ಸದ್ಯದಲ್ಲೇ ಲಾಂಚ್‌ ಆಗಲಿದೆ ಅಮಾಜ್‌ಫಿಟ್‌ ಬ್ಯಾಂಡ್‌ 7! ಏನಿರಲಿದೆ ಫೀಚರ್ಸ್‌!

|

ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ ಬ್ಯಾಂಡ್‌ಗಳಿಗೆ ಸಾಕಷ್ಟು ಬೇಡಿಕೆಯಿದೆ. ಇದೇ ಕಾರಣ್ಕೆ ಹಲವು ಜನಪ್ರಿಯ ಕಂಪೆನಿಗಳು ಕೂಡ ವಿಶೇಷ ಸ್ಮಾರ್ಟ್‌ ಬ್ಯಾಂಡ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಅಮಾಜ್‌ಫಿಟ್‌ ಕಂಪೆನಿ ಕೂಡ ಮುಂಚೂಣಿಯಲ್ಲಿದೆ. ತನ್ನ ವಿಭಿನ್ನ ಮಾದರಿಯ ಬ್ಯಾಂಡ್‌ಗಳಿಂದ ಗಮನಸೆಳೆದಿರುವ ಅಮಾಜ್‌ಫಿಟ್‌ ಇದೀಗ ಹೊಸ ಅಮಾಜ್‌ಫಿಟ್‌ ಬ್ಯಾಂಡ್‌ 7 ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಈಗಾಗಲೇ ಇದರ ಲಾಂಚ್‌ ಪೇಜ್‌ ಅಮೆಜಾನ್‌ ಸೈಟ್‌ನಲ್ಲಿ ಲೈವ್‌ ಆಗಿದೆ.

ಅಮಾಜ್‌ಫಿಟ್‌

ಹೌದು, ಅಮಾಜ್‌ಫಿಟ್‌ ಕಂಪೆನಿ ಹೊಸ ಬ್ಯಾಂಡ್‌ 7 ಪರಿಚಯಿಸಲು ತಯಾರಿ ನಡೆಸಿದೆ. ಭಾರತೀಯ ಮಾರುಕಟ್ಟೆಗೆ ಶೀಘ್ರದಲ್ಲೇ ಎಂಟ್ರಿ ನೀಡುವ ಸೂಚನೆ ನೀಡಿದ್ದು, ಅಮೆಜಾನ್ ಇಂಡಿಯಾದಲ್ಲಿ ಮೈಕ್ರೋ-ಸೈಟ್ ಲೈವ್ ಆಗಿದೆ. ಇನ್ನು ಈ ಹೊಸ ಅಮಾಜ್‌ಫಿಟ್‌ ಬ್ಯಾಂಡ್ 7 50ಕ್ಕೂ ಹೆಚ್ಚು ವಾಚ್ ಫೇಸ್‌ಗಳೊಂದಿಗೆ ಪ್ರೀ-ಲೋಡ್ ಆಗಿರಲಿದೆ. ಇದು 120 ಸ್ಪೋರ್ಟ್ಸ್‌ ಮೋಡ್‌ಗಳನ್ನು ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಹೊಸ ಬ್ಯಾಂಡ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮಾಜ್‌ಫಿಟ್‌

ಅಮಾಜ್‌ಫಿಟ್‌ ಬ್ಯಾಂಡ್ 7 1.47 ಇಂಚಿನ ಡಿಸ್‌ಪ್ಲೇ ಹೊಂದಿರಲಿದೆ. ಇದು 2.5D ಅಮೋಲೆಡ್‌ ಡಿಸ್‌ಪ್ಲೇ ಆಗಿದ್ದು, 198 × 368 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿರಲಿದೆ. ಈ ಡಿಸ್‌ಪ್ಲೇ 282ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದ್ದು, 50 ಕ್ಕೂ ಹೆಚ್ಚು ವಾಚ್ ಫೇಸ್‌ಗಳೊಂದಿಗೆ ಪ್ರೀ ಲೋಡ್‌ ಆಗಿದೆ. ಇದರಲ್ಲಿ 8 ವಾಚ್ ಫೇಸ್‌ಗಳನ್ನು ಎಡಿಟ್‌ ಮಾಡಬಹುದಾಗಿದೆ. ಇದು ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಕಾರ್ಯವನ್ನು ಸಹ ಬೆಂಬಲಿಸಲಿದೆ.

