ಅಮಾಜ್‌ಫಿಟ್‌ನಿಂದ ಹೊಸ ಸ್ಮಾರ್ಟ್‌ವಾಚ್‌ ಲಾಂಚ್‌! GPS ಆಂಟೆನಾ ಟೆಕ್ನಾಲಜಿ!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ವಾಚ್‌ಗಳು ಸಾಕಷ್ಟು ಬೇಡಿಕೆ ಪಡೆದುಕೊಂಡಿವೆ. ಇದರಲ್ಲಿ ಅಮಾಜ್‌ಫಿಟ್‌ ಕಂಪೆನಿಯ ಸ್ಮಾರ್ಟ್‌ವಾಚ್‌ಗಳು ಹೆಚ್ಚಿನ ಜನಪ್ರಿಯತೆ ಪಡೆದಿವೆ. ಅಮಾಜ್‌ಫಿಟ್‌ ಕಂಪೆನಿ ಕೂಡ ವಿವಿಧ ಬೆಲೆ ಶ್ರೇಣಿಯಲ್ಲಿ ವೈವಿಧ್ಯಮಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಭಾರತದಲ್ಲಿ ಅಮಾಜ್‌ಫಿಟ್‌ GTS 4 ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಇಂಟರ್‌ಬಿಲ್ಟ್‌ ಡ್ಯುಯಲ್-ಬ್ಯಾಂಡ್ ವೃತ್ತಾಕಾರದ-ಧ್ರುವೀಕೃತ GPS ಆಂಟೆನಾ ಟೆಕ್ನಾಲಜಿಯನ್ನು ಒಳಗೊಂಡಿದೆ.

ಅಮಾಜ್‌ಫಿಟ್‌

ಹೌದು, ಅಮಾಜ್‌ಫಿಟ್‌ GTS 4 ಸ್ಮಾರ್ಟ್‌ವಾಚ್‌ ಅನ್ನು ಪರಿಚಯಿಸಿದೆ. ಇದು 150ಕ್ಕೂ ಹೆಚ್ಚು ವಾಚ್‌ಫೇಸ್‌ಗಳನ್ನು ಹೊಂದಿದ್ದು, ಆಲ್‌ವೇಸ್‌ ಆನ್‌ ಡಿಸ್‌ಪ್ಲೇಗೆ ಸೆಟ್‌ ಆಗಲಿದೆ. ಇನ್ನು 15 ಶಕ್ತಿ ತರಬೇತಿ ವ್ಯಾಯಾಮಗಳು ಮತ್ತು ಎಂಟು ಸ್ಪೋರ್ಟ್ಸ್‌ ಆಟೋ ಮ್ಯಾಟಿಕ್‌ ಆಗಿ ಗುರುತಿಸುವ ಪ್ರೋಗ್ರಾಮ್ ಅಳವಡಿಸಲಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ವಾಚ್‌ ವಿಶೇಷತೆ ಏನು? ಇದರ ಫೀಚರ್ಸ್‌ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮಾಜ್‌ಫಿಟ್‌

ಅಮಾಜ್‌ಫಿಟ್‌ GTS 4 ಸ್ಮಾರ್ಟ್‌ವಾಚ್‌ 1.75-ಇಂಚಿನ HD ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 390x450 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಡಿಸ್‌ಪ್ಲೇ ಆಲ್‌ವೇಸ್‌ ಆನ್ ಡಿಸ್‌ಪ್ಲೇಗಳಿಗೆ ಹೊಂದಿಕೆಯಾಗಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ 150 ಕ್ಕೂ ಹೆಚ್ಚು ವಾಚ್‌ ಪೇಸ್‌ಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಅಲ್ಯೂಮಿನಿಯಂ ಮಿಶ್ರಲೋಹದ ಮಧ್ಯದ ಚೌಕಟ್ಟನ್ನು ಹೊಂದಿದ್ದು, ಬಲಭಾಗದಲ್ಲಿ ನ್ಯಾವಿಗೇಷನ್ ಕಿರೀಟವನ್ನು ಪಡೆದಿದೆ.

ಬಯೋಟ್ರ್ಯಾಕರ್

ಈ ವಾಚ್‌ನಲ್ಲಿ ಹೊಸ ಬಯೋಟ್ರ್ಯಾಕರ್ 4.0 PPG ಬಯೋಮೆಟ್ರಿಕ್ ಆಪ್ಟಿಕಲ್ ಸೆನ್ಸಾರ್‌ ಅನ್ನು ನೀಡಲಾಗಿದೆ. ಈ ಸೆನ್ಸಾರ್‌ ತನ್ನ ಬಳಕೆದಾರರಿಗೆ 24/7 ಹೃದಯ ಬಡಿತ ಟ್ರ್ಯಾಕಿಂಗ್, ರಕ್ತದ ಆಮ್ಲಜನಕ ಮತ್ತು ಒತ್ತಡದ ಮೇಲ್ವಿಚಾರಣೆ ಮತ್ತು ನಿದ್ರೆಯ ಗುಣಮಟ್ಟದ ಟ್ರ್ಯಾಕಿಂಗ್ ಅನ್ನು ನೀಡಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ನಲ್ಲಿ ಸಿಂಗಲ್‌ ಟ್ಯಾಪ್‌ನೊಂದಿಗೆ ನಾಲ್ಕು ಹೆಲ್ತ್‌ ಮೆಟ್ರಿಕ್‌ಗಳನ್ನು ಪರೀಕ್ಷಿಸಲು ಸಹ ಬಳಸಬಹುದಾಗಿದೆ.

ಇಂಟರ್‌ಬಿಲ್ಟ್‌

ಇದು ಇಂಟರ್‌ಬಿಲ್ಟ್‌ ಡ್ಯುಯಲ್-ಬ್ಯಾಂಡ್ ವೃತ್ತಾಕಾರದ-ಧ್ರುವೀಕರಿಸಿದ GPS ಆಂಟೆನಾ ಟೆಕ್ನಾಲಜಿಯನ್ನು ಒಳಗೊಂಡಿದೆ. ಇದರಿಂದ ರಿಯಲ್‌ ಟೈಂ ಜಿಪಿಎಸ್‌ ಟ್ರ್ಯಾಕ್‌ ಮಾಡಲು ಸಾಧ್ಯವಾಗಲಿದೆ ಎನ್ನಲಾಗಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ 150 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಹೊಂದಿದೆ. ಇದು ಗೋ ಪ್ರೊ ಮತ್ತು ಹೋಮ್ ಕನೆಕ್ಟ್ ಸೇರಿದಂತೆ ಮಿನಿ ಅಪ್ಲಿಕೇಶನ್‌ಗಳ ಜೊತೆಗೆ Zepp OS 2.0 ನಲ್ಲಿ ಕಾರ್ಯನಿರ್ವಹಿಸಲಿದೆ.

ಸ್ಮಾರ್ಟ್

ಇದಲ್ಲದೆ ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಕಾಲ್‌ ಬೆಂಬಲಿಸುವುದಕ್ಕಾಗಿ ಇಂಟರ್‌ಬಿಲ್ಟ್‌ ಸ್ಪೀಕರ್‌ ಮತ್ತು ಮೈಕ್ರೊಫೋನ್ ಅನ್ನು ಒಳಗೊಂಡಿದೆ. ಇದು 300mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 8 ದಿನಗಳವರೆಗೆ ಬ್ಯಾಕಪ್ ಅನ್ನು ಒದಗಿಸಲಿದೆ ಎಂದು ಹೇಳಲಾಗಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ನಲ್ಲಿ ಬ್ಯಾಟರಿ ಸೇವರ್ ಮೋಡ್ ಅನ್ನು ಹೊಂದಿದ್ದು, ಬ್ಯಾಟರಿಯನ್ನು ಉಳಿಸಬಹುದಾಗಿದೆ. ಬ್ಯಾಟರಿ ಸೇವ್‌ ಮೋಡ್‌ನಲ್ಲಿಯೂ ಕೂಡ ಇದು ಸ್ಪೋರ್ಟ್ಸ್‌ ಮೋಡ್‌, ಹೆಲ್ತ್‌ ಟ್ರ್ಯಾಕಿಂಗ್ ಮತ್ತು ಹೆಚ್ಚಿನ ಫೀಚರ್ಸ್‌ಗಳ ಬಳಕೆಯನ್ನು ಕೂಡ ಅನುಮತಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಅಮಾಜ್‌ಫಿಟ್‌ GTS 4 ಸ್ಮಾರ್ಟ್‌ವಾಚ್‌ ಪ್ರಸ್ತುತ ಅಮಾಜ್‌ಫಿಟ್‌ ಇಂಡಿಯಾ ಸೈಟ್‌ ಮತ್ತು ಅಮೆಜಾನ್‌ನಲ್ಲಿ ಪ್ರೀ ಆರ್ಡರ್‌ ಬುಕ್ಕಿಂಗ್‌ಗೆ ಲಭ್ಯವಿದೆ. ಇದರ ಬೆಲೆ 16,999ರೂ.ಆಗಿದೆ. ಇದು ಸೆಪ್ಟೆಂಬರ್ 22 ರಿಂದ ಭಾರತದಲ್ಲಿ ಮೊದಲ ಬಾರಿಗೆ ಸೇಲ್‌ ಆಗಲಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಅನ್ನು ಇನ್ಫೈನೈಟ್ ಬ್ಲಾಕ್, ಮಿಸ್ಟಿ ವೈಟ್ ಮತ್ತು ರೋಸ್‌ಬಡ್ ಪಿಂಕ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ.

Best Mobiles in India

English summary
Amazfit GTS 4 With GPS Tracking Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X