ಅಮೆಜಾನ್‌ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುವ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು!

|

ಭಾರತದಲ್ಲಿ ಹಬ್ಬದ ಸೀಸನ್‌ ಶುರುವಾಗ್ತಿದ್ದ ಹಾಗೇ ಇ-ಕಾಮರ್ಸ್‌ ಫ್ಲಾಟ್‌ಫಾರ್ಮ್‌ಗಳ ಫೆಸ್ಟಿವಲ್‌ ಸೇಲ್‌ ಶುರುವಾಗಿದೆ. ಆನ್‌ಲೈನ್‌ ಗ್ರಾಹಕರನ್ನ ತಮ್ಮತ್ತ ಸೆಳೆಯುವುದಕ್ಕಾಗಿ ಹಲವು ಬಗೆಯ ರಿಯಾಯಿತಿಗಳನ್ನ ನೀಡುತ್ತಿವೆ. ಸದ್ಯ ಜನಪ್ರಿಯ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್ ಅಮೆಜಾನ್‌‌ ಈಗಾಗಲೇ ಭರ್ಜರಿ ಆಫರ್‌, ಡಿಸ್ಕೌಂಟ್‌ಗಳಿಂದ ಆನ್‌ಲೈನ್‌ ಶಾಪಿಂಗ್ ಪ್ರಿಯರನ್ನು ಸೆಳೆದಿದೆ. ಅದರಲ್ಲಿಯೂ ವಿಶೇಷ ಸೇಲ್‌ ಸಂದರ್ಭಗಳಲ್ಲಿ ಹೆಚ್ಚಿನ ರಿಯಾಯಿತಿ ಕೊಡುಗೆಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತದೆ. ಇದೀಗ ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ ಮತ್ತೆ ಬಂದಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ ಹಾಗೂ ಗ್ಯಾಡ್ಜೆಟ್ಸ್‌ಗಳಿಗೆ ಬಿಗ್ ಡಿಸ್ಕೌಂಟ್‌ ಅನ್ನು ನೀಡಿದೆ.

ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ 2020

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ 2020 ನಲ್ಲಿ ಕೆಲವು ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಡಿಸ್ಕೌಂಟ್‌ ಲಭ್ಯವಿದೆ. ಇದರೊಂದಿಗೆ ನೋ ಕಾಸ್ಟ್ ಇಎಮ್‌ಐ ಸೌಲಭ್ಯ, ಎಕ್ಸ್‌ಚೇಂಜ್ ಆಫರ್‌ ಗಳು ದೊರೆಯಲಿವೆ. ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಸ್ಮಾರ್ಟ್‌ಫೋನ್‌ಗಳು ಕೂಡ ರಿಯಾಯಿತಿಯಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿವೆ. ಹಾಗಾದ್ರೆ ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್‌ ಲಭ್ಯವಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಫೋನ್ 11

ಐಫೋನ್ 11

ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ನಲ್ಲಿ ಆಪಲ್‌ನ ಐಫೋನ್‌ಗಳಿಗೂ ಕೂಡ ಭಾರಿ ರಿಯಾಯಿತಿಯನ್ನ ಘೋಷಿಸಲಾಗಿದೆ. ಸದ್ಯ ಅಮೆಜಾನ್‌ನಲ್ಲಿ ಇಂದು ಶುರುವಾಗಿರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಐಫೋನ್‌ 11 ಕೇವಲ 47,999 ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಐಫೋನ್‌ 11 ಮೂಲಬೆಲೆ 64,900 ರೂ ಆಗಿದೆ. ಇನ್ನು ಈ ಐಫೋನ್‌ 6.1 ಲಿಕ್ವಿಡ್ ರೆಟಿನಾ' ಪ್ಯಾನೆಲ್ ಅನ್ನು ಹೊಂದಿರುವ ಈ ಫೋನ್ ಆನೊಡೈಸ್ಡ್ ಅಲ್ಯೂಮಿನಿಯಂ ಬಾಡಿ ಮತ್ತು ಕಠಿಣವಾದ ಗಾಜನ್ನು ಹೊಂದಿದೆ. ಇನ್ನು ಐಪಿ 68 ಸಾಮರ್ಥ್ಯದಲ್ಲಿ ಐಫೋನ್ 11 ಧೂಳು ಮತ್ತು ನೀರಿನಿಂದ ಉತ್ತಮ ರಕ್ಷಣೆ ಹೊಂದಿದೆ. ಇನ್ನು ಆಪಲ್ ಐಫೋನ್ 11 ''ಎ13 ಬಯೋನಿಕ್'' ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಒನ್‌ಪ್ಲಸ್ 8

