ಅರಮನೆ ನಗರಿ ಮೈಸೂರಲ್ಲೂ ಇನ್ನು ಏರ್‌ಟೆಲ್ 4ಜಿ ಹವಾ

By Shwetha
|

ಏಷ್ಯಾ ಮತ್ತು ಆಫ್ರಿಕಾ ಸೇರಿದಂತೆ 20 ದೇಶಗಳಲ್ಲಿ ತನ್ನ ಸಂಸ್ಥೆಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿರುವ ಭಾರತಿ ಏರ್‌ಟೆಲ್ ಲಿಮಿಟೆಡ್ ಏರ್‌ಟೆಲ್ 4ಜಿ ಸೇವೆಯನ್ನು ಮೈಸೂರಿನಲ್ಲಿ ಘೋಷಿಸಿದೆ. 4ಜಿ ವ್ಯವಸ್ಥೆಯೊಂದಿಗೆ ಹೆಚ್ಚು ಸುಧಾರಿತ ಇಂಟರ್ನೆಟ್ ಅನುಭವವನ್ನು ಮೈಸೂರಿನ ಜನರು ಏರ್‌ಟೆಲ್ ಮೂಲಕ ಪಡೆದುಕೊಳ್ಳಬಹುದಾಗಿದೆ.

ಓದಿರಿ: ದುಬಾರಿ ಫೋನ್ಸ್ ಮೇಲೆ ಫ್ಲಿಪ್‌ಕಾರ್ಟ್ ವಿನಾಯಿತಿ ಕೊಡುಗೆ

ಅರಮನೆ ನಗರಿ ಮೈಸೂರಲ್ಲೂ ಇನ್ನು ಏರ್‌ಟೆಲ್ 4ಜಿ ಹವಾ

ಇನ್ನು ಮೈಸೂರಿನ ಏರ್‌ಟೆಲ್ ಗ್ರಾಹಕರು 3ಜಿ ಬೆಲೆಯಲ್ಲಿ 4ಜಿ ವ್ಯವಸ್ಥೆಯನ್ನು ಅನುಭವಿಸಬಹುದಾಗಿದ್ದು ಏರ್‌ಟೆಲ್ 4ಜಿ ವೇಗದ ಅನನ್ಯತೆಯನ್ನು ಅವರು ಪಡೆದುಕೊಳ್ಳಲಿದ್ದಾರೆ. ಯಾವುದೇ ಬಫರಿಂಗ್ ತೊಂದರೆಯಿಲ್ಲದೆ ವೀಡಿಯೋ ಸ್ಟ್ರೀಮಿಂಗ್ ಅನ್ನು ಏರ್‌ಟೆಲ್ 4ಜಿ ಅಡಿಯಲ್ಲಿ ಬಳೆಕೆದಾರರು ಪಡೆದುಕೊಳ್ಳಬಹುದಾಗಿದ್ದು 30 ನಿಮಿಷಗಳಲ್ಲಿ 10 ಸಿನಿಮಾಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು, 5 ನಿಮಿಷಗಳಲ್ಲಿ ಸಂಪೂರ್ಣ ಫೋಟೋ ಆಲ್ಬಮ್ ಅನ್ನು ಅಪ್‌ಲೋಡ್ ಮಾಡುವುದು ಮತ್ತು ಬಹು ಡಿವೈಸ್‌ಗಳನ್ನು ಸಂಪರ್ಕಿಸುವುದು ಇವೇ ಮೊದಲಾದ ಕಾರ್ಯಗಳನ್ನು 4ಜಿ ನೆರವಿನೊಂದಿಗೆ ಏರ್‌ಟೆಲ್ ಗ್ರಾಹಕರು ಮಾಡಬಹುದಾಗಿದೆ.

ಓದಿರಿ: 90 ರ ಟೆಕ್ ಲೋಕಕ್ಕೆ ನಿಮಗಿದೋ ಸ್ವಾಗತ!!!

