ಅಮೆಜಾನ್‌ ಸೇಲ್‌ನಲ್ಲಿ ಗೇಮಿಂಗ್‌ ಲ್ಯಾಪ್‌ಟಾಪ್‌ಗಳಿಗೆ 75% ತನಕ ಡಿಸ್ಕೌಂಟ್‌!

|

ಜನಪ್ರಿಯ ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಭಾರತದಲ್ಲಿ ಹಬ್ಬದ ಸೀಸನ್‌ ಪ್ರಯುಕ್ತ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ 2022 ಸೇಲ್‌ ನಡೆಸುತ್ತಿದೆ. ಈ ಸಮಯದಲ್ಲಿ ಆನ್‌ಲೈನ್‌ ಗ್ರಾಹಕರಿಗೆ ವಿವಿಧ ರೀತಿಯ ಡಿಸ್ಕೌಂಟ್‌ಗಳನ್ನು ನೀಡಲಾಗ್ತಿದೆ. ಇದರಲ್ಲಿ ಗೇಮಿಂಗ್ ಲ್ಯಾಪ್‌ಟಾಪ್‌ಗಳು 75% ರಷ್ಟು ರಿಯಾಯಿತಿಯನ್ನು ಪಡೆದುಕೊಂಡಿವೆ. ಅಸುಸ್‌, LG, ಹೈಪರ್‌ಎಕ್ಸ್‌ನಂತಹ ಬ್ರ್ಯಾಂಡ್‌ಗಳು ಕೂಡ ತಮ್ಮ ಲ್ಯಾಪ್‌ಟಾಪ್‌ಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಅನ್ನು ನೀಡುತ್ತಿವೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಗೇಮಿಂಗ್‌ ಲ್ಯಾಪ್‌ಟಾಪ್‌ಗಳನ್ನು ಖರೀದಿಸುವವರಿಗೆ ಭರ್ಜರಿ ಡಿಸ್ಕೌಂಟ್‌ ದೊರೆಯುತ್ತಿದೆ. ಇದಲ್ಲದೆ, SBI ಗ್ರಾಹಕರು ಈ ಸೇಲ್‌ನಲ್ಲಿ ಖರೀದಿಗಳ ಮೇಲೆ 10%ವರೆಗೆ ತ್ವರಿತ ರಿಯಾಯಿತಿಯ ಹೆಚ್ಚುವರಿ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಬ್ಯಾಂಕ್, ಎಕ್ಸ್‌ಚೇಂಜ್‌ ಮತ್ತು ನೋ-ಕಾಸ್ಟ್ EMI ಆಫರ್‌ಗಳು ಕೂಡ ಲಭ್ಯವಿವೆ. ಹಾಗಾದ್ರೆ ಅಮೆಜಾನ್‌ ಸೇಲ್‌ನಲ್ಲಿ ನೀವು ಖರೀದಿಸಬಹುದಾದ ಅತ್ಯುತ್ತಮ ಗೇಮಿಂಗ್‌ ಲ್ಯಾಪ್‌ಟಾಪ್‌ಗಳ ವಿವರವನ್ನು ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹೆಚ್‌ಪಿ ವಿಕ್ಟಸ್‌ 16 E

ಹೆಚ್‌ಪಿ ವಿಕ್ಟಸ್‌ 16 E

ಅಮೆಜಾನ್‌ ಸೇಲ್‌ನಲ್ಲಿ ಹೆಚ್‌ಪಿ ವಿಕ್ಟಸ್‌ 16 E ಗೇಮಿಂಗ್‌ ಲ್‌ಯಾಪ್‌ಟಾಪ್‌ 20% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದರಿಂದ 71,343ರೂ. ಎಂ.ಆರ್‌.ಪಿ ಹೊಂದಿರುವ ಈ ಲ್ಯಾಪ್‌ಟಾಪ್‌ ನಿಮಗೆ ಕೇವಲ 56,990ರೂ. ಬೆಲೆಯಲ್ಲಿ ದೊರೆಯಲಿದೆ. ಇನ್ನು ಈ ಲ್ಯಾಪ್‌ಟಾಪ್‌ 16.1 ಇಂಚಿನ ಫುಲ್‌ HD IPS ಡಿಸ್‌ಪ್ಲೇಯನ್ನು ಹೊಂದಿದೆ. ಇದು AMD ರೈಜೆನ್‌ 5 5600H ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

