ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್: ಈ ಫಿಟ್ನೆಸ್‌ ಬ್ಯಾಂಡ್‌ಗಳು ಅಗ್ಗದ ಬೆಲೆಗೆ ಲಭ್ಯ!

|

ಜನಪ್ರಿಯ ಇ-ಕಾಮರ್ಸ್ ದೈತ್ಯ ಅಮೆಜಾನ್ ಪ್ಲಾಟ್‌ಫಾರ್ಮ್ ಒಂದಿಲ್ಲೊಂದು ವಿಶೇಷ ಸೇಲ್‌ ಆಯೋಜಿಸುತ್ತಲೇ ಸಾಗಿದೆ. ಭಾರೀ ರಿಯಾಯಿತಿ ಕೊಡುಗೆಗಳನ್ನು ನೀಡುತ್ತ ಗ್ರಾಹಕರನ್ನು ತನ್ನತ್ತ ಸೆಳೆದಿದೆ. ಮುಖ್ಯವಾಗಿ ಎಲೆಕ್ಟ್ರಾನಿಕ್ ಹಾಗೂ ಗ್ಯಾಡ್ಜೆಟ್ಸ್‌ಗಳಿಗೆ ವಿಶೇಷ ಡಿಸ್ಕೌಂಟ್‌ ಸೇಲ್‌ ಅನ್ನು ಆಯೋಜಿಸಿ ಗಮನ ಸೆಳೆದಿದೆ. ದಸರಾ ಹಬ್ಬದ ಪ್ರಯುಕ್ತ ಅಮೆಜಾನ್ ಇದೀಗ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2021 ಸೇಲ್‌ ಅನ್ನು ಘೋಷಿಸಿದೆ. ಈ ಹಬ್ಬದ ಸೇಲ್‌ನಲ್ಲಿ ಆಯ್ದ ಕೆಲವು ಆಯ್ದ ಸ್ಮಾರ್ಟ್‌ ಬ್ಯಾಂಡ್‌ಗಳಿಗೆ ಆಕರ್ಷಕ ರಿಯಾಯಿತಿಗಳನ್ನು ತಿಳಿಸಿದೆ.

ಆಯೋಜಿಸಿರುವ

ಹೌದು, ಅಮೆಜಾನ್ ಆಯೋಜಿಸಿರುವ ಗ್ರೇಟ್ ಇಂಡಿಯನ್ ಸೇಲ್ 2021 ಅನ್ನು ಘೋಷಿಸಿದೆ. ಈ ಸೇಲ್ ಇದೇ ಅಕ್ಟೋಬರ್ 3ರಂದು ಶುರುವಾಗಲಿದ್ದು, ಭರ್ಜರಿ ಆಫರ್‌ಗಳು ಇರಲಿದೆ ಎಂದು ತಿಳಿಸಿದೆ. ಇನ್ನು ಈ ಗ್ರೇಟ್ ಇಂಡಿಯನ್ ಸೇಲ್ 2021 ಮಾರಾಟವು ಜನಪ್ರಿಯ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಪೀಕರ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಿಗೆ ದೊಡ್ಡ ರಿಯಾಯಿತಿಯನ್ನು ನೀಡುತ್ತದೆ. ಅದರೊಂದಿಗೆ ಫಿಟ್ನೆಸ್‌ ಬ್ಯಾಂಡ್‌ ಡಿವೈಸ್‌ಗಳಿಗೂ ಹೆಚ್ಚಿನ ಡಿಸ್ಕೌಂಟ್‌ ತಿಳಿಸಿದೆ.