ಒನ್‌ಪ್ಲಸ್ 8

ಒನ್‌ಪ್ಲಸ್ 8 6GB RAM+128GB ಸ್ಮಾರ್ಟ್‌ಫೋನ್‌ ಈ ವಾರ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ 39,999 ರೂ ಗಳಿಗೆ ಲಭ್ಯವಾಗಲಿದೆ. ಇದರ ಮೂಲ ಬೆಲೆ 41,999 ರೂ ಆಗಿದೆ. ಇದಲ್ಲದೆ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆದಾರರು 10% ಹೆಚ್ಚುವರಿ ತ್ವರಿತ ರಿಯಾಯಿತಿಯನ್ನು ಹೊಂದಿದ್ದು,1,750. ರೂಗಳ ತನಕ ರಿಯಾಯಿತಿ ದೊರೆಯಲಿದೆ. ಇದಲ್ಲದೆ ಅಮೆಜಾನ್ ಎಕ್ಸ್ಚೇಂಜ್ ಆಫರ್ ಅನ್ನು ಸಹ ನೀಡಲಾಗಿದೆ. ಇನ್ನು ಒನ್‌ಪ್ಲಸ್‌ 8 ಸ್ಮಾರ್ಟ್‌ಫೋನ್ 6.55 AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 865 SoC ಪ್ರೊಸೆಸರ್ ಅನ್ನು ಹೊಂದಿದೆ.

ರೆಡ್ಮಿ ನೋಟ್ 9 ಪ್ರೊ

ರೆಡ್ಮಿ ನೋಟ್ 9 ಪ್ರೊ

ಅಮೆಜಾನ್‌ ಗ್ರೇಟ್‌ ಇಂಡಿಯಾ ಫೆಸ್ಟಿವಲ್ ಸೇಲ್‌ನಲ್ಲಿ ರೆಡ್ಮಿ ನೋಟ್ 9 ಪ್ರೊ ಸಹ ಆಕರ್ಷಕ ರಿಯಾಯಿತಿ ಪಡೆದಿದೆ. 14,999ರೂ. ಬೆಲೆಯನ್ನು ಹೊಂದಿರುವ ಈ ಪೋನ್ ಆಫರ್‌ನಲ್ಲಿ 12,999ರೂ. ಬೆಲೆಯನ್ನು ಹೊಂದಿದೆ. ಜೊತೆಗೆ ನೀವು ಹಳೆಯ ಮೊಬೈಲ್ ಫೋನ್ ಅನ್ನು ಸ್ವ್ಯಾಪ್ ಮಾಡಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M51

ಸ್ಯಾಮ್‌ಸಂಗ್ ಗ್ಯಾಲಕ್ಸಿ M51

ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ M51 ಸ್ಮಾರ್ಟ್‌ಫೋನ್‌ ಕೂಡ ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ 22,499 ರೂ ಗಳಿಗೆ ರಿಯಾಯಿತಿ ದರದಲ್ಲಿ ಲಭ್ಯವಾಗಲಿದೆ. ಅಲ್ಲದೆ ನೀವು ಹಳೆಯ ಮೊಬೈಲ್ ಫೋನ್ ಅನ್ನು ಸಹ ವಿನಿಮಯ ಮಾಡಿಕೊಳ್ಳಬಹುದಾಗಿದ್ದು, ಈ ಮೂಲಕ 16,400.ರೂಗಳವರೆಗೂ ರಿಯಾಯಿತಿ ದರ ಲಭ್ಯವಾಗಲಿದೆ. ಇನ್ನು ಗ್ಯಾಲಕ್ಸಿ M51 ಸ್ಮಾರ್ಟ್‌ಫೋನ್‌ 6.7-ಇಂಚಿನ ಸೂಪರ್ ಅಮೋಲೆಡ್ ಪ್ಲಸ್ ಡಿಸ್ಪ್ಲೇ ಮತ್ತು 25W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 7,000mAh ಬ್ಯಾಟರಿಯನ್ನು ಹೊಂದಿದೆ. ಇದು 64 ಮೆಗಾಪಿಕ್ಸೆಲ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಮತ್ತು 32 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಒಪ್ಪೋ ಎ 52

ಒಪ್ಪೋ ಎ 52

ಒಪ್ಪೋ ಎ 52 ಸ್ಮಾರ್ಟ್‌ಫೋನ್‌ ಅಮೆಜಾನ್‌ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ 15,990 ರೂ,ಗಳಿಗೆ ಲಭ್ಯವಾಗಲಿದೆ. ಇದರ ಮೂಲ ಬೆಲೆ 20,990 ರೂ ಆಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.5-ಇಂಚಿನ ಫುಲ್‌ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. 12 ಮೆಗಾಪಿಕ್ಸೆಲ್ ಕ್ವಾಡ್ ರಿಯರ್ ಕ್ಯಾಮೆರಾ ಜೊತೆಗೆ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಸೇರಿದೆ. ಒಪ್ಪೋ ಎ 52 ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 665 SoC ಪ್ರೊಸೆಸರ್‌ ಅನ್ನು ಹೊಂದಿದೆ.

Most Read Articles
Best Mobiles in India

English summary
Amazon and Flipkart festive season sales have some of the lowest prices we've seen on popular smartphones this year.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X