ಏರ್‌ಟೆಲ್‌ನ ಈ ಅಗ್ಗದ ಪ್ಲ್ಯಾನಲ್ಲಿ ಬೊಂಬಾಟ್ ಕೊಡುಗೆ!..ವ್ಯಾಪಾರಿಗಳಿಗೆ ಬೆಸ್ಟ್‌!

|

ಭಾರತದ ಪ್ರಮುಖ ಟೆಲಿಕಾಂಗಳಲ್ಲಿ ಒಂದಾಗಿರುವ ಭಾರ್ತಿ ಏರ್‌ಟೆಲ್ ತನ್ನ ಬಳಕೆದಾರರಿಗಾಗಿ ಹಲವು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳನ್ನು ಪರಿಚಯಿಸಿ ಗಮನ ಸೆಳೆದಿದೆ. ಕಂಪನಿಯ ಬಹುತೇಕ ಪ್ರೀಪೇಯ್ಡ್‌ ಪ್ಲ್ಯಾನ್‌ಗಳು ಅಧಿಕ ಡೇಟಾದ ಪ್ರಯೋಜನ ಪಡೆದಿವೆ. ಹಾಗೆಯೇ ಏರ್‌ಟೆಲ್‌ ಟೆಲಿಕಾಂ ಕೆಲವು ಅತ್ಯುತ್ತಮ ಪೋಸ್ಟ್‌ಪೇಯ್ಡ್‌ ಯೋಜನೆಗಳ ಆಯ್ಕೆಯನ್ನು ಹೊಂದಿದೆ. ಆ ಪೈಕಿ ಅಗ್ಗದ ಬೆಲೆಯ ಪ್ಲ್ಯಾನ್‌ವೊಂದು 30GB ಡೇಟಾ ಪ್ರಯೋಜನದ ಮೂಲಕ ಚಂದಾದಾರನ್ನು ಆಕರ್ಷಿಸಿದೆ.

ಪೋಸ್ಟ್‌ಪೇಯ್ಡ್‌

ಹೌದು, ಏರ್‌ಟೆಲ್‌ ಟೆಲಿಕಾಂ ಭಿನ್ನ ಪ್ರೈಸ್‌ನಲ್ಲಿ ಹಲವು ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳನ್ನು ಒಳಗೊಂಡಿದೆ. ಅವುಗಳಲ್ಲಿ ಏರ್‌ಟೆಲ್‌ 299ರೂ.ಗಳ ಕಾರ್ಪೋರೇಟ್ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ ಹೆಚ್ಚು ಸದ್ದು ಮಾಡಿದೆ. ಈ ಯೋಜನೆಯು ಡೇಟಾ ಜೊತೆಗೆ ಅನಿಯಮಿತ ವಾಯಿಸ್‌ ಕರೆಗಳ ಸೌಲಭ್ಯ ಹಾಗೂ 100 ಎಸ್‌ಎಮ್‌ಎಸ್‌ ಪ್ರಯೋಜನ ಪಡೆದುಕೊಂಡಿದೆ. ಹಾಗಾದರೇ ಏರ್‌ಟೆಲ್‌ನ 299ರೂ.ಗಳ ಕಾರ್ಪೋರೇಟ್ ಪ್ಲ್ಯಾನ್ ರೀಚಾರ್ಜ್‌ಗೆ ಸೂಕ್ತವೇ?..ಒಟ್ಟಾರೇ ಪ್ರಯೋಜನಗಳೆನು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಏರ್‌ಟೆಲ್‌ 299ರೂ.ಗಳ ಕಾರ್ಪೋರೇಟ್ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ಏರ್‌ಟೆಲ್‌ 299ರೂ.ಗಳ ಕಾರ್ಪೋರೇಟ್ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌

ಏರ್‌ಟೆಲ್‌ ಟೆಲಿಕಾಂನ ಪೋಸ್ಟ್‌ಪೇಯ್ಡ್‌ ಈ ಯೋಜನೆಯು ಒಟ್ಟು 30GB ಡೇಟಾ ಪ್ರಯೋಜನವನ್ನು ಹೊಂದಿದೆ. ಇದರೊಂದಿಗೆ ಗ್ರಾಹಕರಿಗೆ ಅನಿಯಮಿತ ವಾಯಿಸ್ ಕರೆಗಳನ್ನು ನೀಡುತ್ತದೆ. ಹಾಗೆಯೇ ಇತರ ಪ್ರಯೋಜನಗಳಲ್ಲಿ ಏರ್‌ಟೆಲ್ ಕಾಲ್ ಮ್ಯಾನೇಜರ್, ಜಿ ಸೂಟ್, ಮತ್ತು ಟ್ರ್ಯಾಕ್‌ಮೇಟ್ ಸೇರಿದಂತೆ ವಿಂಕ್ ಮ್ಯೂಸಿಕ್ ಆಪ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಆಪ್ ಪ್ರೀಮಿಯಂ ಮತ್ತು ಶಾ ಅಕಾಡೆಮಿಗೆ 1 ವರ್ಷ ಉಚಿತ ಪ್ರವೇಶ ಸೌಲಭ್ಯ ಒಳಗೊಂಡಿದೆ.

ಈ ಯೋಜನೆ ಯಾರಿಗೆ ಉತ್ತಮ?

ಈ ಯೋಜನೆ ಯಾರಿಗೆ ಉತ್ತಮ?

ಏರ್‌ಟೆಲ್ ಟೆಲಿಕಾಂನ ಈ ಅಗ್ಗದ ಕಾರ್ಪೊರೇಟ್ ಪೋಸ್ಟ್‌ಪೇಯ್ಡ್ ಯೋಜನೆಯು ಇತರೆ ಯೋಜನೆಗಳಿಗಿಂತ ಭಿನ್ನವಾಗಿವೆ. ಸಾಮಾನ್ಯ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ಗಳು ಬಳಕೆದಾರರಿಗೆ ತಮ್ಮ ಕುಟುಂಬ ಸದಸ್ಯರನ್ನು ಸೇರಿಸಲು ಅವಕಾಶ ನೀಡಿದರೆ, ಈ ಕಾರ್ಪೊರೇಟ್ ಯೋಜನೆಗಳು ಕುಟುಂಬ ಸದಸ್ಯರನ್ನು ಯೋಜನೆಗೆ ಸೇರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇದು ಬಿಸಿನೆಸ್/ವ್ಯಾಪಾರ ಮಾಡುವ ಗ್ರಾಹಕರಿಗೆ ಹೆಚ್ಚು ಸೂಕ್ತ ಎನಿಸುತ್ತದೆ. ಹಾಗೆಯೇ ಏರ್‌ಟೆಲ್‌ ಟೆಲಿಕಾಂನ ಇತರೆ ಕೆಲವು ಜನಪ್ರಿಯ ಪೋಸ್ಟ್‌ಪೇಯ್ಡ್‌ ಪ್ಲ್ಯಾನ್‌ಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಏರ್‌ಟೆಲ್ 399ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್ 399ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಭಾರ್ತಿ ಏರ್‌ಟೆಲ್ 399ರೂ. ಪೋಸ್ಟ್‌ಪೇಯ್ಡ್‌ ಯೋಜನೆಯಲ್ಲಿ ಬಳಕೆದಾರರು 4G/3G ಬೆಂಬಲಿತ 40GB ಡೇಟಾವನ್ನು ಪಡೆಯುತ್ತಾರೆ. ಹಾಗೆಯೇ ಇದರೊಂದಿಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ದೊರೆಯುತ್ತವೆ. ಇದರೊಂದಿಗೆ ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್ ಮತ್ತು ಶಾ ಅಕಾಡೆಮಿಯ ಚಂದಾದಾರಿಕೆಗಳ ಜೊತೆಗೆ ಒಂದು ವರ್ಷದ ವರೆಗೆ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಚಂದಾದಾರಿಕೆ ಇದೆ. ಫಾಸ್ಟ್ಯಾಗ್ ವಹಿವಾಟಿನಲ್ಲಿ ರಿಯಾಯಿತಿ ಹಾಗೂ ಉಚಿತ ಹೆಲೋ ಟೂನ್ಸ್ ಲಭ್ಯ. ಹೆಚ್ಚುವರಿಯಾಗಿ ಇದು ಏರ್‌ಟೆಲ್ ಎಕ್ಸ್‌ಟೀಮ್ ಹೊರತುಪಡಿಸಿ OTT ಪ್ಲಾಟ್‌ಫಾರ್ಮ್‌ಗಳಿಗೆ ಚಂದಾದಾರಿಕೆಗಳನ್ನು ನೀಡುವುದಿಲ್ಲ.

