ಅಮೆಜಾನ್ ಫೆಸ್ಟಿವಲ್ 'ಫಿನಾಲೆ ಡೇಸ್' ಸೇಲ್‌: ಫೋನ್‌ಗಳಿಗೆ ಇನ್ನಷ್ಟು ರಿಯಾಯಿತಿ!

|

ಜನಪ್ರಿಯ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತನ್ನ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2020 ಸೇಲ್‌ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಭಾರತದಲ್ಲಿ ಹಬ್ಬದ ಸೀಸನ್‌ ಪ್ರಯುಕ್ತ ಆಕ್ಟೋಬರ್‌ 17 ರಂದು ತನ್ನ ಸೇಲ್‌ ಅನ್ನು ಪ್ರಾರಂಭಿಸಿತ್ತು. ಒಂದು ತಿಂಗಳ ಕಾಲ ನಡೆಯುವ ಈ ಸೇಲ್‌ ಇದೀಗ ಅಂತಿಮ ಘಟ್ಟ ತಲುಪಿದೆ. ಅಮೆಜಾನ್‌ ಸೇಲ್‌ನಲ್ಲಿ ಇಲ್ಲಿಯ ತನಕ ಸಾಕಷ್ಟು ಡೀಲ್‌ಗಳು ಮತ್ತು ಹೆಚ್ಚಿನ ಸಂಖ್ಯೆಯ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟಿವಿಗಳು, ಅಮೆಜಾನ್ ಸಾಧನಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಲ್ಲಿ ಭರ್ಜರಿ ರಿಯಾಯಿತಿಯನ್ನು ನೀಡಿತ್ತು. ಇದೀಗ ಇದೇ ನವೆಂಬರ್ 13 ರಂದು ಈ ಸೇಲ್‌ ಕೊನೆಯಾಗಲಿದ್ದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ ಈ ಆವೃತ್ತಿಯನ್ನು 'ಫಿನಾಲೆ ಡೇಸ್' ಎಂದು ಹೆಸರಿಸಿದೆ.

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2020 ಸೇಲ್‌ ಕೊನೆಯವಾರವನ್ನು ತಲುಪಿದೆ. ಇದೇ ನವೆಂಬರ್‌ 13 ರಂದು ಈ ಸೆಲ್‌ ಕೊನೆಗೊಳ್ಳಲಿದ್ದು, ತನ್ನ ಅಂತಿಮ ವಾರದಲ್ಲಿ, ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ 10% ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. ಇನ್ನು ವಿಶೇಷವೆಂದರೆ ಇನ್ನೇನು ದೀಪಾವಳಿ ಸಂಭ್ರಮವೂ ಕೂಡ ಹತ್ತಿರದಲ್ಲಿರುವುದರಿಂದ ತನ್ನ ಮಾರಾಟದ ಕೊನೆಯ ಹಂತದಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಡೀಲ್‌ಗಳನ್ನು ನೀಡುತ್ತಿದೆ. ಹಾಗಾದ್ರೆ ಫಿನಾಲೆ ಡೇಸ್ ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ರಿಯಾಯಿತಿ ಇದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಐಫೋನ್ 11

ಐಫೋನ್ 11

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಆರಂಭದಿಂದಲೂ ಆಪಲ್‌ನ ಐಫೋನ್ 11ಗೆ ಭಾರಿ ರಿಯಾಯಿತಿಯನ್ನು ನೀಡಲಾಗಿತ್ತು. ಇದೀಗ ಫಿನಾಲೆ ಡೇಸ್‌ನಲ್ಲಿಯೂ ಸಹ ಈ ಆಫರ್‌ ಮುಂದುವರೆದಿದೆ. ಸದ್ಯ ಇದೀಗ ಈಗ ಅಮೆಜಾನ್‌ನಲ್ಲಿ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟದ 'ಫಿನಾಲೆ ಡೇಸ್' ಹಂತದಲ್ಲಿ 50,999 ರೂ ಗಳಿಗೆ ಖರೀದಿಸಬಹುದಾಗಿದೆ. ಇದರ ಮೂಲ ಬೆಲೆ 64,900 ರೂ ಆಗಿದೆ. ಇನ್ನು ಬಾಕ್ಸ್‌ನಲ್ಲಿ ಇಯರ್‌ಪಾಡ್‌ಗಳು ಮತ್ತು ವಾಲ್ ಚಾರ್ಜರ್‌ಗೆ ಅನ್ನು ಸಹ ಪಡೆದುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ m51

