ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಘೋಷಣೆ! ಏನೆಲ್ಲಾ ಆಫರ್‌!

|

ಇ-ಕಾಮರ್ಸ್‌ ದೈತ್ಯ ಎನಿಸಿಕೊಂಡಿರುವ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ಅಮೆಜಾನ್‌ ತಾಣ ಆನ್‌ಲೈನ್‌ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್‌ ಸೇಲ್‌ಗಳನ್ನು ನಡೆಸುತ್ತಾ ಬಂದಿದೆ. ವಿಶೇಷ ದಿನಗಳಲ್ಲಿ ಭರ್ಜರಿ ಆಫರ್‌ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಆಯೋಜಿಸಲು ಸಿದ್ಧತೆ ನಡೆಸಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಶೀಘ್ರದಲ್ಲೇ ತನ್ನ ಗ್ರಾಹಕರಿಗಾಗಿ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ನಡೆಸುವುದಕ್ಕೆ ತಯಾರಿ ನಡೆಸಿದೆ. ಈ ಸೇಲ್‌ನಲ್ಲಿ ಹಲವು ಗ್ಯಾಜೆಟ್ಸ್‌ಗಳು, ಸ್ಮಾರ್ಟ್‌ ಡಿವೈಸ್‌ಗಳ ಮೇಲೆ ಹೆಚ್ಚಿನ ಡಿಸ್ಕೌಂಟ್‌ ದೊರೆಯಲಿದೆ. ಇದರಲ್ಲಿ ಕ್ಯಾಶ್‌ಬ್ಯಾಕ್‌ ಮತ್ತು ಎಕ್ಸ್‌ಚೇಂಜ್‌ ಆಫರ್‌ಗಳು, ನೋ ಕಾಸ್ಟ್‌ ಇಎಂಐ ಆಫರ್‌ಗಳು ಸೇರಿದಂತೆ ಹಲವು ರೀತಿಯ ಡಿಸ್ಕೌಂಟ್‌ ನೀಡಲಿದೆ ಎನ್ನಲಾಗಿದೆ. ಹಾಗಾದ್ರೆ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೇಸ್ಟಿವಲ್‌ ಸೇಲ್‌ನಲ್ಲಿ ಏನೆಲ್ಲಾ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್‌

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ 2022 ಈಗ ಅಧಿಕೃತವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಸೇಲ್‌ ಲೈವ್‌ ಆಗಲಿದೆ ಎಂದು ಅಮೆಜಾನ್‌ ಘೋಷಿಸಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಕಂಪ್ಯೂಟರ್ ಪೆರಿಫೆರಲ್ಸ್, ಸ್ಮಾರ್ಟ್ ಗ್ಯಾಜೆಟ್‌ಗಳು ಮತ್ತು ಅಮೆಜಾನ್ ಅಲೆಕ್ಸಾ-ಚಾಲಿತ ಸಾಧನಗಳು ಸೇರಿದಂತೆ ಹಲವಾರು ವಸ್ತುಗಳ ಮೇಲೆ ಡೀಲ್‌ಗಳು, ರಿಯಾಯಿತಿಗಳು ಮತ್ತು ಆಫರ್‌ಗಳನ್ನು ನೀಡಲಾಗುತ್ತದೆ ಎಂದು ಅಮೆಜಾನ್‌ ಹೇಳಿಕೊಂಡಿದೆ.

ಅಮೆಜಾನ್

ಅಮೆಜಾನ್

ಇನ್ನು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2022 ಸೇಲ್‌ನಲ್ಲಿ ಬ್ಯಾಂಕ್‌ ಆಪರ್‌ಗಳಿಗಾಗಿ ಅಮೆಜಾನ್‌ ಎಸ್‌ಬಿಐ ಜೊತೆಗೆ ಪಾಲುದಾರಿಕೆ ಹೊಂದಿದೆ. ಇದರಿಂದ SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಖರೀದಿಸಿದರೆ 10% ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಅಮೆಜಾನ್‌ನಲ್ಲಿ ಮೊದಲ ಬಾರಿಗೆ ಶಾಪಿಂಗ್ ಮಾಡುವವರು 10% ಪ್ಲಾಟ್‌ ಕ್ಯಾಶ್‌ಬ್ಯಾಕ್‌ ಆಫರ್‌ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಹೇಳಲಾಗಿದೆ.

ಅಮೆಜಾನ್‌

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಲಭ್ಯವಿರುವ ಡೀಲ್‌ಗಳು ಮತ್ತು ರಿಯಾಯಿತಿಗಳನ್ನು ಪಡೆಯಲು ಪ್ರೈಮ್ ಸದಸ್ಯರಿಗೆ ಆರಂಭಿಕ ಪ್ರವೇಶ ಕೂಡ ದೊರೆಯಲಿದೆ. ಇನ್ನು ಈ ಸೇಲ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಲಿವೆ ಎಂದು ಹೇಳಲಾಗಿದೆ. ಲಾಂಚ್‌ ಆಫರ್‌ನಲ್ಲಿ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಅಗ್ಗದ ಬೆಲೆಯಲ್ಲಿ ಖರೀದಿಸುವುದಕ್ಕೆ ನಿಮಗೆ ಅವಕಾಶ ಸಿಗಲಿದೆ. ಹಾಗೆಯೇ ಎಲೆಕ್ಟ್ರಾನಿಕ್ ವಸ್ತುಗಳ ಮೇಲೆ ಉತ್ತಮ ರಿಯಾಯಿತಿ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.

