ಮೊಬೈಲ್‌ನಲ್ಲಿ ನೀವೆಲ್ಲರೂ ಬಳಸುವ ಈ ಆಯ್ಕೆ ಇನ್ಮುಂದೆ ಉಪಯೋಗಕ್ಕೆ ಬರೋದಿಲ್ಲ!

|

ಮೊಬೈಲ್‌ ಬಳಸುವ ಬಹುತೇಕ ಮಂದಿಗೆ ಈ ಸುದ್ದಿ ಅಶ್ಚರ್ಯ ಎನಿಸಿದರೂ ಕೂಡ ಸತ್ಯ. ಯಾಕಂದ್ರೆ ಮೊಬೈಲ್‌ ಬಳಕೆದಾರರು ಅಗತ್ಯ ಸಂದರ್ಭಗಳಲ್ಲಿ ಬಳಸುವ ಬಹುಮುಖ್ಯವಾದ ಆಯ್ಕೆಯೊಂದು ಇನ್ಮುಂದೆ ಅನುಪಯುಕ್ತವಾಗುವ ಸಾಧ್ಯತೆಯಿದೆ. ಸಾಮಾನ್ಯವಾಗಿ ಎಲ್ಲಾ ಮೊಬೈಲ್‌ ಬಳಕೆದಾರರಿಗೂ ಏರ್‌ಪ್ಲೇನ್‌ ಮೋಡ್‌(ಫ್ಲೈಟ್‌ ಮೋಡ್‌) ಆಯ್ಕೆಯ ಬಗ್ಗೆ ತಿಳಿದಿರುತ್ತದೆ. ಇದು ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಲಭ್ಯವಿರುವ ಡೀಫಾಲ್ಟ್‌ ಫೀಚರ್ಸ್‌ ಆಗಿದೆ. ಇದು ವಿಮಾನ ಪ್ರಯಾಣದ ಸಮಯದಲ್ಲಿ ಅತ್ಯಂತ ಉಪಯುಕ್ತವಾಗಿದೆ.

ಸ್ಮಾರ್ಟ್‌ಫೋನ್‌

ಹೌದು, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಶೀಘ್ರದಲ್ಲೇ ಫ್ಲೈಟ್‌ ಮೋಡ್‌ ಆಯ್ಕೆ ನಿಮಗೆ ಉಪಯೋಗಕ್ಕೆ ಬಾರದಿರಬಹುದು. ವಿಮಾನ ಪ್ರಯಾಣದಲ್ಲಿ ಮಾತ್ರವಲ್ಲ ಕೆಲವು ಅನಿವಾರ್ಯ ಸಂದರ್ಭಗಳಲ್ಲಿ ಕೂಡ ಈ ಆಯ್ಕೆ ನಿಮಗೆ ಉಪಯಯಕ್ತವಾಗಿದೆ. ಆದರೆ ಸದ್ಯದಲ್ಲೇ ಯುರೋಪಿಯನ್ ಯೂನಿಯನ್ (EU) ಫ್ಲೈಟ್‌ ಮೋಡ್‌ ಆಯ್ಕೆ ಉಪಯೋಗವಿಲ್ಲದಂತೆ ಮಾಡುವ ಸಾಧ್ಯತೆಯಿದೆ. ಹಾಗಾದ್ರೆ ಮೊಬೈಲ್‌ನಲ್ಲಿ ಫ್ಲೈಟ್‌ ಮೋಡ್‌ ಆಯ್ಕೆ ಯಾಕೆ ಉಪಯೋಗಕ್ಕೆ ಬರುವುದಿಲ್ಲ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಬೈಲ್‌

ನಿಮ್ಮ ಮೊಬೈಲ್‌ ಅನ್ನು ನೀವು ಫ್ಲೈಟ್‌ನಲ್ಲಿಟ್ಟಾಗ ಯಾವುದೇ ಕರೆ ಮಾಡುವುದಾಗಲಿ ಇಲ್ಲವೇ ಕರೆ ಸ್ವೀಕಾರ ಮಾಡುವುದಕ್ಕೆ ಸಾಧ್ಯವಿಲ್ಲ. ವಿಮಾನದಲ್ಲಿ ಪ್ರಯಾಣಿಸುವಾಗ ಯಾವುದೇ ಕರೆಗಳು ಸ್ವಿಕರಿಸುವುದಕ್ಕೆ ಸಾಧ್ಯವಿಲ್ಲದರಿಂದ ಫ್ಲೈಟ್‌ ಮೋಡ್‌ ಆಯ್ಕೆಯನ್ನು ಎಲ್ಲಾ ಮೊಬೈಲ್‌ಗಳಲ್ಲಿಯೂ ನೀಡಲಾಗಿತ್ತು. ಆದರೆ 2023 ರಿಂದ, EU ನಿಯಂತ್ರಣ ಸಂಸ್ಥೆ ಯುರೋಪಿಯನ್ ಕಮಿಷನ್ ವಿಮಾನಯಾನ ಪ್ರಯಾಣಿಕರಿಗೆ ಡೇಟಾವನ್ನು ಬಳಸಲು ಮತ್ತು ವಿಮಾನದಲ್ಲಿ ಪ್ರಯಾಣಿಸುವಾಗ ಕರೆ ಮಾಡುವುದಕ್ಕೆ ಅವಕಾಶ ನೀಡಲಿದೆ ಎಂದು ವರದಿಯಾಗಿದೆ.

