ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ನಲ್ಲಿ ಟಿವಿಗಳ ಮೇಲೆ ಬಂಪರ್‌ ಆಫರ್‌..!

By Gizbot Bureau
|

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟ ಸ್ಮಾರ್ಟ್ ಟಿವಿಗಳ ಮೇಲೆ ಅದ್ಭುತವಾದ ಕೊಡುಗೆಗಳನ್ನು ನೀಡುತ್ತಿದೆ. ಆಫರ್‌ಗಳಡಿಯಲ್ಲಿ ಖರೀದಿಸುವ ಟಿವಿಗಳ ಮೇಲೆ ಹೆಚ್ಚುವರಿ ಕ್ಯಾಶ್‌ಬ್ಯಾಕ್, ತ್ವರಿತ ರಿಯಾಯಿತಿ, 12 ಸಾವಿರ ರೂ.ವರೆಗೂ ಎಕ್ಸ್‌ಚೆಂಜ್‌ ಮೌಲ್ಯ ಹಾಗೂ ಡೆಲಿವರಿ ಮತ್ತು ಇನ್‌ಸ್ಟಾಲೆಷನ್‌ ಉಚಿತವಾಗಿ ಸಿಗಲಿದೆ. ಸೆಪ್ಟೆಂಬರ್‌ 29ರಿಂದ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್ ಪ್ರಾರಂಭವಾಗಲಿದ್ದು, ಅಕ್ಟೋಬರ್ 4ರವರೆಗೂ ಗ್ರಾಹಕರಿಗೆ ಬಂಪರ್‌ ಆಫರ್‌ಗಳನ್ನು ನೀಡಲಿದೆ.

ಪ್ರೈಮ್‌ ಸದಸ್ಯರು

ಇನ್ನು, ಎಸ್‌ಬಿಐ ಡೆಬಿಟ್ ಕಾರ್ಡ್‌ ಬಳಕೆದಾರರಿಗೆ ಶೇ.10ರಷ್ಟು ತ್ವರಿತ ರಿಯಾಯಿತಿ, ಹೆಚ್‌ಡಿಎಫ್‌ಸಿ ಡೆಬಿಟ್ ಕಾರ್ಡ್‌ ಹಾಗೂ ಬಜಾಜ್‌ ಫಿನ್‌ಸರ್ವ್‌ ಕಾರ್ಡ್‌ ಬಳಕೆದಾರರಿಗೆ ನೋ ಕಾಸ್ಟ್ ಇಎಂಐ ಸೌಲಭ್ಯ, ಅತ್ಯಾಕರ್ಷಕ ವಿಶೇಷ ಲಾಂಚಿಂಗ್‌ ಆಫರ್‌ಗಳು, ಟಿವಿಗಳ ರಕ್ಷಣೆ ಯೋಜನೆಗಳ ಬಗ್ಗೆ ಉತ್ತಮ ಕೊಡುಗೆಗಳು, ಎಕ್ಸ್‌ಚೆಂಜ್‌ ಆಫರ್ಸ್‌, ವಾರಂಟಿ ವಿಸ್ತರಿಸುವ ಪ್ಲಾನ್‌ಗಳು ಸೇರಿ ಅನೇಕ ಬಂಪರ್‌ಗಳು ಗ್ರಾಹಕರಿಗೆ ಸಿಗಲಿವೆ. ಪ್ರೈಮ್‌ ಸದಸ್ಯರು ಎಲ್ಲಾ ಕೊಡುಗೆಗಳನ್ನು ಅವಧಿಗೂ ಮುಂಚಿತವಾಗಿಯೇ ಪಡೆಯಬಹುದು ಮತ್ತು ಹೊಸ ಸಾಧಗಳನ್ನು ಪ್ರೀ ಬುಕ್ಕಿಂಗ್ ಕೂಡ ಮಾಡಬಹುದಾಗಿದೆ.

