ಏರ್‌ಟೆಲ್‌ನಿಂದ ಅಗ್ಗದ ಹೊಸ ರೀಚಾರ್ಜ್‌ ಪ್ಲ್ಯಾನ್ಸ್‌ ಲಾಂಚ್ ; 28 ದಿನಗಳ ವ್ಯಾಲಿಡಿಟಿ!

|

ಟೆಲಿಕಾಂ ಕ್ಷೇತ್ರಕ್ಕೆ ರಿಲಾಯನ್ಸ್ ಜಿಯೋ ನೆಟವರ್ಕ್‌ ಎಂಟ್ರಿ ಕೊಟ್ಟಾಗಿನಿಂದ, ಭಾರಿ ದರ ಸಮರ ಶುರುವಾಗಿದ್ದು, ಏರ್‌ಟೆಲ್, ವೊಡಾಫೋನ್‌ಗಳು ಸಹ ಅಗ್ಗದ ಬೆಲೆಯಲ್ಲಿ ಹೊಸ ಪ್ಲ್ಯಾನ್‌ಗಳನ್ನು ಬಳಕೆದಾರರಿಗೆ ಪರಿಚಯಿಸುತ್ತಲಿವೆ. ಪೈಪೋಟಿ ಜೋರಾಗಿಯೇ ಇದ್ದು, ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಟೆಲಿಕಾಂ ಕಂಪನಿಗಳು ಸರ್ಕಸ್ ನಡೆಸುತ್ತಿವೆ. ಈ ನಿಟ್ಟಿನಲ್ಲಿ ಇದೀಗ ಏರ್‌ಟೆಲ್ ಹೊಸ ಪ್ಲ್ಯಾನ್‌ಗಳನ್ನು ಲಾಂಚ್ ಮಾಡಿದೆ.

ಏರ್‌ಟೆಲ್‌ನಿಂದ ಅಗ್ಗದ ಹೊಸ ರೀಚಾರ್ಜ್‌ ಪ್ಲ್ಯಾನ್ಸ್‌ ; 28 ದಿನಗಳ ವ್ಯಾಲಿಡಿಟಿ!

ಹೌದು, ಏರ್‌ಟೆಲ್‌ 48ರೂ, 98ರೂ, ಮತ್ತು 29ರೂ,ಗಳ ರೀಚಾರ್ಜ್‌ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದ್ದು, ಈ ಪ್ಲ್ಯಾನಗಳ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿವೆ. ಈ ರೀಚಾರ್ಜ್ ಪ್ಲ್ಯಾನ್‌ಗಳಲ್ಲಿ ಗ್ರಾಹಕರಿಗೆ ಉಚಿತ ಎಸ್‌ಎಮ್‌ಎಸ್‌ ಜೊತೆಗೆ ನಿಗದಿತ ಉಚಿತ ಡೇಟಾ ಬಳಕೆ ದೊರೆಯಲಿದ್ದು. ಈ ಮೂಲಕ ಕಂಪನಿಯು ಕಡಿಮೆ ಬೆಲೆಯಲ್ಲಿ ಹೆಚ್ಚು ವ್ಯಾಲಿಡಿಟಿಯನ್ನು ನಿರೀಕ್ಷಿಸುವ ಗ್ರಾಹಕರನ್ನು ಸೆಳೆಯಲು ಮುಂದಾಗಿದೆ.

ಏರ್‌ಟೆಲ್‌ನಿಂದ ಅಗ್ಗದ ಹೊಸ ರೀಚಾರ್ಜ್‌ ಪ್ಲ್ಯಾನ್ಸ್‌ ; 28 ದಿನಗಳ ವ್ಯಾಲಿಡಿಟಿ!

ಪ್ರಸ್ತುತ ಬಹುತೇಕ ರೀಚಾರ್ಜ್‌ ಪ್ಲ್ಯಾನ್‌ಗಳು ಹೆಚ್ಚಿನ ದರದಲ್ಲಿದ್ದು, ಪ್ರತಿ ದಿನ 1GB ಉಚಿತ ಡೇಟಾ ನೀಡುತ್ತಿವೆ. ಆದರೆ ಕೇಲವು ಬಳಕೆದಾರರು ಪ್ರತಿದಿನ 1GB ಡೇಟಾವನ್ನು ಬಳಸುವುದಿಲ್ಲ ಬದಲಾಗಿ ಕಡಿಮೆ ದರಕ್ಕೆ ಹೆಚ್ಚಿನ ವ್ಯಾಲಿಡಿಟಿ ನಿರೀಕ್ಷಿಸುತ್ತಿರುತ್ತಾರೆ ಅಂಥ ಗ್ರಾಹಕರಿಗೆ ಈ ಪ್ಲ್ಯಾನ್‌ ಸೂಕ್ತ. ಹಾಗಾದರೇ ಏರ್‌ಟೆಲ್ ಕಂಪನಿಯ ಪರಿಚಯಿಸಿರುವ ಹೊಸ ಪ್ಲ್ಯಾನ್‌ಗಳ ಆಫರ್‌ ಏನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

48ರೂ. ಪ್ರೀಪೇಡ್‌ ಪ್ಲ್ಯಾನ್

48ರೂ. ಪ್ರೀಪೇಡ್‌ ಪ್ಲ್ಯಾನ್

ಈ ಪ್ಲ್ಯಾನ್ ಒಟ್ಟು 3GB ಉಚಿತ ಡೇಟಾವನ್ನು ಒಳಗೊಂಡಿದ್ದು, 3G ಅಥವಾ 4G ನೆಟ್‌ವರ್ಕ್‌ನಲ್ಲಿ ಡೇಟಾ ಬಳಸಬಹುದಾಗಿದೆ. 28 ದಿನಗಳ ವ್ಯಾಲಿಡಿಟಿಯಲ್ಲಿ ದೊರೆಯಲಿದ್ದು, ಇದರಲ್ಲಿ ಯಾವುದೇ ಉಚಿತ ಎಸ್‌ಎಮ್‌ಎಸ್‌ ನೀಡಿಲ್ಲ. ಕಂಪನಿಯ ಪ್ರೀಪೇಡ್‌ ಬಳಕೆದಾರರು ಈ ಪ್ಲ್ಯಾನ್‌ ರೀಚಾರ್ಜ್‌ ಮಾಡಿಕೊಳ್ಳಬಹುದಾಗಿದೆ.