MSI ಕಟಾನಾ GF76

MSI ಕಟಾನಾ GF76

MSI ಕಟಾನಾ GF76 ಲ್ಯಾಪ್‌ಟಾಪ್‌ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ 21% ಡಿಸ್ಕೌಂಟ್‌ ಪಡೆದುಕೊಂಡಿದೆ. ಹೆಚ್ಚುವರಿಯಾಗಿ ಈ ಲ್ಯಾಪ್‌ಟಾಪ್‌ ಎಕ್ಸ್‌ಚೇಂಜ್‌ ಆಫರ್‌ ಡಿಸ್ಕೌಂಟ್‌ 19,500ರೂ ತನಕ ದೊರೆಯಲಿದೆ. ಸದ್ಯ ಈ ಲ್ಯಾಪ್‌ಟಾಪ್‌ ಅಮೆಜಾನ್‌ನಲ್ಲಿ ಕೇವಲ 79,989ರೂ. ಬೆಲೆಗೆ ಲಭ್ಯವಿದೆ. ಇನ್ನು ಈ ಗೇಮಿಂಗ್ ಲ್ಯಾಪ್‌ಟಾಪ್ 144Hz ರಿಫ್ರೆಶ್ ರೇಟ್‌ ಬೆಂಬಲಿಸುವ 17.3 ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು 11 ನೇ ತಲೆಮಾರಿನ ಇಂಟೆಲ್ ಕೋರ್ i7 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಏಸರ್ ಪ್ರಿಡೇಟರ್ ಹೆಲಿಯೊಸ್ 300 PH315-54

ಏಸರ್ ಪ್ರಿಡೇಟರ್ ಹೆಲಿಯೊಸ್ 300 PH315-54

ಅಮೆಜಾನ್‌ನಲ್ಲಿ ಏಸರ್‌ ಪ್ರಿಡೇಟರ್‌ ಹೆಲಿಯೋಸ್‌ 300 PH315-54 ಲ್ಯಾಪ್‌ಟಾಪ್‌ ಅನ್ನು ಕೇವಲ 1,14,990ರೂ. ಬೆಲೆ ಹೊಂದಿದೆ. ಇನ್ನು ಈ ಲ್ಯಾಪ್‌ಟಾಪ್‌ 15.6 ಇಂಚಿನ IPS ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 165Hz ರಿಫ್ರೆಶ್ ರೇಟ್ ಮತ್ತು 300 ನಿಟ್ಸ್‌ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಇದು 11 ನೇ ತಲೆಮಾರಿನ ಇಂಟೆಲ್ ಕೋರ್ i9 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ.

ಅಸುಸ್‌ ROG ಸ್ಟ್ರಿಕ್ಸ್ GL10

ಅಸುಸ್‌ ROG ಸ್ಟ್ರಿಕ್ಸ್ GL10

ಅಸುಸ್‌ ROG ಸ್ಟ್ರಿಕ್ಸ್‌ GL10 ಗೇಮಿಂಗ್ ಕಂಪ್ಯೂಟರ್ ಅಮೆಜಾನ್‌ ಸೇಲ್‌ನಲ್ಲಿ 43% ಡಿಸ್ಕೌಂಟ್‌ ಅನ್ನು ಪಡೆದುಕೊಂಡಿದೆ. ಇದು 10ನೇ ತಲೆಮಾರಿನ ಇಂಟೆಲ್‌ ಕೋರ್‌ i5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 1TB HDD ಸ್ಟೋರೇಜ್‌ ಅನ್ನು ಒಳಗೊಂಡಿದೆ. ಸದ್ಯ ಈ ಕಂಪ್ಯೂಟರ್‌ ಅಮೆಜಾನ್‌ನಲ್ಲಿ 67,990ರೂ. ಬೆಲೆಗೆ ಲಭ್ಯವಾಗಲಿದೆ.

ಲೆನೊವೊ ಐಡಿಯಾಸೆಂಟರ್‌ ಗೇಮಿಂಗ್‌ 5 90RW005DIN

ಲೆನೊವೊ ಐಡಿಯಾಸೆಂಟರ್‌ ಗೇಮಿಂಗ್‌ 5 90RW005DIN

ಲೆನೊವೊ ಐಡಿಯಾಸೆಂಟರ್‌ ಗೇಮಿಂಗ್‌ 5 90RW005DIN ಕಂಪ್ಯೂಟರ್‌ ಎಎಂಡಿ ರೈಜೆನ್‌ 5 5600G ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಅಮೆಜಾನ್‌ ಸೇಲ್‌ನಲ್ಲಿ 93,690ರೂ. ಬದಲಿಗೆ 54,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಕಂಪ್ಯೂಟರ್‌ 8GB DDR4 RAM ಮತ್ತು 512GB SSD ಇಮಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

Best Mobiles in India

English summary
Amazon Great Indian Festival Sale: Deals on Gaming Laptops

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X