ಏರ್‌ಟೆಲ್‌ 499ರೂ. V/S ಜಿಯೋ 399ರೂ. ಬ್ರಾಡ್‌ಬ್ಯಾಂಡ್‌: ಯಾವುದು ಬೆಸ್ಟ್?

|

ಭಾರತದ ಬ್ರಾಡ್‌ಬ್ಯಾಂಡ್ ವಲಯವು ಹಲವು ಮಹತ್ತರ ಬದಲಾವಣೆ ಆಗಿವೆ. ಬ್ರಾಡ್‌ಬ್ಯಾಂಡ್ ಪೂರೈಕೆದಾರ ಸಂಸ್ಥೆಗಳು ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಕಡಿಮೆ ಬೆಲೆಯಲ್ಲಿ ಹಲವು ಪ್ರಯೋಜನಗಳ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿವೆ. ಅವುಗಳಲ್ಲಿ ರಿಲಾಯನ್ಸ್‌ ಜಿಯೋ ಹಾಗೂ ಏರ್‌ಟೆಲ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು, ಈ ಸಂಸ್ಥೆಗಳ ಕೆಲವು ಎಂಟ್ರಿ ಲೆವೆಲ್ ಪ್ಲ್ಯಾನ್‌ಗಳು ಆಕರ್ಷಕ ಅನಿಸಿವೆ.

ಜಿಯೋ

ಹೌದು, ರಿಲಾಯನ್ಸ್‌ ಜಿಯೋ ಹಾಗೂ ಏರ್‌ಟೆಲ್ ಸಂಸ್ಥೆಗಳ ಕೆಲವು ಬ್ರಾಡ್‌ಬ್ಯಾಂಡ್‌ ಯೋಜನೆಗಳು ಗ್ರಾಹಕರ ಗಮನ ಸೆಳೆದಿವೆ. ಮುಖ್ಯವಾಗಿ ಏರ್‌ಟೆಲ್‌ ಎಕ್ಸ್‌ಟ್ರಿಮ್ ಫೈಬರ್ 499ರೂ. ಹಾಗ ಜಿಯೋ ಫೈಬರ್ 399ರೂ. ಪ್ಲ್ಯಾನ್‌ ಬಜೆಟ್‌ ದರದಲ್ಲಿ ಉತ್ತಮ ಅನಿಸಿವೆ. ಈ ಎರಡು ಯೋಜನೆಗಳು ಭಿನ್ನ ಪ್ರಯೋಝನಗಳನ್ನು ಒಳಗೊಂಡಿವೆ. ಆದರೆ ಜಿಯೋ ಹಾಗೂ ಏರ್‌ಟೆಲ್‌ ಇವೆರಡರಲ್ಲಿ ಯಾವುದು ಬೆಸ್ಟ್‌ ಬ್ರಾಡ್‌ಬ್ಯಾಂಡ್‌ ಯೋಜನೆ ಎನ್ನುವ ಬಗ್ಗೆ ತಿಳಿಯಲು ಮುಂದೆ ಓದಿರಿ.