ಲಭ್ಯವಾಗುವ

ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಆಯ್ದ ಕಂಪನಿಗಳ ಫಿಟ್ನೆಸ್‌ ಬ್ಯಾಂಡ್‌ ಡಿವೈಸ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ದೊರೆಯಲಿದೆ. ಅಮೆಜಾನ್ ತಾಣದಲ್ಲಿ ಸೇಲ್‌ ಪೇಜ್‌, ಫಿಟ್ನೆಸ್ ಬ್ಯಾಂಡ್‌ಗಳು ಮತ್ತು ಸ್ಮಾರ್ಟ್ ವಾಚ್‌ಗಳ ಮೇಲೆ ಶೇಕಡಾ 60 ರಷ್ಟು ರಿಯಾಯಿತಿಯನ್ನು ಸೂಚಿಸುತ್ತದೆ. ಹಾಗಾದರೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಜಸ್ಟ್‌ 3,000ರೂ. ಒಳಗೆ ಲಭ್ಯವಾಗುವ ಫಿಟ್ನೆಸ್‌ ಬ್ಯಾಂಡ್‌ ಡಿವೈಸ್‌ ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮಿ ಬ್ಯಾಂಡ್‌ 5 ಮಿ

ಮಿ ಬ್ಯಾಂಡ್‌ 5 ಮಿ

ಸ್ಮಾರ್ಟ್ ಬ್ಯಾಂಡ್ 5 ಡಿವೈಸ್ 126x294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.6-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 16 ಬಿಟ್ ಕಲರ್ ಮತ್ತು 450 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಇದು 14 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಪವರ್‌ ಸೇವ್‌ ಮೋಡ್‌ನಲ್ಲಿ 21 ದಿನಗಳ ಬ್ಯಾಟರಿ ಅವಧಿಯನ್ನು ಹೊಂದಿದೆ. ಹೃದಯ ಬಡಿತ, ನಿದ್ರೆಯ ಮೇಲ್ವಿಚಾರಣೆ, ಕ್ಯಾಲೋರಿ ಎಣಿಕೆ ಸೇರಿದಂತೆ ಮಹಿಳೆಯರ ಆರೋಗ್ಯವನ್ನು ಟ್ರ್ಯಾಕ್‌ ಮಾಡುವ ವಿಶೇಷತೆಯನ್ನು ಹೊಂದಿದೆ. ಬೆಲೆಯು 2,499ರೂ. ಆಗಿದೆ.

ಒನ್‌ಪ್ಲಸ್‌ ಬ್ಯಾಂಡ್

ಒನ್‌ಪ್ಲಸ್‌ ಬ್ಯಾಂಡ್

ಒನ್‌ಪ್ಲಸ್ ಬ್ಯಾಂಡ್ ಡಿವೈಸ್‌ 126 x 294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.1-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಮಿ ಬ್ಯಾಂಡ್‌ 5 ಡಿವೈಸ್‌ 450 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಒನ್‌ಪ್ಲಸ್ ಬ್ಯಾಂಡ್ ಬ್ಲಡ್‌ ಆಕ್ಸಿಜನ್‌ ಸೆನ್ಸಾರ್‌, ತ್ರೀ-ಆಕ್ಸಿಸ್‌ ಅಕ್ಸಿಲೆರೊಮೀಟರ್‌ ಮತ್ತು ಗೈರೊಸ್ಕೋಪ್ ಮತ್ತು ಆಪ್ಟಿಕಲ್ ಹಾರ್ಟ್‌ ಬಿಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಒನ್‌ಪ್ಲಸ್‌ ಬ್ಯಾಂಡ್‌ ಇತರ ಫಿಟ್‌ನೆಸ್ ಬ್ಯಾಂಡ್‌ಗಳಂತೆಯೇ, ಐಪಿ 68 ಪ್ರಮಾಣೀಕರಣ ಮತ್ತು 5 ಎಟಿಎಂ ವಾಟರ್-ರೆಸಿಸ್ಟೆಂಟ್ ರೇಟಿಂಗ್‌ ಅನ್ನು ಒಳಗೊಂಡಿದೆ.

ಹಾನರ್ ಬ್ಯಾಂಡ್ 5i

ಹಾನರ್ ಬ್ಯಾಂಡ್ 5i

ಹಾನರ್ ಬ್ಯಾಂಡ್ 5i ಫಿಟ್ನೆಸ್ ಡಿವಯಸ್ ಸಹ ಆಕರ್ಷಕ ಎನಿಸಿದೆ. ಈ ಸ್ಮಾರ್ಟ್ ಬ್ಯಾಂಡ್ 0.96-ಇಂಚಿನ ಡಿಸ್‌ಪ್ಲೇ ಹೊಂದಿದ್ದು, 160x80 ಪಿಕ್ಸೆಲ್‌ಗಳ ರೆಸಲ್ಯೂಶನ್ ಪಡೆದಿದೆ. ಸ್ಮಾರ್ಟ್ ಬ್ಯಾಂಡ್ ಆಪ್ಟಿಕಲ್ ಹೃದಯ ಬಡಿತ ಸಂವೇದಕ, 3-ಅಕ್ಷದ ಜಡ ಸಂವೇದಕ ಮತ್ತು ಅತಿಗೆಂಪು ಬೆಳಕಿನ ಧರಿಸುವ ಪತ್ತೆ ಸಂವೇದಕವನ್ನು ಹೊಂದಿದೆ. ಇದರೊಂದಿಗೆ ಒಟ್ಟು 9 ಕ್ರೀಡಾ ವಿಧಾನಗಳು ಮತ್ತು 5ATM ನೀರಿನ ಪ್ರತಿರೋಧವನ್ನು ಹೊಂದಿದೆ. ಫಿಟ್ನೆಸ್ ಟ್ರ್ಯಾಕರ್ 91mAh ಬ್ಯಾಟರಿಯನ್ನು 9 ದಿನಗಳ ಬ್ಯಾಟರಿ ಅವಧಿಯೊಂದಿಗೆ ಪಡೆಯುತ್ತದೆ. ಈ ಡಿವೈಸ್ ಬೆಲೆಯು 2599ರೂ. ಆಗಿದೆ.

ನಾಯ್ಸ್ ಕಲರ್‌ಫಿಟ್ ಪ್ರೊ 2

ನಾಯ್ಸ್ ಕಲರ್‌ಫಿಟ್ ಪ್ರೊ 2

ನಾಯ್ಸ್ ಕಲರ್‌ಫಿಟ್ ಪ್ರೊ 2 ಡಿವೈಸ್‌ 2799ರೂ.ಗಳ ಪ್ರೈಸ್‌ ಅನ್ನು ಒಳಗೊಂಡಿದೆ. ಈ ಫಿಟ್‌ನೆಸ್ ಟ್ರ್ಯಾಕರ್‌ನ ಪ್ರಮುಖ ಅಂಶವೆಂದರೆ ಅದರ ದೊಡ್ಡ 1.3 TFT LCD ಡಿಸ್‌ಪ್ಲೇ ಆಗಿದೆ. ಹಾಗೆಯೇ ಇದು IP68 ಧೂಳು ಮತ್ತು ನೀರಿನ ಪ್ರತಿರೋಧ ಸೌಲಭ್ಯ ಪಡೆದಿದೆ. ಈ ಡಿವಯಸ್‌ನಲ್ಲಿ ಆರೋಗ್ಯ ಟ್ರ್ಯಾಕಿಂಗ್ ಫೀಚರ್ಸ್‌ಗಳು ಇವೆ. 24 ಗಂಟೆಗಳ ಹೃದಯ ಬಡಿತ ಟ್ರ್ಯಾಕಿಂಗ್, ಸ್ಲೀಪ್ ಮಾನಿಟರಿಂಗ್, ಮೆನ್ಸ್ಟ್ರುವಲ್ ಸೈಕಲ್ ಟ್ರ್ಯಾಕಿಂಗ್ ಅನ್ನು ಒಳಗೊಂಡಿದೆ. ಇನ್ನು ಈ ಡಿವೈಸ್ 210mAh ಬ್ಯಾಟರಿ ಪಡೆದಿದ್ದು, ಸುಮಾರು 10 ದಿನಗಳ ಬ್ಯಾಕ್‌ಅಪ್ ನೀಡಲಿದೆ.

Best Mobiles in India

English summary
Amazon Great Indian Festival Sale 2021: These Fitness Bands Available Under Rs 3,000.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X