ಹೆಚ್ಚುವರಿ ಡೇಟಾ ಬಯಸೋರಿಗೆ ಈ ಡೇಟಾ ಬೂಸ್ಟರ್ ಪ್ಲ್ಯಾನ್ ಸೂಕ್ತ!

|

ಕಳೆದ ಕೆಲವು ದಿನಗಳಿಂದ ಟೆಲಿಕಾಂ ವಲಯದಲ್ಲಿ ಸಾಕಷ್ಟು ಬದಲಾವಣೆಗಳು ನಡೆದಿವೆ. ದೇಶದ ಪ್ರಮುಖ ಮೂರು ಟೆಲಿಕಾಂಗಳಾದ ಏರ್‌ಟೆಲ್‌, ಜಿಯೋ, ವಿ ಟೆಲಿಕಾಂಗಳು ಈಗಾಗಲೇ ತಮ್ಮ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆಯನ್ನು ಹೆಚ್ಚಳ ಮಾಡಿವೆ. ಇದರಿಂದ ನಿವು ರೀಚಾರ್ಜ್‌ ಮಾಡುವ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆ ಇದೀಗ ದುಬಾರಿಯಾಗಿದೆ. ಇದೇ ಕಾರಣಕ್ಕೆ ಬಳಕೆದಾರರು ಕಡಿಮೆ ಬೆಲೆಯ ಪ್ಲಾನ್‌ಗಳನ್ನ ಆಯ್ಕೆ ಮಾಡುತ್ತಾರೆ. ಒಂದು ವೇಳೆ ತಮ್ಮ ಪ್ರಿಪೇಯ್ಡ್‌ ಪ್ಲಾನ್‌ಗಳ ಮಾನ್ಯತೆ ಮುಗಿದು ಹೋದರೆ ಹಲವಾರು ಬೂಸ್ಟರ್‌ ಪ್ಲಾನ್‌ಗಳನ್ನು ಆಯ್ಕೆ ಮಾಡಬಹುದಾಗಿದೆ.

ಟೆಲಿಕಾಂ

ಹೌದು, ಟೆಲಿಕಾಂ ಕಂಪೆನಿಗಳು ತಮ್ಮ ಪ್ರಿಪೇಯ್ಡ್‌ ಪ್ಲಾನ್‌ಗಳ ಬೆಲೆಯಲ್ಲಿ ಶೇ.25ರಿಂದ 30ರಷ್ಟು ಹೆಚ್ಚಳವನ್ನು ಮಾಡಿವೆ. ಹೀಗೆ ಬೆಲೆ ಹೆಚ್ಚಳದ ನಂತರ ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು, ಟೆಲಿಕಾಂ ಕಂಪೆನಿಗಳು ಕಡಿಮೆ ಬೆಲೆಯ ಹಲವಾರು ಬೂಸ್ಟರ್ ಯೋಜನೆಗಳನ್ನು ನೀಡುತ್ತಿವೆ. ಈ ಬೂಸ್ಟರ್‌ ಪ್ಲಾನ್‌ಗಳನ್ನು ಬಳಸುವುದರಿಂದ ನಿಮಗೆ ಸಾಕಷ್ಟು ಉಪಯೋಗಗಳು ದೊರೆಯಲಿವೆ. ಹಾಗಾದ್ರೆ ನಿಮಗೆ ಪ್ರಮುಖ ಮೂರು ಟೆಲಿಕಾಂಗಳಿಂದ ಲಭ್ಯವಾಗುವ ಅತ್ಯುತ್ತಮ ಬೂಸ್ಟರ್‌ ಪ್ಲಾನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌

ಏರ್‌ಟೆಲ್‌

ದೇಶದ ಪ್ರಮುಖ ಟೆಲಿಕಾಂ ಕಂಪೆನಿಗಳಲ್ಲಿ ಒಂದಾದ ಭಾರ್ತಿ ಏರ್‌ಟೆಲ್‌ ಹಲವು ಡೇಟಾ ಬೂಸ್ಟರ್ ಪ್ಯಾಕ್‌ಗಳ ಆಯ್ಕೆಗಳನ್ನು ನೀಡುತ್ತದೆ. ಇದರಲ್ಲಿ ಏರ್‌ಟೆಲ್‌ನ ಬುಸ್ಟರ್‌ ಪ್ಲಾನ್‌ಗಳು 100ರೂ.ಗಳಿಂದ 500ರೂ.ಗಳ ಬೆಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ಈ ಪೈಕಿ ಏರ್‌ಟೆಲ್‌ನ 100ರೂ.ಗಳ ಬೂಸ್ಟರ್ ಬ್ಯಾಕ್‌ನಲ್ಲಿ, ಬಳಕೆದಾರರು 15GB ಡೇಟಾ ಪ್ರಯೋಜನ ಪಡೆಯುತ್ತಾರೆ. ಇದರಲ್ಲಿ ಬಳಕೆದಾರರು 1GB ಡೇಟಾಗೆ ಕೇವಲ 6.66 ರೂಪಾಯಿಗಳನ್ನು ಖರ್ಚು ವೆಚ್ಚ ಮಾಡಿದಂತಾಗುತ್ತದೆ. ಇದೇ ಕಾರಣಕ್ಕೆ ಈ ಪ್ಲಾನ್‌ ಹೆಚ್ಚಿನ ಜನರು ಆಯ್ಕೆ ಮಾಡುವ ಪೋಸ್ಟ್‌ಪೇಯ್ಡ್ ಬೂಸ್ಟರ್ ಪ್ಯಾಕ್ ಆಗಿದೆ.

ಏರ್‌ಟೆಲ್

ಇದಲ್ಲದೆ ಏರ್‌ಟೆಲ್ ಟೆಲಿಕಾಂ 300ರೂ.ಗಳಲ್ಲಿ ಬೂಸ್ಟರ್ ಪ್ಲಾನ್‌ ಹೊಂದಿದೆ. ಈ ಪ್ಲಾನ್‌ನಲ್ಲಿ ಏರ್‌ಟೆಲ್ ಗ್ರಾಹಕರಿಗೆ 300 ರೂ ಬದಲಿಗೆ ಒಟ್ಟು 50GB ಹೈ-ಸ್ಪೀಡ್ ಇಂಟರ್ನೆಟ್ ನೀಡಲಾಗುತ್ತಿದೆ. ಏರ್‌ಟೆಲ್ 200ರೂ. ಪ್ಲಾನ್‌ ಕೂಡ ಹೊಂದಿದೆ. ಈ ಯೋಜನೆಯನ್ನು ಖರೀದಿಸಿದಾಗ, ಬಳಕೆದಾರರು 35GB ಡೇಟಾವನ್ನು ಪಡೆಯುತ್ತಾರೆ. ಅಂದರೆ ಈ ಪ್ಲಾನ್ ನಲ್ಲಿ ಬಳಕೆದಾರರು ಕೇವಲ 5.71 ರೂಪಾಯಿಗೆ 1GB ಇಂಟರ್ ನೆಟ್ ಪ್ರಯೋಜನ ಪಡೆದುಕೊಳ್ಳಲಿದ್ದಾರೆ.

ರಿಲಯನ್ಸ್ ಜಿಯೋ

ರಿಲಯನ್ಸ್ ಜಿಯೋ

ಟೆಲಿಕಾಂ ದೈತ್ಯ ಎನಿಸಿಕೊಂಡಿರುವ ರಿಲಯನ್ಸ್ ಜಿಯೋ ಕೂಡ ಬಳಕೆದಾರರಿಗೆ ಹಲವು ಬೂಸ್ಟರ್‌ ಪ್ಲಾನ್‌ಗಳನ್ನು ಪರಿಚಯಿಸಿದೆ. ಈ ಪ್ಲಾನ್‌ಗಳ ಮೂಲಕ ದೈನಂದಿನ ಡೇಟಾದ ಮಿತಿ ಮುಗಿದ ನಂತರವೂ ನೀವು 4G ವೇಗದಲ್ಲಿ ಇಂಟರ್ನೆಟ್ ಅನ್ನು ರನ್ ಮಾಡಬಹುದು. ಈ ಪ್ಲಾನ್‌ಗಳು 11ರೂ. ಗಳಿಂದ 301ರೂ. ರವರೆಗಿನ ಬೂಸ್ಟರ್ ಯೋಜನೆಗಳನ್ನು ಹೊಂದಿದೆ. ಇದು 10GB ವರೆಗೆ ಹೆಚ್ಚುವರಿ ಡೇಟಾವನ್ನು ನೀಡುತ್ತದೆ. ಇದರಲ್ಲಿ ಯಾವುದೇ ದೈನಂದಿನ ಮಿತಿಯಿಲ್ಲದೆ ನೀವು ಇದನ್ನು ಬಳಸಬಹುದು. ಈ ಪೈಕಿ 149ರೂ.ಗಳ ಬೂಸ್ಟರ್‌ ಪ್ಲಾನ್‌ ಒಂದು ತಿಂಗಳ ಮಾನ್ಯತೆಯೊಂದಿಗೆ ಬರುತ್ತದೆ. ಆದ್ದರಿಂದ ನಿಮ್ಮ ಬೂಸ್ಟರ್ ಪ್ಯಾಕ್ ಸಹ ಒಂದು ತಿಂಗಳವರೆಗೆ ಮಾನ್ಯವಾಗಿರುತ್ತದೆ.