ಅರಮನೆ ನಗರಿ ಮೈಸೂರಲ್ಲೂ ಇನ್ನು ಏರ್‌ಟೆಲ್ 4ಜಿ ಹವಾ

ಇನ್ನು ಗ್ರಾಹಕರು 4ಜಿ ವ್ಯವಸ್ಥೆಯನ್ನು ಪಡೆದುಕೊಳ್ಳುವುದಕ್ಕಾಗಿ, ಮೈಸೂರಿನ ಯಾವುದೇ ಏರ್‌ಟೆಲ್ ಸ್ಟೋರ್‌ಗಳಿಗೆ ಹೋಗಬೇಕಾಗುತ್ತದೆ ಮತ್ತು 4ಜಿ ಸಿಮ್‌ಗೆ ಅಪ್‌ಗ್ರೇಡ್ ಮಾಡಬೇಕಾಗುತ್ತದೆ. ಇನ್ನು ಗ್ರಾಹಕರು www.airtel.in/4g ವೆಬ್‌ಸೈಟ್‌ಗೆ ಭೇಟಿ ನೀಡಿ ಅತ್ಯಾಧುನಿಕ 4ಜಿ ಸಿಮ್‌ಗೆ ಆರ್ಡರ್ ನೀಡಬಹುದು ಮತ್ತು ಪಡೆದುಕೊಳ್ಳಬಹುದಾಗಿದೆ.

ಅರಮನೆ ನಗರಿ ಮೈಸೂರಲ್ಲೂ ಇನ್ನು ಏರ್‌ಟೆಲ್ 4ಜಿ ಹವಾ

ಏರ್‌ಟೆಲ್ 4ಜಿ ಡೋಂಗಲ್, ಮೈಫೈ ಮೊದಲಾದ 4ಜಿ ಡಿವೈಸ್‌ಗಳಿಗೆ ಕೊಡುಗೆಯನ್ನು ಒದಗಿಸುತ್ತಿದೆ. ಇನ್ನು 4ಜಿ ಸಂಪರ್ಕವನ್ನು ಹೊಂದಿರುವ ಮೋಟೋರೋಲಾ ಮತ್ತು ಸ್ಯಾಮ್‌ಸಂಗ್‌ನೊಂದಿಗೆ ಏರ್‌ಟೆಲ್ ಪಾಲುದಾರಿಕೆಯನ್ನು ಪಡೆದುಕೊಂಡಿದೆ. ಇನ್ನು ಫ್ಲಿಪ್‌ಕಾರ್ಟ್‌ನಿಂದ ಮೋಟೋ ಇ 4ಜಿ ಖರೀದಿ ಮಾಡಿದವರಿಗೆ ಏರ್‌ಟೆಲ್ ರೂ 500 ಕ್ಯಾಶ್ ಬ್ಯಾಕ್ ಕೊಡುಗೆಯನ್ನು ಒದಗಿಸುತ್ತಿದೆ.

ಏಪ್ರಿಲ್ 2012 ರಲ್ಲಿ ಏರ್‌ಟೆಲ್ ಭಾರತದ ಪ್ರಥಮ 4ಜಿ ಸೇವೆಯನ್ನು ಕೋಲ್ಕತ್ತಾದಲ್ಲಿ ಲಾಂಚ್ ಮಾಡಿತ್ತು. ದೆಹಲಿ, ಚೆನ್ನೈ, ಬೆಂಗಳೂರು, ಮಂಗಳೂರು, ಪುಣೆ, ಚಂಡೀಗಢ ಮತ್ತು ಅಮೃತಸರದಲ್ಲಿ 4ಜಿ ಸೇವೆ ಇದೀಗ ಲಭ್ಯವಿದೆ.

Best Mobiles in India

English summary
Airtel launches 4G services in Mysore Offers Airtel customers in the city complimentary upgrade to 4G at 3G prices.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X