ಗೂಗಲ್‌ ಅನ್ನೇ ಮೂರ್ಖಗೊಳಿಸಿದ ಭೂಪ..! ಹೇಗಾಗುತ್ತೆ ಟ್ರಾಫಿಕ್‌ ಜಾಮ್‌ ಗೊತ್ತಾ..?

By Gizbot Bureau
|

ಹಳ್ಳಿಯಿಂದ ದಿಲ್ಲಿಯವರೆಗೂ ಗೂಗಲ್‌ ಮ್ಯಾಪ್ಸ್‌ ನ್ಯಾವಿಗೇಶನ್‌ನ್ನು ಎಲ್ಲರೂ ಬಳಸುತ್ತಿದ್ದೇವೆ. ವರ್ಷಗಳು ಕಳೆದಂತೆಎ ಗೂಗಲ್‌ ಮ್ಯಾಪ್ಸ್‌ ಗೇಮ್‌ಚೆಂಜರ್‌ ಆಗಿ ಬದಲಾಗಿದ್ದು, ಪ್ರಪಂಚದಾದ್ಯಂತ ಜನರು ಹೇಗೆ ಪ್ರಯಾಣಿಸುತ್ತಾರೆ ಎಂಬುದನ್ನು ತೋರಿಸುತ್ತದೆ. ರಸ್ತೆಗಳಲ್ಲಿ ಟ್ರಾಫಿಕ್‌ ಪರಿಸ್ಥಿತಿಯನ್ನು ಗುರುತಿಸಲು ಗೂಗಲ್‌ ಬಳಕೆದಾರರ ಸ್ಮಾರ್ಟ್‌ಫೋನ್‌ಗಳ ಜಿಪಿಎಸ್‌ ಡೇಟಾವನ್ನು ಹೆಚ್ಚು ಅವಲಂಬಭಿಸಿದೆ. ಇದನ್ನೇ ಆಧಾರವಾಗಿಟ್ಟುಕೊಂಡ ಬರ್ಲಿನ್ ಕಲಾವಿದ ಸುಲಭ ತಂತ್ರದ ಮೂಲಕ ಗೂಗಲ್‌ ಮ್ಯಾಪ್ಸ್‌ನ್ನು ಹ್ಯಾಕ್‌ ಮಾಡಿದ್ದಾನೆ. ಸೈಮನ್ ವೆಕರ್ಟ್ ಎಂಬಾತ 99 ಕಾರ್ಯನಿರತ ಸ್ಮಾರ್ಟ್‌ಫೋನ್‌ಗಳನ್ನು ಒಂದು ಚೌಕಾಕಾರದ ಬುಟ್ಟಿಯಲ್ಲಿಟ್ಟು, ಬರ್ಲಿನ್‌ನ ರಸ್ತೆಗಳಲ್ಲಿ ಎಳೆದುಕೊಂಡು ಸುತ್ತಿದ್ದಾನೆ.

ಸ್ಮಾರ್ಟ್‌ಫೋನ್‌

ಒಂದೇ ಪ್ರದೇಶದಲ್ಲಿ ಒಂದೇ ಬಾರಿಗ 99 ಸ್ಮಾರ್ಟ್‌ಫೋನ್‌ಗಳು ಕಾರ್ಯನಿರತವಾಗಿದ್ದರಿಂದ ಸ್ಮಾರ್ಟ್‌ಫೋನ್‌ ಸಾಂದ್ರತೆ ಹೆಚ್ಚಾಗಿದೆ. ಇದರಿಂದ ಬರ್ಲಿನ್‌ನ ರಸ್ಯೆಗಳು ಇದ್ದಕ್ಕಿದ್ದಂತೆ ಚೋಕ್-ಎ-ಬ್ಲಾಕ್ ಎಂದು ತೋರಿಸಿವೆ. ಕುತೂಹಲಕಾರಿ ಅಂಶ ಏನೆಂದರೆ, 99 ಫೋನ್‌ಗಳು ತುಂಬಿದ ಕಾರ್ಟ್ ಬರ್ಲಿನ್‌ನ ಗೂಗಲ್ ಕಚೇರಿಯಿಂದ ಹೊರಗೆ ಹೋಗಿರುವುದು. ಎಲ್ಲಾ 99 ಫೋನ್‌ಗಳು ಕಾರ್ಟ್‌ನಲ್ಲಿರುವುದರಿಂದ ಮತ್ತು ನಿಧಾನವಾಗಿ ಚಲಿಸುತ್ತಿರುವುದರಿಂದ ಹೆಚ್ಚು ಟ್ರಾಫಿಕ್‌ ಇದೆ ಎಂದು ಭಾವಿಸಿದ ಗೂಗಲ್‌ ಮ್ಯಾಪ್ಸ್‌ ರಸ್ತೆಗಳನ್ನೆಲ್ಲಾ ಕೆಂಪು ಬಣ್ಣಕ್ಕೆ ತಿರುಗಿಸಿದೆ. ಮ್ಯಾಪ್ಸ್‌ನಲ್ಲಿದ್ದ ಹಸಿರು ಬಣ್ಣ ತಕ್ಷಣ ಮಾಯವಾಗಿ ರಸ್ತೆಗಳೆಲ್ಲಾ ಕೆಂಪು ಬಣ್ಣಕ್ಕೆ ತಿರುಗುವಂತೆ ಸೈಮನ್ ವೆಕರ್ಟ್‌ ಮಾಡಿದ್ದ. ಆ ಸುಲಭ ಟ್ರಿಕ್‌ನ ವಿಡಿಯೋ ಇಲ್ಲಿದೆ ನೋಡಿ.

