95ರುಪಾಯಿಯಂದ ಆರಂಭವಾಗಿ “ಎಲ್ಲರಿಗೂ ಒಂದು ಜಿಬಿ” – ಏರ್ ಸೆಲ್ ನಿಂದ ಪ್ರಾರಂಭ.

By Super Admin
|

95ರುಪಾಯಿಯಂದ ಆರಂಭವಾಗಿ “ಎಲ್ಲರಿಗೂ ಒಂದು ಜಿಬಿ” – ಏರ್ ಸೆಲ್ ನಿಂದ ಪ್ರಾರಂಭ.

95ರುಪಾಯಿಯಂದ ಆರಂಭವಾಗಿ “ಎಲ್ಲರಿಗೂ ಒಂದು ಜಿಬಿ” – ಏರ್ ಸೆಲ್ ನಿಂದ ಪ್ರಾರಂಭ.

ಏರ್ ಸೆಲ್ ಈಶಾನ್ಯ ಭಾರತದಲ್ಲಿ 'ಎಲ್ಲರಿಗೂ ಒಂದು ಜಿಬಿ’ ಹೆಸರಿನಲ್ಲಿ ಅನೇಕ ಆಕರ್ಷಕ ಮತ್ತು ಕೈಗೆಟಕುವ ಡಾಟಾ ಪ್ಲಾನುಗಳನ್ನು ಪ್ರಾರಂಭಿಸಿದೆ.

28 ದಿನಗಳವರೆಗೆ ಸಿಂಧುತ್ವವಿರುವ 3 ಜಿ ಸೌಲಭ್ಯಗಳು 95, 143 ಮತ್ತು 175 ರುಪಾಯಿಗಳಿಗೆ ಲಭ್ಯವಿದೆ. ಅನುಕೂಲಗಳು ಗ್ರಾಹಕರು ಹೆಚ್ಚು – ಮಧ್ಯಮ – ಕಡಿಮೆ ಉಪಯೋಗಿಸುವ ಡಾಟಾದ ಮೇಲೆ ವ್ಯತ್ಯಾಸವಾಗುತ್ತದೆ.

ಓದಿರಿ: ಪ್ರಯಾಣಕ್ಕೆ ಸಾಥಿಯಾಗಿರುವ ಗೂಗಲ್ ಮ್ಯಾಪ್ಸ್ ಟಿಪ್ಸ್ ಟ್ರಿಕ್ಸ್

'ಎಲ್ಲರಿಗೂ ಒಂದು ಜಿಬಿ’ ಎಂಬ ನೂತನ ಪರಿಕಲ್ಪನೆಯನ್ನು ಬಿಡುಗಡೆಗೊಳಿಸುವ ಸಂದರ್ಭದಲ್ಲಿ, ಏರ್ಸೆಲ್ಲಿನ ಈಶಾನ್ಯ ಭಾರತದ ಮುಖ್ಯಸ್ಥ ನೀಲಜ್ ಮಹಾಲನಿವಾಸ್, “ಈಶಾನ್ಯ ಭಾರತದ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ನವೀನತೆಯ ಏರ್ಸೆಲ್ ಎಲ್ಲರಿಗೂ ಒಂದು ಜಿಬಿ ಪರಿಕಲ್ಪನೆಯನ್ನು ನಿಮ್ಮ ಮುಂದಿಡಲು ಹೆಮ್ಮೆ ಪಡುತ್ತಿದೆ. ಇವತ್ತು, ತಿಂಗಳಿಗೆ ಕನಿಷ್ಟವೆಂದರೂ 1ಜಿಬಿ 3ಜಿ ಡಾಟಾವನ್ನು ವೀಡೀಯೋಗಳನ್ನು ನೋಡಲು, ಲೈವ್ ಸ್ಟ್ರೀಮಿಂಗ್ ಮಾಡಲು, ಅಪ್ಲೋಡ್ ಮತ್ತು ಡೌನ್ಲೋಡ್ ಮಾಡಲು, ಹೆಚ್.ಡಿ ವೀಡಿಯೋ ನೋಡಲು ಮತ್ತು ಇನ್ನಿತರೆ ಕೆಲಸಗಳಿಗೆ ಉಪಯೋಗಿಸುತ್ತಾರೆ.

