ಏರ್‌ಟೆಲ್‌ ನಡೆಗೆ ಟೆಲಿಕಾಂ ವಲಯವೇ ಶಾಕ್‌! ಇಂಥಾ ಪ್ಲಾನ್‌ ಯಾರು ನಿರೀಕ್ಷೆ ಮಾಡಿರಲಿಲ್ಲ!

|

ಭಾರತದ ಜನಪ್ರಿಯ ಟೆಲಿಕಾಂ ಕಂಪೆನಿಗಳಲ್ಲ ಒಂದಾದ ಏರ್‌ಟೆಲ್‌ ತನ್ನ ಗ್ರಾಹಕರಿಗೆ ಗುಡ್‌ನ್ಯೂಸ್‌ ನೀಡಿದೆ. ದೇಶ ವಿದೇಶ ಸುತ್ತುವ ಗ್ರಾಹಕರಿಗಾಗಿ ವರ್ಲ್ಡ್‌ ಪಾಸ್‌ ಡೇಟಾ ರೋಮಿಂಗ್‌ ಪ್ಯಾಕ್‌ ಅನ್ನು ಪರಿಚಯಿಸಿದೆ. ಇದು ಟ್ರಾವೆಲರ್‌ ಡೇಟಾ ರೋಮಿಂಗ್‌ ಪ್ಯಾಕ್‌ ಆಗಿದ್ದು, 184 ದೇಶಗಳಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಏರ್‌ಟೆಲ್‌ ವರ್ಲ್ಡ್‌ ಪಾಸ್‌ ಡೇಟಾ ಪ್ಯಾಕ್‌ ಪೊಸ್ಟ್‌ಪೇಯ್ಡ್‌ ಮತ್ತು ಪ್ರಿಪೇಯ್ಡ್‌ ಆಯ್ಕೆಗಳಿಗೆ 100 ನಿಮಿಷಗಳ ಕರೆಯೊಂದಿಗೆ ಅನ್‌ಲಿಮಿಟೆಡ್‌ ಡೇಟಾ ಸೇವೆ ನೀಡಲಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಹೊಸದಾಗಿ ವರ್ಲ್ಡ್‌ ಪಾಸ್‌ ಡೇಟಾ ರೋಮಿಂಗ್‌ ಪ್ಯಾಕ್‌ ಬಿಡುಗಡೆ ಮಾಡಿದೆ. ಇದು 649ರೂ.ಗಳಿಂದ ಪ್ರಾರಂಭವಾಗಲಿದೆ. ಅಲ್ಲದೆ 14,999ರೂ. ಬೆಲೆಯಲ್ಲಿ ಇದರಲ್ಲಿ ಅನ್‌ಲಿಮಿಟೆಡ್‌ ಡೇಟಾ ಹಾಗೂ 3,000 ನಿಮಿಷಗಳ ಕರೆ ಪ್ರಯೋಜನ ನೀಡುವ ಪೋಸ್ಟ್‌ಪೇಯ್ಡ್‌ ಪ್ಲಾನ್‌ ಕೂಡ ಸೇರಿದೆ. ಇದರಿಂದ ದೇಶ ವಿದೇಶ ಸುತ್ತುವ ಗ್ರಾಹಕರು ಭಾರಿ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಹಾಗಾದ್ರೆ ಏರ್‌ಟೆಲ್‌ ಪರಿಚಯಿಸಿರುವ ಹೊಸ ವರ್ಲ್ಡ್‌ ಪಾಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಏನಿದು ಏರ್‌ಟೆಲ್‌ 'ವರ್ಲ್ಡ್ ಪಾಸ್' ಪ್ಯಾಕ್‌!

ಏನಿದು ಏರ್‌ಟೆಲ್‌ 'ವರ್ಲ್ಡ್ ಪಾಸ್' ಪ್ಯಾಕ್‌!

ಏರ್‌ಟೆಲ್‌ ವರ್ಲ್ಡ್‌ ಟ್ರಾವೆಲರ್‌ಗಳಿಗಾಗಿ ಪರಿಚಯಿಸಿರುವ ರೋಮಿಂಗ್‌ ಪ್ಯಾಕ್‌ ಇದಾಗಿದೆ. ಇದು ಏರ್‌ಟೆಲ್‌ ಗ್ರಾಹಕರು ದೇಶ ವಿದೇಶದಲ್ಲಿರುವಾಗ ಉಪಯೋಗಕ್ಕೆ ಬರಲಿದೆ. ಇದು 184 ದೇಶಗಳಲ್ಲಿ ಕಾರ್ಯನಿರ್ವಹಿಸಲಿದ್ದು, ಗ್ರಾಹಕರಿಗೆ ಸಾಕಷ್ಟು ಅನುಕೂಲಕಾರಿಯಾಗಿದೆ. ಈ ಪ್ಯಾಕ್‌ ಪ್ರಿಪೇಯ್ಡ್‌ ಮತ್ತು ಪೋಸ್ಟ್‌ಪೇಯ್ಡ್‌ ಎರಡು ಆಯ್ಕೆಗಳಲ್ಲಿ ಕೂಡ ಲಭ್ಯವಾಗಲಿದೆ. ಇದಲ್ಲದೆ ಈ ಪ್ಯಾಕ್ ಭತ್ಯೆ ಮುಗಿದ ನಂತರ ತುರ್ತು ಡೇಟಾ ಬಳಕೆ ಮಾಡುವುದಕ್ಕೆ ಕೂಡ ಇದು ಅನುಮತಿಸುತ್ತದೆ ಎಂದು ಭಾರ್ತಿ ಏರ್‌ಟೆಲ್‌ನ ಗ್ರಾಹಕ ವ್ಯವಹಾರದ ನಿರ್ದೇಶಕ ಶಾಶ್ವತ್ ಶರ್ಮಾ ಹೇಳಿದ್ದಾರೆ.

