ಸ್ಮಾರ್ಟ್‌ಟಿವಿ ಖರೀದಿಗೆ ಸುವರ್ಣಾವಕಾಶ: ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್‌!

|

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಸ್ಮಾರ್ಟ್‌ ಗ್ಯಾಜೆಟ್ಸ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ಘೋಷಣೆ ಮಾಡಲಾಗಿದೆ. ಅದರಲ್ಲೂ ಸ್ಮಾರ್ಟ್‌ ಟಿವಿಗಳಿಗೆ 30% ರಿಯಾಯಿತಿಯಿಂದ 70% ವರೆಗೆ ರಿಯಾಯಿತಿ ಸಿಗಲಿದೆ. ಇನ್ನು ಈ ಸೇಲ್‌ ಇದೇ ಸೆಪ್ಟೆಂಬರ್‌ 30ಕ್ಕೆ ಮುಕ್ತಾಯವಾಗಲಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಸ್ಯಾಮ್‌ಸಂಗ್‌, ಸೋನಿ, ಒನ್‌ಪ್ಲಸ್‌ ಮತ್ತು ರೆಡ್‌ಮಿ ಸೇರಿದಂತೆ ಇನ್ನಿತರ ಪ್ರಮಖ ಬ್ರಾಂಡ್‌ಗಳ ಸ್ಮಾರ್ಟ್‌ಟಿವಿಗಳಿಗೆ ಭಾರಿ ರಿಯಾಯಿತಿ ನೀಡಲಾಗಿದೆ. ಹಾಗೆಯೇ ಎಸ್‌ಬಿಐ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ಗಳ ಮೇಲೆ 10% ತ್ವರಿತ ರಿಯಾಯಿತಿ ಸಹ ನೀಡಲಾಗಿದೆ. ನಾವು ಇಲ್ಲಿ ಸ್ಮಾರ್ಟ್‌ಟಿವಿಗಳ ರಿಯಾಯಿತಿ ಬೆಲೆ ಜೊತೆಗೆ ಕೆಲವು ಪ್ರಮುಖ ಫೀಚರ್ಸ್‌ಗಳ ಬಗ್ಗೆ ಮಾಹಿತಿ ನೀಡಿದ್ದೇವೆ ಓದಿರಿ.

ರೆಡ್ಮಿ ಹೆಚ್‌ಡಿ ರೆಡಿ ಸ್ಮಾರ್ಟ್ LED TV

ರೆಡ್ಮಿ ಹೆಚ್‌ಡಿ ರೆಡಿ ಸ್ಮಾರ್ಟ್ LED TV

ರೆಡ್ಮಿ ಹೆಚ್‌ಡಿ ರೆಡಿ ಸ್ಮಾರ್ಟ್ LED TV ಯನ್ನು ನೀವು ಕೇವಲ 8,999 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ಟಿವಿ 32 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 20W ಸ್ಟಿರಿಯೊ ಸ್ಪೀಕರ್‌ಗಳು ಡಾಲ್ಬಿ ಆಡಿಯೊ ಬೆಂಬಲದೊಂದಿಗೆ ಉತ್ತಮ ಆಡಿಯೋ ಕ್ವಾಲಿಟಿ ನೀಡಲಿದೆ.

ಒನ್‌ಪ್ಲಸ್‌ Y ಸರಣಿ HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ

ಒನ್‌ಪ್ಲಸ್‌ Y ಸರಣಿ HD ರೆಡಿ LED ಸ್ಮಾರ್ಟ್ ಆಂಡ್ರಾಯ್ಡ್ ಟಿವಿ

ಈ ಸ್ಮಾರ್ಟ್‌ಟಿವಿಯನ್ನು 11,499 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ಟಿವಿ 32 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಇದು 20W ಬಾಕ್ಸ್ ಸ್ಪೀಕರ್‌ಗಳು ಮತ್ತು ಡಾಲ್ಬಿ ಆಡಿಯೊ ಆಯ್ಕೆ ಪಡೆದಿದೆ. ಜೊತೆಗೆ ಬೆಜೆಲ್-ಲೆಸ್ ವಿನ್ಯಾಸ, ಮಲ್ಟಿ ಪೋರ್ಟ್ ಕನೆಕ್ಟಿವಿಟಿ, ಆಂಡ್ರಾಯ್ಡ್ ಟಿವಿ ಮತ್ತು ಒನ್‌ಪ್ಲಸ್ ಕನೆಕ್ಟ್ ಅಪ್ಲಿಕೇಶನ್‌ ಬಳಕೆಯ ಆಯ್ಕೆಯನ್ನು ಈ ಸ್ಮಾರ್ಟ್‌ಟಿವಿ ಹೊಂದಿದೆ.