ಸ್ಯಾಮ್‌ಸಂಗ್ ಗ್ಯಾಲಕ್ಸಿ m51

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ M51 ಸ್ಮಾರ್ಟ್‌ಫೋನ್‌ ಕೂಡ ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ 22,499 ರೂ ಗಳಿಗೆ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಅಲ್ಲದೆ ನೀವು ಹಳೆಯ ಮೊಬೈಲ್ ಫೋನ್ ಅನ್ನು ಸಹ ವಿನಿಮಯ ಮಾಡಿಕೊಳ್ಳಬಹುದಾಗಿದ್ದು, ಈ ಮೂಲಕ 16,400.ರೂಗಳವರೆಗೂ ರಿಯಾಯಿತಿ ದರ ಲಭ್ಯವಾಗಲಿದೆ. ಅಲ್ಲದೆ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆದಾರರು ಹೆಚ್ಚುವರಿ ತ್ವರಿತ ರಿಯಾಯಿತಿಯನ್ನು ನೀಡಲಿದ್ದು, ರೂ. 3,000, ರವೆಗೂ ಡಿಸ್ಕೌಂಟ್‌ ದೊರೆಯಲಿದೆ.

ಒನ್‌ಪ್ಲಸ್ 8

ಒನ್‌ಪ್ಲಸ್ 8

ಒನ್‌ಪ್ಲಸ್ 8 ಒನ್‌ಪ್ಲಸ್ 8 6GB RAM+128GB ಸ್ಮಾರ್ಟ್‌ಫೋನ್‌ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ ಫಿನಾಲೆ ಡೇಸ್‌ನಲ್ಲಿ 39,999 ರೂ ಗಳಿಗೆ ಲಭ್ಯವಾಗಲಿದೆ. ಇದರ ಮೂಲ ಬೆಲೆ 41,999 ರೂ ಆಗಿದೆ. ಇದಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್ ಬಳಕೆದಾರರು ಶೇಕಡಾ 10 ರಷ್ಟು ಹೆಚ್ಚುವರಿ ತ್ವರಿತ ರಿಯಾಯಿತಿ ಪಡೆಯಬಹುದು. ಅಮೆಜಾನ್ ತನ್ನ ಎಕ್ಸ್ಚೇಂಜ್ ಆಫರ್ ಅನ್ನು ಸಹ ಒಟ್ಟುಗೂಡಿಸುತ್ತಿದೆ, ಅದು ರೂ. 16,400.ಗಳವರಗೆ ದೊರೆಯಲಿದೆ.

ರೆಡ್ಮಿ ನೋಟ್ 9 ಪ್ರೊ

ರೆಡ್ಮಿ ನೋಟ್ 9 ಪ್ರೊ

ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ 2020 ಅಂತಿಮ ವಾರದ ಸೇಲ್‌ನಲ್ಲಿ ರೆಡ್ಮಿ ನೋಟ್ 9 ಪ್ರೊ ಸಹ ಆಕರ್ಷಕ ರಿಯಾಯಿತಿ ಪಡೆದಿದೆ. 14,999ರೂ. ಬೆಲೆಯನ್ನು ಹೊಂದಿರುವ ಈ ಪೋನ್ ಆಫರ್‌ನಲ್ಲಿ 12,999ರೂ. ಬೆಲೆಯನ್ನು ಹೊಂದಿದೆ. ಜೊತೆಗೆ ನೀವು ಹಳೆಯ ಮೊಬೈಲ್ ಫೋನ್ ಅನ್ನು ಸ್ವ್ಯಾಪ್ ಮಾಡಬಹುದಾಗಿದೆ.

ಒಪ್ಪೋ a52

ಒಪ್ಪೋ a52

ಒಪ್ಪೋ ಎ 52 ಸ್ಮಾರ್ಟ್‌ಫೋನ್‌ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ ಅಂತಿಮ ಹಂತದಲ್ಲಿ 15,990 ರೂ,ಗಳಿಗೆ ಲಭ್ಯವಾಗಲಿದೆ. ಇದರ ಮೂಲ ಬೆಲೆ 20,990 ರೂ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.5-ಇಂಚಿನ ಫುಲ್‌ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. 12 ಮೆಗಾಪಿಕ್ಸೆಲ್ ಕ್ವಾಡ್ ರಿಯರ್ ಕ್ಯಾಮೆರಾ ಜೊತೆಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೇರಿದೆ. ಒಪ್ಪೋ ಎ 52 ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 665 SoC ಪ್ರೊಸೆಸರ್‌ ಅನ್ನು ಹೊಂದಿದೆ.

Most Read Articles
Best Mobiles in India

English summary
Amazon Great Indian Festival 2020 sale has now entered its final week. The festive season sale kicked off last month with hundreds of deals and offers on a large selection of mobile phones.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X