ಏರ್ ಟೆಲ್ ನಲ್ಲಿ 398 ರುಪಾಯಿ ಪ್ರಿಪೇಯ್ಡ್ ಪ್ಲಾನ್ – ರಿಲಯನ್ಸ್ ನಲ್ಲೂ ಬೆಸ್ಟ್ ಆಫರ್

By Gizbot Bureau
|

ಭಾರತೀ ಏರ್ ಟೆಲ್ ಯಾವಾಗಲೂ ಕೂಡ ತನ್ನ ಪ್ಲಾನ್ ಗಳನ್ನು ಬದಲಾಯಿಸುತ್ತಲೇ ಇರುತ್ತದೆ ಮತ್ತು ತನ್ನ ಚಂದಾದಾರರನ್ನು ಸೆಳೆಯುತ್ತಲೇ ಇರುತ್ತದೆ. ಇದೀಗ ಪ್ರೀಪೇಯ್ಡ್ ಬಳಕೆದಾರರಿಗೆ ತನ್ನ 398 ರುಪಾಯಿ ಪ್ಲಾನ್ ನಲ್ಲಿ ಬದಲಾವಣೆಯನ್ನು ಏರ್ ಟೆಲ್ ಮಾಡಿದೆ. ಇದೀಗ 398 ರುಪಾಯಿ ಪ್ರಿಪೇಯ್ಡ್ ಪ್ಲಾನ್ 105ಜಿಬಿಯನ್ನು ಡಾಟಾ ಬೆನಿಫಿಟ್ ನ್ನು ನೀಡಲಿದ್ದು ಒಟ್ಟು 70 ದಿನಗಳ ಅವಧಿಯನ್ನು ಹೊಂದಿರುತ್ತದೆ.

ಏರ್ ಟೆಲ್ ನಲ್ಲಿ 398 ರುಪಾಯಿ ಪ್ರಿಪೇಯ್ಡ್ ಪ್ಲಾನ್ – ರಿಲಯನ್ಸ್ ನಲ್ಲೂ ಬೆಸ್ಟ್ ಆಫ

ಅಷ್ಟೇ ಅಲ್ಲದೆ ಈ ಪ್ಲಾನಿನ ಅಡಿಯಲ್ಲಿ ಉಚಿತ ವಾಯ್ಸ್ ಕಾಲಿಂಗ್ ಬೆನಿಫಿಟ್ ಮತ್ತು ಎಸ್ಎಂಎಸ್ ಬೆನಿಫಿಟ್ ಕೂಡ 70 ದಿನಗಳ ಅವಧಿಗೆ ಇರುತ್ತದೆ. ಏರ್ ಟೆಲ್ ನ ಎಲ್ಲಾ ಕೊಂಬೋ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಸಾಮಾನ್ಯವಾಗಿ 100ಎಸ್ಎಂಎಸ್ ಪ್ರತಿದಿನ ಉಚಿತವಾಗಿ ಕಳುಹಿಸುವುದಕ್ಕೆ ಅವಕಾಶವಿರುತ್ತದೆ. ಆದರೆ ಈ ಪ್ಲಾನ್ ನಲ್ಲಿ ಈ ಟ್ರೆಂಡ್ ನ್ನು ಮುರಿಯಲಾಗಿದ್ದು ಪ್ರತಿದಿನ 90ಎಸ್ಎಂಎಸ್ ಉಚಿತವಾಗಿ ಕಳಿಸಲು ಅವಕಾಶವಿರುತ್ತದೆ ಅಂದರೆ ಒಟ್ಟಾರೆ 70 ದಿನಗಳ ಅವಧಿಯಲ್ಲಿ ಬಳಕೆದಾರರು 6300 ಎಸ್ಎಂಎಸ್ ಗಳನ್ನು ಉಚಿತವಾಗಿ ಕಳುಹಿಸಬಹುದಾಗಿದೆ.

