ಏರ್ ಟೆಲ್ ನಲ್ಲಿ ಡೌನ್ ಪೇಮೆಂಟ್ ಮಾಡಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 10 ಮತ್ತು ಗ್ಯಾಲಕ್ಸಿ ಎಸ್10+ ಫೋನ್ ಖರೀದಿಸಿ

By Gizbot Bureau
|

ಸ್ಯಾನ್ ಫ್ರ್ಯಾನ್ಸಿಸ್ಕೋದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಸ್ಯಾಮ್ ಸಂಗ್ ಸಂಸ್ಥೆ ತನ್ನ 2019 ರ ಸರಣಿ ಫೋನ್ ಗ್ಯಾಲಕ್ಸಿ ಎಸ್ 10 ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆಗೊಳಿಸಿದೆ. ಈ ಹೊಸ ಸರಣಿಯಲ್ಲಿ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10, ಗ್ಯಾಲಕ್ಸಿ ಎಸ್10+ ಮತ್ತು ಕೈಗೆಟುಕುವ ಬೆಲೆಯ ಗ್ಯಾಲಕ್ಸಿ ಎಸ್10ಇ ಕೂಡ ಸೇರಿದೆ.

ಏರ್ ಟೆಲ್ ನಲ್ಲಿ ಡೌನ್ ಪೇಮೆಂಟ್ ಮಾಡಿ ಸ್ಯಾಮ್ ಸಂಗ್ ಫೋನ್ ಖರೀದಿಸಿ

ಎಲ್ಲಾ ಮೂರು ಹ್ಯಾಂಡ್ ಸೆಟ್ ಗಳು ಭಾರತದಲ್ಲಿ ಇದೀಗ ಪ್ರೀ ಆರ್ಡರ್ ಮಾಡುವುದಕ್ಕೆ ಲಭ್ಯವಿದೆ. ಒಂದು ವೇಳೆ ನೀವು ಹೊಸ ಗ್ಯಾಲಕ್ಸಿ ಎಸ್10 ಅಥವಾ ಗ್ಯಾಲಕ್ಸಿ ಎಸ್10+ ಸ್ಮಾರ್ಟ್ ಫೋನ್ ಗಳನ್ನು ಖರೀದಿಸುವ ಇರಾದೆ ಹೊಂದಿದ್ದರೆ ಏರ್ ಟೆಲ್ ನಲ್ಲಿ ಉತ್ತಮ ಆಫರ್ ಲಭ್ಯವಿದೆ.

ಹೊಸ ಪ್ರೀಮಿಯಂ ಸ್ಮಾರ್ಟ್ ಫೋನ್

ಹೊಸ ಪ್ರೀಮಿಯಂ ಸ್ಮಾರ್ಟ್ ಫೋನ್

ಹೊಸ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳಿಗೆ ಏರ್ ಟೆಲ್ ಆನ್ ಲೈನ್ ಸ್ಟೋರ್ ನಲ್ಲಿ ಖರೀದಿದಾರರಿಗಾಗಿ ಉತ್ತಮ ಆಫರ್ ಗಳು, ಇಎಂಐ ಆಯ್ಕೆಗಳು, ಡೌನ್ ಪೇಮೆಂಟ್ ಆಯ್ಕೆಗಳು ಮತ್ತು ಇನ್ಸೆಂಟ್ ಫೈನಾನ್ಸಿಂಗ್ ಸೌಲಭ್ಯವು ಲಭ್ಯವಿದೆ. ಇದರ ಜೊತೆಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಸ್ಮಾರ್ಟ್ ಫೋನ್ ಗಳ ಜೊತೆಗೆ ಏರ್ ಟೆಲ್ ನ ಬಿಲ್ಟ್ ಇನ್ ಪೋಸ್ಟ್ ಪೇಯ್ಡ್ ಪ್ಲಾನ್ ಕೂಡ ಲಭ್ಯವಿರುತ್ತದೆ. ಇದರಲ್ಲಿ ಅನಿಯಮಿತ ಕರೆಗಳ ಬೆನಿಫಿಟ್ ಜೊತೆಗೆ 100ಜಿಬಿ ಡಾಟಾ ಮತ್ತು ಅನಿಯಮಿತ ವಾಯ್ಸ್ ಕರೆಗಳ- ಸ್ಥಳೀಯ ಮತ್ತು STD ಸೌಲಭ್ಯವೂ ಕೂಡ ಲಭ್ಯವಿರುತ್ತದೆ.ಇದರ ಜೊತೆಗೆ ಖರೀದಿದಾರರಿಗೆ ಅಮೇಜಾನ್ ಪ್ರೈಮ್ ಚಂದಾದಾರಿಕೆ ಒಂದು ವರ್ಷದ ಅವಧಿಗೆ ಉಚಿತವಾಗಿರುತ್ತದೆ ಅಷ್ಟೇ ಯಾಕೆ ಮೂರು ತಿಂಗಳ ಅವಧಿಯ ಅಂದರೆ 1500 ರೂಪಾಯಿ ಬೆಲೆಬಾಳುವ ನೆಟ್ ಫ್ಲಿಕ್ಸ್ ಚಂದಾದಾರಿಕೆ ಕೂಡ ಇರುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10+ ಗೆ ಆಫರ್ ಗಳು

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10+ ಗೆ ಆಫರ್ ಗಳು

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10+ ಡೌನ್ ಪೇಮೆಂಟ್ ಆಯ್ಕೆಯಲ್ಲಿ ಲಭ್ಯವಿದ್ದು ನೀವು Rs 15,799 ನ್ನು ಏರ್ ಟೆಲ್ ಆನ್ ಲೈನ್ ಸ್ಟೋರ್ ನಲ್ಲಿ ಪಾವತಿಸುವ ಮೂಲಕ ಖರೀದಿಸಬಹುದು. ಇದರ ಆರಂಭಿಕ ಬೆಲೆ Rs 73,900. ಇಎಂಐ ಪ್ಲಾನ್ ನಲ್ಲಿ ಖರೀದಿಸುವುದಾದರೆ ಆರಂಭಿಕ ಬೆಲೆ Rs 2,999 ಆಗಿದ್ದು 24 ತಿಂಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಗೆ ಆಫರ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ಗೆ ಆಫರ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್10 ನ ಭಾರತೀಯ ಆರಂಭಿಕ ಬೆಲೆ Rs 66,900.ಇದನ್ನ ನೀವು 9,099 ರುಪಾಯಿ ಡೌನ್ ಪೇಮೆಂಟ್ ಮಾಡಿ ಖರೀದಿಸಬಹುದು. ಇದಕ್ಕೆ 24 ತಿಂಗಳ ಇಎಂಐ ಆಯ್ಕೆ ಇದ್ದು ಪ್ರತಿ ತಿಂಗಳು 2,999 ರುಪಾಯಿ ಪಾವತಿಸಬೇಕಾಗುತ್ತದೆ.

ಭಾರತೀ ಏರ್ ಟೆಲ್ ನ ಚೀಫ್ ಬ್ರಾಂಡ್ ಆಫೀಸರ್ ಮತ್ತು ಚೀಫ್ ಮಾರ್ಕೆಟಿಂಗ್ ಆಫೀಸರ್ ಆಗಿರುವ ಶುಶಾಂತ್ ಶರ್ಮಾ ತಮ್ಮ ಈ ಆಫರ್ ಬಗ್ಗೆ ಸಂತೋಷ ವ್ಯಕ್ತ ಪಡಿಸಿದ್ದು ಗ್ರಾಹಕರಿಗೆ 4ಜಿ ಸ್ಮಾರ್ಟ್ ಫೋನ್ ಗಳನ್ನು ಉತ್ತಮ ಆಯ್ಕೆಯಲ್ಲಿ ನೀಡುವ ಉದ್ದೇಶವನ್ನು ಹೊಂದಲಾಗಿದೆ ಮತ್ತು ಇದು ಮುಂದೆಯೂ ಮುಂದುವರಿಯುತ್ತದೆ ಎಂದು ತಿಳಿಸಿದ್ದಾರೆ.

Best Mobiles in India

English summary
Airtel offers Samsung Galaxy S10 and Galaxy S10+ at down payment of Rs 9,099 and 15,799

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X