ಏರ್‌ಟೆಲ್‌ ಎಕ್ಸ್‌ಟ್ರಿಮ್ ಫೈಬರ್ 499ರೂ. ಪ್ಲ್ಯಾನ್‌

ಏರ್‌ಟೆಲ್‌ ಎಕ್ಸ್‌ಟ್ರಿಮ್ ಫೈಬರ್ 499ರೂ. ಪ್ಲ್ಯಾನ್‌

ಏರ್‌ಟೆಲ್‌ 499ರೂ. ಪ್ಲ್ಯಾನ್‌ ಸಂಸ್ಥೆಯ ಹೊಸ ಪ್ಲ್ಯಾನ್ ಆಗಿದ್ದು, ಸೆ.7 ರಿಂದ ಜಾರಿ ಆಗಿದೆ. ಈ ಯೋಜನೆಯಲ್ಲಿ ಅನಿಯಮಿತ ಇಂಟರ್ನೆಟ್ ಸೌಲಭ್ಯ ಒದಗಿಸಲಾಗಿದೆ. ಹಾಗೆಯೇ ಈ ಯೋಜನೆಯು 40 Mbps ವೇಗವನ್ನು ನೀಡುತ್ತದೆ. ಹಾಗೂ ಏರ್‌ಟೆಲ್ ಎಕ್ಸ್‌ಸ್ಟ್ರೀಮ್ 4 ಕೆ ಟಿವಿ ಬಾಕ್ಸ್ ಕೂಡ ಇದೆ. ಇದಕ್ಕಾಗಿ ಗ್ರಾಹಕರು ಕೇವಲ 1,499 ರೂಗಳನ್ನು (ಭದ್ರತಾ ಠೇವಣಿ) ಪಾವತಿಸಬೇಕಾಗುತ್ತದೆ, ಅದನ್ನು ಕಂಪನಿಯು ಮರುಪಾವತಿಸುತ್ತದೆ. 7 ಒಟಿಟಿ ಅಪ್ಲಿಕೇಶನ್‌ಗಳು ಮತ್ತು 5 ಸ್ಟುಡಿಯೋಗಳಿಂದ ಪ್ರದರ್ಶನಗಳೊಂದಿಗೆ 10,000+ ಚಲನಚಿತ್ರಗಳನ್ನು ನೀವು ಪಡೆಯುತ್ತೀರಿ. ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್‌ನ ಪ್ರತಿಯೊಂದು ಯೋಜನೆಯನ್ನು ಅನಿಯಮಿತ ಡೇಟಾದೊಂದಿಗೆ ನೀಡಲಾಗುತ್ತಿದೆ. ಅದರೊಂದಿಗೆ, ಗ್ರಾಹಕರಿಗೆ ಅನಿಯಮಿತ ಧ್ವನಿ ಕರೆ ಆಯ್ಕೆಯನ್ನು ಸಹ ಪಡೆಯಲಾಗುತ್ತದೆ.

ಜಿಯೋ ಫೈಬರ್ 399ರೂ. ಪ್ಲ್ಯಾನ್‌

ಜಿಯೋ ಫೈಬರ್ 399ರೂ. ಪ್ಲ್ಯಾನ್‌

ಜಿಯೋ ಫೈಬರ್‌ನ ಹೊಸ ಯೋಜನೆಯನ್ನು 399 ರೂಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯು 10 Mbps ಕಡಿಮೆ ಇಂಟರ್ನೆಟ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ನೀಡುತ್ತದೆ. ಜಿಯೋ ಫೈಬರ್ ರೂ 399 ಯೋಜನೆಯು ತಿಂಗಳ ಅನಿಯಮಿತ ಡೇಟಾದೊಂದಿಗೆ ಬರುತ್ತದೆ. ಅನಿಯಮಿಯ ವಾಯಿಸ್ ಕರೆ ಸೌಲಭ್ಯಗಳು ಸೇರಿವೆ. ಜಿಯೋದ ಹೆಚ್ಚಿನ ಬೆಲೆಯ ಯೋಜನೆಗಳಲ್ಲಿ ಓಟಿಟಿ ಚಂದಾದಾರಿಕೆ ಲಭ್ಯ.

ಯಾವುದು ಬೆಸ್ಟ್‌ ಆಯ್ಕೆ?

ಯಾವುದು ಬೆಸ್ಟ್‌ ಆಯ್ಕೆ?

ಜಿಯೋ ಫೈಬರ್ ಮತ್ತು ಏರ್‌ಟೆಲ್ ಎರಡೂ ಸಂಸ್ಥೆಗಳು ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಪ್ರಯೋಜನಗಳನ್ನು ಒದಗಿಸಿವೆ. ಜಿಯೋ ಫೈಬರ್ 399ರೂ. ಪ್ಲ್ಯಾನ್‌ ಗಿಂತ ಏರ್‌ಟೆಲ್‌ ಎಕ್ಸ್‌ಟ್ರಿಮ್ ಫೈಬರ್ 499ರೂ. ಪ್ಲ್ಯಾನ್‌ 100ರೂ. ದರ ಹೆಚ್ಚು ಎಂದು ಸ್ಪಷ್ಟವಾಗಿ ತಿಳಿಯುತ್ತದೆ. ಆದರೆ ಪ್ರಯೋಜನಗಳ ದೃಷ್ಠಿಯಿಂದ ಏರ್‌ಟೆಲ್‌ ಪ್ಲ್ಯಾನ್ OTT ಸೌಲಭ್ಯಗಳನ್ನು ಒಳಗೊಂಡಿದೆ. ಜಿಯೋದ ಈ ಯೋಜನೆ ಓಟಿಟಿ ಸೌಲಭ್ಯ ಹೊಂದಿಲ್ಲ.

Most Read Articles
Best Mobiles in India

English summary
Airtel Rs 499 plan is Rs 100 more expensive than the JioFiber’s Rs 399 plan, it comes with more speed and OTT benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X