ಇದಿಷ್ಟೇ ಅಲ್ಲದೇ ಏರ್ ಟೆಲ್ ರೂಪಾಯಿ 399 ರ ಪ್ಲಾನ್ ನಲ್ಲೂ ಕೂಡ ಬದಲಾವಣೆ ಮಾಡಿದ್ದು ಇದೀಗ 84 ದಿನಗಳ ಅವಧಿಗೆ 1ಜಿಬಿ ಡಾಟಾ ಸೌಲಭ್ಯದಲ್ಲಿ ಈ ಪ್ಲಾನ್ ಲಭ್ಯವಾಗುತ್ತದೆ.

ರೂ.398 ರ ಏರ್ ಟೆಲ್ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ – ವಿವರಗಳು ಮತ್ತು ಬೆನಿಫಿಟ್ ಗಳು:

ರೂ.398 ರ ಏರ್ ಟೆಲ್ ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ – ವಿವರಗಳು ಮತ್ತು ಬೆನಿಫಿಟ್ ಗಳು:

ಏರ್ ಟೆಲ್ ಇತ್ತೀಚೆಗೆ ರೂ.398 ರ ಪ್ರಿಪೇಯ್ಡ್ ಪ್ಲಾನ್ ನ್ನು ಬಿಡುಗಡೆಗೊಳಿಸಿದ್ದು ಇದರ ಅಡಿಯಲ್ಲಿ ಗ್ರಾಹಕರಿಗೆ 1.5ಜಿಬಿ ಡಾಟಾ ಪ್ರತಿದಿನ, ದೇಶದಾದ್ಯಂತ ಯಾವುದೇ ನೆಟ್ ವರ್ಕ್ ಗೆ ಅನಿಯಮಿತ ವಾಯ್ಸ್ ಕರೆಗಳು, 100 ಎಸ್ಎಂಎಸ್ ಅಲ್ಲ ಬದಲಾಗಿ 90 ಎಸ್ಎಂಎಸ್ ಗಳು ಪ್ರತಿದಿನ ಉಚಿತವಾಗಿ ಲಭ್ಯವಾಗುತ್ತದೆ.

ರಿಲಯನ್ಸ್ ಜಿಯೋ ನಂತರ ಏರ್ ಟೆಲ್ ಕೂಡ ಅನಿಯಮಿತ ಸ್ಥಳೀಯ, ಎಸ್ ಟಿಡಿ ಮತ್ತು ರಾಷ್ಟ್ರೀಯ ರೋಮಿಂಗ್ ಕರೆಗಳನ್ನು ದೇಶದಾದ್ಯಂತ ಮಾಡಲು ಅವಕಾಶ ನೀಡಿದೆ ಮತ್ತು ನೀವೆಷ್ಟು ಕರೆಗಳನ್ನು ಬೇಕಿದ್ದರೂ ಮಾಡುವ ಅವಕಾಶವನ್ನು ಕಲ್ಪಿಸಿದೆ. ವಡಾಫೋನ್ ಪ್ರತಿದಿನಕ್ಕೆ 250 ನಿಮಿಷವನ್ನು ನಿಗದಿಗೊಳಿಸಿದೆ. ವಾರಕ್ಕೆ ಕೇವಲ 1000 ನಿಮಿಷ ಮಾತ್ರವೇ ವಾಯ್ಸ್ ಕರೆಗಳನ್ನು ಉಚಿತವಾಗಿ ಮಾಡಲು ವಡಾಫೋನ್ ಅವಕಾಶ ನೀಡುತ್ತದೆ ಮತ್ತು 100 ವಿಭಿನ್ನ ನಂಬರ್ ಗಳಿಗೆ ಕರೆ ಮಾಡಬಹುದಾಗಿದೆ. ಏರ್ ಟೆಲ್ ನಿಂದ ಲಭ್ಯವಾಗುವ ಎಸ್ಎಂಎಸ್ ಬೆನಿಫಿಟ್ ಕೂಡ ಇಡೀ ದೇಶದಾದ್ಯಂತಕ್ಕೆ ಅನ್ವಯಿಸುತ್ತದೆ.

