ಏರ್‌ಟೆಲ್‌ನಿಂದ ಇದೇ ತಿಂಗಳು ಭಾರತದಲ್ಲಿ 5G ನೆಟ್‌ವರ್ಕ್ ಪ್ರಾರಂಭ!

|

ಭಾರತದಲ್ಲಿ 5G ತರಂಗಾಂತರದ ಹಾರಜಿನ ನಂತರ 5G ನೆಟ್‌ವರ್ಕ್‌ ಪ್ರಾರಂಭ ಯಾವಾಗ ಎನ್ನುವ ಚರ್ಚೆ ಶುರುವಾಗಿದೆ. ಇದರ ನಡುವೆ ಭಾರತದ ಟೆಲಿಕಾಂ ವಲಯದಲ್ಲಿ ಮುಂಚೂಣಿಯಲ್ಲಿರುವ ಏರ್‌ಟೆಲ್‌ ಟೆಲಿಕಾಂ ಗುಡ್‌ ನ್ಯೂಸ್‌ ನೀಡಿದೆ. ಇದೇ ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ 5G ನೆಟ್‌ವರ್ಕ್ ಅನ್ನು ನಿಯೋಜಿಸಲು ಪ್ರಾರಂಭಿಸುವುದಾಗಿ ಏರ್‌ಟೆಲ್ ಘೋಷಣೆ ಮಾಡಿದೆ. ಈ ಮೂಲಕ ಭಾರತದಲ್ಲಿ 5G ನೆಟ್‌ವರ್ಕ್‌ ಇದೇ ತಿಂಗಳು ನೀಡುವುದಾಗಿ ಏರ್‌ಟೆಲ್‌ ಹೇಳಿಕೊಂಡಿದೆ.

ಏರ್‌ಟೆಲ್‌

ಹೌದು, ಏರ್‌ಟೆಲ್‌ ಟೆಲಿಕಾಂ ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಭಾರತದಲ್ಲಿ 5G ನೆಟ್‌ವರ್ಕ್‌ ನಿಯೋಜನೆಯನ್ನು ಪ್ರಾರಂಭಿಸಲಿದೆ. ಇದಕ್ಕಾಗಿ ಎರಿಕ್ಸನ್, ನೋಕಿಯಾ ಮತ್ತು ಸ್ಯಾಮ್‌ಸಂಗ್‌ನೊಂದಿಗೆ 5G ನೆಟ್‌ವರ್ಕ್ ಒಪ್ಪಂದಗಳಿಗೆ ಸಹಿ ಹಾಕಿರುವುದಾಗಿ ಏರ್‌ಟೆಲ್‌ ಘೋಷಣೆ ಮಾಡಿದೆ. ಈ ಮೂಲಕ ಭಾರತದಲ್ಲಿ 5G ಸೇವೆಗಳನ್ನು ರೋಲ್‌ಔಟ್ ಮಾಡುವ ಮೊದಲ ಟೆಲಿಕಾಂ ಎನಿಸಿಕೊಳ್ಳುವ ಪ್ರಯತ್ನಕ್ಕೆ ಏರ್‌ಟೆಲ್‌ ಟೆಲಿಕಾಂ ಮುಂದಾಗಿದೆ.

ನೆಟ್‌ವರ್ಕ್‌

ಇನ್ನು ಭಾರತದಲ್ಲಿ 5G ನೆಟ್‌ವರ್ಕ್‌ ಅನ್ನು ಏರ್‌ಟೆಲ್‌ ಎರಿಕ್ಸನ್, ನೋಕಿಯಾ ಮತ್ತು ಸ್ಯಾಮ್‌ಸಂಗ್ ಸಹಾಯದೊಂದಿಗೆ ಪ್ರಾರಂಭಿಸಲಿದೆ. ಈಗಾಗಲೇ ಟೆಲಿಕಾಂ ಇಲಾಖೆಯು ನಡೆಸಿದ ಸ್ಪೆಕ್ಟ್ರಮ್ ಹರಾಜಿನಲ್ಲಿ ಏರ್‌ಟೆಲ್ ಕೂಡ ಭಾಗವಹಿಸಿ, 900 MHz, 1800 MHz, 2100 MHz, 3300 MHz ಮತ್ತು 26 GHz ತರಂಗಾಂತರಗಳಲ್ಲಿ 19867.8 MHZ ಸ್ಪೆಕ್ಟ್ರಮ್ ಅನ್ನು ಬಿಡ್ ಮಾಡಿ ಸ್ವಾಧೀನಪಡಿಸಿಕೊಂಡಿದೆ. ಅದರಂತೆ ಇದೀಗ ಭಾರತದಲ್ಲಿ 5G ನೆಟ್‌ವರ್ಕ್‌ ಪ್ರಾರಂಭಕ್ಕೆ ಮುಂದಡಿ ಹಾಕಿದೆ. ಏರ್‌ಟೆಲ್‌ 5G ನೆಟ್‌ವರ್ಕ್‌ ಹೇಗಿರಲಿದೆ ಅನ್ನೊದರ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

5G

ಭಾರತದಲ್ಲಿ 5G ಸೇವೆಗಳನ್ನು ಪ್ರಾರಂಭಿಸುವುದರ ಬಗ್ಗೆ ಏರ್‌ಟೆಲ್‌ ಎಂಡಿ ಮತ್ತು ಸಿಇಒ ಗೋಪಾಲ್ ವಿಟ್ಟಲ್ ಘೊಷಣೆ ಮಾಡಿದ್ದಾರೆ. ಏರ್‌ಟೆಲ್ ಆಗಸ್ಟ್‌ನಲ್ಲಿ 5G ಸೇವೆಗಳನ್ನು ಪ್ರಾರಂಭಿಸುತ್ತದೆ ಎಂದು ಘೋಷಿಸಲು ನಾವು ಸಂತೋಷಪಡುತ್ತೇವೆ ಎಂದಿದ್ದಾರೆ. ಈಗಾಗಲೇ ನಮ್ಮ ನೆಟ್‌ವರ್ಕ್ ಒಪ್ಪಂದಗಳನ್ನು ಅಂತಿಮಗೊಳಿಸಲಾಗಿದೆ, ನಮ್ಮ ಗ್ರಾಹಕರಿಗೆ 5G ಸಂಪರ್ಕದ ಸಂಪೂರ್ಣ ಪ್ರಯೋಜನಗಳನ್ನು ತಲುಪಿಸಲು ಏರ್‌ಟೆಲ್ ಪ್ರಪಂಚದಾದ್ಯಂತದ ಅತ್ಯುತ್ತಮ ತಂತ್ರಜ್ಞಾನ ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

ಭಾರತದಲ್ಲಿ

ಇನ್ನು ಭಾರತದಲ್ಲಿ 5G ನೆಟ್‌ವರ್ಕ್ ಅನ್ನು ಪರೀಕ್ಷಿಸಿರುವ ಭಾರತದ ಮೂರು ಟೆಲಿಕಾಂ ಕಂಪನಿಗಳಲ್ಲಿ ಏರ್‌ಟೆಲ್ ಕಂಪೆನಿ ಮೊದಲನೆಯದಾಗಿದೆ. ಈಗಾಗಲೇ ಏರ್‌ಟೆಲ್‌ ಟೆಲಿಕಾಂ ಕಂಪನಿಯು ಅನೇಕ ಸ್ಥಳಗಳಲ್ಲಿ ಬಹು ಪಾಲುದಾರರೊಂದಿಗೆ ಹಲವಾರು ಬಳಕೆಯ ಪ್ರಕರಣಗಳನ್ನು ಪರೀಕ್ಷಿಸಿದೆ. ಇದು ಹೈದರಾಬಾದ್‌ನಲ್ಲಿ ಲೈವ್ 4G ನೆಟ್‌ವರ್ಕ್‌ನಲ್ಲಿ ಭಾರತದ ಮೊದಲ 5G ಅನುಭವ ಹೇಗಿರಲಿದೆ ಎನ್ನುವುದನ್ನು ಪ್ರದರ್ಶಿಸಿತ್ತು. ನಂತರ ಭಾರತದ ಮೊದಲ ಗ್ರಾಮೀಣ 5G ಪ್ರಯೋಗವನ್ನು ಸಹ ನಡೆಸುವ ಮೂಲಕ ಹೊಸ ಹೆಜ್ಜೆಯನ್ನು ಇಟ್ಟಿತ್ತು. ಇದೀಗ ಅಂತಿಮವಾಗಿ ಭಾರತದಲ್ಲಿ ಮೊದಲ 5G ಸೇವೆ ನೀಡುವ ನೆಟ್‌ವರ್ಕ್‌ ಆಗುವತ್ತ ಹೆಜ್ಜೆ ಹಾಕಿದೆ.