ಫ್ಲೈಟ್‌

ಒಂದು ವೇಳೆ ವಿಮಾನ ಪ್ರಯಾಣದ ಸಂದರ್ಭದಲ್ಲಿಯೂ ನೀವು ಕರೆ ಮಾಡಲು ಸಾಧ್ಯವಾದರೆ ಫ್ಲೈಟ್‌ ಮೋಡ್‌ ಅನಗತ್ಯವಾಗಿದ್ದು, ಇದನ್ನು ತೆಗೆದುಹಾಕುವ ಸಾಧ್ಯತೆಯಿದೆ. ಸದ್ಯ ಯುರೋಪಿಯನ್‌ ಯೂನಿಯನ್‌ನಲ್ಲಿ ಮಾತ್ರ ಈ ರೀತಿಯ ಚರ್ಚೆ ನಡೆದಿದ್ದು, ಭವಿಷ್ಯದಲ್ಲಿ ಭಾರತವೂ ಸೇರಿದಂತೆ ಜಗತ್ತಿನ ಬಹುತೇಖ ರಾಷ್ಟ್ರಗಳಲ್ಲಿ ಫ್ಲೈಟ್‌ ಮೋಡ್‌ ಆಯ್ಕೆಗೆ ಗೇಟ್‌ಪಾಸ್‌ ಸಿಗುವ ಸಾಧ್ಯತೆಯಿದೆ. ಆದಾಗ್ಯೂ, ಕೆಲವು ವಿಮಾನಯಾನ ಸಂಸ್ಥೆಗಳು ಈಗಾಗಲೇ ತಮ್ಮ ಪ್ರಯಾಣಿಕರಿಗೆ ಉಚಿತ ಅಥವಾ ಪಾವತಿಸಿದ ಇನ್-ಫ್ಲೈಟ್ ವೈ-ಫೈ ಅನ್ನು ಒದಗಿಸುತ್ತವೆ ಅನ್ನೊದನ್ನ ಕೂಡ ಗಮನಿಸಬಹುದಾಗಿದೆ.

EU ನ ಹೊಸ ನಿಯಮದ ವಿಶೇಷತೆ ಏನು?

EU ನ ಹೊಸ ನಿಯಮದ ವಿಶೇಷತೆ ಏನು?

EU ನ ಹೊಸ ನಿಯಮದಂತೆ ವಿಮಾನಯಾನದಲ್ಲಿ ಪ್ರಯಾಣಿಕರು ಮ್ಯೂಸಿಕ್‌, ವೀಡಿಯೊಗಳನ್ನು ಸ್ಟ್ರೀಮ್ ಮಾಡುವ ಮತ್ತು ಅಪ್ಲಿಕೇಶನ್‌ಗಳನ್ನು ಪ್ರವೇಶಿಸುವ ಅವಕಾಶ ಪಡೆಯಲಿದ್ದಾರೆ. ಅಲ್ಲದೆ 5G ಹೊಂದಿದ ವಿಮಾನಗಳಲ್ಲಿ ಫೋನ್ ಕರೆಗಳನ್ನು ಮಾಡಲು ಅವಕಾಶ ದೊರೆಯಲಿದೆ ಎನ್ನಲಾಗಿದೆ. ಅಲ್ಲದೆ EU ರಾಜ್ಯದ ಸದಸ್ಯರು ಜೂನ್ 30, 2023 ರೊಳಗೆ ವಿಮಾನಯಾನ ಸಂಸ್ಥೆಗಳಲ್ಲಿ 5G ಟೆಕ್ನಾಲಜಿ ಲಭ್ಯವಾಗುವಂತೆ ಮಾಡಬೇಕು ಎಂದು ಹೇಳಿದ್ದಾರೆ.

ಹೊಸ ಟೆಕ್ನಾಲಜಿ ಹೇಗೆ ಕಾರ್ಯನಿರ್ವಹಿಸಲಿದೆ?

ಹೊಸ ಟೆಕ್ನಾಲಜಿ ಹೇಗೆ ಕಾರ್ಯನಿರ್ವಹಿಸಲಿದೆ?

ವಿಮಾನದಲ್ಲಿಯೂ ಕೂಡ 5G ಸೇವೆ ದೊರೆತರೆ ಕರೆಗಳನ್ನು ಮಾಡುವ ಅವಕಾಶ ಸುಲಭವಾಗಿ ಸಿಗಲಿದೆ. ಇನ್ನು ನೆಲ-ಆಧಾರಿತ ಮೊಬೈಲ್ ನೆಟ್‌ವರ್ಕ್‌ಗೆ ಸಂಪರ್ಕಿಸುವ ಉಪಗ್ರಹ ನೆಟ್‌ವರ್ಕ್ ಮೂಲಕ ಕರೆಗಳು, ಪಠ್ಯಗಳು ಮತ್ತು ಡೇಟಾವನ್ನು ರೂಟ್ ಮಾಡಲು ಸಾಧ್ಯವಾಗಲಿದೆ. ಇದಕ್ಕಾಗಿ ಏರ್‌ಲೈನ್‌ಗಳು 'ಪಿಕೊ-ಸೆಲ್' ಎಂಬ ವಿಶೇಷ ನೆಟ್‌ವರ್ಕ್ ಟೂಲ್‌ಗಳನ್ನು ಬಳಸಲಿದ್ದಾರೆ ಎಂದು ವರದಿಯಾಗಿದೆ. ಅಲ್ಲದೆ ಯುಕೆ ಫ್ಲೈಟ್ ಸೇಫ್ಟಿ ಕಮಿಟಿಯ ಮುಖ್ಯ ಕಾರ್ಯನಿರ್ವಾಹಕ ಡೈ ವಿಟಿಂಗ್ಹ್ಯಾಮ್ ಅವರು ವಿಮಾನದಲ್ಲಿ ಸೆಲ್ ಫೋನ್ ಬಳಕೆಯನ್ನು ನಿಷೇದಿಸಿರುವ ಜ್ಞಾನದ ಕೊರತೆಯಿಂದ ಎಂದಿದ್ದಾರೆ.

ವಿಮಾನದಲ್ಲಿ 5G ದೊರೆತರೆ ಏನಾಗಲಿದೆ?

ವಿಮಾನದಲ್ಲಿ 5G ದೊರೆತರೆ ಏನಾಗಲಿದೆ?

ವಿಮಾದನಲ್ಲಿ 5G ಸೇವೆಯನ್ನು ನೀಡಿದರೆ ಪೈಲಟ್‌ನ ನ್ಯಾವಿಗೇಷನ್ ಸಿಸ್ಟಮ್‌ಗೆ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ. ಆದರೆ UK ಮತ್ತು EU ನಲ್ಲಿ ಈ ರೀತಿಯ ಪರಿಣಾಮ ಉಂಟಾಗುವುದಿಲ್ಲ ಎನ್ನಲಾಗಿದೆ. ಏಕೆಂದರೆ ಯುರೋಪ್‌ನಲ್ಲಿರುವ 5G ಫ್ರಿಕ್ವೆನ್ಸಿಗಳು ವಿಭಿನ್ನವಾಗಿದೆ. ಆದರಿಂದ ವಿಮಾನದ ಫೈಲಟ್‌ನ ನ್ಯಾವಿಗೇಷನ್‌ ಸಿಸ್ಟಂಗೆ ಯಾವುದೇ ರೀತಿಯಲ್ಲೂ ತೊಂದರೆಯಾಗುವುದಿಲ್ಲ ಎಂದು ವಿಟಿಂಗ್‌ಹ್ಯಾಮ್ ಹೇಳಿದ್ದಾರೆ. ಅಲ್ಲದೆ ವಿಮಾನದಲ್ಲಿ 5G ಬಳಸುವ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿಯಂತ್ರಕರು ಅಗತ್ಯ ಕ್ರಮಗಳನ್ನು ರೂಪಿಸುತ್ತಾರೆ ಎಂಬ ಭರವಸೆಯನ್ನು ಕೂಡ ನೀಡಿದ್ದಾರೆ.

Best Mobiles in India

English summary
Airplane Mode feature may become obsolete soon

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X