ವೆಕರ್ಟ್ ಈ ರೀತಿ ಯಾಕೆ ಮಾಡಿದರು ಎಂಬುದರ ಹಿಂದಿನ ನಿಜವಾದ ಕಾರಣ ಸ್ಪಷ್ಟವಾಗಿಲ್ಲ. ಮತ್ತು ಅವರ ವೆಬ್‌ಪುಟದಲ್ಲಿಯೂ ಸಹ ನಿಖರವಾಗಿ ಏಕೆ ಮಾಡಿದ್ದಾರೆಂಬುದನ್ನು ವಿವರಿಸಿಲ್ಲ. ಬದಲಾಗಿ, ಮ್ಯಾಪ್ಸ್‌ ಗೂಗಲ್‌ ಹೇಗೆ ಬದಲಾಯಿಸಿದೆ ಎಂಬುದನ್ನು ತಿಳಿಸಿದ್ದಾರೆ. "ಮ್ಯಾಪ್ಸ್‌ ಮತ್ತಯ ಅರ್ಥ್‌ ಸೇವೆಗಳಲ್ಲಿ ಗೂಗಲ್‌ನ ಜಿಯೋ ಪರಿಕರಗಳ ಆಗಮನವು 2005ರಲ್ಲಿ ಪ್ರಾರಂಭವಾಯ್ತು. ನಂತರ 2007 ರಲ್ಲಿ ಸ್ಟ್ರೀಟ್ ವ್ಯೂ ಪ್ರಾರಂಭವಾಯಿತು. ಅಂದಿನಿಂದ ತಾಂತ್ರಿಕವಾಗಿ ಹೆಚ್ಚು ಅಭಿವೃದ್ಧಿ ಹೊಂದಿ ಜನರಿಗೆ ಉಪಯುಕ್ತವಾದವು. ಗೂಗಲ್‌ನ ವರ್ಚುವಲ್ ನಕ್ಷೆಗಳು ಅನಲಾಗ್ ನಕ್ಷೆಗಳೊಂದಿಗೆ ಒಂದಿಷ್ಟು ಸಾಮ್ಯತೆಯನ್ನು ಹೊಂದಿವೆ ಎಂದು ತಮ್ಮ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದ್ದಾರೆ.

ಗೂಗಲ್‌ ಮ್ಯಾಪ್ಸ್‌

ಗೂಗಲ್‌ ಮ್ಯಾಪ್ಸ್‌ ಸಂವಾದಾತ್ಮಕವಾಗಿದ್ದು, ಸ್ಕ್ರೋಲ್, ಸರ್ಚ್‌, ಜೂಮ್‌ ಮಾಡಬಹುದು. ನಕ್ಷೆ ಎಂದರೇನು, ನಕ್ಷೆಗಳೊಂದಿಗೆ ನಾವು ಹೇಗೆ ಸಂವಹನ ನಡೆಸುತ್ತೇವೆ, ಅವುಗಳ ತಾಂತ್ರಿಕ ಮಿತಿಗಳು ಮತ್ತು ಕಲಾತ್ಮಕವಾಗಿ ಹೇಗೆ ಕಾಣುತ್ತವೆ ಎಂಬ ಬಗ್ಗೆ ನಮ್ಮ ತಿಳುವಳಿಕೆಯನ್ನು ಗೂಗಲ್‌ ಮ್ಯಾಪ್ಸ್‌ ಮೂಲಭೂತವಾಗಿ ಬದಲಾಯಿಸಿದೆ ಎಂದು ವೆಕರ್ಟ್‌ ಹೇಳಿದರು. ಆದಾಗ್ಯೂ, ಸಣ್ಣ ‘ಟ್ರಿಕ್' ಒಂದು ಟೆಕ್‌ ದೈತ್ಯ ಗೂಗಲ್‌ನ್ನು ಮೂರ್ಖನನ್ನಾಗಿಸಿರೋದು ಸುಳ್ಳಲ್ಲ.

Best Mobiles in India

Read more about:
English summary
A Single Man Hacked Google Maps Using 99 Smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X