ಪಲತಾ ಪ್ರದೀಪ್ ಚಿಂದರ್ಕರ್ ಮೋಸ ಹೋಗಿರುವವರು. ತಾವು ಕೆಲಸ ಮಾಡ್ತಿದ್ದ ಬ್ಯಾಂಕ್‌ನಲ್ಲಿ ತಾವು ಇಟ್ಟಿದ್ದ ಎಫ್‌ಡಿ ವಿಚಾರವಾಗಿ ಇದ್ದ ಸಮಸ್ಯೆಗಳ ಬಗ್ಗೆ ಆನ್‌ಲೈನ್‌ನಲ್ಲಿ ದೂರು ಸಲ್ಲಿಸಲು ಹೋಗಿ ವಂಚಕರ ಬಲೆಗೆ ಬಿದ್ದಿದ್ದಾರೆ. ಈ ಮೂಲಕ ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಹಾಗಾದ್ರೆ ಇಲ್ಲಿ ನಡೆದಿದ್ದೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಮುಂದೆ ಓದಿರಿ.

ಏನಿದು ಪ್ರಕರಣ?

ಏನಿದು ಪ್ರಕರಣ?

ಮುಂಬೈನ ಪುಷ್ಪಲತಾ ಪ್ರದೀಪ್ ಚಿಂದರ್ಕರ್ ಯೂನಿಯನ್‌ ಬ್ಯಾಂಕ್‌ನ ನಿವೃತ್ತ ಉದ್ಯೋಗಿಯಾಗಿದ್ದಾರೆ. ಇವರು ತಮ್ಮ ಎಫ್‌ಡಿ ವಿಚಾರವಾಗಿ ಕೆಲವು ಸಮಸ್ಯೆಗಳನ್ನು ಎದುರಿಸಿದ್ದಾರೆ. ಇದರ ಬಗ್ಗೆ ಆನ್‌ಲೈನ್‌ ಮೂಲಕ ಬ್ಯಾಂಕ್‌ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸಲು ಹೋಗಿದ್ದಾರೆ. ಇದರಲ್ಲಿ ತಮ್ಮ ಮೊಬೈಲ್‌ ನಂಬರ್‌ ನಮೂದಿಸುವ ಹಂತದವರೆಗೂ ಬಂದಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಂಕಿಂಗ್‌ ವೆಬ್‌ಸೈಟ್‌ನಲ್ಲಿ ದೋಷ ಉಂಟಾಗಿದೆ. ನಂತರ ಇವರ ಫೋನ್‌ ನಂಬರ್‌ಗೆ ಎರಡು ಕರೆಗಳು ಬಂದಿವೆ.

ಮಾಡಿರುವ

ಪುಷ್ಪಲತಾ ಪ್ರದೀಪ್ ಚಿಂದರ್ಕರ್ ಅವರ ಫೋನ್‌ ನಂಬರ್‌ಗೆ ಕರೆ ಮಾಡಿರುವ ಸೈಬರ್‌ ವಂಚಕರು ತಮಗೆ ಸಹಾಯ ಮಾಡುವುದಾಗಿ, ಬ್ಯಾಂಕ್‌ನ ಸಿಬ್ಬಂದಿಯ ಸೋಗಿನಲ್ಲಿ ಮಾತನಾಡಿದ್ದಾರೆ. ಅಲ್ಲದೆ ನಿಮ್ಮ ಕುಂದುಕೊರತೆಗಳನ್ನು ಸಲ್ಲಿಸಲು ನೀವು ಬ್ಯಾಂಕ್‌ನ ಹೊಸ ಆ್ಯಪ್‌ ಡೌನ್‌ಲೋಡ್‌ ಮಾಡಬೇಕಿದೆ. ಇದಕ್ಕಾಗಿ ತಾವು ಕಳುಹಿಸುವ ಲಿಂಕ್‌ ಅನ್ನು ಕ್ಲಿಕ್‌ ಮಾಡಿ ಎಂದು ಹೇಳಿದ್ದಾರೆ. ಈ ಮೂಲಕ ಪುಷ್ಪಲತಾ ಪ್ರದೀಪ್ ಚಿಂದರ್ಕರ್ ಅವರನ್ನು ನಾಜೂಕಾಗಿ ತಮ್ಮ ಮೋಸದ ಬಲೆಯಲ್ಲಿ ಬಿಳಿಸಿದ್ದಾರೆ.

ವಾಟ್ಸಾಪ್‌ ಲಿಂಕ್‌ ಕ್ಲಿಕ್‌ 9.5 ಲಕ್ಷ ರೂ. ಮಾಯ?

ವಾಟ್ಸಾಪ್‌ ಲಿಂಕ್‌ ಕ್ಲಿಕ್‌ 9.5 ಲಕ್ಷ ರೂ. ಮಾಯ?

