ಅಮೆಜಾನ್‌ ಸೇಲ್‌ನಲ್ಲಿ ಬ್ಲೂಟೂತ್‌ ಸ್ಪೀಕರ್‌ಗಳ ಮೇಲೆ 75% ಡಿಸ್ಕೌಂಟ್‌!

|

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ನಡೆಸುತ್ತಿದೆ. ಸೇಲ್‌ ಈಗಾಗಲೆ ನಾಲ್ಕನೇ ದಿನಕ್ಕೆ ಕಾಲಿರಿಸಿದ್ದು, ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ಟಿವಿಗಳು ಮಾತ್ರವಲ್ಲದೆ ಬ್ಲೂಟೂತ್‌ ಸ್ಪೀಕರ್‌ಗಳ ಮೇಲೂ ಕೂಡ ವಿಶೇಷ ಆಫರ್‌ಗಳನ್ನು ನೀಡಲಾಗ್ತಿದೆ. ಇನ್ನು ಈ ಸೇಲ್‌ನಲ್ಲಿ ಬ್ಲೂಟೂತ್‌ ಸ್ಪೀಕರ್‌ಗಳ ಮೇಲೆ 75% ವರೆಗೆ ಡಿಸ್ಕೌಂಟ್‌ ದೊರೆಯಲಿದೆ.

ಅಮೆಜಾನ್

ಹೌದು, ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2022ನಲ್ಲಿ ಬ್ಲೂಟೂತ್‌ ಸ್ಪೀಕರ್‌ಗಳ ಮೇಲೆ ಭಾರಿ ರಿಯಾಯಿತಿ ದೊರೆಯುತ್ತಿದೆ. ಅತ್ಯುತ್ತಮ ಬ್ಲೂಟೂತ್‌ ಸ್ಪೀಕರ್‌ಗಳನ್ನು ಡಿಸ್ಕೌಂಟ್‌ನಲ್ಲಿ ಖರೀದಿಸಲು ಬಯಸುವವರಿಗೆ ಇದು ಬೆಸ್ಟ್‌ ಟೈಂ ಅಂತಾನೇ ಹೇಳಬಹುದು. ಇದರಲ್ಲಿ ಜನಪ್ರಿಯ ಬ್ರ್ಯಾಂಡ್‌ಗಳಾದ ಶಿಯೋಮಿ, ಜೆಬ್ರೋನಿಕ್ಸ್‌ ಸ್ಪೀಕರ್‌ಗಳು ಕೂಡ ಸೇರಿವೆ. ಹಾಗಾದ್ರೆ ಅಮೆಜಾನ್‌ ಗ್ರೇಟ್‌ ಇಮಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಡಿಸ್ಕೌಂಟ್‌ ಪಡೆದುಕೊಂಡಿರುವ ಬ್ಲೂಟೂತ್‌ ಸ್ಪೀಕರ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Mivi Roam 2 ಬ್ಲೂಟೂತ್ 5W ಪೋರ್ಟಬಲ್ ಸ್ಪೀಕರ್

Mivi Roam 2 ಬ್ಲೂಟೂತ್ 5W ಪೋರ್ಟಬಲ್ ಸ್ಪೀಕರ್

Mivi Roam 2 ಬ್ಲೂಟೂತ್ 5W ಪೋರ್ಟಬಲ್ ಸ್ಪೀಕರ್ ಅಮೆಜಾನ್ ಸೇಲ್‌ನಲ್ಲಿ 73% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಈ ಸ್ಪೀಕರ್‌ ನಿಮಗೆ 2,999ರೂ. ಗಳ ಬದಲಿಗೆ ಕೇವಲ 797ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ರೋಮ್ 2 ವಾಯರ್‌ಲೆಸ್ ಸ್ಪೀಕರ್ ಆಗಿದ್ದು, 70% ವಾಲ್ಯೂಮ್‌ನಲ್ಲಿ 24 ಗಂಟೆಗಳ ಪ್ಲೇಟೈಮ್ ಅನ್ನು ನೀಡುತ್ತದೆ.

ಜೆಬ್ರೋನಿಕ್ಸ್‌ ZEB-COUNTY 3W

ಜೆಬ್ರೋನಿಕ್ಸ್‌ ZEB-COUNTY 3W

ಜೆಬ್ರೋನಿಕ್ಸ್‌ ZEB-COUNTY 3W ವಾಯರ್‌ಲೆಸ್ ಬ್ಲೂಟೂತ್ ಪೋರ್ಟಬಲ್ ಸ್ಪೀಕರ್ ಅಮೆಜಾನ್‌ನಲ್ಲಿ 50% ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಬ್ಲೂಟೂತ್‌ ಸ್ಪೀಕರ್‌ನ ಮೂಲ ಬೆಲೆ 999ರೂ ಆಗಿದ್ದು, ರಿಯಾಯಿತಿಯ ನಂತರ ಕೇವಲ 498ರೂ. ಬೆಲೆಯಲ್ಲಿ ದೊರೆಯಲಿದೆ. ಇದು ಕಾಂಪ್ಯಾಕ್ಟ್ ಮತ್ತು ಸೂಕ್ತ ಪೋರ್ಟಬಲ್ ಸ್ಪೀಕರ್ ಆಗಿದ್ದು, ವಾಯರ್‌ಲೆಸ್ BT/USB/micro SD ಮತ್ತು AUX ನಂತಹ ಮಲ್ಟಿ ಕನೆಕ್ಟಿವಿಟಿ ಆಯ್ಕೆಗಳೊಂದಿಗೆ ಬರಲಿದೆ.