ಪಾಸ್‌

ಈ ವರ್ಲ್ಡ್‌ ಪಾಸ್‌ ಪ್ಲಾನ್‌ನಿಂದಾಗಿ ಏರ್‌ಟೆಲ್‌ ಬಳಕೆದಾರರು ಅನೇಕ ದೇಶಗಳಲ್ಲಿ ಮಲ್ಟಿ ಪ್ಯಾಕ್‌ಗಳನ್ನು ಖರೀದಿಸಬೇಕಾದ ಅಗತ್ಯವಿರುವುದಿಲ್ಲ ಎಂದು ಏರ್‌ಟೆಲ್‌ ಹೇಳಿಕೊಂಡಿದೆ. ಜೊತೆಗೆ ಏರ್‌ಟೆಲ್ 'ವರ್ಲ್ಡ್ ಪಾಸ್' ಪ್ರಪಂಚದ ಯಾವುದೇ ಮೂಲೆಯಿಂದ 24X7 ಕಾಲ್ ಸೆಂಟರ್ ಬೆಂಬಲವನ್ನು ಉಚಿತವಾಗಿ ನೀಡುತ್ತದೆ. ಇದು ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಸುವ ಗ್ರಾಹಕರಿಗೆ ಮೀಸಲಾದ ಸಂಖ್ಯೆ 99100-99100 ಮೂಲಕ ಲಭ್ಯವಾಗಲಿದೆ. ಇನ್ನು ಹೆಚ್ಚುವರಿಯಾಗಿ, ಗ್ರಾಹಕರು ತುರ್ತು ಬಳಕೆಗಾಗಿ ಅನಿಯಮಿತ ಡೇಟಾವನ್ನು ಸಹ ಪಡೆಯಬಹುದಾಗಿದೆ.

ಏರ್‌ಟೆಲ್‌

ಇನ್ನು ಏರ್‌ಟೆಲ್‌ ವರ್ಲ್ಡ್‌ ಪಾಸ್‌ ಪ್ಯಾಕ್‌ ಸಂಪೂರ್ಣ ಅಂತರರಾಷ್ಟ್ರೀಯ ರೋಮಿಂಗ್ ಅಗತ್ಯಗಳನ್ನು ನಿರ್ವಹಿಸಲಿದೆ. ಇದನ್ನು ನೀವು ಏರ್‌ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್‌ ಮೂಲಕ ಪಡೆದುಕೊಳ್ಳಬಹುದು. ಇದರ ಬಳಕೆ, ಬಿಲ್ಲಿಂಗ್ ಮೊತ್ತ ಅಥವಾ ಡೇಟಾ ಅಥವಾ ನಿಮಿಷಗಳ ಅಗತ್ಯಕ್ಕೆ ಅನುಗುಣವಾಗಿ ರಿಯಲ್‌ ಟೈಂ ಅಪ್ಡೇಟ್‌ಗಳನ್ನು ಪಡೆಯಲು ಇದು ಸಹಕಾರಿಯಾಗಲಿದೆ.

ಏರ್‌ಟೆಲ್ ವರ್ಲ್ಡ್ ಪಾಸ್ ಪ್ಲಾನ್‌ಗಳ ವಿವರ

ಏರ್‌ಟೆಲ್ ವರ್ಲ್ಡ್ ಪಾಸ್ ಪ್ಲಾನ್‌ಗಳ ವಿವರ

649ರೂ. ಪೋಸ್ಟ್‌ ಪೇಯ್ಡ್‌ ಪ್ಲಾನ್‌
ಈ ಪ್ಲಾನ್‌ ಕೇವಲ ಒಂದು ದಿನದ ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ ನೀವು 500MB ಹೈ ಸ್ಪೀಡ್‌ನಲ್ಲಿ ಅನ್‌ಲಿಮಿಟೆಡ್‌ ಡೇಟಾ ಪ್ರಯೋಜನ ಹಾಗೂ 100ನಿಮಿಷಗಳ ಕರೆ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.

