ಬಹುದಿನಗಳ ಸಮಸ್ಯೆಗೆ ಪರಿಹಾರ ನೀಡಲು ಮುಂದಾದ ಅಮೆಜಾನ್‌! ಏನಿದರ ವಿಶೇಷ!

|

ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣವಾಗಿ ಗುರುತಿಸಿಕೊಂಡಿದೆ. ಬಳಕೆದಾರರಿಗೆ ವಿಶೇಷ ಆಫರ್‌ಗಳು ಹಾಗೂ ಸೇವೆಗಳನ್ನು ಪರಿಚಯಿಸುವ ಮೂಲಕ ಗಮನ ಸೆಳೆದಿದೆ. ಸದ್ಯ ಇದೀಗ ಇ-ಕಾಮರ್ಸ್‌ನಲ್ಲಿ ಪ್ರಮುಖವಾಗಿ ಕಾಡುತ್ತಿದ್ದ ಸಮಸ್ಯೆಯೊಂದನ್ನು ಬಗೆಹರಿಸಲು ಮುಂದಾಗಿದೆ. ಆಫ್‌ಲೈನ್‌ ಅಂಗಡಿಗಳಲ್ಲಿ ನೀವು ಬಟ್ಟೆ ಖರೀದಿಸುವ ಮೊದಲು ಅದನ್ನು ಧರಿಸುವ ಮೂಲಕ ಒಮ್ಮೆ ಟ್ರೈ ಮಾಡಬಹುದು. ಆದರೆ ಆನ್‌ಲೈನ್‌ನಲ್ಲಿ ಸಾಧ್ಯವಿಲ್ಲ. ಇದೀಗ ಈ ಸಮಸ್ಯೆಗೆ ಪರಿಹಾರ ನೀಡಲು ಅಮೆಜಾನ್‌ ಮುಂದಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ತನ್ನ ಬಳಕೆದಾರರಿಗೆ ಇಂಟರಾಕ್ಟಿವ್ ಮೊಬೈಲ್ ಎಕ್ಸ್‌ಪಿರಿಯೆನ್ಸ್ ಅನ್ನು ನೀಡಲು ಮುಂದಾಗಿದೆ. ಅದರಂತೆ ಅಮೆಜಾನ್‌ನಲ್ಲಿ ಫ್ಯಾಶನ್‌ ಶೂಸ್‌ ಅನ್ನು ಖರೀದಿಸುವಾಗ ವರ್ಚುವಲ್‌ ಟ್ರೈ ಆನ್‌ ಪ್ರಾರಂಭಿಸುವುದಾಗಿ ಅಮೆಜಾನ್‌ ಘೋಷಿಸಿದೆ. ಇದು US ಮತ್ತು ಕೆನಡಾದಲ್ಲಿ iOS ಬಳಕೆದಾರರಿಗೆ ವಾಸ್ತವಿಕವಾಗಿ ಶೂಗಳನ್ನು ಪ್ರಯತ್ನಿಸಲು ಗ್ರಾಹಕರಿಗೆ ಅನುಮತಿಸಲಿದೆ. ಹಾಗಾದ್ರೆ ಅಮೆಜಾನ್‌ ಇಂಟರಾಕ್ಟಿವ್ ಮೊಬೈಲ್ ಎಕ್ಸ್ಪೀರಿಯೆನ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಫ್ಯಾಶನ್ ಶೂಸ್‌ಗಾಗಿ ವರ್ಚುವಲ್ ಟ್ರೈ-ಆನ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಇದು ಮೊಬೈಲ್ ಅನುಭವವಾಗಿದ್ದು, ಗ್ರಾಹಕರಿಗೆ ಪ್ರತಿ ಕೋನದಿಂದ ಒಂದು ಜೋಡಿ ಬೂಟುಗಳು ಹೇಗೆ ಕಾಣುತ್ತವೆ ಎಂಬುದನ್ನು ದೃಶ್ಯೀಕರಿಸಲು ಸಹಾಯ ಮಾಡಲು ವರ್ಚುವಲ್‌ ಅನುಭವ ನೀಡಲಿದೆ. ಇನ್ನು iOS ನಲ್ಲಿ ಅಮೆಜಾನ್‌ ಶಾಪಿಂಗ್ ಅಪ್ಲಿಕೇಶನ್ ಬಳಸುವ ಗ್ರಾಹಕರು ನ್ಯೂ ಬ್ಯಾಲೆನ್ಸ್‌, ಅಡಿಡಾಸ್‌, ರಿಬಾಕ್‌, ಪುಮಾ, ಸೂಪರ್‌ಗಾ, ಲಾಕಾಸ್ಟ್‌, ಆಸಿಕ್ಸ್‌ ಮತ್ತು ಸೌಕಾನಿ ಸೇರಿದಂತೆ ಬ್ರ್ಯಾಂಡ್‌ಗಳ ಶೈಲಿಗಳನ್ನು ದೃಶ್ಯೀಕರಿಸಲು ಶೂಸ್‌ಗಾಗಿ ವರ್ಚುವಲ್ ಟ್ರೈ-ಆನ್ ಅನ್ನು ಬಳಸಬಹುದಾಗಿದೆ.

ಇದು ಹೇಗೆ ಕಾರ್ಯನಿರ್ವಹಿಸಲಿದೆ?

ಇದು ಹೇಗೆ ಕಾರ್ಯನಿರ್ವಹಿಸಲಿದೆ?

ಅಮೆಜಾನ್‌ ತಾಣದಲ್ಲಿ ಶೂ ಆಯ್ಕೆ ಮಾಡಿದರೆ, ಗ್ರಾಹಕರು ಉತ್ಪನ್ನದ ವಿವರಗಳ ಪುಟದಲ್ಲಿ "ವರ್ಚುವಲ್ ಟ್ರೈ-ಆನ್" ಬಟನ್ ಅನ್ನು ಟ್ಯಾಪ್ ಮಾಡಬಹುದು. ಇದರಲ್ಲಿ ಶೂಗಳು ಹೇಗೆ ಕಾಣುತ್ತವೆ ಎಂಬುದನ್ನು ನೋಡಲು ತಮ್ಮ ಮೊಬೈಲ್ ಡಿವೈಸ್‌ನಲ್ಲಿನ ಕ್ಯಾಮರಾವನ್ನು ಅವರ ಪಾದಗಳಿಗೆ ತೋರಿಸಬಹುದು. ಪ್ರತಿ ಕೋನದಿಂದ ಶೂ ಹೇಗೆ ಕಾಣುತ್ತದೆ ಎಂಬುದನ್ನು ನೋಡಲು ಗ್ರಾಹಕರು ತಮ್ಮ ಪಾದಗಳನ್ನು ಚಲಿಸಬಹುದು. ಇದರಿಂದ ಗ್ರಾಹಕರು ತಮ್ಮ ವರ್ಚುವಲ್ ಟ್ರೈ-ಆನ್ ಅನುಭವದ ಫೋಟೋವನ್ನು ತೆಗೆದುಕೊಳ್ಳುವ ಆಯ್ಕೆಯನ್ನು ಪಡೆಯಲಿದ್ದಾರೆ. ಇದರಲ್ಲಿ "ಶೇರ್‌ಮಾಡಿ" ಐಕಾನ್ ಅನ್ನು ಕ್ಲಿಕ್ ಮಾಡುವ ಮೂಲಕ ಸೊಶೀಯಲ್‌ ಮೀಡಿಯಾದಲ್ಲಿ ಸ್ನೇಹಿತರೊಂದಿಗೆ ಚಿತ್ರವನ್ನು ಹಂಚಿಕೊಳ್ಳಬಹುದು.

ಅಮೆಜಾನ್‌

ಅಮೆಜಾನ್‌ನ ಈ ಹೊಸ ಹೆಜ್ಜೆ ಆನ್‌ಲೈನ್‌ನಲ್ಲಿ ಫ್ಯಾಶನ್ ಶಾಪಿಂಗ್ ಅನ್ನು ಸುಲಭಗೊಳಿಸುತ್ತದೆ. ಅಲ್ಲದೆ ಗ್ರಾಹಕರಿಗೆ ಹೆಚ್ಚು ಸಂತೋಷಕರವಾಗಿ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಸಿಗಲಿದೆ ಎಂದು ಅಮೆಜಾನ್ ಫ್ಯಾಶನ್ ಅಧ್ಯಕ್ಷ ಮುಗೆ ಎರ್ಡಿರಿಕ್ ಡೊಗನ್ ಹೇಳಿದ್ದಾರೆ. ಸದ್ಯ ನಾವು "ಶೂಗಳಿಗಾಗಿ ವರ್ಚುವಲ್ ಟ್ರೈ-ಆನ್ ಅನ್ನು ಪರಿಚಯಿಸಲು ಉತ್ಸುಕರಾಗಿದ್ದೇವೆ, ಆದ್ದರಿಂದ ಗ್ರಾಹಕರು ಅವರು ಎಲ್ಲಿದ್ದರೂ ಅವರಿಗೆ ತಿಳಿದಿರುವ ಮತ್ತು ಇಷ್ಟಪಡುವ ಬ್ರ್ಯಾಂಡ್‌ಗಳಿಂದ ಸಾವಿರಾರು ಶೈಲಿಗಳನ್ನು ಪ್ರಯತ್ನಿಸಬಹುದು ಎಂದಿದ್ದಾರೆ.

Best Mobiles in India

English summary
Amazon Fashion has announced the launch of Virtual Try-On for Shoes

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X