ಜಿಯೋ ಮಣಿಸಲು ಭಾರ್ತಿ ಏರ್‌ಟೆಲ್‌ನಿಂದ ಬಿಗ್ ಪ್ಲಾನ್‌..!

By Gizbot Bureau
|

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯೆಬ್ಬಿಸಿರುವ ರಿಲಾಯನ್ಸ್‌ ಜಿಯೋಗೆ ಟಾಂಗ್‌ ಕೊಡಲು 17 ವರ್ಷ ರಾಷ್ಟ್ರದ ಟೆಲಿಕಾಂ ಲೋಕವನ್ನು ಆಳಿದ ಭಾರ್ತಿ ಏರ್‌ಟೆಲ್‌ ಕಂಪನಿ ಬಿಗ್ ಪ್ಲಾನ್‌ ಒಂದನ್ನು ರೆಡಿ ಮಾಡಿಕೊಂಡಿದೆ. ಹೌದು, ಕಂಪನಿಯ ಉನ್ನತ ಅಧಿಕಾರಿ ಹೇಳುವಂತೆ ಜೂನ್‌ ಅಂತ್ಯಕ್ಕೆ ಮಾರುಕಟ್ಟೆ ಆದಾಯ ಹಂಚಿಕೆಯಲ್ಲಿ (RMS) ಭಾರ್ತಿ ಏರ್‌ಟೆಲ್‌ ನಂ.2 ಸ್ಥಾನಕ್ಕೆ ಏರುವ ಸಾಧ್ಯತೆಯಿದೆ. ಡಿಜಿಟಲ್‌ ಸೇವೆಗಳ ಆಪ್‌ನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಆದಾಯ ಮತ್ತು ಗ್ರಾಹಕರ ಸಂಖ್ಯೆಯಲ್ಲಿ ಪ್ರಗತಿಯನ್ನು ಕಂಡಿದೆ. ಜನವರಿಯಿಂದ ಮಾರ್ಚ್‌ ತಿಂಗಳವರೆಗೆ ಮಾರುಕಟ್ಟೆ ಆದಾಯ ಹಂಚಿಕೆಯಲ್ಲಿ ಏರ್‌ಟೆಲ್‌ ಭಾರೀ ಹೊಡೆತವನ್ನು ಅನುಭವಿಸಿತ್ತು. ಮುಖ್ಯವಾಗಿ ಇಂಟರ್‌ಕನೆಕ್ಟ್ ಬಳಕೆ ದರಗಳಿಂದ ಬಂದ ಕಡಿಮೆ ಆದಾಯದಿಂದ ಮೊದಲ ಅವಧಿಯಲ್ಲಿ ಏರ್‌ಟೆಲ್‌ ನಷ್ಟವನ್ನು ಅನುಭವಿಸಿತ್ತು.

ಜಿಯೋ ಮಣಿಸಲು ಭಾರ್ತಿ ಏರ್‌ಟೆಲ್‌ನಿಂದ ಬಿಗ್ ಪ್ಲಾನ್‌..!

17 ವರ್ಷಗಳ ಭಾರತೀಯ ಟೆಲಿಕಾಂ ಜಗತ್ತನ್ನು ಆಳಿದ್ದ ಏರ್‌ಟೆಲ್ ಕಳೆದ ಆಗಸ್ಟ್‌ನಲ್ಲಿ ಐಡಿಯಾ ಮತ್ತು ವೊಡಾಫೋನ್‌ ಕಂಪನಿಗಳ ವಿಲೀನದಿಂದ ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು. ನಂತರ ರಿಲಾಯನ್ಸ್‌ ಜಿಯೋದ ಸ್ಪರ್ಧೆಯ ಎದುರು ಮಾರುಕಟ್ಟೆ ಆದಾಯ ಹಂಚಿಕೆಯಲ್ಲಿ ಏರ್‌ಟೆಲ್‌ ಮೂರನೇ ಸ್ಥಾನಕ್ಕೆ ಕುಸಿಯಿತು. ಇನ್ನು, ಮಾರ್ಚ್ ತ್ರೈಮಾಸಿಕದಲ್ಲಿ ಏರ್‌ಟೆಲ್‌ ಮಾರುಕಟ್ಟೆ ಆದಾಯ ಹಂಚಿಕೆಯಲ್ಲಿ ಕುಸಿತ ಕಂಡಿದೆ ಎಂಬ ಅಭಿಪ್ರಾಯ ತಪ್ಪು. ಒಂದು ಬಾರಿ ಮಾತ್ರ ಈ ತಪ್ಪು ನಡೆದಿತ್ತು.