ವಂಚಕರ ಮಾತು ನಂಬಿದ ಪುಷ್ಪಲತಾ ಪ್ರದೀಪ್ ಚಿಂದರ್ಕರ್ ವಂಚಕರು ವಾಟ್ಸಾಪ್‌ಗೆ ಕಳುಹಿಸಿದ ಲಿಂಕ್‌ ಅನ್ನು ಕ್ಲಿಕ್‌ ಮಾಡಿ ಅವರ ನಿರ್ಧೇಶನವನ್ನು ಪಾಲಿಸಿದ್ದಾರೆ. ಅದಂತೆ ಒಂದು ಆ್ಯಪ್‌ ಡೌನ್‌ಲೋಡ್‌ ಮಾಡಿ ಅದರಲ್ಲಿ ಎಲ್ಲ ಮಾಹಿತಿಯನ್ನು ತುಂಬಿದ್ದಾರೆ. ಇದರಲ್ಲಿ ತನ್ನ ದೂರನ್ನು ಪರಿಶೀಲಿಸಲು ಮತ್ತು ನೋಂದಾಯಿಸಲು ತನ್ನ ಬ್ಯಾಂಕಿಂಗ್ ವಿವರಗಳನ್ನು ಸಹ ತುಂಬಿದ್ದಾರೆ. ಈ ಸಮಯದಲ್ಲಿ ಚಿಂದರ್ಕರ್‌ ಇದು ಹೊಸ ವಿಧಾನವೇ ಎಂದು ಅನುಮಾನದಿಂದ ಪ್ರಶ್ನಿಸಿದ್ದಾರೆ. ಆದರೂ ಕೂಡ ವಂಚಕರು ಅವರನ್ನು ನಂಬಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಟರ್‌ನೆಟ್

ವಂಚಕರು ಹೇಳಿದಂತೆ ಹೊಸ ಆ್ಯಪ್‌ನಲ್ಲಿ ಇಂಟರ್‌ನೆಟ್ ಬ್ಯಾಂಕಿಂಗ್ ಲಾಗಿನ್ ಮತ್ತು ಪಾಸ್‌ವರ್ಡ್ ಮತ್ತು ಅವರ ಬ್ಯಾಂಕ್ ಯೂಸರ್‌ ಐಡಿಯನ್ನು ನಮೂದಿಸಿದ್ದಾರೆ. ತದ ನಂತರ ಪುಷ್ಪಲತಾ ಪ್ರದೀಪ್ ಚಿಂದರ್ಕರ್ ಅವರಿಗೆ ಶಾಕ್‌ ಎದುರಾಗಿದೆ. ಯಾಕೆಂದರೆ ಒಮ್ಮೆಲೇ ಅವರ ಅಕೌಂಟ್‌ನಿಂದ 9.5 ಲಕ್ಷ ರೂ. ಡೆಬಿಟ್‌ ಆಗಿರುವ ಸಂದೇಶ ಬಂದಿದೆ. ಕೂಡಲೇ ತಮ್ಮ ಸ್ಮಾರ್ಟ್‌ಫೋನ್‌ ಸ್ವಿಚ್‌ ಆಫ್‌ ಮಾಡಿರುವ ಚಿಂದಾರ್ಕರ್ ತನ್ನ ಪತಿಯ ಫೋನ್ ಬಳಸಿ ಘಟನೆಯ ಬಗ್ಗೆ ತಮ್ಮ ಕಸ್ಟಮರ್‌ ಕೇರ್‌ ಮೂಲಕ ಯೂನಿಯನ್ ಬ್ಯಾಂಕ್‌ಗೆ ಮಾಹಿತಿ ತಿಳಿಸಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಪ್ರಕರಣಕ್ಕೆ ಅಸಲಿ ಕಾರಣ ಏನು?

ಈ ಪ್ರಕರಣಕ್ಕೆ ಅಸಲಿ ಕಾರಣ ಏನು?

ಆನ್‌ಲೈನ್‌ ಬ್ಯಾಂಕಿಂಗ್‌ ನಡೆಸುವಾಗ ಫಿಶಿಂಗ್‌ ವೆಬ್‌ಸೈಟ್‌ಗಳ ಬಗ್ಗೆ ಎಚ್ಚರವಿರುವುದು ಒಳಿತು. ಇಲ್ಲಿ ಪುಷ್ಪಲತಾ ಪ್ರದೀಪ್ ಚಿಂದರ್ಕರ್ ಅವರನ್ನು ವಂಚಕರು ನಾಜೂಕಾಗಿ ಯಾಮಾರಿಸಿದ್ದಾರೆ. ಅವರು ವಾಟ್ಸಾಪ್‌ನಲ್ಲಿ ಕಳುಹಿಸಿದ ಲಿಂಕ್‌ನಲ್ಲಿ ಆ್ಯಪ್‌ ಡೌನ್‌ಲೋಡ್‌ ಮಾಡಿಸುವ ಮೂಲಕ ಪುಷ್ಪಲತಾ ಪ್ರದೀಪ್ ಚಿಂದರ್ಕರ್‌ಗೆ ಮೋಸ ಮಾಡಿದ್ದಾರೆ. ಈ ಮೂಲಕ ಪುಷ್ಪಲತಾ ಪ್ರದೀಪ್ ಚಿಂದರ್ಕರ್ ಕೂಡ ಮೋಸ ಹೋಗಿದ್ದಾರೆ. ಆನ್‌ಲೈನ್‌ ಬ್ಯಾಂಕಿಂಗ್‌ ಸಮಯದಲ್ಲಿ ಇಂತಹ ಘಟನೆಗಳ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

Best Mobiles in India

English summary
A retired bank employee loses over 9 lakh after clicking on malicious WhatsApp link

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X