ಬ್ಲೂಟೂತ್‌ ಸ್ಪೀಕರ್‌ ಖರೀದಿಸಬೇಕೇ?.. ಅಮೆಜಾನ್‌ ನೀಡಿದೆ ಭರ್ಜರಿ ಡಿಸ್ಕೌಂಟ್‌!

|

ಪ್ರಮುಖ ಇ -ಕಾಮರ್ಸ್‌ ತಾಣಗಳಲ್ಲಿ ಒಂದಾದ ಅಮೆಜಾನ್‌ ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌, ಸ್ಮಾರ್ಟ್‌ಟಿವಿ ಸೇರಿದಂತೆ ಇನ್ನೂ ಹತ್ತಾರು ಡಿವೈಸ್‌ಗಳ ಮೇಲೆ ಅಮೆಜಾನ್‌ ಆಗಾಗ್ಗೆ ಭರ್ಜರಿ ಆಫರ್‌ ಘೋಷಣೆ ಮಾಡುತ್ತಲೇ ಬರುತ್ತಿದೆ. ಅದರಂತೆ ಅಮೆಜಾನ್‌ನ ಈ ವಿಶೇ‍ಷ ಸೇಲ್‌ನಲ್ಲಿ ಪ್ರಮುಖ ಬ್ರ್ಯಾಂಡ್‌ನ ಬ್ಲೂಟೂತ್‌ ಸ್ಪೀಕರ್‌ಗಳಿಗೆ ಆಕರ್ಷಕ ರಿಯಾಯಿತಿ ನೀಡಿದೆ.

ಅಮೆಜಾನ್‌

ಹೌದು, ಅಮೆಜಾನ್‌ನ ಈ ಡೀಲ್ಸ್‌ ಆಫ್ ದಿ ಡೇ ಆಫರ್‌ನಲ್ಲಿ ಮಿವಿ, ಬೋಟ್‌ ಸೇರಿದಂತೆ ಇನ್ನಿತರೆ ಪ್ರಮುಖ ಬ್ರ್ಯಾಂಡ್‌ಗಳ ಬ್ಲೂಟೂತ್‌ ಸ್ಪೀಕರ್‌ಗಳಿಗೆ ಅಮೆಜಾನ್‌ ಬರೋಬ್ಬರಿ 69% ವರೆಗೆ ರಿಯಾಯಿತಿ ನೀಡಲಾಗಿದೆ. ಈ ಸ್ಪೀಕರ್‌ಗಳು ಕೇವಲ 1,000 ರೂ. ಗಳ ಒಳಗೆ ಲಭ್ಯವಾಗುತ್ತಿರುವುದು ವಿಶೇಷ. ಹಾಗಿದ್ದರೆ ಯಾವ ಸ್ಪೀಕರ್‌ಗೆ ಎಷ್ಟು ಬೆಲೆ, ಪ್ರಮುಖ ಫೀಚರ್ಸ್‌ ಏನು ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಅಮೆಜಾನ್‌ ಬೇಸಿಕ್ಸ್‌ ಬ್ಲೂಟೂತ್ ಸ್ಪೀಕರ್

