GIFs ಆಟೋಮೆಟಿಕಲಿ ಪ್ಲೇ ಆಗುವುದನ್ನು ಸ್ಟಾಪ್ ಮಾಡುವುದು ಹೇಗೆ?

Written By:

  ಕಂಪ್ಯೂಟರ್‌ನಲ್ಲಿ ಬಿಟ್‌ಮ್ಯಾಪ್‌ ಇಮೇಜ್‌ ಫಾರ್ಮ್ಯಾಟ್‌ನಲ್ಲಿ ರಚಿಸಿದ (ಗ್ರಾಫಿಕ್‌ ಇಂಟರ್‌ಚೇಂಜ್‌ ಫಾರ್ಮ್ಯಾಟ್‌ -GIFs) ಅನ್ನು 1987 ರಲ್ಲಿ ಪರಿಚಯಿಸಲಾಯಿತು. ಅಂದಿನಿಂದ ಇಂದಿನವರೆಗೂ ಸಹ ಜಿಫ್‌(GIFs) ವರ್ಲ್ಡ್‌ ವೈಡ್‌ ವೆಬ್‌ ನಲ್ಲಿ ಪ್ರಖ್ಯಾತವಾಗುತ್ತಲೇ ಇದೆ. ಇಂದು ಜಿಫ್‌(GIFs) ನಿಂದ ಕಾಡುತ್ತಿರುವ ಒಂದೇ ಒಂದು ಸಮಸ್ಯೆ ಎಂದರೆ ಕಂಪ್ಯೂಟರ್‌ನಲ್ಲಿ ಯಾವುದೇ ವೆಬ್‌ಸೈಟ್‌ಗೆ ಭೇಟಿ ನೀಡಿದರು ಸಹ ಜಿಫ್‌(GIFs) ಆಟೋಮೆಟಿಕಲಿ ಪ್ಲೇ ಆಗುತ್ತಲೇ ಇರುವುದು.

  ಜಿಫ್‌(GIFs) ಆಟೋಮೆಟಿಕಲಿ ಪ್ಲೇ ಆಗುವುದರಿಂದ ಕಿರಿಕಿರಿ ಉಂಟಾಗುವುದಲ್ಲದೇ, ಡಾಟಾ ಅಧಿಕ ವೆಚ್ಚವಾಗುತ್ತದೆ ಮತ್ತು ಇತರೆ ಮಾಹಿತಿಗಳನ್ನು ಓದಲು, ಸರ್ಚ್ ಮಾಡಲು ಸಖತ್‌ ಡಿಸ್‌ಟರ್ಬ್‌ ಮಾಡುತ್ತದೆ. ಆದ್ದರಿಂದ ಇಂದಿನ ಲೇಖನದಲ್ಲಿ ಕಂಪ್ಯೂಟರ್‌ ಬಳಕೆದಾರರಿಗೆ ತಮ್ಮ ಬ್ರೌಸರ್‌ನಲ್ಲಿ ಜಿಫ್‌(GIFs) ಆಟೋಮೆಟಿಕಲಿ ಪ್ಲೇ ಆಗುವುದನ್ನು ನಿಲ್ಲಿಸುವುದು ಹೇಗೆ ಎಂಬುದನ್ನು ತಿಳಿಸುತ್ತಿದ್ದೇವೆ. ಮಾಹಿತಿಗಾಗಿ ಲೇಖನದ ಸ್ಲೈಡರ್‌ ಓದಿರಿ.

  ವೈಫೈ ನೆಟ್‌ವರ್ಕ್‌ ಹ್ಯಾಕ್ ಮಾಡಿ ಉಚಿತ ಇಂಟರ್ನೆಟ್‌ ಬಳಕೆ ಹೇಗೆ?

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಗೂಗಲ್‌ ಕ್ರೋಮ್‌ ಬ್ರೌಸರ್‌ ಬಳಕೆದಾರರು

  ಪ್ರಪಂಚದಾದ್ಯಂತ ಅತಿ ಹೆಚ್ಚು ಜನರು ಬಳಸುವ ಬ್ರೌಸರ್‌ ಎಂದರೆ ಅದು 'ಗೂಗಲ್‌ ಕ್ರೋಮ್‌'. ಗೂಗಲ್‌ ಕ್ರೋಮ್‌ನಲ್ಲಿ GIF ಅನ್ನು ನಿಲ್ಲಿಸಲು ಯಾವುದೇ ಇನ್‌ಬಿಲ್ಟ್ ಸಾಫ್ಟ್‌ವೇರ್‌ ಇಲ್ಲ. ಆದ್ದರಿಂದ ಗೂಗಲ್‌ ಕ್ರೋಮ್‌ ಬ್ರೌಸರ್‌ನಲ್ಲಿ ಜಿಫ್‌(GIFs) ಆಟೋಮೆಟಿಕಲಿ ಪ್ಲೇ ಆಗುವುದನ್ನು ನಿಲ್ಲಿಸಲು ಕೆಳಗೆ ನೀಡಿರುವ ಲಿಂಕ್‌ ಅನ್ನು ಬಳಸಿ.