ಮುಂದಿನ ತ್ರೈಮಾಸಿಕದಲ್ಲಿ ಜೂನ್ ಈ ಅಸಂಗತತೆ ಸರಿಪಡಿಸುವ ಹೊಣೆ ನಮ್ಮ ಮೇಲಿತ್ತು ಎಂದು ಹೇಳಿರುವ ಹಿರಿಯ ಅಧಿಕಾರಿಗಳು, ಜೂನ್ ಅಂತ್ಯದ ತ್ರೈಮಾಸಿಕದಲ್ಲಿ ಮಾರುಕಟ್ಟೆ ಆದಾಯ ಹಂಚಿಕೆಯಲ್ಲಿ ಮತ್ತೆ ಏರ್‌ಟೆಲ್ ತನ್ನ ನಂ.2 ಸ್ಥಾನವನ್ನು ಮರಳಿ ಪಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮೂರು ಪ್ರಮುಖ ಆಪರೇಟಿಂಗ್ ಮೆಟ್ರಿಕ್‌ಗಳಾದ ಆರ್ಎಂಎಸ್

ಮೂರು ಪ್ರಮುಖ ಆಪರೇಟಿಂಗ್ ಮೆಟ್ರಿಕ್‌ಗಳಾದ ಆರ್ಎಂಎಸ್

ಇನ್ನು, ಏರ್‌ಟೆಲ್‌ ತನ್ನ ನೆಟ್‌ವರ್ಕ್‌ಗೆ ಹೊಸ ಗ್ರಾಹಕರನ್ನು ಸೇರಿಸದಿದ್ದರೆ ಮತ್ತು ದರಗಳನ್ನು ಹೆಚ್ಚಿಸದಿದ್ದರೆ ಜೂನ್ ತ್ರೈಮಾಸಿಕದಿಂದ ಪ್ರತಿ ಬಳಕೆದಾರನ ಬೆಳವಣಿಗೆ ಸರಾಸರಿ (ARPU) ಆದಾಯ ಕಡಿಮೆಯಾಗಬಹುದು ಎಂದು ಟೆಲಿಕಾಂ ಪಂಡಿತರು ಎಚ್ಚರಿಸಿದ್ದಾರೆ. ಸುನೀಲ್ ಮಿತ್ತಲ್ ನೇತೃತ್ವದ ಏರ್‌ಟೆಲ್‌ ಜನವರಿಯಿಂದ ಮಾರ್ಚ್‌ ತ್ರೈಮಾಸಿಕದ ಮಾರುಕಟ್ಟೆ ಆದಾಯ ಹಂಚಿಕೆಯಲ್ಲಿ 285 ಬೇಸಿಸ್ ಪಾಯಿಂಟ್‌ ಕುಸಿದು ಶೇ.27.3ಕ್ಕೆ ತಲುಪಿತ್ತು.

ಮೂರು ಪ್ರಮುಖ ಆಪರೇಟಿಂಗ್ ಮೆಟ್ರಿಕ್‌ಗಳಾದ ಆರ್ಎಂಎಸ್, ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಮತ್ತು ಗ್ರಾಹಕರ ಸಂಖ್ಯೆಯಲ್ಲಿ ಕುಸಿತ ಕಂಡಿದ್ದರಿಂದ ವೊಡಾಫೋನ್ - ಐಡಿಯಾ, ಜಿಯೋ ಎದುರು ಏರ್‌ಟೆಲ್‌ ಹಿನ್ನಡೆ ಅನುಭವಿಸಲು ಪ್ರಮುಖ ಕಾರಣವಾಯ್ತು. ಐಯುಸಿ ಶುಲ್ಕ ಮತ್ತು ಪೋಸ್ಟ್ ಪೇಯ್ಡ್ ಕರಾರುಗಳಿಂದ ಬರಬೇಕಾದ ಆದಾಯ ಕೂಡ ಹಲವಾರು ವರ್ಷಗಳಿಂದ ಬಾಕಿ ಉಳಿದಿರುವ ಕಾರಣ ಏರ್‌ಟೆಲ್‌ ನಷ್ಟದಲ್ಲಿದೆ.