ಏರ್‌ಟೆಲ್‌

ಏರ್‌ಟೆಲ್‌ ಭಾರತದಲ್ಲಿ 5G ನೆಟ್‌ವರ್ಕ್‌ ಅನ್ನು ಪ್ರಾರಂಭಿಸಿದ ನಂತರ ಟೆಲಿಕಾಂ ವಲಯದಲ್ಲಿ ಸಾಕಷ್ಟು ಬದಲಾವಣೆ ಆಗುವ ಸಾಧ್ಯತೆಯಿದೆ. ಏರ್‌ಟೆಲ್‌ ಅಲ್ಟ್ರಾ-ಹೈ-ಸ್ಪೀಡ್, ಕಡಿಮೆ ಲೇಟೆನ್ಸಿ ಮತ್ತು ದೊಡ್ಡ ಡೇಟಾ ಹ್ಯಾಂಡ್ಲಿಂಗ್ ಸಾಮರ್ಥ್ಯಗಳನ್ನು ವ್ಯಾಪಿಸಿರುವ 5G ಸೇವೆಗಳನ್ನು ಹೊರತರಲಿದೆ. ಇದು ಬಳಕೆದಾರರಿಗೆ ಉತ್ತಮ ಅನುಭವವನ್ನು ಸಕ್ರಿಯಗೊಳಿಸಲಿದೆ. ಇದು ಉದ್ಯಮ ಮತ್ತು ಉದ್ಯಮದ ಗ್ರಾಹಕರೊಂದಿಗೆ ಹೊಸ, ನವೀನ ಬಳಕೆಯ ಪ್ರಕರಣಗಳನ್ನು ಅನುಸರಿಸಲು ಅನುವು ಮಾಡಿಕೊಡುತ್ತದೆ.

ಶೀಘ್ರದಲ್ಲೇ

ಇನ್ನು ಶೀಘ್ರದಲ್ಲೇ ಭಾರತದಲ್ಲಿ 5G ಸೇವೆಗಳು ಬರುವುದರಿಂದ ಸಾಕಷ್ಟು ಬದಲಾವಣೆಗಳಿಗೆ ಸಾಕ್ಷಿಯಾಗಲಿದೆ. ಭಾರತದಲ್ಲಿ 5G ನೆಟ್‌ವರ್ಕ್‌ ಹೊಸ ಡಿಜಿಟಲ್‌ ಜಗತ್ತಿಗೆ ತೆರೆದುಕೊಳ್ಳುವಂತೆ ಮಾಡಲಿದೆ. ಏಕೆಂದರೆ 5G ಸೇವೆಗಳು 4G ಗಿಂತ ಹತ್ತುಪಟ್ಟು ವೇಗವಾಗಿ ದೊರೆಯಲಿವೆ. ಇನ್ನು 5G ಸೇವೆ ಕೇವಲ ಬೆಳೆಯುತ್ತಿರುವ ನಿರ್ವಹಣೆ ಯನ್ನು ನಿರ್ವಾಹಕರಿಗೆ ಮಾತ್ರ ಸಕ್ರಿಯಗೊಳಿಸುವುದಿಲ್ಲ. ಬದಲಿಗೆ ಗ್ರಾಹಕರ ಡೇಟಾ ಅಗತ್ಯಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುವಂತೆ ಮಾಡಲಿದೆ. ಅಲ್ಲದೆ ಭಾರತದಲ್ಲಿ ಸೇವಾ ಪೂರೈಕೆದಾರರಿಗೆ 5G ಸಕ್ರಿಯಗೊಳಿಸಿದ ಡಿಜಿಟಲೀಕರಣದ ಆದಾಯದ ಯೋಜಿತ ಮೌಲ್ಯವು 2030 ರ ವೇಳೆಗೆ ಸರಿಸುಮಾರು USD 17 ಶತಕೋಟಿ ಆಗಿರುತ್ತದೆ ಎಂದು ಅಂದಾಜಿಸಲಾಗಿದೆ.

ಗ್ರಾಹಕರಿಗೆ

ಇದಲ್ಲದೆ 5G ಸೇವೆ ಗ್ರಾಹಕರಿಗೆ ಪ್ರಯಾಣದಲ್ಲಿರುವಾಗ ಗ್ರಾಹಕರ ಡೇಟಾ ಅನುಭವವನ್ನು ಸುಧಾರಿಸುತ್ತದೆ. ಗ್ರಾಹಕರಿಗೆ ಅವಶ್ಯವಿರುವ ಡೇಟಾ ಅಗತ್ಯಗಳನ್ನು ಹೆಚ್ಚು ಪರಿಣಾಮಕಾರಿ ಯಾಗಿ ಪೂರೈಸಲು 5G ಸಹಾಯ ಮಾಡಲಿದೆ, ಇದರಿಂದಾಗಿ ಒಟ್ಟಾರೆ ಗ್ರಾಹಕ ಅನುಭವವು ಉತ್ತಮವಾಗಿರುತ್ತದೆ. ಜೊತೆಗೆ ಸ್ಮಾರ್ಟ್ ಮತ್ತು ಹೆಚ್ಚು ಸಂಪರ್ಕಿತ ಜಗತ್ತನ್ನು ಸಕ್ರಿಯಗೊಳಿಸುತ್ತದೆ. ಇದರಿಂದ 5Gಯ ಆರಂಭಿಕ ಹಂತಗಳಲ್ಲಿ, ಸುಧಾರಿತ ಮೊಬೈಲ್ ಬ್ರಾಡ್‌ಬ್ಯಾಂಡ್ (eMBB) ಮತ್ತು ಸ್ಥಿರ ವೈರ್‌ಲೆಸ್ ಪ್ರವೇಶ (FWA) ವನ್ನು ಬಳಸಬೇಕಾಗುತ್ತದೆ. ಇವುಗಳು ಭಾರತದಲ್ಲಿ ಕಡಿಮೆ ಸ್ಥಿರ ಬ್ರಾಡ್‌ಬ್ಯಾಂಡ್ ಪೆನೆಟ್ರೇಷನ್ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ

ಪಡೆಯಲು

ಇದಲ್ಲದೆ ಮನರಂಜನೆಯನ್ನು ಪಡೆಯಲು ಸುರಕ್ಷಿತವಾದ ಮಾರ್ಗವನ್ನು ಕಲ್ಪಿಸಲಿದೆ. ಅಲ್ಲದೆ 5G ಆಗಮನದಿಂದ ಡೇಟಾ ಡೌನ್‌ಲೋಡ್ ವೇಗ ಹೆಚ್ಚಾಗಲಿದೆ. ಮೂರು ಪಟ್ಟು ಹೆಚ್ಚಿನ ಸ್ಪೆಕ್ಟ್ರಮ್ ದಕ್ಷತೆ ಮತ್ತು ಅತಿ ಕಡಿಮೆ ಸುಪ್ತತೆಯನ್ನು ಕಾಣಬಹುದಾಗಿದೆ. ಹಾಗೆಯೇ 5G ಸೇವೆ ಪಡೆದುಕೊಳ್ಳುವ ಗ್ರಾಹಕರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 4K ವೀಡಿಯೊವನ್ನು ವೀಕ್ಷಿಸಲು ಅವಕಾಶ ಪಡೆಯಲಿದ್ದಾರೆ. ಅಲ್ಲದೆ AR/ VR, ಮೊಬೈಲ್ ಗೇಮಿಂಗ್ ಅಪ್ಲಿಕೇಶನ್‌ಗಳು ಮತ್ತು ವಿವಿಧ ತಲ್ಲೀನಗೊಳಿಸುವ ಚಟುವಟಿಕೆಗಳು ಮತ್ತು ಹೊಸ ಅಪ್ಲಿಕೇಶನ್‌ಗಳನ್ನು ಬಳಸಲು ಅನುಮತಿಸುತ್ತದೆ.

ನೆಟ್‌ವರ್ಕ್‌

ಭಾರತದಲ್ಲಿ 5G ನೆಟ್‌ವರ್ಕ್‌ ಹೆಚ್ಚಿನ ಇಂಟರ್‌ನೆಟ್‌ ವೇಗಕ್ಕಾಗಿ ಅತಿ ಅವಶ್ಯಕ ಎನಿಸಿದೆ. ಹೆಚ್ಚಿನ ಜನರನ್ನು ಮತ್ತು ಹೆಚ್ಚಿನ ಸಾಧನಗಳನ್ನು ಬೆಂಬಲಿಸುವ ಬೃಹತ್ ನೆಟ್‌ವರ್ಕ್ ಸಾಮರ್ಥ್ಯ ಇದರಲ್ಲಿದೆ. ಯಾವುದೇ ಸಮಯದಲ್ಲಿ ಅನೇಕ ಉದ್ಯಮ ಅಪ್ಲಿಕೇಶನ್‌ಗಳು ಮತ್ತು ಬಳಕೆದಾರರನ್ನು ಬೆಂಬಲಿಸುವ ಸಾಮರ್ಥ್ಯ ಹೊಂದಿದೆ. ಇದು ಹೆಚ್ಚಿನ ಮಲ್ಟಿ GBPS ಗರಿಷ್ಠ ಡೇಟಾ ವೇಗವನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಅಲ್ಟ್ರಾ ಲೋ ಲೆಟೆನ್ಸಿ, ಕ್ರಿಯೆ ಮತ್ತು ಪ್ರತಿಕ್ರಿಯೆಯ ನಡುವಿನ ಹೆಚ್ಚಿನ ನೆಟ್‌ವರ್ಕ್ ವಿಶ್ವಾಸಾರ್ಹತೆಯನ್ನು ಹೊಂದಿದೆ.

Best Mobiles in India

English summary
Airtel announced that it has signed 5G network agreements with Ericsson, Nokia and Samsung to commence 5G deployment in August 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X