Subscribe to Gizbot

ಬಂದಿದೆ ನೋಡಿ ಮಿನಿ ಸೆಲ್ಫಿ ಡ್ರೋನ್.! ಕೇವಲ ರೂ.2500ಕ್ಕೆ ಲಭ್ಯ

Written By:

ಇಂದಿನ ದಿನದಲ್ಲಿ ಸೆಲ್ಫಿ ಕ್ರೇಜ್ ಹೆಚ್ಚಾಗುತ್ತಿದ್ದು, ಅದರಲ್ಲೂ ಯುವ ಸಮುಹದಲ್ಲಿ ಸೆಲ್ಫಿ ಕ್ಲಿಕಿಸುವ ಹವ್ಯಾಸ ಅಧಿಕವಾಗುತ್ತಿದ್ದು, ಇದಕ್ಕಾಗಿ ಅನೇಕ ಸ್ಮಾರ್ಟ್‌ಫೋನ್ ಗಳು ಸೆಲ್ಫಿಗಾಗಿಯೇ ನಿರ್ಮಾಣಗೊಂಡಿವೆ. ಸೆಲ್ಫಿ ಹೆಸರಿನಲ್ಲಿ ಮಾರ್ಕೆಟಿಂಗ್ ಸಹ ಮಾಡುತ್ತಿವೆ, ಇದರ ಮಧ್ಯತೇ ಸೆಲ್ಫಿ ಕ್ರೇಜ್ ಗಾಗಿಯೇ ಮತ್ತೊಂದು ಪ್ರಯತ್ನ ನಡೆದಿದೆ.

ಬಂದಿದೆ ನೋಡಿ ಮಿನಿ ಸೆಲ್ಫಿ ಡ್ರೋನ್.! ಕೇವಲ ರೂ.2500ಕ್ಕೆ ಲಭ್ಯ

ಓದಿರಿ: 80 ವರ್ಷದ ಹಿಂದೆಯೇ ಸ್ಮಾರ್ಟ್‌ಫೋನ್ ಇತ್ತೇ? ಈ ವರ್ಣಚಿತ್ರದಲ್ಲಿ ಅಡಗಿರುವ ರಹಸ್ಯವಾದರೂ ಏನು?

ಅದುವೇ ಸೆಲ್ಫಿ ಡ್ರೋನ್, ಇಂದಿನ ದಿನದಲ್ಲಿ ಡ್ರೋನ್ ಸಹ ಸಾಕಷ್ಟು ಸದ್ದು ಮಾಡುತ್ತಿದ್ದು, ಇದನ್ನೇ ಸೆಲ್ಫಿಗಾಗಿ ಬಳಕೆ ಮಾಡಿಕೊಳ್ಳುವ ಪ್ರಯತ್ನವು ನಡೆದಿದೆ. ಅದುವೇ ಕೈಗೆಟುಕುವ ದರದಲ್ಲಿ ನೀಡಲಾಗುತ್ತಿದೆ. ಸಾಮಾನ್ಯ ಡ್ರೋನ್ ಕ್ಯಾಮೆರಾಗಳು 1 ಲಕ್ಷದ ಅಸುಪಾಸಿನಲ್ಲಿದ್ದರೇ ಈ ಡ್ರೋನ್ ಕೇವಲ ಸಾವಿರಗಳಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸೆಲ್ಫಿ ಡ್ರೋನ್ ವಿಶೇಷತೆಗಳೇನು:

ಸೆಲ್ಫಿ ಡ್ರೋನ್ ವಿಶೇಷತೆಗಳೇನು:

