ಇಂದಿನಿಂದಲೇ ದೇಶದ ಪ್ರಮುಖ 8 ನಗರಗಳಲ್ಲಿ ಏರ್‌ಟೆಲ್‌ 5G ಸೇವೆ ಪ್ರಾರಂಭ!

|

ಇಂದಿನಿಂದ ಏರ್‌ಟೆಲ್‌ ಟೆಲಿಕಾಂ ಭಾರತದಲ್ಲಿ 5G ಸೇವೆಗಳನ್ನು ಪ್ರಾರಂಭಿಸಿದೆ. ಈ ಮೂಲಕ ಭಾರತದಲ್ಲಿ ಮೊದಲ ಭಾರಿಗೆ 5G ಸೇವೆಗಳನ್ನು ನೀಡುವುದಕ್ಕೆ ಮುಂದಾಗಿದೆ. ಇಂದಿನಿಂದ ಪ್ರಾರಂಭವಾಗಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ 2022 ಸಮಾರಂಭದಲ್ಲಿ ಪ್ರಧಾನಿ ಮೋದಿ ಅಧಿಕೃತವಾಗಿ 5G ಸೇವೆಗೆ ಚಾಲನೆ ನೀಡಿದ್ದಾರೆ. ಇನ್ನು ಇದೇ ಸಮಾರಂಭದಲ್ಲಿ ಮಾತನಾಡಿದ ಏರ್‌ಟೆಲ್‌ನ ಅಧ್ಯಕ್ಷ ಸುನಿಲ್ ಮಿತ್ತಲ್ ಏರ್‌ಟೆಲ್‌ ಭಾರತದಲ್ಲಿ ಇಂದಿನಿಂದಲೇ 5G ಸೇವೆಗಳನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದ್ದಾರೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಟೆಲಿಕಾಂ ಭಾರತದಲ್ಲಿ ಜಿಯೋ ಟೆಲಿಕಾಂಗಿಂತ ಮೊದಲೇ 5G ಸೇವೆಗಳನ್ನು ಪ್ರಾರಂಭಿಸಿದ್ದಾರೆ. ಇಂದಿನಿಂದ ದೇಶದ ಕೆಲವು ಆಯ್ದ ನಗರಗಳಲ್ಲಿ ಏರ್‌ಟೆಲ್‌ 5G ಸೇವೆ ಲಭ್ಯವಾಗಲಿದೆ. ಮೊದಲ ಹಂತದಲ್ಲಿ ಸುಮಾರು 8 ನಗರಗಳಲ್ಲಿ ಲಭ್ಯವಿರುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ ಮುಂದಿನ ಮಾರ್ಚ್ 2024 ರ ವೇಳೆಗೆ ಭಾರತದ ಪ್ರತಿ ಮೂಲೆಗೂ 5G ಸೇವೆ ತಲುಪಿಸುವುದಾಗಿ ಏರ್‌ಟೆಲ್‌ ಹೇಳಿದೆ. ಹಾಗಾದ್ರೆ ಏರ್‌ಟೆಲ್‌ 5G ಸೇವೆ ಇಂದಿನಿಂದ ಎಲ್ಲೆಲ್ಲಿ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏರ್‌ಟೆಲ್‌

ಏರ್‌ಟೆಲ್‌ ಟೆಲಿಕಾಂ ಎಲ್ಲರಿಗಿಂತ ಮುಂಚಿತವಾಗಿಯೇ 5G ಸೇವೆಯನ್ನು ಪ್ರಾರಂಭಿಸಿದೆ. ಇಂದಿನಿಂದ ಅಧಿಕೃತವಾಗಿ ಭಾರತದ ಪ್ರಮುಖ ನಗರಗಳಲ್ಲಿ ಏರ್‌ಟೆಲ್‌ 5G ಸೇವೆ ಬಳಕೆಗೆ ಲಭ್ಯವಾಗುತ್ತಿದೆ. ಇದರಲ್ಲಿ ದೇಶದ ಪ್ರಮುಖ 8 ನಗರಗಳಲ್ಲಿ ಲಭ್ಯವಾಗಲಿದೆ ಎನ್ನಲಾಗಿದೆ. ಇದರಲ್ಲಿ ರಾಷ್ಟ್ರ ರಾಜಧಾನಿ ದೆಹಲಿ, ವಾರಣಾಸಿ, ಮುಂಬೈ, ಬೆಂಗಳೂರು ನಗರಗಳು ಇಂದಿನಿಂದ ಏರ್‌ಟೆಲ್ 5G ಸೇವೆಗಳನ್ನು ಪಡೆಯಲಿವೆ ಎಂದು ಮಿತ್ತಲ್ ಖಚಿತಪಡಿಸಿದ್ದಾರೆ.

