ಏರ್‌ಟೆಲ್ ನಿಂದ ಮೂರು ಅಂತರಾಷ್ಟ್ರೀಯ ರೋಮಿಂಗ್ ಪ್ರಿಪೇಯ್ಡ್ ಪ್ಲಾನ್‌ಗಳು!

By Gizbot Bureau
|

ದೇಶದ ನಂಬರ್ ಒನ್ ಟೆಲಿಕಾಂ ಆಪರೇಟರ್ ಏರ್ ಟೆಲ್ ಇದೀಗ ಹೊಸದಾಗಿ ಮೂರು ಪ್ಲಾನ್ ಗಳನ್ನು ಬಿಡುಗಡೆಗೊಳಿಸಿದ್ದು, ಆಗಾಗ ವಿದೇಶಕ್ಕೆ ಪ್ರಯಾಣ ಬೆಳೆಸುವ ಗ್ರಾಹಕರಿಗೆ ಅನುಕೂಲ ಮಾಡಿಕೊಟ್ಟಿದೆ. ಅಂತರಾಷ್ಟ್ರೀಯ ರೋಮಿಂಗ್ ಸೌಲಭ್ಯವಿರುವ ಮೂರು ವಿಭಿನ್ನ ಪ್ಲಾನ್ ಗಲನ್ನು ಇದು ಪರಿಚಯಿಸಿದ್ದು ಅತೀ ಕಡಿಮೆ ಬೆಲೆಯಲ್ಲಿ ಡಾಟಾ ಮತ್ತು ಕರೆಗಳ ಬೆನಿಫಿಟ್ ನ್ನು ಇದರಲ್ಲಿ ನೀಡಲಾಗುತ್ತಿದೆ.

ಏರ್‌ಟೆಲ್ ನಿಂದ ಮೂರು ಅಂತರಾಷ್ಟ್ರೀಯ ರೋಮಿಂಗ್ ಪ್ರಿಪೇಯ್ಡ್ ಪ್ಲಾನ್‌ಗಳು!

ಟೆಲಿಕಾಂ ಟಾಕ್ ಅಭಿಪ್ರಾಯ ಪಡುವಂತೆ ಹೊಸ ಪ್ಲಾನ್ ಗಳು ಪ್ರಿಪೇಯ್ಡ್ ಬಳಕೆದಾರರಿಗಾಗಿ ಲಭ್ಯವಿದೆ. ಪ್ಲಾನ್ ಗಳು ಕಂಪೆನಿ ವಿದೇಶಿ ಪಾಸ್ ಸ್ಕ್ರೀಮ್ ನ ಅಡಿಯಲ್ಲಿ ಲಭ್ಯವಾಗುತ್ತಿದ್ದು ಆರಂಭಿಕ ಬೆಲೆ ರುಪಾಯಿ 196 ಆಗಿದೆ. ಬೇಸಿಕ್ ಪ್ಲಾನ್ ಆಗಿರುವ ರುಪಾಯಿ196 ರಲ್ಲಿ 20 ನಿಮಿಷದ ಅಂತರಾಷ್ಟ್ರೀಯ ಕರೆಗಳ ಬೆನಿಫಿಟ್ ಲಭ್ಯವಾಗುತ್ತದೆ.

ಪ್ಲಾನ್ ಬೆನಿಫಿಟ್:

ಪ್ಲಾನ್ ಬೆನಿಫಿಟ್:

ಎರಡನೇ ಪ್ಲಾನ್ ನ ಬೆಲೆ 296 ರುಪಾಯಿಗಳಾಗಿದ್ದು ಈ ಪ್ಲಾನಿನ ಅಡಿಯಲ್ಲಿ ಏರ್ ಟೆಲ್ ಪ್ರಿಪೇಯ್ಡ್ ಬಳಕೆದಾರರಿಗೆ 40 ನಿಮಿಷದ ಕರೆಗಳ ಬೆನಿಫಿಟ್ ಲಭ್ಯವಾಗುತ್ತದೆ. ಇದ್ದುದರಲ್ಲಿ ದುಬಾರಿ ಪ್ಲಾನ್ ಆಗಿರುವ 446 ರುಪಾಯಿ ಪ್ಯಾಕ್ ನಲ್ಲಿ 75 ನಿಮಿಷಗಳ ಟಾಕ್ ಟೈಮ್ ಲಭ್ಯವಾಗುತ್ತದೆ. ಎಲ್ಲಾ ಮೂರು ಪ್ಲಾನ್ ಗಳಲ್ಲೂ ಉಚಿತ ಔಟ್ ಗೋಯಿಂಗ್ ಮತ್ತು ಇನ್ ಕಮ್ಮಿಂಗ್ ಸ್ಥಳೀಯ ಕರೆಗಳು ವಿಭಿನ್ನ ಅವಧಿಗೆ ಲಭ್ಯವಾಗುತ್ತದೆ.