2999ರೂ. ಪೋಸ್ಟ್‌ಪೇಯ್ಡ್‌ ಪ್ಲಾನ್‌
ಇದರಲ್ಲಿ 5GB ಹೈ ಸ್ಪೀಡ್‌ನಲ್ಲಿ ಅನ್‌ಲಿಮಿಟೆಡ್‌ ಡೇಟಾ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ 100 ನಿಮಿಷಗಳ ಕರೆ ಸೌಲಭ್ಯವನ್ನು ಪಡೆಯಬಹುದು. ಇದು ನಿಮಗೆ 10 ದಿನಗಳ ಮಾನ್ಯತೆಯನ್ನು ನೀಡಲಿದೆ.

3999ರೂ. ಪೋಸ್ಟ್‌ಪೇಯ್ಡ್‌ ಪ್ಲಾನ್‌
3999ರೂ. ಪೋಸ್ಟ್‌ಪೇಯ್ಡ್‌ ಪ್ಲಾನ್‌ ನಿಮಗೆ ಒಟ್ಟು 30 ದಿನಗಳ ಮಾನ್ಯತೆಯನ್ನು ನೀಡಲಿದೆ. ಈ ಪ್ಲಾನ್‌ನಲ್ಲಿ ನಿವು 12GB ಹೈ ಸ್ಪೀಡ್ ಬೆಂಬಲಿಸುವ ಅನ್‌ಲಿಮಿಟೆಡ್‌ ಡೇಟಾ ಪ್ರಯೋಜನ ಪಡೆಯಬಹುದು. ಇದು ನಿಮಗೆ 100 ನಿಮಿಷಗಳ ಕರೆ ಪ್ರಯೋಜನ ಕೂಡ ನೀಡಲಿದೆ.

5999ರೂ. ಪೋಸ್ಟ್‌ಪೇಯ್ಡ್‌ ಪ್ಲಾನ್‌
ಈ ಪ್ಲಾನ್‌ನಲ್ಲಿ ನಿಮಗೆ 2GB ಹೈ ಸ್ಪೀಡ್‌ನಲ್ಲಿ ಅನ್‌ಲಿಮಿಟೆಡ್‌ ಡೇಟಾ ಪ್ರಯೋಜನ ದೊರೆಯಲಿದೆ. ಇದು ಒಟ್ಟು 900 ನಿಮಿಷಗಳ ಕರೆ ಪ್ರಯೋಜನ ನೀಡಲಿದೆ. ಹಾಗೆಯೇ 90ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ.

ಪ್ರಿಪೇಯ್ಡ್‌ ಪ್ಲಾನ್‌

649ರೂ ಪ್ರಿಪೇಯ್ಡ್‌ ಪ್ಲಾನ್‌
649ರೂ. ಬೆಲೆಯ ಪ್ರಿಪೇಯ್ಡ್‌ ಪ್ಲಾನ್‌ ಒಂದು ದಿನದ ಮಾನ್ಯತೆಯಲ್ಲಿ ಬರಲಿದೆ. ಈ ಪ್ಲಾನ್‌ನಲ್ಲಿ ನೀವು 500MB ಡೇಟಾ ಪ್ರಯೋಜನ ಪಡೆಯಬಹುದು. ಜೊತೆಗೆ 100ನಿಮಿಷಗಳ ಕರೆ ಸೌಲಭ್ಯ ದೊರೆಯಲಿದೆ.

899ರೂ. ಪ್ರಿಪೇಯ್ಡ್‌ ಪ್ಲಾನ್
899ರೂ. ಪ್ರಿಪೇಯ್ಡ್‌ ಪ್ಲಾನ್ 1GB ಡೇಟಾ ಹಾಗೂ 100ನಿಮಿಷಗಳ ಕರೆ ಪ್ರಯೋಜನ ನೀಡಲಿದೆ. ಇದು ಒಟ್ಟು 10ದಿನಗಳ ಮಾನ್ಯತೆಯನ್ನು ಪಡೆದಿದೆ.

2998ರೂ. ಪ್ರಿಪೇಯ್ಡ್‌ ಪ್ಲಾನ್
2998ರೂ. ಪ್ರಿಪೇಯ್ಡ್‌ ಪ್ಲಾನ್ ನಿಮಗೆ 30 ಮೂವತ್ತು ದಿನಗಳ ಮಾನ್ಯತೆ ನೀಡಲಿದೆ. ಇದರಲ್ಲಿ 5GB ಡೇಟಾ ಹಾಗೂ 200 ನಿಮಿಷಗಳ ಕರೆ ಪ್ರಯೋಜನ ದೊರೆಯಲಿದೆ.

2997ರೂ. ಪ್ರಿಪೇಯ್ಡ್‌ ಪ್ಲಾನ್
2997ರೂ. ಪ್ರಿಪೇಯ್ಡ್‌ ಪ್ಲಾನ್ ನಿಮಗೆ ಒಟ್ಟು 2GBಡೇಟಾ ಹಾಗೂ 100ನಿಮಿಷಗಳ ಕರೆ ಪ್ರಯೋಜನವನ್ನು ನೀಡಲಿದೆ. ಇದು ಒಟ್ಟು 365 ದಿನಗಳ ಮಾನ್ಯತೆಯನ್ನು ಒಳಗೊಂಡಿದೆ.

Best Mobiles in India

Read more about:
English summary
Airtel launched ‘World Pass’ pack in India: Plan details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X