ಸದ್ಯವಿರುವ 399 ರುಪಾಯಿ ಪ್ಲಾನಿಂದ ಹೊಸದಾಗಿ ಬಂದಿರುವ ರೂ.398ರ ಪ್ಲಾನ್ ಹೇಗೆ ವಿಭಿನ್ನವಾಗಿದೆ?

ಸದ್ಯವಿರುವ 399 ರುಪಾಯಿ ಪ್ಲಾನಿಂದ ಹೊಸದಾಗಿ ಬಂದಿರುವ ರೂ.398ರ ಪ್ಲಾನ್ ಹೇಗೆ ವಿಭಿನ್ನವಾಗಿದೆ?

ಬಹಳ ಹಿಂದಿನಿಂದಲೂ ಏರ್ ಟೆಲ್ ರೂಪಾಯಿ 399 ರ ಪ್ಲಾನ್ ನ್ನು 70 ಮತ್ತು 84 ದಿನಗಳ ಅವಧಿಗೆ (ಬಳಕೆದಾರರ ಅನ್ವಯ) ನೀಡುತ್ತಿತ್ತು. 399 ರುಪಾಯಿ ಪ್ಲಾನ್ ನ್ನು ಬದಲಾಯಿಸಲಾಗಿದ್ದು ಇದೀಗ 1ಜಿಬಿ ಡಾಟಾ ಪ್ರತಿದಿನ, ಅನಿಯಮಿತ ವಾಯ್ಸ್ ಕರೆಗಳು ಮತ್ತು 100ಎಸ್ಎಂಎಸ್ ಪ್ರತಿದಿನ 84 ದಿನಗಳ ಅವಧಿಗೆ ನೀಡಲಾಗುತ್ತದೆ. ಈ ಹಿಂದೆ ಇದೇ ಪ್ಲಾನಿನ ಅಡಿಯಲ್ಲಿ 1.4 ಜಿಬಿ ಡಾಟಾ ಪ್ರತಿದಿನ 70 ದಿನಗಳು ಮತ್ತು 84 ದಿನಗಳ ಅವಧಿಗೆ ಕ್ರಮವಾಗಿ ನೀಡಲಾಗುತ್ತಿತ್ತು. ಕೆಲವು ಬಳಕೆದಾರರಿಗೆ 399 ರುಪಾಯಿ ಪ್ಲಾನ್ ಈಗಲೂ ಕೂಡ 1.4ಜಿಬಿ ಡಾಟಾವನ್ನು 84 ದಿನಗಳ ಅವಧಿಗೆ ಆಫರ್ ಮಾಡುತ್ತಿದೆ.

ಏರ್ ಟೆಲ್ ನ ರೂಪಾಯಿ 399 ರ ರೀಚಾರ್ಜ್ ಪ್ಲಾನ್ ಅನಿಯಮಿತ ವಾಯ್ಸ್ ಕರೆಗಳು, 1ಜಿಬಿ ಪ್ರತಿದಿನ ಡಾಟಾ ಮತ್ತು 100ಎಸ್ಎಂಎಸ್ ಗಳನ್ನು ಪ್ರತಿದಿನ ನೀಡುತ್ತದೆ. ಅದೇ 398 ರುಪಾಯಿ ರೀಚಾರ್ಜ್ ಪ್ಲಾನ್ 1.5ಜಿಬಿ ಡಾಟಾವನ್ನು ನೀಡುತ್ತದೆ. ಹೊಸದಾಗಿ ಬಿಡುಗಡೆಗೊಂಡಿರುವ ಪ್ಲಾನ್ ನಲ್ಲಿ ಡಾಟಾ ಬೆನಿಫಿಟ್ ಉತ್ತಮವಾಗಿದೆ. ಆದರೆ ವ್ಯಾಲಿಡಿಟಿಯನ್ನು ಗಮನಿಸಿದಾಗ 399 ರುಪಾಯಿ ಪ್ಲಾನ್ ನಲ್ಲಿ 14 ದಿನಗಳು ಹೆಚ್ಚುವರಿಯಾಗಿ ಸಿಗುತ್ತದೆ.