98ರೂ. ಪ್ರೀಪೇಡ್‌ ಪ್ಲ್ಯಾನ್

98ರೂ. ಪ್ರೀಪೇಡ್‌ ಪ್ಲ್ಯಾನ್

ಏರ್‌ಟೆಲ್‌ನ ಈ ಪ್ಲ್ಯಾನ್ ಒಟ್ಟು 6GB ಉಚಿತ ಡೇಟಾವನ್ನು ಒಳಗೊಂಡಿದ್ದು, 3G ಅಥವಾ 4G ನೆಟ್‌ವರ್ಕ್‌ನಲ್ಲಿ ಡೇಟಾ ಬಳಸಬಹುದಾಗಿದೆ. ಇದು ಸಹ 28 ದಿನಗಳ ವ್ಯಾಲಿಡಿಟಿಯಲ್ಲಿ ದೊರೆಯಲಿದ್ದು, ಪ್ರತಿ ದಿನ 10 ಉಚಿತ ಎಸ್‌ಎಮ್‌ಎಸ್‌ ಮಾಡಬಹುದಾಗಿದೆ. ಕಂಪನಿಯ ಪ್ರೀಪೇಡ್‌ ಬಳಕೆದಾರರು ಈ ರೀಚಾರ್ಜ್‌ನ ಪ್ರಯೋಜನ ಪಡೆಯಬಹುದಾಗಿದೆ.

29ರೂ. ಪ್ರೀಪೇಡ್‌ ಪ್ಲ್ಯಾನ್

29ರೂ. ಪ್ರೀಪೇಡ್‌ ಪ್ಲ್ಯಾನ್

ಏರ್‌ಟೆಲ್‌ನ ಈ ಪ್ಲ್ಯಾನಿನಲ್ಲಿ ಕೇವಲ 520MB ಉಚಿತ ಡೇಟಾವನ್ನು ನೀಡಲಾಗಿದ್ದು, 3G ಅಥವಾ 4G ನೆಟ್‌ವರ್ಕ್‌ನಲ್ಲಿ ಡೇಟಾ ಬಳಸಬಹುದಾಗಿದೆ. ಇದು ಸಹ 28 ದಿನಗಳ ವ್ಯಾಲಿಡಿಟಿಯಲ್ಲಿ ದೊರೆಯಲಿದ್ದು, ಆದರೆ ಯಾವುದೇ ಉಚಿತ ಎಸ್‌ಎಮ್‌ಎಸ್‌ ಸೇವೆಯನ್ನು ಒದಗಿಸಿಲ್ಲ. ಕಂಪನಿಯ ಪ್ರೀಪೇಡ್‌ ಬಳಕೆದಾರರು ಈ ರೀಚಾರ್ಜ್‌ನ ಪ್ರಯೋಜನ ಪಡೆಯಬಹುದಾಗಿದೆ.

ವ್ಯಾಲಿಡಿಟಿ ಪ್ರೀಯರಿಗೆ ಬೆಸ್ಟ್

ವ್ಯಾಲಿಡಿಟಿ ಪ್ರೀಯರಿಗೆ ಬೆಸ್ಟ್

ಹೆಚ್ಚಿನ ಬಳಕೆದಾರರು ಅಧಿಕ ಉಚಿತ ಡೇಟಾಗಳಿರುವ ರೀಚಾರ್ಜ್‌ ಪ್ಲ್ಯಾನ್‌ಗಳತ್ತ ಆಕರ್ಷಿಸುತ್ತಾರೆ ಆದರೆ ಇನ್ನೂ ಕೇಲವು ಗ್ರಾಹಕರು ಹೆಚ್ಚಿನ ಡೇಟಾವನ್ನು ಬಳಸುವುದೇ ಇಲ್ಲ. ಹೀಗಾಗಿ ಏರ್‌ಟೆಲ್‌ ಕಂಪನಿಯು ಅಗ್ಗದ ಬೆಲೆಯಲ್ಲಿ ಹೆಚ್ಚಿನ ವ್ಯಾಲಿಡಿಟಿ ನಿರೀಕ್ಷಿಸುವ ಬಳಕೆದಾರರಿಗಾಗಿ ಈ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.

ಓದಿರಿ : ಐಫೋನಿನಲ್ಲಿ ಬ್ಯಾಕ್‌ ಅಪ್ ಸ್ಟೋರೇಜ್ ಹೇಗೆ ಮಾಡುವುದು ಗೊತ್ತಾ? ಓದಿರಿ : ಐಫೋನಿನಲ್ಲಿ ಬ್ಯಾಕ್‌ ಅಪ್ ಸ್ಟೋರೇಜ್ ಹೇಗೆ ಮಾಡುವುದು ಗೊತ್ತಾ?

Best Mobiles in India

English summary
Airtel offers new ₹48 and ₹98 prepaid plans with 28 days validity.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X