ಆಧಾರ್ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಹೊಸ ಕೆವೈಸಿ ವಿಧಾನ

|

ಟೆಲಿಕಾಂ ಆಪರೇಟರ್ ಗಳಿಗೆ ಹೊಸ ಕನೆಕ್ಷನ್ ತೆಗೆದುಕೊಳ್ಳುವವರ ಪರೀಕ್ಷಾರ್ಥವಾಗಿ ಆಧಾರ್ ಆಧಾರಿತ ಎಲೆಕ್ಟ್ರಾನಿಕ್ ಕೆವೈಸಿ (know your customer) ಮಾಡಲು ಇದ್ದ ಅವಕಾಶವನ್ನು ತೆಗೆದುಹಾಕಿದ ಹಿನ್ನೆಲೆಯಲ್ಲಿ ನವೆಂಬರ್ 5 ನೇ ತಾರೀಕಿಗೆ ಇದ್ದ ಡೆಡ್ ಲೈನ್ ನ್ನು ದೂರಸಂಪರ್ಕ ಇಲಾಖೆ ಮುಂದೂಡುವುದಕ್ಕೆ ನಿರಾಕರಿಸಿದ ಕಾರಣ ಇದೀಗ ಭಾರತದ ಟಾಪ್ ಟೆಲಿಕಾಂ ಪ್ಲೇಯರ್ ಗಳು ಗ್ರಾಹಕ ದೃಢೀಕರಣ ವ್ಯವಸ್ಥೆಗೆ ಪರ್ಯಾಯ ಮಾರ್ಗವನ್ನು ಬಿಡುಗಡೆಗೊಳಿಸುತ್ತಿದ್ದಾರೆ.

ಹೊಸ ಡಿಜಿಟಲ್ ಕೆವೈಸಿ ಲೈವ್:

ಹೊಸ ಡಿಜಿಟಲ್ ಕೆವೈಸಿ ಲೈವ್:

ವಡಾಫೋನ್ ಐಡಿಯಾ, ಭಾರತೀ ಏರ್ ಟೆಲ್ ಮತ್ತು ರಿಲಯನ್ಸ್ ಜಿಯೋ ಹೊಸ ಸಿಸ್ಟಮ್ ನ್ನು ಈಗಾಗಲೇ ಜಾರಿಗೆ ತರಲು ಆರಂಭಿಸಿದೆ. ಹೊಸ ಡಿಜಿಟಲ್ ಕೆವೈಸಿ ಇದೀಗ ಲೈವ್ ಆಗಿದೆ ಮತ್ತು ರಾಷ್ಟ್ರೀಯವಾಗಿ ಬಿಡುಗಡೆಗೊಂಡಿದೆ. ಡಾಟ್ ಸೂಚನೆಗಳಂತೆ ಡಿಜಿಟಲ್ ಕೆವೈಸಿಗೆ ತಾತ್ಕಾಲಿಕ ಬಿಡುಗಡೆಗೆ ಅವಕಾಶ ನೀಡಲಾಗಿದೆ ಮತ್ತು ಭಾರತದ ಲೀಡಿಂಗ್ ಟೆಲಿಕಾಂ ಆಪರೇಟರ್ ಆಗಿರುವ ವಡಾಫೋನ್ ಐಡಿಯಾ ಮೊದಲು ಇದನ್ನು ಪ್ರಾರಂಭಿಸಲಿದೆ ಎಂದು ಟೆಲ್ಕೋ ತಿಳಿಸಿದೆ.

ವಡಾಫೋನ್ ನಿಂದ ಡೆಮೋ:

ವಡಾಫೋನ್ ನಿಂದ ಡೆಮೋ:

ಈಗಾಗಲೇ ವಡಾಫೋನ್ ಐಡಿಯಾ ಎರಡು ಬಾರಿ ಡಾಟ್ ಗೆ ಡೆಮೊ ನೀಡಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ ಮತ್ತು ಎಲ್ಲಾ ಪಾಲುದಾರರೊಂದಿಗೆ ಪ್ರೊಸೆಸ್ ನ ಮಾಹಿತಿಗಳನ್ನು ಹಂಚಿಕೊಂಡಿದೆ ಅದರಲ್ಲಿ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಅಂದರೆ ಆಧಾರ್ ನೀಡುವ ಸಂಸ್ಥೆಯೂ ಸೇರಿದೆ ಎಂದು ಹೇಳಲಾಗಿದೆ.

ಜಿಯೋದಿಂದ ಕಾಗದ ರಹಿತ ಪರೀಕ್ಷೆ:

ಜಿಯೋದಿಂದ ಕಾಗದ ರಹಿತ ಪರೀಕ್ಷೆ:

ಜೊತೆಗೆ ಜಿಯೋ ಕೂಡ ಹಲವಾರು ಸರ್ಕಲ್ ನಲ್ಲಿ ಪರ್ಯಾಯ ಡಿಜಿಟಲ್ ಕೆವೈಸಿಯನ್ನು ಜಾರಿಗೆ ತರುವುದಕ್ಕೆ ಪ್ರಯತ್ನಿಸುತ್ತಿದೆ ಎಂಬ ವರದಿ ಇದೆ. ಹೊಸ ಪ್ರೊಸೆಸ್ ಕಾಗದರಹಿತವಾಗಿರುತ್ತದೆ ಮತ್ತು ಇದರಲ್ಲಿ ಚಾಂದಾದಾರರ ಫೋಟೋಗಳು, ಸ್ಕ್ಯಾನ್ ಮಾಡಿದ ವಿಳಾಸದ ಪುರಾವೆ ಮತ್ತು ಗುರುತಿನ ಕಾರ್ಡ್ ನ ಪ್ರತಿಗಳು ಸೇರಿದಂತೆ ಗ್ರಾಹಕರ ಬಗೆಗಿನ ಮಾಹಿತಿಗಳು ಇರಲಿದೆ.

ಕೆಲವು ಕಡೆ ಡಿಜಿಟಲ್ ಕೆವೈಸಿ ಜಾರಿಗೆ ತಂದ ಏರ್ ಟೆಲ್:

ಕೆಲವು ಕಡೆ ಡಿಜಿಟಲ್ ಕೆವೈಸಿ ಜಾರಿಗೆ ತಂದ ಏರ್ ಟೆಲ್:

ಭಾರತೀ ಏರ್ ಟೆಲ್ ತಿಳಿಸಿರುವಂತೆ ಕೆಲವು ಸರ್ಕಲ್ ನಲ್ಲಿ ಅಂದರೆ ದೆಹಲಿ, ಯುಪಿ( ಪೂರ್ವ) ಮತ್ತು ಯುಪಿ(ಪಶ್ಚಿಮ) ಸೇರಿದಂತೆ ಕೆಲವು ಪ್ರದೇಶದಲ್ಲಿ ಡಿಜಿಟಲ್ ಕೆವೈಸಿ ಪ್ರೊಸೆಸ್ ನ್ನು ಆರಂಭಿಸಲಾಗಿದೆ. ಇನ್ನುಳಿದ ಪ್ರದೇಶಗಳಿಗೆ ಕೆಲವೇ ದಿನಗಳಲ್ಲಿ ಮುಂದುವರಿಸಲಾಗುತ್ತದೆ. ಹೊಸ ಗ್ರಾಹಕರ ಡಿಜಿಟಲ್ ಕೆವೈಸಿ ಪ್ರಕ್ರಿಯೆಯಲ್ಲಿ ವಿಳಾಸ, ಗುರುತಿನ ಪುರಾವೆ ಮತ್ತು ಗ್ರಾಹಕರ ಲೈವ್ ಫೋಟೋ ಮತ್ತು ಆನ್ ಲೈನ್ ಅರ್ಜಿಯನ್ನು ಭರ್ಜಿ ಮಾಡುವ ಪ್ರಕ್ರಿಯೆ ಇರುತ್ತದೆ. ಒಟ್ಟಾರೆ ಎಲ್ಲಾ ಪ್ರಕ್ರಿಯೆಯೂ ಕೂಡ ಡಿಜಿಟಲ್ ಆಗಿರುತ್ತದೆ.

ಸರ್ಕಾರಕ್ಕೆ ಮನವಿ:

ಸರ್ಕಾರಕ್ಕೆ ಮನವಿ:

ಕಳೆದ ವಾರ ಎಲ್ಲಾ ಟೆಲಿಕಾಂ ಆಪರೇಟರ್ ಗಳು ಸರ್ಕಾರಕ್ಕೆ ಆಧಾರ್ ಆಧಾರಿತ ಇಕೆವೈಸಿ ಮಾಡುವುದಕ್ಕೆ ನವೆಂಬರ್ 20 ರ ವರೆಗೆ ಸಮಯ ಕೊಡಬೇಕು ಎಂದು ಸರ್ಕಾರವನ್ನು ಮನವಿ ಮಾಡಿದ್ದರು ಮತ್ತು ಅವರು ಹೊಸ ಡಿಜಿಟಲ್ ಕೆವೈಸಿಯನ್ನು ಜಾರಿಗೆ ತರಲಿದ್ದಾರೆ ಎಂದು ಕೂಡ ತಿಳಿಸಿದ್ದರು. ಹೊಸ ಡಿಜಿಟಲ್ ಪ್ರೊಸೆಸ್ ಗೆ ನೀಡಿರುವ ಡೆಡ್ ಲೈನ್ ನಲ್ಲಿ ಆಧಾರ್ ಆಧಾರಿತ ಇಕೆವೈಸಿಯನ್ನು ನಿಲ್ಲಿ ಹೊಸತನ್ನು ಜಾರಿಗೆ ತರುವುದಕ್ಕೆ ಆಪರೇಟರ್ ಗಳಿಗೆ ಸಮಯ ಬೇಕಾಗುತ್ತದೆ ಯಾಕೆಂದರೆ ಅವರು ಮಿಲಿಯನ್ ಗಟ್ಟಲೆ ರೀಟೈಲ್ ಸ್ಟೋರ್ ಗಳನ್ನು ತಲುಪಬೇಕು ಮತ್ತು ಕೆಲವು ಪ್ರದೇಶಗಳು ಬಹಳ ದೂರವಿರುವುದರಿಂದ ಇದನ್ನು ಡೆಡ್ ಲೈನ್ ನೀಡಲಾದ ಸಮಯದ ಒಳಗೆ ಸಾಧಿಸುವುದು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಈ ಮನವಿಯನ್ನು ಸಲ್ಲಿಸಲಾಗಿತ್ತು.

ವಾರದ ಹಿಂದೆ ವರದಿ ನೀಡಿದ ಡಾಟ್:

ವಾರದ ಹಿಂದೆ ವರದಿ ನೀಡಿದ ಡಾಟ್:

ಆದರೆ ಇಂಡಸ್ಟ್ರಿಯ ಪ್ರಮುಖ ಸಂಸ್ಥೆ ಡಾಟ್ ಎಲ್ಲಾ ಟೆಲ್ಕೋಗಳು ಆಧಾರ್ ಆಧಾರಿತ ಕೆವೈಸಿಯನ್ನು ನಿಲ್ಲಿಸಿದೆ ಮತ್ತು ಹಳೆಯ ಚಂದಾದಾರರಿಗೆ ಆಧಾರ್ ಆಧಾರಿತ ಪುನರ್ ಪರಿಶೀಲನೆ ನಡೆಯುತ್ತಿದೆ ಎಂದು ವಾರದ ಹಿಂದೆಯೇ ತಿಳಿಸಿದೆ.

ವಿಸ್ತರಣೆಯ ನಿರ್ಧಾರವಿಲ್ಲ:

ವಿಸ್ತರಣೆಯ ನಿರ್ಧಾರವಿಲ್ಲ:

ಡಾಟ್ ನ ಅಧಿಕಾರಿಗಳು ತಿಳಿಸುವಂತೆ ನಾವು ಯಾವುದೇ ರೀತಿಯ ವಿಸ್ತರಣೆಯನ್ನು ನಿರ್ಧರಿಸಿಲ್ಲ. ಆದರೆ ಒಂದು ವೇಳೆ ಆಪರೇಟರ್ ಗಳು ಕಾಲಾವಕಾಶ ವಿಸ್ತರಣೆಯನ್ನು ಬಯಸಿದ್ದೇ ಆದಲ್ಲಿ ಅದನ್ನು ಯುಐಡಿಎಐ ನಿರ್ಧರಿಸಬೇಕಾಗುತ್ತದೆ. ನಾವು ಕೇವಲ ಸುಪ್ರೀಂ ಕೋರ್ಟಿನ ತೀರ್ಪನ್ನು ಪಾಲಿಸುತ್ತಿದ್ದೇವೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ ನಲ್ಲಿ ಸುಪ್ರೀಂ ನೀಡಿದ ತೀರ್ಪಿನ ಎಫೆಕ್ಟ್:

ಸೆಪ್ಟೆಂಬರ್ ನಲ್ಲಿ ಸುಪ್ರೀಂ ನೀಡಿದ ತೀರ್ಪಿನ ಎಫೆಕ್ಟ್:

ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಯಾವುದೇ ಖಾಸಗಿ ಸಂಸ್ಥೆಗಳಿಗೂ ಕೂಡ ಆಧಾರ್ ಡಾಟಾವನ್ನು ವೆರಿಫಿಕೇಷನ್ ಗಾಗಿ ಬಳಸಲು ಅನುಮತಿ ಇಲ್ಲ ಎಂದು ಹೇಳಿದೆ. ಆಗ ಸುಮಾರು 90% ಹೊಸ ಚಂದಾದಾರರು ಯೂನಿಕ್ ಐಡಿ ಆಧಾರ್ ನ್ನು ಬಳಸಿಯೇ ಗ್ರಾಹಕರ ವೆರಿಫಿಕೇಷನ್ ನ್ನು ನಡೆಸುತ್ತಿದ್ದರು.ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಹೆಚ್ಚು ಸಮಯವನ್ನು ಟೆಲ್ಕೋಗಳು ತೆಗೆದುಕೊಳ್ಳದೆ ಹೊಸ ವಿಧಾನವನ್ನು ಅನುಸರಿಸಬೇಕು ಮತ್ತು ಹೊಸ ವಿಧಾನವು ಸಂಪೂರ್ಣವಾಗಿ ಜಾರಿಗೆ ಬರುವವರೆಗೆ ಹಳೆಯ ವಿಧಾನವನ್ನು ಅಂದರೆ ಚಂದಾದಾರರ ದೈಹಿಕ ಪರಿಕ್ಷಾರ್ಥ ವಿಧಾನವನ್ನು ಅನುಸರಿಸುವುದಕ್ಕೆ ಅವಕಾಶವಿದೆ.

ಮತ್ತೊಮ್ಮೆ ಚರ್ಚೆ:

ಮತ್ತೊಮ್ಮೆ ಚರ್ಚೆ:

ಹಾಗಾಗಿ ಎಲ್ಲಾ ಟೆಲಿಕಾಂ ಆಪರೇಟರ್ ಗಳು ಇಕೆವೈಸಿ ಪ್ರೊಸೆಸ್ ನ್ನು ನಿಧಾನಗತಿಯಲ್ಲಿ ಸಂಪೂರ್ಣವಾಗಿ ನಿಲ್ಲಿಸುವುದಕ್ಕೆ ತೀರ್ಮಾನಿಸಿದೆ ಮತ್ತು ಡಿಜಿಟಲ್ ಕೆವೈಸಿ ಪ್ರಕ್ರಿಯೆಯನ್ನು ಈಗಾಗಲೇ ಹೊಸ ಪ್ರದೇಶಗಳಲ್ಲಿ ಜಾರಿಗೆ ತಂದಿದೆ. ಡಾಟ್ ಕೂಡ ಎಲ್ಲಾ ಟೆಲಿಕಾಂ ಆಪರೇಟರ್ ಗಳನ್ನು ಪುನಃ ಭೇಟಿ ಮಾಡಿ ಚರ್ಚಿಸಲು ತೀರ್ಮಾನಿಸಿದೆ.

Best Mobiles in India

English summary
Airtel, Reliance Jio roll out alternate digital KYC process after SC verdict on Aadhaar

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X