ಇದೊಂದು ಜಾಮೆಂಟ್ರಿ ಗಾತ್ರದಲ್ಲಿದ್ದು, ಸುಲಭವಾಗಿ ಸಣ್ಣ ಪರ್ಸ್ ವೊಂದರಲ್ಲಿ ಇದನ್ನು ಇಟ್ಟುಕೊಳ್ಳಬಹುದು. ಇದರ ರೆಕ್ಕೆಗಳನ್ನು ಮಡಚಬಹುದು, ಭಾರವು ಇಲ್ಲ. ಇದರಲ್ಲಿ ಬಿಲ್ಟ್ ಇನ್ ಕ್ಯಾಮೆರಾ ಇಡಲಾಗಿದ್ದು, ಇದು ವಿಡಿಯೋ ರೆಕಾರ್ಡಿಂಗ್ ಮಾಡಲಿದೆ. ಅಲ್ಲದೇ ಸೆಲ್ಫಿಗಳನ್ನು ತೆಗೆದುಕೊಳ್ಳಲು ಇದು ಸೂಕ್ತವಾಗಿದೆ.

ಫೋನ್ ನಲ್ಲೇ ಕಂಟ್ರೋಲ್ ಮಾಡಬಹದು:

ಫೋನ್ ನಲ್ಲೇ ಕಂಟ್ರೋಲ್ ಮಾಡಬಹದು:

ಈ ಡ್ರೋನ್ ಕಂಟ್ರೋಲ್ ಮಾಡಲು ಯಾವುದೇ ರೀಮೊಟ್ ಅವಶ್ಯಕತೆ ಇಲ್ಲ, ಬದಲಿಗೆ ನಿಮ್ಮ ಆಂಡ್ರಾಯ್ಡ್ ಇಲ್ಲವೇ ಐಫೋನಿನಲ್ಲಿಯೇ ಇದನ್ನು ಕಂಟ್ರೋಲ್ ಮಾಡಬಹುದಾಗಿದೆ. ಹಾರಾಟ ಆರಂಭಿಸಿದ ನಂತರ ಒಂದೇ ಬಟನ್ ಕ್ಲಿಕ್ ನಲ್ಲಿ ರಿಟನ್ ಆಗಲಿದೆ. ಅಲ್ಲದೇ ಬ್ಯಾಟರಿ ಲೋ ಆದಲ್ಲಿ ಅದೇ ಸ್ವಸ್ಥಾನಕ್ಕೆ ತಿರುಗಿಬರಲಿದೆ.

ಡ್ರೋನ್ ನೊಂದಿಗೆ ದೊರೆಯುವುದೇನು.?

ಡ್ರೋನ್ ನೊಂದಿಗೆ ದೊರೆಯುವುದೇನು.?

ಈ ಡ್ರೋನ್ ನಲ್ಲಿ ಬಿಲ್ಟ್ ಇನ್ HD ಕ್ಯಾಮೆರಾವನ್ನು ಕಾಣಬಹುದು. ಅಲ್ಲದೇ 500mAh ಬ್ಯಾಟರಿಯೂ ಇದೆ. ಜೊತೆಗೆ USB ಚಾರ್ಜಿಂಗ್ ಕೇಬಲ್ ಅನ್ನು ನೀಡಲಾಗಿದೆ. ಇದು ಡ್ರೋನ್ ಚಾರ್ಜಿಂಗ್ ಮಾಡಲು ಸಹಾಯವಾಗಲಿದೆ.

ಬೆಲೆ ಎಷ್ಟು..?

ಬೆಲೆ ಎಷ್ಟು..?

ಭಾರತೀಯ ಮಾರುಕಟ್ಟೆಯಲ್ಲಿ ಈ ಫೋನ್ ಬೆಲೆ ರೂ.2700+ ಆಗಲಿದ್ದು, ಆನ್‌ಲೈನಿನಲ್ಲಿ ಮಾತ್ರವೇ ದೊರೆಯಲಿದೆ. ಶಿಪಿಂಗ್ ಉಚಿತವಾಗಿದೆ. ಕಾರ್ಡ್ ಮೂಲಕ ಪೇಮೆಂಟ್ ಮಾಡುವ ಅವಕಾಶವನ್ನು ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
With that being said, the fact that the drones' market is becoming flooded with selfie drones comes as no surprise. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot