ಅಮಾಜ್‌ಫಿಟ್‌ ಫಾಲ್ಕನ್‌ ಸ್ಮಾರ್ಟ್‌ವಾಚ್‌ ಬಿಡುಗಡೆ! 14 ದಿನಗಳ ಬ್ಯಾಟರಿ ಬಾಳಿಕೆ!

|

ಅಮಾಜ್‌ಫಿಟ್‌ ಕಂಪೆನಿ ಜನಪ್ರಿಯ ಸ್ಮಾರ್ಟ್‌ವಾಚ್‌ ತಯಾರಕ ಕಂಪೆನಿಗಳಲ್ಲಿ ಒಂದಾಗಿದೆ. ತನ್ನ ವೈವಿಧ್ಯಮಯ ಸ್ಮಾರ್ಟ್‌ವಾಚ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಸೈ ಎನಿಸಿಕೊಂಡಿದೆ. ಸದ್ಯ ಇದೀಗ ಅಮಾಜ್‌ಫಿಟ್‌ ಕಂಪೆನಿ ಹೊಸ ಅಮಾಜ್‌ಫಿಟ್‌ ಫಾಲ್ಕನ್‌ ಸ್ಮಾರ್ಟ್‌ವಾಚ್‌ ಅನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್‌ 1.28 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು 150 ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ.

ಅಮಾಜ್‌ಫಿಟ್‌

ಹೌದು, ಅಮಾಜ್‌ಫಿಟ್‌ ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಅಮಾಜ್‌ಫಿಟ್‌ ಫಾಲ್ಕನ್‌ ಸ್ಮಾರ್ಟ್‌ವಾಚ್‌ ಪರಿಚಯಿಸಿದೆ. ಇದು ಡ್ಯುಯಲ್-ಬ್ಯಾಂಡ್ GPS ಟ್ರ್ಯಾಕಿಂಗ್‌ ಅನ್ನು ಹೊಂದಿದೆ, ಅಲ್ಲದೆ ಹೃದಯಬಡಿತ, ರಕ್ತದ ಆಮ್ಲಜನಕ ಮತ್ತು ಒತ್ತಡದ ಮಟ್ಟದ ಮೇಲ್ವಿಚಾರಣೆಯನ್ನು ಕೂಡ ನಡೆಸುವ ಸಾಮರ್ಥ್ಯ ಪಡೆದಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್‌ ಏನೆಲ್ಲಾ ವಿಶೇಷತೆಯನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮಾಜ್‌ಫಿಟ್‌

ಅಮಾಜ್‌ಫಿಟ್‌ ಫಾಲ್ಕನ್‌ ಸ್ಮಾರ್ಟ್‌ವಾಚ್‌ 416 x 416 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 1.28 ಇಂಚಿನ ಹೆಚ್‌ಡಿ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,000 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದ್ದು, ಆಲ್‌ವೇಸ್‌ ಆನ್‌ ಡಿಸ್‌ಪ್ಲೇ ಇದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಟೈಟಾನಿಯಂ ಯೂನಿಬಾಡಿಯನ್ನು ಹೊಂದಿದ್ದು, 20ಎಟಿಎಂ ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಪಡೆದಿದೆ. ಇದರಿಂದ ಸ್ವಿಮ್ಮಿಂಗ್‌ ಸಮಯದಲ್ಲಿಯೂ ಈ ಸ್ಮಾರ್ಟ್‌ವಾಚ್‌ ಅನ್ನು ಧರಿಸಲು ಸಾಧ್ಯವಾಗಲಿದೆ.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ ಸ್ಪೋರ್ಟ್ಸ್‌ ಮೋಡ್‌ನಲ್ಲಿ ಆಲ್‌ವೇಸ್‌ ಆನ್‌ ಮೋಡ್‌ ಹೊಂದಿರುವುದರಿಂದ ವ್ಯಾಯಾಮದ ಅಂಕಿಅಂಶಗಳನ್ನು ಸುಲಭವಾಗಿ ಪರಿಶೀಲಿಸಬಹುದು. ಅಲ್ಲದೆ ಮ್ಯೂಸಿಕ್‌ ಅನ್ನು ನೀವು ಕೇಳಬಯಸಿದರೆ ನೀವು ವಾಯರ್‌ಲೆಸ್ ಹೆಡ್‌ಫೋನ್‌ಗಳನ್ನು ಕನೆಕ್ಟ್‌ ಮಾಡಬಹುದಾಗಿದೆ. ಇದು ಡ್ಯುಯಲ್-ಬ್ಯಾಂಡ್ GPS ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಒಳಗೊಂಡಿದ್ದು, ನಿಮ್ಮ ಚಲನೆಯನ್ನು ನಿಖರವಾಗಿ ಟ್ರ್ಯಾಕ್ ಮಾಡುತ್ತದೆ. ಜೊತೆಗೆ, ನಿಮ್ಮ ವ್ಯಾಯಾಮದ ಡೇಟಾವನ್ನು ನೀವು ಅಡಿಡಾಸ್ ರನ್ನಿಂಗ್‌ನಂತಹ ಅಪ್ಲಿಕೇಶನ್‌ಗಳಿಗೆ ಸಿಂಕ್ ಮಾಡಬಹುದಾಗಿದೆ.

ಅಮಾಜ್‌ಫಿಟ್‌

ಅಮಾಜ್‌ಫಿಟ್‌ ಫಾಲ್ಕನ್‌ ಸ್ಮಾರ್ಟ್‌ವಾಚ್‌ ಮೂಲಕ ನೀವು ನಿದ್ರೆ, ಹೃದಯ ಬಡಿತ, ರಕ್ತದ ಆಮ್ಲಜನಕ ಮತ್ತು ಒತ್ತಡದ ಮಟ್ಟದ ಮೇಲ್ವಿಚಾರಣೆಯ್ನು ನಡೆಸಬಹುದಾಗಿದೆ. ಇದು 500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 14 ದಿನಗಳವರೆಗೆ ಬಾಳಿಕೆಯನ್ನು ನೀಡಲಿದೆ. ಇನ್ನು ಈ ಸ್ಮಾರ್ಟ್ ವಾಚ್ ಝೆಪ್ ಕೋಚ್ ಎಂಬ ಸ್ಮಾರ್ಟ್ ಟ್ರೈನಿಂಗ್‌ ಅಲ್ಗಾರಿದಮ್‌ ಅನ್ನು ಒಳಗೊಂಡಿದೆ. ಇದರಿಂದ ನಿಮ್ಮ ಮೈಕಟ್ಟು ಮತ್ತು ಅನುಭವದ ಆಧಾರದ ಮೇಲೆ AI-ಆಧಾರಿತ ವ್ಯಾಯಾಮದ ಶಿಫಾರಸುಗಳನ್ನು ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಅಮಾಜ್‌ ಫಿಟ್‌ ಕಂಪೆನಿ ಸದ್ಯ ಫಾಲ್ಕನ್‌ ಸ್ಮಾರ್ಟ್‌ವಾಚ್‌ ಅನ್ನು ಯುಎಸ್‌ನಲ್ಲಿ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ ಯುಎಸ್‌ನಲ್ಲಿ $499.99 (41,208)ರೂ ಬೆಲೆಯಲ್ಲಿ ಲಭ್ಯವಿದೆ. ಇದು ಯುಕೆ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಸ್ಪೇನ್‌ನಂತಹ ಯುರೋಪ್‌ನ ಪ್ರದೇಶಗಳಲ್ಲಿ ಇದರ ಬೆಲೆ €499.99(41,208ರೂ)ಆಗಿದೆ. ಇನ್ನು ಈ ಸ್ಮಾರ್ಟ್ ವಾಚ್ ಅನ್ನು ಅಮಾಜ್‌ಫಿಟ್ ಸ್ಟೋರ್‌ಗಳು ಮತ್ತು ಅಮೆಜಾನ್‌ನಿಂದ ಖರೀದಿಸಬಹುದು. ಬ್ರೆಜಿಲ್, ಮೆಕ್ಸಿಕೋ ಮತ್ತು ಇತರ ದೇಶಗಳು ಶೀಘ್ರದಲ್ಲೇ ಅದನ್ನು ಅಲೈಕ್ಸ್‌ಪ್ರೆಸ್‌ನಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.

ಅಮಾಜ್‌ಫಿಟ್‌

ಇನ್ನು ಅಮಾಜ್‌ಫಿಟ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸ ಅಮಾಜ್‌ಫಿಟ್‌ GTR 4 ಮತ್ತು GTS 4 ಅನ್ನು ಪರಿಚಯಿಸಿದೆ. ಇದು ಡ್ಯುಯಲ್-ಬ್ಯಾಂಡ್ ವೃತ್ತಾಕಾರದ-ಧ್ರುವೀಕೃತ GPS ಆಂಟೆನಾ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ಗಳು ಐದು ಉಪಗ್ರಹ ಸ್ಥಾನೀಕರಣ ವ್ಯವಸ್ಥೆಗಳನ್ನು ಬೆಂಬಲಿಸುತ್ತವೆ. ಅಲ್ಲದೆ ರಿಯಲ್‌ ಟೈಂ GPS ಟ್ರ್ಯಾಕಿಂಗ್‌ಗಾಗಿ ಕೂಡ ಬಳಸಬಹುದಾಗಿದೆ. ಇವುಗಳು ರನ್ನಿಂಗ್‌, ಸ್ಲೈಕಿಂಗ್‌ ಸೇರಿದಂತೆ 150ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ.

Best Mobiles in India

English summary
Amazfit Falcon smartwatch with 14-day battery launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X