ಭಾರತದಲ್ಲಿ 5G

ಭಾರತದಲ್ಲಿ 5G ಸೇವೆಯನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದ ಮೊದಲ ಟೆಲಿಕಾಂ ಕಂಪೆನಿ ಏರ್‌ಟೆಲ್‌ ಆಗಿದೆ. ಏರ್‌ಟೆಲ್ 5G ಈಗ ಕನಿಷ್ಠ ಎಂಟು ನಗರಗಳಲ್ಲಿ ಲಭ್ಯವಿದೆ ಆದರೂ, 5G ಲಭ್ಯತೆಯು ಆಯ್ದ ಸ್ಥಳಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಅಂದರೆ ಏರ್‌ಟೆಲ್‌ 5G ಸೇವೆ ಲಭ್ಯವಿರುವ ಪ್ರಮುಖ ನಗರಗಳಲ್ಲಿ ಇಂದಿನಿಂದಲೇ ಎಲ್ಲಾ ಗ್ರಾಹಕರು 5G ಸೇವೆ ಬಳಸಲು ಸಾಧ್ಯವಿಲ್ಲ. ನಗರ ಪ್ರದೇಶದಲ್ಲಿ ಕೆಲವೇ ಕೆಲ ಮಂದಿಗೆ ಇಂದು 5G ಸೇವೆ ಲಭ್ಯವಾಗುವ ಸಾಧ್ಯತೆಯಿದೆ. ನಗರ ಪ್ರದೇಶದ ಹೆಚ್ಚಿನ ಸ್ಥಳಗಳಿಗೆ 5G ಸೇವೆಗಳ ವ್ಯಾಪ್ತಿಯನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವ ನಿರೀಕ್ಷೆಯಿದೆ.

ಏರ್‌ಟೆಲ್‌ 5G ಲಭ್ಯವಿರುವ ಪ್ರದೇಶಗಳು!

ಏರ್‌ಟೆಲ್‌ 5G ಲಭ್ಯವಿರುವ ಪ್ರದೇಶಗಳು!

ಏರ್‌ಟೆಲ್‌ ಟೆಲಿಕಾಂ ತನ್ನ 5G ಸೇವೆ ದೇಶದ ಪ್ರಮುಖ ಎಂಟು ನಗರಗಳ್ಲಿ ಇಂದಿನಿಂದ ಲಬ್ಯವಿದೆ ಎಂದು ಘೋಷಣೆ ಮಾಡಿದೆ. ಆದರೆ ಎಂಟು ನಗರ ಪ್ರದೇಶಗಳ ಹೆಸರನ್ನು ಇನ್ನು ಕೂಡ ಬಹಿರಂಗಪಡಿಸಿಲ್ಲ. ಈ ನಗರ ಪ್ರದೇಶಗಳು ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆ ನಗರ ಇರಬಹುದು ಎಂದು ಊಹಿಸಲಾಗಿದೆ.

ರಿಲಯನ್ಸ್

ಇನ್ನು ಇದೇ ಸಮಾರಂಭದಲ್ಲಿ ರಿಲಯನ್ಸ್ ಜಿಯೋ ಮುಖ್ಯಸ್ಥ ಮುಖೇಶ್‌ ಅಂಬಾನಿ ಕೂಡ ಮಾತನಾಡಿದ್ದಾರೆ. ಜಿಯೋ 5G ರೋಲ್‌ಔಟ್‌ ಬಗ್ಗೆ ನಿಖರವಾದ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಆದರೆ ದೀಪಾವಳಿ ಸಮಯದಲ್ಲಿ 5G ಸೇವೆ ಲಭ್ಯವಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಡಿಸೆಂಬರ್ 2023 ರೊಳಗೆ ಭಾರತದ ಪ್ರತಿಯೊಂದು ಭಾಗಕ್ಕೂ 5G ತಂತ್ರಜ್ಞಾನವನ್ನು ನೀಡುವ ಗುರಿಯನ್ನು ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ. ಅಂದರೆ ಏರ್‌ಟೆಲ್‌ ಟೆಲಿಕಾಂ ಇಂದಿನಿಂದಲೇ 5G ಸೇವೆ ಪ್ರಾರಂಭಿಸಿದರೂ ಕೂಡ ಇಡೇ ದೇಶದ ಮೂಲೆ ಮೂಲೆಗೆ 5G ಸೇವೆಯನ್ನು ಮೊದಲಿಗೆ ನೀಡುವ ಗುರಿಯನ್ನು ಜಿಯೋ ಟೆಲಿಕಾಂ ಹೊಂದಿದೆ.

Best Mobiles in India

English summary
Airtel launched 5g network in these 8 cities from today

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X