ಸ್ಮಾರ್ಟ್‌ಫೋನ್‌

ಇನ್ನು ಡಿಸ್ಕೌಂಟ್‌ನಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಐಕ್ಯೂ, ಒನ್‌ಪ್ಲಸ್‌, ಶಿಯೋಮಿ ಮತ್ತು ರಿಯಲ್‌ಮಿ ಬ್ರ್ಯಾಂಡ್‌ಗಳ ಫೋನ್‌ಗಳು ಸೇರಿವೆ. ಇದಲ್ಲದೆ ಹೆಚ್ಚುವರಿಯಾಗಿ ಅಮೆಜಾನ್ ತಾಣದಲ್ಲಿ 60 ಕ್ಕೂ ಹೆಚ್ಚು ಹೊಸ ಡಿವೈಸ್‌ಗಳು ಲಾಂಚ್‌ ಆಗಲಿದೆ ಎನ್ನಲಾಗಿದೆ. ಇದರಲ್ಲಿ ಭಾರತದಲ್ಲಿ ರೆಡ್ಮಿ 11 ಪ್ರೈಮ್‌ 5G ಲಾಂಚ್‌ ಕೂಡ ಸೇರಿದೆ. ಇದಲ್ಲದೆ ಸ್ಯಾಮ್‌ಸಂಗ್‌ನ ಇತ್ತೀಚಿನ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳಾದ ಗ್ಯಾಲಕ್ಸಿ Z ಫ್ಲಿಪ್ 4 ಮತ್ತು ಗ್ಯಾಲಕ್ಸಿ ಝಡ್ ಫೋಲ್ಡ್ 4 ಕೂಡ ಡಿಸ್ಕೌಂಟ್‌ನಲ್ಲಿ ಸೇಲ್‌ ಆಗಲಿದೆ.

ಅಮೆಜಾನ್‌

ಇದರೊಂದಿಗೆ ಎಂದಿನಂತೆ ಅಮೆಜಾನ್‌ ತಾಣದಲ್ಲಿ ವಿವಿಧ ಮೊಬೈಲ್ ಫೋನ್ ಪರಿಕರಗಳು, ಸ್ಮಾರ್ಟ್ ವಾಚ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳು ಮತ್ತು ಸ್ಮಾರ್ಟ್ ಟಿವಿಗಳು ಸೇರಿದಂತೆ ಗೃಹೋಪಯೋಗಿ ಉಪಕರಣಗಳ ಮೇಲೆ ರಿಯಾಯಿತಿಗಳು ದೊರೆಯಲಿವೆ. ಅಲ್ಲದೆ ಅಮೆಜಾನ್‌ ಎಕೋ, ಫೈರ್ ಟಿವಿ ಮತ್ತು ಅಮೆಜಾನ್‌ ಕಿಂಡಲ್ ಸಾಧನಗಳ ಮೇಲೆ ರಿಯಾಯಿತಿಗಳನ್ನು ನೀಡುತ್ತದೆ. ಇದಲ್ಲದೆ, ಅನೇಕ ಅಲೆಕ್ಸಾ ಸ್ಮಾರ್ಟ್ ಹೋಮ್ ಕಾಂಬೊ ಆಫರ್‌ಗಳು ಕೂಡ ಲಭ್ಯವಾಗಲಿದೆ.

ಅಮೆಜಾನ್‌

ಇನ್ನು ಅಮೆಜಾನ್‌ ತಾಣಕ್ಕೆ ಪ್ರತಿಸ್ಫರ್ಧಿಯಾದ ಫ್ಲಿಪ್‌ಕಾರ್ಟ್‌ ಕೂಡ ಇದೇ ಸಮಯದಲ್ಲಿ ತನ್ನ ಬಿಗ್‌ಬಿಲಿಯನ್‌ ಡೇಸ್‌ ಸೇಲ್‌ ಕೂಡ ನಡೆಯುವ ಸಾಧ್ಯತೆ ಇದೆ. ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಆಫರ್‌ಗಳ ಜೊತೆಗೆ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿಯೂ ಬಿಗ್‌ ಆಫರ್‌ ದೊರೆಯಲಿದೆ. ಆದರಿಂದ ಮೊಬೈಲ್‌ಗಳು, ಲ್ಯಾಪ್‌ಟಾಪ್‌ಗಳು, ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಖರೀದಿಸಲು ಬಯಸುವವರಿಗೆ ಸೆಪ್ಟೆಂಬರ್‌ ತಿಂಗಳ ಅಂತ್ಯದಲ್ಲಿ ಬಿಗ್‌ ಆಫರ್‌ ಪಡೆದುಕೊಳ್ಳಬಹುದಾಗಿದೆ.

Best Mobiles in India

Read more about:
English summary
Amazon Great Indian Festival Sale 2022 is now official.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X