ವಿ ಟೆಲಿಕಾಂ

ವಿ ಟೆಲಿಕಾಂ

ವಿ ಟೆಲಿಕಾಂನ ಬೂಸ್ಟರ್ ಪ್ಲಾನ್ ಬೆಲೆ 46 ರೂ.ಆಗಿದೆ. ಈ ಪ್ಲಾನ್‌ನಲ್ಲಿ ನೀವು 10 ಸ್ಥಳೀಯ ಆನ್-ನೆಟ್ ನೈಟ್ ನಿಮಿಷಗಳು 28 ದಿನಗಳವರೆಗೆ 2.5p/sec ಪ್ರಯೋಜನವನ್ನು ಪಡೆಯಬಹುದು. ಜೊತೆಗೆ ಇದು ಸ್ಥಳೀಯ/ರಾಷ್ಟ್ರೀಯ ಕರೆಗಳು ಮತ್ತು ರಾತ್ರಿ ನಿಮಿಷಗಳ ಪ್ರಯೋಜನ ನೀಡಲಿದೆ. ಹೆಚ್ಚುವರಿಯಾಗಿ, ನೀವು ರೀಚಾರ್ಜ್ ಮೇಲೆ ಫ್ಲಾಟ್ 5ರೂ.ಕ್ಯಾಶ್‌ಬ್ಯಾಕ್ ಅಥವಾ 10ರೂ ಪ್ರಯೋಜನ ಪಡೆಯಬಹುದು. ಇಲ್ಲವೇ ಅದಕ್ಕಿಂತ ಹೆಚ್ಚಿನ ಬಿಲ್ ಪಾವತಿಯನ್ನು ಒಂದು ದಿನದಲ್ಲಿ ಗರಿಷ್ಠ 10 ಬಾರಿ ಪಡೆದುಕೊಳ್ಳಬಹುದಾಗಿದೆ.

ವಿ ಟೆಲಿಕಾಂ

ಇದಲ್ಲದೆ ವಿ ಟೆಲಿಕಾಂ ಇತ್ತೀಚಿಗೆ ಅಗ್ಗದ ಬೆಲೆಯ 299ರೂ. ಪ್ರೀಪೇಯ್ಡ್‌ ಪ್ಲ್ಯಾನ್ ಪರಿಚಯಿಸಿದೆ. ಈ ಪ್ಲ್ಯಾನಿನಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ದೊರೆಯುತ್ತದೆ. ಅದರೊಂದಿಗೆ ಯಾವುದೇ ನೆಟವರ್ಕಗೆ ಅನಿಯಮಿತ ಉಚಿತ ಕರೆಗಳ ಪ್ರಯೋಜನ ಒಳಗೊಂಡಿದೆ. ಹಾಗೂ ಪ್ರತಿದಿನ 100 ಉಚಿತ ಎಸ್ಎಮ್ಎಸ್‌ ಸಹ ಹೊಂದಿದೆ. ಇನ್ನು ಈ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಯನ್ನು ಪಡೆದಿದೆ.

Best Mobiles in India

Read more about:
English summary
The price of the Airtel booster plan is Rs 300. In this plan, a total of 50GB of high-speed internet is being given to Airtel customers instead of Rs 300.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X