ಅಮಾಜ್‌ಫಿಟ್‌

ಇನ್ನು ಅಮಾಜ್‌ಫಿಟ್‌ ಬ್ಯಾಂಡ್‌ 7 ಆಪ್ಟಿಕಲ್ ಹಾರ್ಟ್‌ ರೇಟ್‌ ಮಾನಿಟರ್‌, ಬ್ಲಡ್‌ ಆಕ್ಸಿಜನ್‌ ಸೆನ್ಸಾರ್‌ ಮತ್ತು ಮೋಷನ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದರೊಂದಿಗೆ ನಿರಂತರ ಹೃದಯ ಬಡಿತ ಟ್ರ್ಯಾಕಿಂಗ್, ನಿರಂತರ ರಕ್ತ ಆಮ್ಲಜನಕದ ಮೇಲ್ವಿಚಾರಣೆ, ನಿರಂತರ ಒತ್ತಡ ಮಟ್ಟದ ಮೇಲ್ವಿಚಾರಣೆ, ನಿದ್ರೆ ಟ್ರ್ಯಾಕಿಂಗ್, ಸ್ಟೆಪ್ಸ್‌ ಟ್ರ್ಯಾಕಿಂಗ್, ಸ್ತ್ರೀ ಆರೋಗ್ಯ ಟ್ರ್ಯಾಕಿಂಗ್ ಅನ್ನು ಕೂಡ ಬೆಂಬಲಿಸುವ ಫೀಚರ್ಸ್‌ಗಳನ್ನು ಬೆಂಬಲಿಸಲಿದೆ.

ಅಮಾಜ್‌ಫಿಟ್‌ ಬ್ಯಾಂಡ್ 7

ಅಮಾಜ್‌ಫಿಟ್‌ ಬ್ಯಾಂಡ್ 7 ಕಂಪನಿಯು ಅಭಿವೃದ್ಧಿಪಡಿಸಿದ ಪೀಕ್‌ಬೀಟ್ಸ್, ಎಕ್ಸರ್‌ಸೆನ್ಸ್ ಮತ್ತು ಸೊಮ್ನಸ್‌ಕೇರ್ ಅಲ್ಗಾರಿದಮ್‌ ಅನ್ನು ಹೊಂದಿದೆ. ಇದು 120 ವರ್ಕ್‌ಔಟ್ ಮೋಡ್‌ಗಳನ್ನು ಬೆಂಬಲಿಸಲಿದೆ. ಅಲ್ಲದೆ ಕಂಪನಿ ಸ್ವಾಮ್ಯದ ಅಲ್ಗಾರಿದಮ್‌ನೊಂದಿಗೆ ವಾಕಿಂಗ್, ರನ್ನಿಂಗ್, ಎಲಿಪ್ಟಿಕಲ್ ಮತ್ತು ರೋ ಮೆಷಿನ್ ಆಕ್ಟಿವಿಟಿಗಳನ್ನು ಆಟೋ ಡಿಟೆಕ್ಟ್‌ ಮಾಡಲಿದೆ. ಇದು 10 ಮಿನಿ ಅಪ್ಲಿಕೇಶನ್‌ಗಳನ್ನು ನೀಡುವ Zepp OS ನೊಂದಿಗೆ ಫ್ರೀ ಲೋಡ್ ಆಗಿದೆ.

ಅಮಾಜ್‌ಫಿಟ್‌ ಬ್ಯಾಂಡ್‌ 7

ಅಮಾಜ್‌ಫಿಟ್‌ ಬ್ಯಾಂಡ್‌ 7 232mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 18 ದಿನಗಳ ಬಾಳಿಕೆ ನೀಡಲಿದೆ. ಆದರೆ ಲಾಂಚ್‌ ಮೈಕ್ರೋ-ಸೈಟ್‌ನಲ್ಲಿ ಉಲ್ಲೇಖಿಸಿದಂತೆ ಬಳಕೆದಾರರು ಸುಮಾರು 12 ದಿನಗಳ ಬ್ಯಾಟರಿ ಅವಧಿಯನ್ನು ನಿರೀಕ್ಷಿಸಬಹುದು. ಈ ಬ್ಯಾಂಡ್ 7 ಬ್ಯಾಟರಿ ಸೇವರ್ ಮೋಡ್‌ನಲ್ಲಿ 28 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಬ್ರ್ಯಾಂಡ್ ಹೇಳಿಕೊಂಡಿದೆ. ಇನ್ನು ಕನೆಕ್ಟವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌ 5.2 ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಅಮಾಜ್‌ಫಿಟ್ ಬ್ಯಾಂಡ್ 7 ಭಾರತದಲ್ಲಿ 4,000ರೂ. ಬೆಲೆಯಲ್ಲಿ ಬರುವ ಸಾಧ್ಯತೆಯಿದೆ. ಇದರ ಕಲರ್‌ ಆಯ್ಕೆಗಳು ಹಾಗೂ ಲಭ್ಯತೆಯ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಸದ್ಯದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡೋದು ಪಕ್ಕಾ ಆಗಿದೆ.

Best Mobiles in India

English summary
Amazfit’s latest fitness tracker offers up to 18 days of battery life and boots Zepp OS.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X