ಎಲ್‌ಜಿ  HD ರೆಡಿ ಸ್ಮಾರ್ಟ್ LED TV

ಎಲ್‌ಜಿ HD ರೆಡಿ ಸ್ಮಾರ್ಟ್ LED TV

ಎಲ್‌ಜಿ HD ರೆಡಿ ಸ್ಮಾರ್ಟ್ LED TV ಯನ್ನು 12,980 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ಟಿವಿಯು ಸುಧಾರಿತ ಇಮೇಜ್ ಪ್ರೊಸೆಸರ್‌ ಬೆಂಬಲ ಪಡೆದಿದೆ. ಜೊತೆಗೆ ಡಾಲ್ಬಿ ಆಡಿಯೊ ಫೀಚರ್ ‌ಹೊಂದಿದೆ.

ಒನ್‌ಪ್ಲಸ್‌ Y ಸರಣಿ

ಒನ್‌ಪ್ಲಸ್‌ Y ಸರಣಿ

ಈ ಸ್ಮಾರ್ಟ್‌ಟಿವಿ 25,990 ರೂ.ಗಳಿಗೆ ರಿಯಾಯಿತಿ ದರದಲ್ಲಿ ಲಭ್ಯವಿದೆ. ಇದು 43 ಇಂಚಿನ 3840×2160 ಪಿಕ್ಸೆಲ್‌ ರೆಸಲ್ಯೂಶನ್ ಇರುವ ಡಿಸ್‌ಪ್ಲೇ ಹೊಂದಿದೆ ಹಾಗೆಯೇ ಇದು 60 Hertz ರಿಫ್ರೆಶ್‌ ರೇಟ್‌ ಆಯ್ಕೆ ಪಡೆದಿದೆ. ಈ ಸ್ಮಾರ್ಟ್‌ಟಿವಿ ಡ್ಯುಯಲ್ ಬ್ಯಾಂಡ್ ವೈ-ಫೈನೊಂದಿಗೆ ಎಂಬೆಡ್ ಮಾಡಲ್ಪಟ್ಟಿದ್ದು, ಡಾಲ್ಬಿ ಆಡಿಯೋ ಮತ್ತು ಡಾಲ್ಬಿ ಅಟ್ಮಾಸ್ ಡಿಕೋಡಿಂಗ್‌ಗೆ ಬೆಂಬಲ ನೀಡುತ್ತದೆ.

ಸ್ಯಾಮ್‌ಸಂಗ್‌ ಕ್ರಿಸ್ಟಲ್ 4K ನಿಯೋ ಸರಣಿ

ಸ್ಯಾಮ್‌ಸಂಗ್‌ ಕ್ರಿಸ್ಟಲ್ 4K ನಿಯೋ ಸರಣಿ

ಸ್ಯಾಮ್‌ಸಂಗ್‌ ಕ್ರಿಸ್ಟಲ್ 4K ನಿಯೋ ಸರಣಿ ಸ್ಮಾರ್ಟ್‌ಟಿವಿಯನ್ನು 30,980 ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ಇದು 43 ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಮಧ್ಯಮ ಶ್ರೇಣಿಯ ಪ್ರೀಮಿಯಂ ಟಿವಿಯಾಗಿದೆ. PurColor ತಂತ್ರಜ್ಞಾನದ ಫೀಚರ್ಸ್‌ ಇದರಲ್ಲಿದೆ.