ಏರ್‌ಟೆಲ್ ವರದಿ

ಏರ್‌ಟೆಲ್ ವರದಿ

ಕೆಟ್ಟ ಸಾಲಗಳು ಬಲವರ್ಧನೆಯ ಮಧ್ಯೆ ನಿರ್ಗಮಿಸಿದ ಫ್ರಿಂಜ್ ಕ್ಯಾರಿಯರ್‌ಗಳಿಂದ ಪಡೆಯಲಾದ ಕರಾರುಗಳಿಗೆ ಸಂಬಂಧಿಸಿವೆ ಎಂದು ಕಂಪನಿಯ ಆಂತರಿಕ ಮೂಲಗಳು ತಿಳಿಸಿದ್ದು, ಕೆಟ್ಟ ಸಾಲಗಳ ಪ್ರಮಾಣವನ್ನು ಬಹಿರಂಗಪಡಿಸಲು ಏರ್‌ಟೆಲ್‌ ನಿರಾಕರಿಸಿದೆ. ಇನ್ನು, ಏರ್‌ಟೆಲ್ ವರದಿಯಂತೆ ಮಾರ್ಚ್ ತ್ರೈಮಾಸಿಕ ಗಳಿಕೆಯ ಅಂಕಿ ಸಂಖ್ಯೆಗಳನ್ನು ಗಮನಿಸಿದರೆ ಸ್ಥಳೀಯ ಮೊಬೈಲ್ ಸೇವೆಗಳು ಮತ್ತು ನಿರ್ವಹಣಾ ಆದಾಯದಲ್ಲಿ ಅನುಕ್ರಮ ಬೆಳವಣಿಗೆಯನ್ನು ತೋರಿಸುತ್ತಿದ್ದು, ಇದರಿಂದ ಕಂಪನಿಯ ಆರ್ಎಂಎಸ್ ಕೂಡ ಏರಿಕೆಯಾಗಿದೆ ಎಂಬುದನ್ನು ಸ್ಪಷ್ಟೀಕರಿಸುತ್ತದೆ, ಇನ್ನು, ARPU ಬೆಳವಣಿಗೆ ಉಳಿಸಿಕೊಳ್ಳಲು ಬೆಲೆ ಹೆಚ್ಚಿಸುವುದು ಮತ್ತು ಚಂದಾದಾರರನ್ನು ಸೇರಿಸುವುದು ನಿರ್ಣಾಯಕ ಎಂದು ವಿಶ್ಲೇಷಕರು ಹೇಳಿದ್ದು, ಯಾವುದೇ ಸಂಭಾವ್ಯ ಸುಂಕ ಹೆಚ್ಚಳದಿಂದ ಸಕಾರಾತ್ಮಕ ಆದಾಯದ ಪರಿಣಾಮ ಹೆಚ್ಚಾಗುವುದು ಎಂದು ಖಚಿತಪಡಿಸಿಕೊಳ್ಳಲು ಏರ್‌ಟೆಲ್ ಪ್ರಸ್ತುತ ಹೆಚ್ಚಿನ ಡೇಟಾ ದರದ ಮಟ್ಟವನ್ನು ಕಡಿತಗೊಳಿಸಬೇಕು ಎಂದು ಟೆಲಿಕಾಂ ಪಂಡಿತರು ಹೇಳಿದ್ದಾರೆ.

ಹೊಸ ಚಂದಾದಾರರ ಬರುವಿಕೆ

ಹೊಸ ಚಂದಾದಾರರ ಬರುವಿಕೆ

ಎಸ್‌ಬಿಐಕ್ಯಾಪ್ ಸೆಕ್ಯುರಿಟೀಸ್ ಸಂಶೋಧನಾ ವಿಭಾಗದ ಸಹ ಮುಖ್ಯಸ್ಥ ರಾಜೀವ್ ಶರ್ಮಾ ಹೇಳುವಂತೆ, ಏರ್‌ಟೆಲ್‌ ಹೆಚ್ಚಿನ ಆದಾಯ ಗಳಿಕೆಗೆ ಟ್ಯಾರಿಪ್ ದರಗಳನ್ನು ಹೆಚ್ಚಿಸುವ ಮೊದಲು ಡೇಟಾ ದರಗಳನ್ನು ಕಡಿಮೆ ಮಾಡಬೇಕು. ಹೊಸ ಚಂದಾದಾರರ ಬರುವಿಕೆಯಿಂದ ಎರಡು ತ್ರೈಮಾಸಿಕಗಳಲ್ಲಿ ಏರ್‌ಟೆಲ್‌ನ ಕುಗ್ಗುತ್ತಿರುವ ಬಳಕೆದಾರರ ಸಂಖ್ಯೆಯನ್ನು ಕಡಿಮೆಮಾಡಬಹುದು ಎಂದಿದ್ದಾರೆ.

Most Read Articles
Best Mobiles in India

Read more about:
English summary
Airtel Aims To Become #2 Telecom Company In Terms Of Revenue Collection

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more