ಏರ್‌ಟೆಲ್ 499ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್ 499ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಭಾರ್ತಿ ಏರ್‌ಟೆಲ್ 499ರೂ. ಪೋಸ್ಟ್‌ಪೇಯ್ಡ್‌ ಯೋಜನೆಯಲ್ಲಿ ಬಳಕೆದಾರರು 75GB ಡೇಟಾವನ್ನು ಪಡೆಯುತ್ತಾರೆ. ಹಾಗೆಯೇ ಇದರೊಂದಿಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ದೊರೆಯುತ್ತವೆ. ಇದರೊಂದಿಗೆ ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್, ಹೆಲೋ ಟೂನ್ಸ್ ಮತ್ತು ಶಾ ಅಕಾಡೆಮಿಯ ಚಂದಾದಾರಿಕೆಗಳ ಜೊತೆಗೆ ಒಂದು ವರ್ಷದವರೆಗೆ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಚಂದಾದಾರಿಕೆ ಇದೆ. ಹೆಚ್ಚುವರಿಯಾಗಿ ಒಂದು ವರ್ಷದ ಚಂದಾದಾರಿಕೆಯೊಂದಿಗೆ ಅಮೆಜಾನ್ ಪ್ರೈಮ್ ವಿಡಿಯೋ ಲಭ್ಯವಾಗಲಿದೆ. ಹಾಗೂ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್ ಚಂದಾದಾರಿಕೆ ಸಿಗಲಿದೆ.

ಏರ್‌ಟೆಲ್ 999ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಏರ್‌ಟೆಲ್ 999ರೂ. ಪೋಸ್ಟ್‌ಪೇಯ್ಡ್‌ ಪ್ಲ್ಯಾನ್

ಭಾರ್ತಿ ಏರ್‌ಟೆಲ್ 999ರೂ. ಪೋಸ್ಟ್‌ಪೇಯ್ಡ್‌ ಯೋಜನೆಯಲ್ಲಿ ಬಳಕೆದಾರರು 150GB ಡೇಟಾವನ್ನು ಪಡೆಯುತ್ತಾರೆ. ಹಾಗೆಯೇ ಇದರೊಂದಿಗೆ ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್ ದೊರೆಯುತ್ತವೆ. ಇದರೊಂದಿಗೆ ಹೆಚ್ಚುವರಿಯಾಗಿ ವಿಂಕ್ ಮ್ಯೂಸಿಕ್, ಹೆಲೋ ಟೂನ್ಸ್ ಮತ್ತು ಶಾ ಅಕಾಡೆಮಿಯ ಚಂದಾದಾರಿಕೆಗಳ ಜೊತೆಗೆ ಒಂದು ವರ್ಷದವರೆಗೆ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಪ್ರೀಮಿಯಂನ ಚಂದಾದಾರಿಕೆ ಇದೆ. ಹೆಚ್ಚುವರಿಯಾಗಿ ಒಂದು ವರ್ಷದ ಚಂದಾದಾರಿಕೆಯೊಂದಿಗೆ ಅಮೆಜಾನ್ ಪ್ರೈಮ್ ವಿಡಿಯೋ ಲಭ್ಯವಾಗಲಿದೆ. ಹಾಗೂ ಡಿಸ್ನಿಪ್ಲಸ್‌ ಹಾಟ್‌ಸ್ಟಾರ್ ಚಂದಾದಾರಿಕೆ ಸಿಗಲಿದೆ.

Best Mobiles in India

English summary
Airtel Rs 299 Corporate Postpaid Plan Offers 30 GB Monthly Data With Some Additional Benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X