ರೆಡ್ಮಿ 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED TV

ರೆಡ್ಮಿ 4K ಅಲ್ಟ್ರಾ HD ಆಂಡ್ರಾಯ್ಡ್ ಸ್ಮಾರ್ಟ್ LED TV

ಈ ಸ್ಮಾರ್ಟ್‌ಟಿವಿಯನ್ನು ರಿಯಾಯಿತಿ ದರದಲ್ಲಿ ನೀವು ಕೇವಲ 27,990 ರೂ. ಗಳಿಗೆ ಖರೀದಿ ಮಾಡಬಹುದು. ಇದು 50 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 4K HDR ಜೊತೆಗೆ 8 ಮಿಲಿಯನ್ ಪಿಕ್ಸೆಲ್‌ಗಳನ್ನು ನೀಡುತ್ತದೆ. 15W X 2 ಸ್ಪೀಕರ್‌ಗಳು ಸ್ಟಿರಿಯೊ ಧ್ವನಿಯ ಆಯ್ಕೆ ಪಡೆದಿದೆ. ಜೊತೆಗೆ ಇದು 30W ಆಡಿಯೋ ಔಟ್‌ಪುಟ್ ನೀಡುತ್ತದೆ.

ಸೋನಿ ಬ್ರವಿಯಾ 4K ಅಲ್ಟ್ರಾ HD ಸ್ಮಾರ್ಟ್ LED ಗೂಗಲ್‌ TV

ಸೋನಿ ಬ್ರವಿಯಾ 4K ಅಲ್ಟ್ರಾ HD ಸ್ಮಾರ್ಟ್ LED ಗೂಗಲ್‌ TV

ಸೋನಿ ಬ್ರವಿಯಾ 4K ಅಲ್ಟ್ರಾ HD ಸ್ಮಾರ್ಟ್ LED ಗೂಗಲ್‌ TV ಯನ್ನು 61,000 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದು 55 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 20W ಸ್ಪೀಕರ್ ಡಾಲ್ಬಿ ಆಡಿಯೊವನ್ನು ಬೆಂಬಲಿಸುತ್ತದೆ. ಜೊತೆಗೆ ಗೂಗಲ್ ಟಿವಿ, ವಾಚ್‌ಲಿಸ್ಟ್, ವಾಯ್ಸ್ ಸರ್ಚ್, ಗೂಗಲ್ ಪ್ಲೇ, ಕ್ರೋಮಾಕಾಸ್ಟ್ ಸೇರಿದಂತೆ ಹಲವು ಫೀಚರ್ಸ್‌ಗಳನ್ನು ಇದು ಒಳಗೊಂಡಿದೆ. ಇದೇ ಸರಣಿಯ 65 ಇಂಚಿನ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಟಿವಿಗೆ 80,000 ರೂ.ಗಳಿದ್ದು,
60 Hz ನ ರಿಫ್ರೆಶ್ ರೇಟ್‌ ನೀಡಲಿದೆ. ಕನೆಕ್ಟಿವಿಟಿ ಆಯ್ಕೆಯಲ್ಲಿ ಸೆಟ್-ಟಾಪ್ ಬಾಕ್ಸ್ ಆಯ್ಕೆ, 3 HDMI ಪೋರ್ಟ್‌ಗಳು, ಬ್ಲೂ ರೇ ಪ್ಲೇಯರ್‌ಗಳು, ಹಾರ್ಡ್ ಡ್ರೈವ್‌ಗಳ ಆಯ್ಕೆ ಪಡೆದಿದೆ.

ಹೈಸೆನ್ಸ್4K ಅಲ್ಟ್ರಾ HD ಸ್ಮಾರ್ಟ್ IPS QLED ಟಿವಿ

ಹೈಸೆನ್ಸ್4K ಅಲ್ಟ್ರಾ HD ಸ್ಮಾರ್ಟ್ IPS QLED ಟಿವಿ

ಈ ಸ್ಮಾರ್ಟ್‌ಟಿವಿ 51,990 ರೂ. ಗಳಿಗೆ ಲಭ್ಯವಿದೆ. ಇದು 55 ಇಂಚಿನ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಪಡೆದಿದೆ. ಜೊತೆಗೆ ಫೈರ್ ಟಿವಿ ಸ್ಟಿಕ್ 4k ಆಯ್ಕೆಯ ಜೊತೆ ಬರಲಿದ್ದು, ಹಲವಾರು ಓಟಿಟಿ ಪ್ಲಾಟ್‌ಫಾರ್ಮ್‌ಗಳಿಗೆ ಬೆಂಬಲ ನೀಡಲಿದೆ.

Best Mobiles in India

English summary
Amazon Great Indian Festival Sale announces massive discounts on smart gadgets.here we describe some smart tv features and price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X