ಹಾಗಾಗ್ಯೂ, ಗ್ರಾಹಕರು ಡಾಟಾ ಉಪಯೋಗಿಸುವಿಕೆಯನ್ನು ಮೂರು ವಿಭಾಗಗಳನ್ನಾಗಿ ಮಾಡಬಹುದು – ಹೆಚ್ಚು, ಮಧ್ಯಮ ಮತ್ತು ಕಡಿಮೆ ಡಾಟಾ ಉಪಯೋಗಿಸುವ ಗ್ರಾಹಕರು. ನಮ್ಮ ಗ್ರಾಹಕರ ಡಾಟಾ ಉಪಯೋಗಿಸುವಿಕೆಯ ಆಧಾರದ ಮೇಲೆ ನಾವವರಿಗೆ ಒಂದು ಜಿಬಿ ಮಾರುಕಟ್ಟೆಗೆ ಕರೆತರುತ್ತಿದ್ದೇವೆ. ಈ ಡಾಟಾ ಪ್ಯಾಕುಗಳು ಗ್ರಾಹಕರ ಕೈಗೆಟಕುವುದಷ್ಟೇ ಅಲ್ಲ, ಅವರಿಗೆ ಮತ್ತೆಲ್ಲೂ ಸಿಗದ ಅನುಕೂಲತೆಯನ್ನು ಕೊಡುತ್ತದೆ” ಎಂದು ಹೇಳಿದರು.

ಓದಿರಿ: GIFs ಆಟೋಮೆಟಿಕಲಿ ಪ್ಲೇ ಆಗುವುದನ್ನು ಸ್ಟಾಪ್ ಮಾಡುವುದು ಹೇಗೆ?

ಮುಂದುವರೆಸುತ್ತಾ, “ಈ ಪ್ರದೇಶದಲ್ಲಿನ ಗ್ರಾಹಕರು ಮೊಬೈಲ್ ಡಾಟಾ ಉಪಯೋಗಿಸುವುದು ಗಮನಾರ್ಹವಾಗಿ ಹೆಚ್ಚಾಗುತ್ತಿದೆ ಎಂಬಂಶವನ್ನು ನಾವು ಗಮನಿಸಿದ್ದೀವಿ. ಮೊದಲರ್ಧದಲ್ಲಿ ನಮ್ಮ ಡಾಟಾ ಆದಾಯ 31 ಪ್ರತಿಶತಃದಷ್ಟು ಏರಿಕೆ ಕಂಡಿದ್ದರೆ, 3ಜಿ ಉಪಯೋಗಿಸುವವರ ಸಂಖೈಯಲ್ಲಿ 30 ಪ್ರತಿದಷ್ಟು ಏರಿಕೆಯಾಗಿದೆ, ಇದು ಈ ಉದ್ಯಮದಲ್ಲಿ ತೊಡಗಿರುವ ಇತರರಿಗೆ ಹೋಲಿಸಿದರೆ ಉತ್ತಮವಾದ ಏರಿಕೆ. ನಮ್ಮ ಡಾಟಾ ಪ್ಲಾನುಗಳು ಗ್ರಾಹಕರ ಜೇಬಿನ ಮೇಲೆ ಹೆಚ್ಚಿನ ಹೊರೆ ಬೀಳಿಸದ ಜೊತೆಗೆ ಅಂತರ್ಜಾಲವನ್ನು ಜನರು ಒಪ್ಪಿಕೊಳ್ಳುವಂತೆಯೂ ಮಾಡುತ್ತದೆ ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು.

Best Mobiles in India

English summary
Aircel, today launched an exciting and affordable range of data products under the umbrella of '1GB for All' in the North East.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X