  Gif Jam (Animation Stopper)

  ಮೊಜಿಲ್ಲಾ ಫೈರ್ಫಾಕ್ಸ್ ಬಳಕೆದಾರರು

  ಮೊದಲಿಗೆ ಮೊಜಿಲ್ಲಾ ಫೈರ್ಫಾಕ್ಸ್‌ ಬ್ರೌಸರ್‌ನಲ್ಲಿ about:config ಯುಆರ್‌ಎಲ್‌ ಟೈಪ್‌ ಮಾಡಿ ಎಂಟರ್‌ ಮಾಡಿ

  ಮೊಜಿಲ್ಲಾ ಫೈರ್ಫಾಕ್ಸ್

  ಓಪನ್‌ ಆದ ಮೊಜಿಲ್ಲಾ ಫೈರ್ಫಾಕ್ಸ್ ಪೇಜ್‌ನಲ್ಲಿ "I'll be Careful, I promised" ಎಂಬಲ್ಲಿ ಕ್ಲಿಕ್ ಮಾಡಿ.

  ಮೊಜಿಲ್ಲಾ ಫೈರ್ಫಾಕ್ಸ್

  ಯುಆರ್‌ಎಲ್‌ ಬಾರ್‌ನಲ್ಲಿ ಈಗ image.animation ಟೈಮ್‌ ಮಾಡಿ ಎಂಟರ್‌ ಮಾಡಿ. ಬ್ರೌಸರ್‌ ಆನಿಮೇಟೆಡ್‌ ಇಮೇಜ್‌ ಹ್ಯಾಂಡ್ಲಿಂಗ್‌ ಆಯ್ಕೆಯನ್ನು ತೋರಿಸುತ್ತದೆ.

  ಮೊಜಿಲ್ಲಾ ಫೈರ್ಫಾಕ್ಸ್

  ಚಿತ್ರ ಗಮನಿಸಿ. None ಎಂಬಲ್ಲಿ ಮೊದಲು Normal ಎಂದಿರುತ್ತದೆ. ಡಬಲ್‌ ಕ್ಲಿಕ್ ಮಾಡಿ ಅದನ್ನು None ಎಂದು ಮಾಡಿ ನಂತರ ಓಕೆ ಮಾಡಿ. ಮೊಜಿಲ್ಲಾ ಫೈರ್ಫಾಕ್ಸ್‌ನಲ್ಲಿ GIF ಆಟೋಮೆಟಿಕಲಿ ಪ್ಲೇ ಆಗುವುದು ಸ್ಟಾಪ್‌ ಆಗುತ್ತದೆ.

  ಒಪೆರಾ ಬ್ರೌಸರ್ ಬಳಕೆದಾರರು

  ಒಪೆರಾ ಬ್ರೌಸರ್ ಬಳಕೆದಾರರು ಮೊದಲಿಗೆ ಕ್ರೋಮ್‌ ವಿಸ್ತರಣೆಯನ್ನು ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡಬೇಕು. ನಂತರ ಗೂಗಲ್‌ ಕ್ರೋಮ್‌ನಲ್ಲಿ GIF ಪ್ಲೇ ಬ್ಲಾಕ್‌ ಮಾಡುವ ವಿಧಾನವನ್ನೇ ಅನುಸರಿಸಬೇಕು.

  ಕ್ರೋಮ್‌ ವಿಸ್ತರಣೆಗಾಗಿ ಕ್ಲಿಕ್ ಮಾಡಿ

  ಗಿಜ್‌ಬಾಟ್‌

  ಆಂಡ್ರಾಯ್ಡ್‌ನಲ್ಲಿ ನಿರ್ದಿಷ್ಟ ಆಪ್‌ಗಳಿಗೆ ಇಂಟರ್ನೆಟ್ ಆಕ್ಸೆಸ್ ಬ್ಲಾಕ್‌ ಹೇಗೆ?

  ಫೇಸ್‌ಬುಕ್‌ನಲ್ಲಿ ಯಾರು ನಿಮ್ಮನ್ನು ಡಿಲೀಟ್‌ ಮಾಡಿದ್ದಾರೆ ತಿಳಿಯುವುದು ಹೇಗೆ?

  ಓದಿರಿ ಗಿಜ್‌ಬಾಟ್‌ ಲೇಖನಗಳು

  ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
  ಕನ್ನಡ.ಗಿಜ್‌ಬಾಟ್‌.ಕಾಂ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Time to stop GIFs from automatically playing in your Browser that can create a annoying condition while browsing site in front of others with the method discussed for all the browsers in the below article.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more