ಏರ್ ಟೆಲ್ ರೂಪಾಯಿ 398 ರೀಚಾರ್ಜ್ vs ಜಿಯೋ ರೂ. 398 ಪ್ರೀಪೇಯ್ಡ್ ಪ್ಲಾನ್:

ಏರ್ ಟೆಲ್ ರೂಪಾಯಿ 398 ರೀಚಾರ್ಜ್ vs ಜಿಯೋ ರೂ. 398 ಪ್ರೀಪೇಯ್ಡ್ ಪ್ಲಾನ್:

ಇನ್ನೊಂದೆಡೆ ರಿಲಯನ್ಸ್ ಜಿಯೋ ಕೂಡ 398 ರುಪಾಯಿ ಪ್ಲಾನ್ ನ್ನು ನೀಡುತ್ತದೆ. ಹಾಗಾದ್ರೆ ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ಇವೆರಡಲ್ಲಿ ಯಾವ ಟೆಲಿಕಾಂ ಸಂಸ್ಥೆ ಉತ್ತಮ ಆಫರ್ ನೀಡುತ್ತದೆ ಎಂಬುದನ್ನು ಗಮನಿಸಿದರೆ ಖಂಡಿತ ಅದು ರಿಲಯನ್ಸ್ ಜಿಯೋ ಆಗಿದೆ.

ರಿಲಯನ್ಸ್ ಜಿಯೋ 398 ರುಪಾಯಿ ಪ್ಲಾನ್ ನಲ್ಲಿ 2ಜಿಬಿ ಪ್ರತಿದಿನ ಡಾಟಾ ಲಭ್ಯವಿದೆ ಆದರೆ ಏರ್ ಟೆಲ್ ನಲ್ಲಿ ಕೇವಲ 1.5ಜಿಬಿ ಡಾಟಾ ಮಾತ್ರ ಸಿಗುತ್ತದೆ. 398 ರುಪಾಯಿ ಪ್ರಿಪೇಯ್ಡ್ ಪ್ಲಾನ್ ನಲ್ಲಿ ಜಿಯೋ 2ಜಿಬಿ ಡಾಟಾ, ಅನಿಯಮಿತ ವಾಯ್ಸ್ ಗಳು, 100ಎಸ್ಎಂಎಸ್ ಗಳನ್ನು 70 ದಿನಗಳ ಅವಧಿಗೆ ನೀಡುತ್ತದೆ.

ಮುಖೇಶ್ ಅಂಬಾನಿ ಮಾಲೀಕತ್ವದ ಟೆಲಿಕಾಂ ಸಂಸ್ಥೆ 349 ರುಪಾಯಿ ಪ್ರಿಪೇಯ್ಡ್ ಪ್ಲಾನ್ ನ್ನು ಕೂಡ ನೀಡುತ್ತಿದ್ದು ಇದರ ಅನ್ವಯ 1.5ಜಿಬಿ ಡಾಟಾ ಪ್ರತಿದಿನ, ಅನಿಯಮಿತ ವಾಯ್ಸ್ ಮತ್ತು ಟೆಕ್ಸ್ಟ್ ಮೆಸೇಜ್ ಗಳು 70 ದಿನಗಳ ಅವಧಿಗೆ ಸಿಗುತ್ತದೆ. ಅಂದರೆ ಏರ್ ಟೆಲ್ ಗಿಂತ 49 ರುಪಾಯಿ ಕಡಿಮೆಯಲ್ಲಿ ಜಿಯೋದಲ್ಲಿ ಸೇಮ್ ಆಫರ್ ಲಭ್ಯವಾಗುತ್ತದೆ. ಆದರೆ ಸದ್ಯ ಟೆಲಿಕಾಂ ಇಂಡಸ್ಟ್ರಿ ನಡೆಯುತ್ತಿರುವುದೇ ಸ್ಪರ್ಧೆಯಲ್ಲಿ ಅಲ್ಲವೇ?

Best Mobiles in India

Read more about:
English summary
Airtel Brings Rs 398 Plan for Prepaid Users With 1.5GB Daily Data for 70 Days

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X