ಫ್ಲಾನಿನ ಅವಧಿ:

ಫ್ಲಾನಿನ ಅವಧಿ:

196 ರುಪಾಯಿ ಪ್ಲಾನಿನ ಅವಧಿಗೆ 1 ದಿನ, 296 ರುಪಾಯಿ ಮತ್ತು 446 ರುಪಾಯಿ ಗಳ ಅವಧಿ ಕ್ರಮವಾಗಿ 30 ದಿನಗಳು ಮತ್ತು 90 ದಿನಗಳಾಗಿರುತ್ತದೆ. ಗಮನಿಸಬೇಕಾಗಿರುವ ಅಂಶವೇನೆಂದರೆ ಎಲ್ಲಾ ಪ್ಲಾನ್ ಗಳು ಕೇವಲ ಕರೆಗಳ ಬೆನಿಫಿಟ್ ನ್ನು ನೀಡುತ್ತದೆಯೇ ಹೊರತು ಡಾಟಾ ಬೆನಿಫಿಟ್ ನ್ನು ನೀಡುವುದಿಲ್ಲ.

20 ದೇಶಗಳಲ್ಲಿ ಲಭ್ಯ:

20 ದೇಶಗಳಲ್ಲಿ ಲಭ್ಯ:

ಈ ಮೂರು ಪ್ಲಾನ್ ಗಳು 20 ದೇಶಗಳಲ್ಲಿ ಲಭ್ಯವಾಗುತ್ತದೆ ಅದರಲ್ಲಿ ಯುನೈಟೆಡ್ ಸ್ಟೇಟ್ಸ್, ಯುಕೆ, ಕೆನಡಾ, ಚೀನಾ, ಜರ್ಮನಿ, ಆಸ್ಟ್ರೇಲಿಯಾ, ಫ್ಲಾನ್ಸ್ ಹಾಂಕ್ ಕಾಂಗ್, ಥೈಲ್ಯಾಂಡ್, ಮಲೇಶಿಯಾ, ಸಿಂಗಾಪುರ, ನೆದರ್ ಲ್ಯಾಂಡ್, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ, ಸೌದಿ ಅರೇಬಿಯಾ, UAE, ಕುವೈತ್, ಬರ್ಹೈನ್ ದೇಶಗಳು ಸೇರಿವೆ.

ಮೊಬೈಲ್ ಆಪ್ ಅಥವಾ ವೆಬ್ ಸೈಟ್ ಮೂಲಕ ಏರ್ ಟೆಲ್ ಗ್ರಾಹಕರು ಈ ಮೇಲಿನ ಯಾವುದೇ ಪ್ಲಾನ್ ನ್ನು ಬೇಕಿದ್ದರೂ ಪಡೆದುಕೊಳ್ಳಬಹುದು.

ಜಿಯೋ ಅಂತರಾಷ್ಟ್ರೀಯ ಪ್ಲಾನ್

ಜಿಯೋ ಅಂತರಾಷ್ಟ್ರೀಯ ಪ್ಲಾನ್

ಇತರೆ ಟೆಲಿಕಾಂ ಆಪರೇಟರ್ ಗಳಾದ ಜಿಯೋ,ವಡಾಫೋನ್ ಕೂಡ ಅಂತರಾಷ್ಟ್ರೀಯ ರೋಮಿಂಗ್ ಪ್ಲಾನ್ ಗಳು ನೀಡುತ್ತದೆ. ರಿಲಯನ್ಸ್ ಜಿಯೋದಲ್ಲಿ ಒಂದು ದಿನದ ಅಂತರಾಷ್ಟ್ರೀಯ ರೋಮಿಂಗ್ ಪ್ಲಾನ್ ನ ಬೆಲೆ 575. ಈ ಪ್ಲಾನ್ ನ ಅಡಿಯಲ್ಲಿ ಮುಖೇಶ್ ಅಂಬಾನಿ ಮಾಲೀಕತ್ವದ

ಟೆಲಿಕಾಂ ಆಪರೇಟರ್ ಅನಿಯಮಿತ ಇನ್ ಕಮ್ಮಿಂಗ್ ಮತ್ತು ಔಟ್ ಗೋಯಿಂಗ್ ಕರೆಗಳನ್ನು ನೀಡುತ್ತದೆ, ಡಾಟಾ ಮತ್ತು ಎಸ್ ಎಂಎಸ್ ಕೂಡ ನೀಡುತ್ತದೆ.

ವಡಾಫೋನ್ ಅಂತರಾಷ್ಟ್ರೀಯ ಪ್ಲಾನ್

ಇನ್ನೊಂದೆಡೆ ವಡಾಫೋನಿನ ಅಂತರಾಷ್ಟ್ರೀಯ ರೋಮಿಂಗ್ ಪ್ಯಾಕ್ ನ ಆರಂಭಿಕ ಬೆಲೆ 575 ರುಪಾಯಿಗಳಿಂದ ಆರಂಭವಾಗುತ್ತದೆ. ಇದರ ಅಡಿಯಲ್ಲಿ ವಡಾಫೋನ್ ಫೋನ್ ಗ್ರಾಹಕರಿಗೆ 1GB ಡಾಟಾ ಪ್ರತಿದಿನ, 100 ನಿಮಿಷ ಔಟ್ ಗೋಯಿಂಗ್ ಕರೆಗಳು ಮತ್ತು ಉಚಿತ ಇನ್ ಕಮ್ಮಿಂಗ್ ಕರೆಗಳು ಜೊತೆಗೆ ಎಸ್ಎಂಎಸ್ ಬೆನಿಫಿಟ್ ಕೂಡ ಇರುತ್ತದೆ.

Best Mobiles in India

Read more about:
English summary
Airtel rolls out three international roaming prepaid plans, start at Rs 196

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X