ಏರ್‌ಟೆಲ್‌ನಿಂದ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಲಾಂಚ್‌! ಏನೆಲ್ಲಾ ಪ್ರಯೋಜನಗಳು!

|

ಏರ್‌ಟೆಲ್‌ ಟೆಲಿಕಾಂ ದೇಶದ ಮುಂಚೂಣಿ ಟೆಲಿಕಾಂ ಆಪ್‌ರೇಟರ್‌ಗಳಲ್ಲಿ ಒಂದಾಗಿದೆ. ಜಿಯೋ ಟೆಲಿಕಾಂ ಜೊತೆಗೆ ಪೈಪೋಟಿ ನಡೆಸುತ್ತಿರುವ ಏರ್‌ಟೆಲ್‌ ವಿವಿಧ ಬೆಲೆಯ ಆಯ್ಕೆಗಳಲ್ಲಿ ಪ್ರಿಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಪ್ಲಾನ್‌ಗಳನ್ನು ನೀಡುತ್ತಾ ಬಂದಿದೆ. ಇದರಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಪ್ರಿಪೇಯ್ಡ್‌ ಪ್ಲಾನ್‌ಗಳು ಕೂಡ ಸೇರಿವೆ. ಇವುಗಳಲ್ಲಿ ಅಲ್ಪಾವಧಿ ಪ್ಲಾನ್‌ಗಳು ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿವೆ. ಅದರಂತೆ ಇದೀಗ ಏರ್‌ಟೆಲ್‌ ಟೆಲಿಕಾಂ 199ರೂ.ಬೆಲೆಯಲ್ಲಿ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಅನ್ನು ಪರಿಚಯಿಸಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಟೆಲಿಕಾಂ ಭಾರತದಲ್ಲಿ ಹೊಸ 199ರೂ. ಬೆಲೆಯಲ್ಲಿ ಹೊಸ ಪ್ರಿಪೇಯ್ಡ್‌ ಪ್ಲಾನ್‌ ಲಾಂಚ್‌ ಮಾಡಿದೆ. ಈ ಪ್ಲಾನ್‌ ಮಾಸಿಕ ಪ್ಲಾನ್‌ ಆಗಿದ್ದು, 30 ದಿನಗಳ ಮಾನ್ಯತೆಯಲ್ಲಿ ಬರಲಿದೆ. ಇನ್ನು ಈ ಪ್ರಿಪೇಯ್ಡ್‌ ಪ್ಲಾನ್‌ ಅಲ್ಪಾವಧಿ ಮಾನ್ಯತೆ ಬಯಸುವ ಗ್ರಾಹಕರಿಗೆ ಸೂಕ್ತ ಆಯ್ಕೆಯಾಗಿರಲಿದೆ. ಇದರಲ್ಲಿ ಡೇಟಾ ಪ್ರಯೋಜನಗಳು ಮಾತ್ರವಲ್ಲದೆ ಅನಿಯಮಿತ ಕರೆ ಪ್ರಯೋಜನ ಕೂಡ ಲಭ್ಯವಾಗಲಿದೆ. ಹಾಗಾದ್ರೆ ಏರ್‌ಟೆಲ್‌ ಟೆಲಿಕಾಂ ಪರಿಚಯಿಸಿರುವ ಹೊಸ ಪ್ರಿಪೇಯ್ಡ್‌ ಪ್ಲಾನ್‌ನ ವಿಶೇಷತೆ ಏನಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌

ಏರ್‌ಟೆಲ್‌ ಟೆಲಿಕಾಂ 199ರೂ. ಬೆಲೆಯಲ್ಲಿ ಪ್ರಿಪೇಯ್ಡ್‌ ಪ್ಲಾನ್‌ ಪರಿಚಯಿಸಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಕೂಡ 199ರೂ. ಪ್ರಿಪೇಯ್ಡ್ ಪ್ಲಾನ್‌ ಅನ್ನು 24 ದಿನಗಳ ಮಾನ್ಯತೆಯಲ್ಲಿ ನೀಡುತ್ತಿತ್ತು. ಅಲ್ಲದೆ 2021 ರವರೆಗೆ ಪ್ರತಿದಿನ 1GB ಪ್ರಯೋಜನ ನೀಡ್ತಿದ್ದ ಈ ಪ್ಲಾನ್‌ ಜಿಯೋ ಜೊತೆಗೆ ಪೈಪೋಟಿ ನಡೆಸುವುದಕ್ಕಾಗಿ ದೈನಂದಿನ 1.5GB ಡೇಟಾ ಪ್ರಯೋಜನ ನೀಡಲು ಪ್ರಾರಂಭಿಸಿತು. ಇದೀಗ ಏರ್‌ಟೆಲ್‌ 199ರೂ. ಪ್ರಿಪೇಯ್ಡ್‌ ಪ್ಲಾನ್‌ ಅನ್ನು ಮತ್ತೊಮ್ಮೆ ದೀರ್ಘಾವಧಿಯ ಮಾನ್ಯತೆಯೊಂದಿಗೆ ಪರಿಚಯಿಸಿದೆ. ಆದರೆ ಡೇಟಾ ಮಿತಿಯನ್ನು ಕಡಿಮೆ ಮಾಡಿದೆ.