ಅಮೆಜಾನ್‌ ಬೇಸಿಕ್ಸ್‌ ಬ್ಲೂಟೂತ್ ಸ್ಪೀಕರ್

ಅಮೆಜಾನ್‌ ಬೇಸಿಕ್ಸ್‌ ಬ್ಲೂಟೂತ್ ಸ್ಪೀಕರ್ 1,240 ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, ಕೇವಲ 759 ರೂ. ಗಳಿಗೆ ನೀವು ಈ ಡಿವೈಸ್‌ ಅನ್ನು ಖರೀದಿ ಮಾಡಹುದಾಗಿದೆ. ಪ್ರಮುಖವಾಗಿ ಈ ಸ್ಪೀಕರ್‌4W ವರೆಗೆ ಆಡಿಯೊ ಔಟ್‌ಪುಟ್ ನೀಡಲಿದ್ದು, ಬ್ಲೂಟೂತ್ ಆವೃತ್ತಿ v5.0 ಅನ್ನು ಪಡೆದುಕೊಂಡಿದೆ. ಹಾಗೆಯೇ ಈ ಡಿವೈಸ್‌ ನಾಯ್ಸ್‌ ಕ್ಯಾನ್ಸಲೇಶನ್‌ ಫೀಚರ್ಸ್‌ ಇರುವ ಮೈಕ್ರೋಫೋನ್‌ ಆಯ್ಕೆ ಹೊಂದಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ 19 ಗಂಟೆಗಳವರೆಗೆ ಬಳಕೆ ಮಾಡಬಹುದು.

ಬೋಟ್ ಸ್ಟೋನ್ 135 ಪೋರ್ಟಬಲ್ ವೈರ್‌ಲೆಸ್ ಸ್ಪೀಕರ್

ಬೋಟ್ ಸ್ಟೋನ್ 135 ಪೋರ್ಟಬಲ್ ವೈರ್‌ಲೆಸ್ ಸ್ಪೀಕರ್

ಬೋಟ್ ಸ್ಟೋನ್ 135 ಪೋರ್ಟಬಲ್ ವೈರ್‌ಲೆಸ್ ಸ್ಪೀಕರ್ 999 ರೂ. ಗಳ ರಿಯಾಯತಿ ಪಡೆದುಕೊಂಡಿದ್ದು, ಈ ಡಿವೈಸ್ ಅನ್ನು ನೀವು 999 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ. ಅಂತೆಯೇ ಈ ಡಿವೈಸ್ ಬ್ಲೂಟೂತ್, ಎಫ್‌ಎಂ ಮೋಡ್ ಮತ್ತು ಟಿಎಫ್ ಕಾರ್ಡ್ ಫೀಚರ್ಸ್‌ ಜೊತೆಗೆ ಇನ್‌ಬಿಲ್ಟ್‌ ಮೈಕ್ರೊಫೋನ್ ಆಯ್ಕೆ ಪಡೆದುಕೊಂಡಿದ್ದು, ಹ್ಯಾಂಡ್ಸ್-ಫ್ರೀ ಕರೆ ಸೌಲಭ್ಯವನ್ನು ಪಡೆದಿದೆ. ಜೊತೆಗೆ ಒಂದು ಪೂರ್ಣ ಚಾರ್ಜ್‌ನಲ್ಲಿ 11 ಗಂಟೆಗಳವರೆಗೆ ಬಳಕೆ ಮಾಡಬಹುದಾಗಿದೆ.

ಮಿವಿ ಪ್ಲೇ ಬ್ಲೂಟೂತ್ ಸ್ಪೀಕರ್‌

ಮಿವಿ ಪ್ಲೇ ಬ್ಲೂಟೂತ್ ಸ್ಪೀಕರ್‌

ಮಿವಿ ಪ್ಲೇ ಬ್ಲೂಟೂತ್ ಸ್ಪೀಕರ್ 1,200ರೂ. ಗಳ ರಿಯಾಯಿತಿ ಪಡೆದುಕೊಂಡಿದ್ದು, ಇದನ್ನು ನೀವು 799 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇನ್ನುಳಿದಂತೆ ಈ ಡಿವೈಸ್‌ 5W ಆಡಿಯೊ ಔಟ್‌ಪುಟ್ ಫೀಚರ್ಸ್‌ ಅನ್ನು ನೀಡಲಿದ್ದು, ಕನೆಕ್ಟಿವಿಟಿ ವಿಚಾರದಲ್ಲಿ ಬ್ಲೂಟೂತ್ ಆವೃತ್ತಿ v5.0 ಪಡೆದುಕೊಂಡಿದೆ. ಇನ್ನುಳಿದಂತೆ 1000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು,12 ಗಂಟೆಗಳವರೆಗೆ ಪ್ಲೇಬ್ಯಾಕ್ ಸಮಯವನ್ನು ನೀಡಲಿದೆ.

Ptron  ಮ್ಯೂಸಿಕ್‌ಬೋಟ್‌ ಲೈಟ್ ಮಿನಿ

Ptron ಮ್ಯೂಸಿಕ್‌ಬೋಟ್‌ ಲೈಟ್ ಮಿನಿ

Ptron ಮ್ಯೂಸಿಕ್‌ಬೋಟ್‌ ಲೈಟ್ ಮಿನಿ ಬ್ಲೂಟೂತ್ ಸ್ಪೀಕರ್ 1,101 ರೂ.ಗಳ ರಿಯಾಯಿತಿ ಪಡೆದುಕೊಂಡಿದ್ದು, 499 ರೂ. ಗಳಲ್ಲಿ ನಿಮಗೆ ಲಭ್ಯವಿದೆ. ಅದರಂತೆ ಈ ಡಿವೈಸ್‌ 40mm ಆಡಿಯೋ ಡ್ರೈವರ್ ಹಾಗೂ 5W ಸೌಂಡ್‌ ಔಟ್‌ಪುಟ್ ನೀಡಲಿದ್ದು, ವಾಯರ್‌ಲೆಸ್‌ ಸಂಪರ್ಕಕ್ಕಾಗಿ ಬ್ಲೂಟೂತ್ ಆವೃತ್ತಿ v5.1 ಅನ್ನು ಹೊಂದಿದೆ. ಇದಿಷ್ಟೇ ಅಲ್ಲದೆ, ಬಳಕೆದಾರರು ಟಿಪಿ ಕಾರ್ಡ್ ಸ್ಲಾಟ್ ಯುಎಸ್‌ಬಿ ಡ್ರೈವ್ ಪೋರ್ಟಲ್‌ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 1200mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿದ್ದು, 6 ಗಂಟೆಗಳವರೆಗೆ ಪ್ಲೇ ಟೈಮ್‌ ನೀಡಲಿದೆ.

ಹನಿವೆಲ್ ಮೋಕ್ಸಿ V200

ಹನಿವೆಲ್ ಮೋಕ್ಸಿ V200

ಹನಿವೆಲ್ ಮೋಕ್ಸಿ V200 ಸ್ಪೀಕರ್‌ 1,700 ರ ರಿಯಾಯಿತಿ ಪಡೆದುಕೊಂಡಿದ್ದು, 899 ರೂ. ನಲ್ಲಿ ಲಭ್ಯವಿದೆ. ಇನ್ನುಳಿದಂತೆ ಈ ಡಿವೈಸ್‌ 5W ಸೌಂಡ್‌ ಔಟ್‌ಪುಟ್‌ ನೀಡಲಿದ್ದು, ವಾಟರ್‌ ರೆಸಿಸ್ಟೆಂಟ್‌ಗಾಗಿ IPX4 ರೇಟಿಂಗ್ ಹೊಂದಿದ್ದು, ಬ್ಲೂಟೂತ್ ಆವೃತ್ತಿ v5.0 ಅನ್ನು ಹೊಂದಿದೆ. ಜೊತೆಗೆ ಹ್ಯಾಂಡ್ಸ್ ಪ್ರಿ ಕರೆ ಸೌಲಭ್ಯವನ್ನು ಪಡೆದುಕೊಂಡಿದ್ದು, 1200mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, ಬರೋಬ್ಬರಿ 150 ಗಂಟೆಗಳವರೆಗೆ ಸ್ಟ್ಯಾಂಡ್‌ಬೈ ಸಮಯವನ್ನು ನೀಡಲಿದೆ.

Best Mobiles in India

Read more about:
English summary
amazon give huge discount on Bluetooth Speakers in deals of the day offer.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X