Subscribe to Gizbot

ಇನ್ನು ಆಧಾರ್ ಕಾರ್ಡ್ ಮಾಡಿಸುವುದು ಬಲು ದುಬಾರಿ..! ಶೇ.18 GST ವಿಧಿಸಿದ ಕೇಂದ್ರ..!

Written By:

ಸರಕಾರದ ಸೇವೆ ಮತ್ತು ಸವಲತ್ತುಗಳನ್ನು ಪಡೆದುಕೊಳ್ಳುವ ಸಲುವಾಗಿ ಪ್ರತಿಯೊಬ್ಬ ಭಾರತೀಯನು ಹೊಂದಿರಲೇ ಬೇಕಾದ ಆಧಾರ್ ಕಾರ್ಡ್ ಆಪ್ಡೇಟ್ ಮಾಡುವುದು ಇನ್ನು ಮುಂದೆ ದುಬಾರಿಯಾಗಲಿದೆ. ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ(UIDAI) ಇನ್ನು ಮುಂದೆ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡುವವರು ಹೆಚ್ಚಿನ ಪ್ರಮಾಣದ ದರವನ್ನು ವಿಧಿಸಲಿದೆ ಎನ್ನಲಾಗಿದೆ.

ಇನ್ನು ಆಧಾರ್ ಕಾರ್ಡ್ ಮಾಡಿಸುವುದು ಬಲು ದುಬಾರಿ..! ಶೇ.18 GST ವಿಧಿಸಿದ ಕೇಂದ್ರ

ಇದರಿಂದಾಗಿ ಕಡ್ಡಾಯ ಸೇವೆಯನ್ನು ಪಡೆಯಲು ಸಾರ್ವಜನಿಕರು ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗಿದೆ. ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಮಾಡಿಸುವವರಿಗೆ ಶೇ.18 GST ವಿಧಿಸಲು ಕೇಂದ್ರ ಸರಕಾರವೂ ಮುಂದಾಗಿದೆ. ಈ ಹಿನ್ನಲೆಯಲ್ಲಿ ಆಧಾರ್ ಸಹ ಜನ ಸಾಮಾನ್ಯರಿಗೆ ದುಬಾರಿಯಾಗುವ ಕಾಲ ಬಂದಿದೆ. ಆದರೆ ಹೊಸದಾಗಿ ಮಾಡಿಸುವವರು ಯಾವುದೇ ಹಣವನ್ನು ಪಾವತಿ ಮಾಡಬೇಕಾಗಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರೂ.25 ದರ:

ರೂ.25 ದರ:

ಈಗಾಗಲೇ ಆಧಾರ್ ಕಾರ್ಡ್ ಮಾಡಿಸಿರುವವರು ತಮ್ಮ ಮಾಹಿತಿಗಳನ್ನು ಬದಲಾವಣೆ ಮಾಡಲು, ಆಧಾರ್‌ ಕಾರ್ಡ್‌ನಲ್ಲಿನ ಹೆಸರು, ವಿಳಾಸ, ಹುಟ್ಟಿದ ದಿನಾಂಕ, ಮೊಬೈಲ್‌ ಸಂಖ್ಯೆ, ಇಮೇಲ್‌ ಇತ್ಯಾದಿ ವಿವರಗಳನ್ನು ಅಪ್‌ಡೇಟ್‌ ಮಾಡಲು ಮತ್ತು ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡಲು ರೂ. 25 ಶುಲ್ಕವನ್ನು ನೀಡಲಾಗಿದೆ.

ಶೇ.18 GST ವಿಧಿಸಿದ ಕೇಂದ್ರ:

ಶೇ.18 GST ವಿಧಿಸಿದ ಕೇಂದ್ರ:

ಆಧಾರ್‌ ಕಾರ್ಡ್‌ ಅಪ್‌ಡೇಟ್‌ಗೆ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ(UIDAI) ರೂ.25ದರವನ್ನು ವಿಧಿಸುತ್ತಿದ್ದು, ಇದರ ಮೇಲಕೆ ಕೇಂದ್ರ ಶೇ.18 GST ವಿಧಿಸಲಿದೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ. ಇದರಿಂದಾಗಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವವರು ಹೆಚ್ಚಿನ ಹಣವನ್ನು ಪಾವತಿಸಬೇಕು ಎನ್ನಲಾಗಿದೆ.

ಉಚಿತ ಸೇವೆಯೂ ಇದೆ:

ಉಚಿತ ಸೇವೆಯೂ ಇದೆ:

ಮೊದಲ ಬಾರಿಗೆ ಆಧಾರ್ ಕಾರ್ಡ್‌ ಅನ್ನು ಮಾಡಿಸುವರಿಗೆ ಮತ್ತು ಮಕ್ಕಳ ಬಯೋಮೆಟ್ರಿಕ್ ಅನ್ನು ಅಪ್‌ಡೇಟ್‌ ಮಾಡುವವರಿಗೆ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ(UIDAI) ಯಾವುದೇ ಶುಲ್ಕವನ್ನು ವಿಧಿಸದೆ ಉಚಿತವಾಗಿ ಸೇವೆಯನ್ನು ನೀಡುತ್ತಿದೆ.

ದೂರು ದಾಖಲಿಸಬಹುದು:

ದೂರು ದಾಖಲಿಸಬಹುದು:

ಇದಲ್ಲದೇ ಆಧಾರ್‌ ಸೇವಾ ಕೇಂದ್ರದಲ್ಲಿ ವಿಶಿಷ್ಟ ಗುರುತು ಪ್ರಾಧಿಕಾರ(UIDAI) ನಿಗಧಿ ಪಡಿಸಿರುವ ದರಕ್ಕಿಂತ ಹೆಚ್ಚಿನ ಪ್ರಮಾಣದ ಹಣವನ್ನು ಸುಲಿಗೆ ಮಾಡಿದೆ ದೂರು ದಾಖಲಿಸುವ ಅವಕಾಶವನ್ನು ಸಹ ಮಾಡಿಕೊಟ್ಟಿದೆ. ಈ ಕುರಿತು ದೂರು ನೀಡಲು 1947 ಸಂಖ್ಯೆಗೆ ಕರೆ ಮಾಡುವಂತೆ ಕೋರಿದೆ.

How to find out where you can get your Aadhaar card done (KANNADA)
 ಆಧಾರ್ ದೃಢೀಕರಣಕ್ಕಾಗಿ:

ಆಧಾರ್ ದೃಢೀಕರಣಕ್ಕಾಗಿ:

ಆಧಾರ್‌ ಮಾಹಿತಿಯನ್ನು ಅಪ್‌ಡೇಟ್ ಮಾಡುವ ಸಲುವಾಗಿದೆ ಗುರುತುಪತ್ರ ದೃಢೀಕರಣಕ್ಕಾಗಿ ಪಾಸ್‌ ಪೋರ್ಟ್‌, ಪ್ಯಾನ್‌ ಕಾರ್ಡ್‌, ಫೋಟೋ ಇರುವ ರೇಶನ್ ಕಾರ್ಡ್‌, ವೋಟರ್‌ ಐಡಿ, ಡ್ರೈವಿಂಗ್‌ ಲೈಸನ್ಸ್‌, ಗಳಲ್ಲಿ ಯಾವುದಾರರು ಒಂದನ್ನು ನೀಡಬೇಕಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Aadhaar updation to get costlier, UIDAI to impose 18% GST. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot