ಹೊಸ ಮೊಬೈಲ್ ಸಂಪರ್ಕಕ್ಕೆ ಆಧಾರ್ ಆಧಾರಿತ ಆಕ್ಟಿವೇಶನ್

Written By:

ಟೆಲಿಕಾಮ್ ಆಪರೇಟರ್ ವೋಡಾಫೋನ್ e - KYC ಸೌಲಭ್ಯವನ್ನು ಭಾರತದಲ್ಲಿ 4,500 ಕ್ಕಿಂತಲೂ ಹೆಚ್ಚಿನ ಸ್ಟೋರ್‌ಗಳಲ್ಲಿ ಬಿಡುಗಡೆ ಮಾಡುತ್ತಿದ್ದು ಆಧಾರ್ ಸಂಖ್ಯೆಯೊಂದಿಗೆ ತಮ್ಮ ಗ್ರಾಹಕರಿಗೆ ಸಿಮ್‌ಗಳನ್ನು ಆಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. ಇಲೆಕ್ಟ್ರಾನಿಕ್ ನೊ ಯುವರ್ ಕಸ್ಟಮರ್ (e - KYC) ದೃಢೀಕರಣವು ಆಧಾರ್ ಸಂಖ್ಯೆಯನ್ನು ತಿಳಿದುಕೊಳ್ಳಲು ಇರುವ ಸೌಲಭ್ಯವಾಗಿದ್ದು, ಇದರೊಂದಿಗೆ ಬೆರಳಚ್ಚು ಶೋಧನೆ ಕೂಡ ಇರುತ್ತದೆ. ಇದರಿಂದ ಹೊಸ ಪ್ರಿಪೈಡ್ ಮತ್ತು ಪೋಸ್ಟ್‌ಪೇಡ್ ಸಂಪರ್ಕಗಳನ್ನು ಅರಿತುಕೊಳ್ಳಬಹುದಾಗಿದೆ.

ಹೊಸ ಮೊಬೈಲ್ ಸಂಪರ್ಕಕ್ಕೆ ಆಧಾರ್ ಆಧಾರಿತ ಆಕ್ಟಿವೇಶನ್

(e - KYC) ದೃಢೀಕರಣವು ಹೊಸ ಸಂಪರ್ಕಗಳ ಆಕ್ವಿವೇಟ್ ಪ್ರಕ್ರಿಯೆ ವಿಳಂಬಗೊಳ್ಳುವುದನ್ನು ತಡೆಗೊಳಿಸಲಿದೆ. ದೃಢೀಕರಣ ಪ್ರಕ್ರಿಯೆಗೂ ಇದು ಸಾಮರ್ಥ್ಯವನ್ನು ಒದಗಿಸುವುದರಿಂದ ಯಾವುದೇ ಹಸ್ತಚಾಲಿತ ದೋಷಗಳು ಉಂಟಾಗುವುದಿಲ್ಲ. ಆದಷ್ಟು ಸಿಮ್ ಆಕ್ಟಿವೇಟ್ ಪ್ರಕ್ರಿಯೆಯನ್ನು ಇದು ಸುಲಭಗೊಳಿಸುತ್ತದೆ ಎಂಬುದು ವೋಡಾಫೋನ್ ಇಂಡಿಯಾ ಡೈರೆಕ್ಟರ್ ಸಂದೀಪ್ ಕತಾರಿಯಾ ಅನಿಸಿಕೆಯಾಗಿದೆ. ಬಳಕೆದಾರರ ಗೌಪ್ಯತೆಗೂ ಇದು ಹೆಚ್ಚಿನ ಭದ್ರತೆಯನ್ನು ಒದಗಿಸುತ್ತದೆ ಮತ್ತು ಹೊಸ ಸಂಪರ್ಕಕ್ಕಾಗಿ ಕಾಯುವುದನ್ನು ತಪ್ಪಿಸುತ್ತದೆ.

English summary
Department of Telecom and successfully tested the e-KYC feature of Aadhaar to activate new SIM cards. It will be rolled out across the country from tomorrow.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot