ಅಮಾಜ್‌ಫಿಟ್‌ನಿಂದ ಎರಡು ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌! GPS ಟ್ರ್ಯಾಕಿಂಗ್‌ ವಿಶೇಷ!

|

ಸ್ಮಾರ್ಟ್‌ವಾಚ್‌ ಮಾರುಕಟ್ಟೆ ಇಂದು ಸಾಕಷ್ಟು ಪ್ರಾಬಲ್ಯವನ್ನು ಸಾಧಿಸಿದೆ. ಹೆಲ್ತ್‌ ಫಿಚರ್ಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳಿಗೆ ಸಾಕಷ್ಟು ಬೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಪ್ರತಿಷ್ಠಿತ ಬ್ರ್ಯಾಂಡ್‌ಗಳು ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿವೆ. ಇದರಲ್ಲಿ ಅಮಾಜ್‌ಫಿಟ್‌ ಕಂಪೆನಿ ಕೂಡ ಒಂದಾಗಿದೆ. ಅಮಾಜ್‌ಫಿಟ್‌ ಕಂಪೆನಿ ತನ್ನ ಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳಿಗೆ ಹೆಸರುವಾಸಿಯಾಗಿದೆ. ಸದ್ಯ ಅಮಾಜ್‌ಫಿಟ್‌ ಕಂಪೆನಿ ತನ್ನ ಹೊಸ ಅಮಾಜ್‌ಫಿಟ್‌ GTR 4 ಮತ್ತು GTS 4 ಅನ್ನು ಲಾಂಚ್‌ ಮಾಡಿದೆ.

ಅಮಾಜ್‌ಫಿಟ್‌

ಹೌದು, ಅಮಾಜ್‌ಫಿಟ್‌ ಕಂಪೆನಿ ಹೊಸ ಅಮಾಜ್‌ಫಿಟ್‌ GTR 4 ಮತ್ತು GTS 4 ಅನ್ನು ಪರಿಚಯಿಸಿದೆ. ಇದು ಡ್ಯುಯಲ್-ಬ್ಯಾಂಡ್ ವೃತ್ತಾಕಾರದ-ಧ್ರುವೀಕೃತ GPS ಆಂಟೆನಾ ತಂತ್ರಜ್ಞಾನವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ಗಳು ಐದು ಉಪಗ್ರಹ ಸ್ಥಾನೀಕರಣ ವ್ಯವಸ್ಥೆಗಳನ್ನು ಬೆಂಬಲಿಸುತ್ತವೆ. ಅಲ್ಲದೆ ರಿಯಲ್‌ ಟೈಂ GPS ಟ್ರ್ಯಾಕಿಂಗ್‌ಗಾಗಿ ಕೂಡ ಬಳಸಬಹುದಾಗಿದೆ. ಇವುಗಳು ರನ್ನಿಂಗ್‌, ಸ್ಲೈಕಿಂಗ್‌ ಸೇರಿದಂತೆ 150ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಒಳಗೊಂಡಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮಾಜ್‌ಫಿಟ್‌

ಅಮಾಜ್‌ಫಿಟ್‌ GTR 4 ಸ್ಮಾರ್ಟ್‌ವಾಚ್‌ 1.43-ಇಂಚಿನ HD ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 466x466 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಹೊಂದಿಕೆಯಾಗುವ ಆಲ್‌ವೇಸ್‌ ಆನ್ ಡಿಸ್‌ಪ್ಲೇಗಳೊಂದಿಗೆ 200 ಕ್ಕೂ ಹೆಚ್ಚು ವಾಚ್ ಫೇಸ್‌ಗಳನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್ ವಾಚ್ ಮೆಟಾಲಿಕ್‌ ಮಿಡಲ್‌ ಫ್ರೇಮ್‌ ಅನ್ನು ಹೊಂದಿದೆ. ಇದು 10 ಎಂಎಂ ಸ್ಲಿಮ್ ಮತ್ತು ಸುಮಾರು 34 ಗ್ರಾಂ ತೂಕವನ್ನು ಹೊಂದಿದೆ.

ಅಮಾಜ್‌ಫಿಟ್‌

ಇನ್ನು ಅಮಾಜ್‌ಫಿಟ್‌ GTS 4 ಸ್ಮಾರ್ಟ್‌ವಾಚ್‌ 1.75 ಇಂಚಿನ HD ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 390x450 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ವಾಚ್‌ 150ಕ್ಕೂ ಹೆಚ್ಚು ವಾಚ್‌ ಫೇಸ್‌ಗಳನ್ನು ಹೊಂದಿದ್ದು, ಆಲ್‌ವೇಸ್‌ ಆನ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಅಲ್ಯೂಮಿನಿಯಂ ಮಿಶ್ರಲೋಹ ಮಿಡಲ್‌ ಫ್ರೇಮ್‌ ಅನ್ನು ಹೊಂದಿದೆ.

ಸ್ಮಾರ್ಟ್‌ವಾಚ್‌ಗಳು

ಈ ಎರಡು ಸ್ಮಾರ್ಟ್‌ವಾಚ್‌ಗಳು ಡ್ಯುಯಲ್-ಬ್ಯಾಂಡ್ ವೃತ್ತಾಕಾರದ-ಧ್ರುವೀಕೃತ GPS ಆಂಟೆನಾ ತಂತ್ರಜ್ಞಾನವನ್ನು ಹೊಂದಿವೆ. ಇದನ್ನು ನಿಖರವಾದ ನೈಜ-ಸಮಯದ ಜಿಪಿಎಸ್ ಟ್ರ್ಯಾಕಿಂಗ್‌ಗಾಗಿ ಬಳಸಬಹುದು. ಈ ಫೀಚರ್ಸ್‌ ಅನ್ನು ಶೀಘ್ರದಲ್ಲೇ ಕಂಪೆನಿ ಪರಿಚಯಿಸಲಿದ್ದು, ಬಳಕೆದಾರರಿಗೆ ರೂಟ್ ಫೈಲ್‌ಗಳನ್ನು ಆಮದು ಮಾಡಿಕೊಳ್ಳಲು ಮತ್ತು ನೈಜ ಸಮಯದಲ್ಲಿ ಅವುಗಳನ್ನು ನ್ಯಾವಿಗೇಟ್ ಮಾಡಲು ಅನುಮತಿಸುತ್ತದೆ.

ಅಮಾಜ್‌ಫಿಟ್‌

ಇನ್ನು ಅಮಾಜ್‌ಫಿಟ್‌ GTR 4 ಮತ್ತು ಅಮಾಜ್‌ಫಿಟ್‌ GTS 4 ಸ್ಮಾರ್ಟ್‌ವಾಚ್‌ 150ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿವೆ. ಈ ಸ್ಮಾರ್ಟ್ ವಾಚ್‌ಗಳಲ್ಲಿ ಸ್ವಯಂಚಾಲಿತವಾಗಿ 15 ಶಕ್ತಿ ತರಬೇತಿ ವ್ಯಾಯಾಮಗಳು ಮತ್ತು ಎಂಟು ಕ್ರೀಡಾ ಚಲನೆಗಳನ್ನು ಗುರುತಿಸಬಹುದಾದ ಪ್ರೋಗ್ರಾಮ್ ನೀಡಲಾಗಿದೆ. ಇವುಗಳು ರಕ್ತದ ಆಮ್ಲಜನಕ, ಹೃದಯ ಬಡಿತ ಮತ್ತು ಒತ್ತಡದ ಮಟ್ಟವನ್ನು 24/7 ಮೇಲ್ವಿಚಾರಣೆಗಾಗಿ ಹೊಸ ಬಯೋಟ್ರ್ಯಾಕರ್ 4.0 PPG ಬಯೋಮೆಟ್ರಿಕ್ ಆಪ್ಟಿಕಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ.

ಅಮಾಜ್‌ಫಿಟ್‌

ಅಮಾಜ್‌ಫಿಟ್‌ GTR 4 ಸ್ಮಾರ್ಟ್‌ವಾಚ್‌ 475mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ನಿಯಮಿತ ಬಳಕೆಯಲ್ಲಿ ಎರಡು ವಾರಗಳವರೆಗೆ ಬ್ಯಾಕ್‌ಅಪ್‌ ನೀಡಲಿದೆ. ಆದರೆ ಅಮಾಜ್‌ಫಿಟ್‌ GTS 4 ಸ್ಮಾರ್ಟ್‌ವಾಚ್‌ 300mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ, ಇದು ಏಳು ದಿನಗಳ ಬ್ಯಾಕಪ್ ಅನ್ನು ಒದಗಿಸುತ್ತದೆ ಎಂದು ಹೇಳಲಾಗುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಅಮಾಜ್‌ಫಿಟ್ ಜಿಟಿಆರ್ 4 ಮತ್ತು ಅಮಾಜ್‌ಫಿಟ್ ಜಿಟಿಎಸ್ 4 ಸ್ಮಾರ್ಟ್‌ವಾಚ್‌ಗಳ ಬೆಲೆ $199.99 (ಅಂದಾಜು 16,000ರೂ) ಬೆಲೆ ಹೊಂದಿವೆ. Amazfit GTR 4 ರೇಸ್‌ಟ್ರಾಕ್ ಗ್ರೇ, ಸೂಪರ್‌ಸ್ಪೀಡ್ ಬ್ಲ್ಯಾಕ್ ಮತ್ತು ವಿಂಟೇಜ್ ಬ್ರೌನ್ ಲೆದರ್ ಬಣ್ಣಗಳಲ್ಲಿ ಬರುತ್ತದೆ. ಆದರೆ ಅಮಾಜ್‌ಫಿಟ್‌ GTS 4 Autumn ಬ್ರೌನ್, ಇನ್ಫೈನೈಟ್ ಕಪ್ಪು, ಮಿಸ್ಟಿ ವೈಟ್ ಮತ್ತು ರೋಸ್ಬಡ್ ಪಿಂಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಾಗಲಿವೆ.

Best Mobiles in India

English summary
Amazfit GTR 4, GTS 4 Smartwatches With GPS Navigation Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X