ಮಿ ಔಟ್‌ಡೋರ್‌ ಬ್ಲೂಟೂತ್ ಸ್ಪೀಕರ್ (5W)

ಮಿ ಔಟ್‌ಡೋರ್‌ ಬ್ಲೂಟೂತ್ ಸ್ಪೀಕರ್ (5W)

ಮಿ ಔಟ್‌ಡೋರ್‌ ಬ್ಲೂಟೂತ್ ಸ್ಪೀಕರ್ (5W) ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ 50% ಡಿಸ್ಕೌಂಟ್‌ ಪಡೆದಿದೆ. ಇದರಿಂದ ಈ ಸ್ಪೀಕರ್‌ 1,999ರೂ. ಬದಲಿಗೆ 999ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಈ ಸ್ಪೀಕರ್‌ 20 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆಯನ್ನು ನೀಡಲಿದೆ. ಇದಲ್ಲದೆ IPX5 ಸ್ಪ್ಲಾಶ್ ಪ್ರೂಫ್ ಅನ್ನು ಕೂಡ ಒಳಗೊಂಡಿದೆ. ಇದು 20hz- 20kHz ಫ್ರಿಕ್ವೆನ್ಸಿ ರೇಂಜ್‌ ಅನ್ನು ಹೊಂದಿದ್ದು, ಐಒಎಸ್, ಆಂಡ್ರಾಯ್ಡ್ ಮತ್ತು ವಿಂಡೋಸ್‌ಗೆ ಹೊಂದಿಕೊಳ್ಳುತ್ತದೆ.

Ptron Musicbot Lite 5W

Ptron Musicbot Lite 5W

Ptron Musicbot Lite 5W ಮಿನಿ ಬ್ಲೂಟೂತ್ ಸ್ಪೀಕರ್ ಆಗಿದ್ದು, ಫ್ಯಾಬ್ರಿಕ್ ಗ್ರಿಲ್ ವಿನ್ಯಾಸವನ್ನು ಹೊಂದಿದೆ. ಇದು ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ 75% ಡಿಸ್ಕೌಂಟ್‌ ಪಡೆದುಕೊಂಡಿದೆ. ಆದರಿಂದ ಈ ಸ್ಪೀಕರ್‌ 1,600ರೂ. ಗಳ ಬದಲಿಗೆ 399ರೂ. ಬೆಲೆಯಲ್ಲಿ ಖರೀದಿಗೆ ಲಭ್ಯವಾಗಲಿದೆ. ಇನ್ನು ಈ ಸ್ಪೀಕರ್‌ 40mm ಆಡಿಯೋ ಡ್ರೈವರ್ ಹೊಂದಿದ್ದು, 5W ಡೈನಾಮಿಕ್ ಸ್ಪೀಕರ್ ಆಗಿದೆ. ಇದು 6 ಗಂಟೆಗಳ ಮ್ಯೂಸಿಕ್‌ ಪ್ಲೇ ಬ್ಯಾಕ್‌ ಮತ್ತು 120 ಗಂಟೆಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ.

ಇನ್ಫಿನಿಟಿ (ಜೆಬಿಎಲ್) ಫ್ಯೂಜ್ ಪಿಂಟ್ ವಾಯರ್‌ಲೆಸ್ ಅಲ್ಟ್ರಾ ಪೋರ್ಟಬಲ್ ಮಿನಿ ಸ್ಪೀಕರ್

ಇನ್ಫಿನಿಟಿ (ಜೆಬಿಎಲ್) ಫ್ಯೂಜ್ ಪಿಂಟ್ ವಾಯರ್‌ಲೆಸ್ ಅಲ್ಟ್ರಾ ಪೋರ್ಟಬಲ್ ಮಿನಿ ಸ್ಪೀಕರ್

ಇನ್ಫಿನಿಟಿ (ಜೆಬಿಎಲ್) ಫ್ಯೂಜ್ ಪಿಂಟ್ ವಾಯರ್‌ಲೆಸ್ ಅಲ್ಟ್ರಾ ಪೋರ್ಟಬಲ್ ಮಿನಿ ಸ್ಪೀಕರ್ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ 65% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ ಈ ಸ್ಪೀಕರ್‌ ಅನ್ನು 1,999ರೂ ಬದಲಿಗೆ 699ರೂ. ಗಳ ಬೆಲೆಯಲ್ಲಿ ಖರೀದಿಸಬಹುದಾಗಿದೆ.

Best Mobiles in India

Read more about:
English summary
Amazon Great Indian Festival Sale: Deals on Bluetooth Speakers

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X