ಅಮಾಜ್‌ಫಿಟ್‌ ಸ್ಮಾರ್ಟ್‌ವಾಚ್‌ ಖರೀದಿಸಲು ಇದೇ ಬೆಸ್ಟ್‌ ಟೈಂ!

|

ಪ್ರಸ್ತುತ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲ ಸ್ಮಾರ್ಟ್‌ವಾಚ್‌ಗಳು ಕೂಡ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿವೆ. ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ವಾಚ್‌ಗಳಿಗೆ ಟೆಕ್‌ ವಲಯದಲ್ಲಿ ಭಾರಿ ಬೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ವೈವಿಧ್ಯಮಯ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿವೆ. ಇವುಗಳಲ್ಲಿ ಅಮಾಜ್‌ಫಿಟ್‌ ಕೂಡ ಬಳಕೆದಾರರ ನೆಚ್ಚಿನ ಬ್ರಾಂಡ್‌ ಎನಿಸಿಕೊಂಡಿದೆ. ಸದ್ಯ ಅಮಾಜ್‌ಫಿಟ್‌ ತನ್ನ ವಿಭಿನ್ನ ಸ್ಮಾರ್ಟ್‌ವಾಚ್‌ಗಳಿಂದ ಗುರುತಿಸಿಕೊಂಡಿದೆ. ಇದೀಗ ತನ್ನ ಸ್ಮಾರ್ಟ್‌ವಾಚ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್‌ ಅನ್ನು ನೀಡುತ್ತಿದೆ.

ಅಮಾಜ್‌ಫಿಟ್‌

ಹೌದು, ಅಮಾಜ್‌ಫಿಟ್‌ ಕಂಪೆನಿ ತನ್ನ ಕೆಲವು ಸ್ಮಾರ್ಟ್‌ವಾಚ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ನೀಡುತ್ತಿದೆ. ನೀವು ಕೂಡ ಅಮಾಜ್‌ಫಿಟ್‌ ಸ್ಮಾರ್ಟ್‌ವಾಚ್‌ಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಬಯಸಿದರೆ ಇದು ಉತ್ತಮ ಸಮಯವಾಗಿದೆ. ಅದರಲ್ಲೂ ಜನಪ್ರಿಯ ಸ್ಮಾರ್ಟ್‌ವಾಚ್‌ಗಳಾದ ಅಮಾಜ್‌ಫಿಟ್ ಜಿಟಿಎಸ್ 2 ಮಿನಿ, ಬಿಪ್ ಯು ಪ್ರೊ ಮತ್ತು ಬಿಪ್‌ಯು ವಾಚ್‌ಗಳಿಗೆ ರಿಯಾಯಿತಿ ಘೋಷಿಸಿದೆ. ಹಾಗಾದ್ರೆ ಅಮಾಜ್‌ಫಿಟ್‌ ವಾಚ್‌ಗಳಿಗೆ ಯಾವೆಲ್ಲಾ ರಿಯಾಯಿತಿ ದೊರೆಯುತ್ತಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮಾಜ್‌ಫಿಟ್

ಆನ್‌ಲೈನ್‌ ಶಾಪಿಂಗ್‌ ದೈತ್ಯ ಅಮೆಜಾನ್‌ ಸೈಟ್‌ನಲ್ಲಿ ಅಮಾಜ್‌ಫಿಟ್ ಬ್ರಾಂಡ್ ಡೇ ಸೇಲ್ ಲೈವ್‌ ಆಗಿದೆ. ಅಲ್ಲದೆ ಅಮಾಜ್ ಫಿಟ್ ನ ಅಧಿಕೃತ ವೆಬ್ ಸೈಟ್ ನಲ್ಲಿ ಕೂಡ ರಿಯಾಯಿತಿ ಸೇಲ್‌ ಲೈವ್ ಆಗಿದೆ. ಈ ಸೇಲ್‌ ಇದೇ ಸೆಪ್ಟೆಂಬರ್ 12 ರವರೆಗೆ ನಡೆಯಲಿದೆ. ಇದರಲ್ಲಿ ಅಮಾಜ್‌ಫಿಟ್ ಜಿಟಿಎಸ್ 2 ಮಿನಿ ಅಮೆಜಾನ್‌ನಲ್ಲಿ ಮಾತ್ರ ಲಭ್ಯವಿದೆ. ಆದರೆ ಬಿಪ್‌ ಯು ಮತ್ತು ಬಿಪ್‌ ಯು ಪ್ರೊ ಫ್ಲಿಪ್‌ಕಾರ್ಟ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ.

ಅಮಾಜ್‌ಫಿಟ್ ಜಿಟಿಎಸ್ 2 ಮಿನಿ

ಅಮಾಜ್‌ಫಿಟ್ ಜಿಟಿಎಸ್ 2 ಮಿನಿ

ಅಮಾಜ್‌ಫಿಟ್‌ ಜಿಟಿಎಸ್‌ 2 ಮಿನಿ ಸ್ಮಾರ್ಟ್‌ವಾಚ್‌ ಮೂಲ ಬೆಲೆ 6999 ರೂ, ಆಗಿದ್ದು, ಅಮೆಜಾನ್ ಮತ್ತು ಅಮಾಜ್‌ಫಿಟ್ ವೆಬ್‌ಸೈಟ್‌ನಲ್ಲಿ ಬ್ರಾಂಡ್ ಡೇ ಸೇಲ್‌ನಲ್ಲಿ 6799ರೂ, ಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ವಾಚ್ ಕಾಂಪ್ಯಾಕ್ಟ್ ಫಾರ್ಮ್ ಫ್ಯಾಕ್ಟರ್ ಹೊಂದಿದೆ. ಇದರ ಸ್ಕ್ರೀನ್ ಸೈಜ್ ಸ್ತ್ರೀ ಮತ್ತು ಪುರುಷ ಖರೀದಿದಾರರಿಗೆ ಸೂಕ್ತವಾಗಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಆಕರ್ಷಕ ಡಿಸ್‌ಪ್ಲೇ ಮತ್ತು ಬಯೋಟ್ರಾಕರ್ 2, ಆಕ್ಸಿಜನ್ ಬೀಟ್ಸ್, ಎಸ್‌ಪಿಒ 2 ಮಾಪನ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಅಮಾಜ್‌ಫಿಟ್ ಬಿಪ್‌ ಯು ಪ್ರೊ

ಅಮಾಜ್‌ಫಿಟ್ ಬಿಪ್‌ ಯು ಪ್ರೊ

ಅಮಾಜ್‌ಫಿಟ್ ಬಿಪ್‌ ಯು ಪ್ರೊ ಸ್ಮಾರ್ಟ್‌ವಾಚ್‌ ಭಾರತದಲ್ಲಿ 4999ರೂ. ಬೆಲೆಯನ್ನು ಹೊಂದಿದೆ. ಇದು ಅಮಾಜ್‌ಫಿಟ್‌ ಬ್ರಾಂಡ್ ಡೇ ಸೇಲ್‌ ಟೈಂ ನಲ್ಲಿ 4799ರೂ,ಗಳಿಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 1.43-ಇಂಚಿನ HD ಬಿಗ್‌ TFT-LCD ಕಲರ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ವಾಚ್ ಕೇಸ್ ಅನ್ನು 2.5 ಡಿ ಕಾರ್ನಿಂಗ್ ಗೊರಿಲ್ಲಾ 3 ಪ್ರೊಟೆಕ್ಷನ್‌ ಅನ್ನು ಪಡೆದುಕೊಂಡಿದೆ. ಇದಲ್ಲದೆ ಈ ವಾಚ್‌ ಇನ್-ಬಿಲ್ಟ್ ಅಲೆಕ್ಸಾ ಮತ್ತು ಜಿಪಿಎಸ್ ಫೀಚರ್ಸ್‌ ಅನ್ನು ಸಹ ಒಳಗೊಂಡಿದೆ.

ಅಮಾಜ್‌ಫಿಟ್ ಬಿಪ್‌ ಯು

ಅಮಾಜ್‌ಫಿಟ್ ಬಿಪ್‌ ಯು

ಈ ಸ್ಮಾರ್ಟ್‌ವಾಚ್‌ ಮೂಲ ಬೆಲೆ 3999 ರೂ. ಹೊಂದಿದ್ದು, ಇದು ರಿಯಾಯಿತಿ ದರದಲ್ಲಿ 3799ರೂ ಗಳಿಗೆ ಲಭ್ಯವಾಗಲಿದೆ. ಇದು ಇಂಟರ್‌ಬಿಲ್ಟ್‌ ಅಲೆಕ್ಸಾ, ಇಂಟರ್‌ಬಿಲ್ಟ್‌ ಜಿಪಿಎಸ್,ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 1.43 ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ವಾಚ್‌ 60+ ಸ್ಪೋರ್ಟ್ಸ್ ಮೋಡ್, ಬಯೋಟ್ರಾಕರ್, 2 ಪಿಪಿಜಿ, ಮತ್ತು ಆಕ್ಸಿಜನ್ ಬೀಟ್ಸ್, ಸೊಮ್ನಸ್‌ಕೇರ್, 5 ಎಟಿಎಂ ವಾಟರ್‌ ರೆಸಿಸ್ಟೆನ್ಸ್‌ ಅನ್ನು ಹೊಂದಿದೆ.

ಮಿ ಬ್ಯಾಂಡ್‌ 5 ಮಿ

ಮಿ ಬ್ಯಾಂಡ್‌ 5 ಮಿ

ಸ್ಮಾರ್ಟ್ ಬ್ಯಾಂಡ್ 5 ಡಿವೈಸ್ 126x294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.6-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 16 ಬಿಟ್ ಕಲರ್ ಮತ್ತು 450 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದು 14 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಪವರ್‌ ಸೇವ್‌ ಮೋಡ್‌ನಲ್ಲಿ 21 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಹೃದಯ ಬಡಿತ, ನಿದ್ರೆಯ ಮೇಲ್ವಿಚಾರಣೆ, ಕ್ಯಾಲೋರಿ ಎಣಿಕೆ ಸೇರಿದಂತೆ ಮಹಿಳೆಯರ ಆರೋಗ್ಯವನ್ನು ಟ್ರ್ಯಾಕ್‌ ಮಾಡುವ ವಿಶೇಷತೆಯನ್ನು ಹೊಂದಿದೆ. ಬೆಲೆಯು 2,499ರೂ. ಆಗಿದೆ.

Most Read Articles
Best Mobiles in India

English summary
Amazfit Brand Day sale has gone live on Amazon and the official website of Amazfit.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X