ಏರ್‌ಟೆಲ್‌ 199ರೂ. ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ 199ರೂ. ಪ್ರಿಪೇಯ್ಡ್‌ ಪ್ಲಾನ್‌

ಏರ್‌ಟೆಲ್‌ ಟೆಲಿಕಾಂನ 199ರೂ. ಪ್ರಿಪೇಯ್ಡ್‌ ಪ್ಲಾನ್‌ 30 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಈ ಅವಧಿಯಲ್ಲಿ ಒಟ್ಟು 3GB ಡೇಟಾ ಪ್ರಯೋಜನ ದೊರೆಯಲಿದೆ. ಇದಲ್ಲದೆ ಅನಿಯಮಿತ ಕರೆ ಹಾಗೂ ದೈನಂದಿನ 100 SMS ಪ್ರಯೋಜನ ಕೂಡ ದೊರೆಯಲಿದೆ. ಸುಮಾರು ಒಂದು ತಿಂಗಳ ವ್ಯಾಲಿಡಿಟಿಯನ್ನು ಬಯಸುವ ಬಳಕೆದಾರರಿಗಾಗಿ ಈ ಯೋಜನೆಯನ್ನು ವಿಶೇಷವಾಗಿ ಕ್ಯುರೇಟ್ ಮಾಡಲಾಗಿದೆ. ಜೊತೆಗೆ ಟೆಲ್ಕೊ ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಮತ್ತು ಉಚಿತ ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ನ ಹೆಚ್ಚುವರಿ ಪ್ರಯೋಜನಗಳನ್ನು ಸಹ ಹೊಂದಿದೆ.

ಏರ್‌ಟೆಲ್‌

ಇನ್ನು ಏರ್‌ಟೆಲ್‌ ಟೆಲಿಕಾಂನ ಈ ಪ್ಲಾನ್‌ ಸೆಕೆಂಡರಿ ಸಿಮ್‌ ಬಳಸುವ ಬಳಕೆದಾರರಿಗೆ ಸೂಕ್ತವಾಗಲಿದೆ. ಏಕೆಂದರೆ ಹೆಚ್ಚಿನ ವೇಗದ ದೈನಂದಿನ ಡೇಟಾವನ್ನು ಬಯಸುವ ಬಳಕೆದಾರರಿಗೆ ಒಟ್ಟು 3GB ಡೇಟಾ ಮಿತಿಯು ಸೂಕ್ತವಲ್ಲ. ಆದರಿಂದ ಏರ್‌ಟೆಲ್ ಅನ್ನು ಸೆಕೆಂಡರಿ ಸಿಮ್‌ನಂತೆ ಬಳಸುವ ಬಳಕೆದಾರರು ತಮ್ಮ ಸಿಮ್‌ ಆಕ್ಟಿವ್‌ ಇಡುವುದಕ್ಕೆ ಬಳಸಬಹುದು. ಇದಲ್ಲದೆ ಏರ್‌ಟೆಲ್‌ ಟೆಲಿಕಾಂ ಇನ್ನು ಅನೇಕ ಪ್ರಿಪೇಯ್ಡ್‌ ಪ್ಲಾನ್‌ಗಳನ್ನು ಹೊಂದಿದ್ದು, ಬಳಕೆದಾರರು ತಮಗೆ ಸೂಕ್ತ ಎನಿಸುವ ಪ್ಲಾನ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಜಿಯೋ ರೂ 199 ಪ್ಲಾನ್

ಜಿಯೋ ರೂ 199 ಪ್ಲಾನ್

ರಿಲಯನ್ಸ್ ಜಿಯೋ ಸಹ 199ರೂ. ಬೆಲೆಯ ಪ್ರಿಪೇಯ್ಡ್ ಪ್ಲಾನ್‌ ನೀಡುತ್ತಿದೆ. ಈ ಪ್ರಿಪೇಯ್ಡ್‌ ಪ್ಲಾನ್ ದೈನಂದಿನ 1.5GB ಡೇಟಾ ಪ್ರಯೋಜನವನ್ನು ನೀಡುತ್ತಿದೆ. ಇದರಲ್ಲಿ ಅನಿಯಮಿತ ಕರೆ ಪ್ರಯೋಜನ ಹಾಗೂ ದಿನನಿತ್ಯ 100 SMS ಸೌಲಭ್ಯ ಲಭ್ಯವಾಗಲಿದೆ. ಇದು ಒಟ್ಟು 23 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಈ ಪ್ಲಾನ್‌ ಏರ್‌ಟೆಲ್‌ನ 199ರೂ. ಪ್ಲಾನ್‌ ಮಾದರಿಯ ಪ್ರಯೋಜನಗಳನ್ನೇ ಒಳಗೊಂಡಿದ್ದು ಪರಸ್ಪರ ಪೈಪೋಟಿ ನಡೆಸುತ್ತಿವೆ.

Best Mobiles in India

English summary
Airtel has launched a new prepaid plan at Rs 199: Check Benefits

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X