4ಕೆ ಟಿವಿಗಳ ಮೇಲೆ ಶೇ.50ರವರೆಗೆ ರಿಯಾಯಿತಿ

4ಕೆ ಟಿವಿಗಳ ಮೇಲೆ ಶೇ.50ರವರೆಗೆ ರಿಯಾಯಿತಿ

ಗ್ರಾಹಕರು 4ಕೆ ಟಿವಿಗಳ ಮೇಲೆ ಶೇ.50ರವರೆಗೆ ರಿಯಾಯಿತಿ ಪಡೆಯಬಹುದಾಗಿದ್ದು, 3,840 x 2,160 ಪಿಕ್ಸೆಲ್‌ಗಳ ರೆಸಲ್ಯೂಶನ್ ನೀಡುವ ಈ 4ಕೆ ಟಿವಿಗಳನ್ನು ಅಲ್ಟ್ರಾ ಹೆಚ್‌‌ಡಿ ಟಿವಿ ಎಂದು ಕರೆಯಲಾಗುತ್ತದೆ. ಒಂದೆರಡು ಆಫರ್‌ಗಳಲ್ಲಿ ಹೆಚ್‌ಡಿಎಫ್‌ಸಿ ಡೆಬಿಟ್ ಕಾರ್ಡ್‌ಗಳೊಂದಿಗೆ ಕನಿಷ್ಠ 2,000 ರೂ. ಮೌಲ್ಯದ ಉತ್ಪನ್ನ ಖರೀದಿಯಲ್ಲಿ ಶೇ.5ರಷ್ಟು ಕ್ಯಾಶ್‌ಬ್ಯಾಕ್ ಮತ್ತು ಎಚ್‌ಎಸ್‌ಬಿಸಿ ಕ್ಯಾಶ್‌ಬ್ಯಾಕ್ ಕಾರ್ಡ್‌ನೊಂದಿಗೆ ಶೇ.5ರಷ್ಟು ತ್ವರಿತ ರಿಯಾಯಿತಿ ಸಿಗುತ್ತದೆ.

ದೊಡ್ಡ ಸ್ಕ್ರೀನ್ ಟಿವಿಗಳ ಮೇಲೂ ಶೇ.50 ರಿಯಾಯಿತಿ

ದೊಡ್ಡ ಸ್ಕ್ರೀನ್ ಟಿವಿಗಳ ಮೇಲೂ ಶೇ.50 ರಿಯಾಯಿತಿ

ಒಂದಿಷ್ಟು ದೊಡ್ಡ ಸ್ಕ್ರೀನ ಟಿವಿಗಳ ಮೇಲೆ ಶೇ.50ರವರೆಗೆ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಸಾಮಾನ್ಯವಾಗಿ, ದೊಡ್ಡ ಸ್ಕ್ರೀನ್‌ ಟಿವಿಗಳ ಗಾತ್ರ 37.5 ಇಂಚು ಅಗಲ ಮತ್ತು 21.1 ಇಂಚು ಎತ್ತರದಿಂದ ಪ್ರಾರಂಭವಾಗುತ್ತದೆ. ನೀವು ಎಕ್ಸ್‌ಚೆಂಜ್‌ನಲ್ಲಿ 9,300 ರೂ. ರಿಯಾಯಿತಿ ಪಡೆಯಬಹುದಾಗಿದ್ದು, 1 ಲಕ್ಷ ರೂ.ವರಗೂ ಡೆಬಿಟ್ ಕಾರ್ಡ್‌ಗಳಲ್ಲಿ ಇಎಂಐ ಪಡೆಯಬಹುದಾಗಿದೆ.

32 ಇಂಚಿನ ಟಿವಿಗಳಲ್ಲಿ ಶೇ.40ರಷ್ಟು ಡಿಸ್ಕೌಂಟ್‌

32 ಇಂಚಿನ ಟಿವಿಗಳಲ್ಲಿ ಶೇ.40ರಷ್ಟು ಡಿಸ್ಕೌಂಟ್‌

ಹಲವು 32-ಇಂಚಿನ ಸ್ಕ್ರೀನ್ ಹೊಂದಿರುವ ಟಿವಿಗಳನ್ನು ಅಮೆಜಾನ್‌ನಲ್ಲಿ ಶೇ.40ರವರೆಗೆ ರಿಯಾಯಿತಿ ದರದಲ್ಲಿ ಕೊಳ್ಳಬಹುದು. ವಿನಿಮಯದಲ್ಲಿ ಈ ಟಿವಿಗಳನ್ನು ಖರೀದಿಸಿದಾಗ ನೀವು 4,360 ರೂ. ಅಥವಾ ಹೆಚ್ಚಿನ ರಿಯಾಯಿತಿ ಪಡೆಯುತ್ತೀರಿ. ಸ್ಯಾನ್ಯೊ 80cm (32 ಇಂಚು) ನೆಬ್ಯುಲಾ ಸರಣಿ ಎಚ್‌ಡಿ ರೆಡಿ ಸ್ಮಾರ್ಟ್ ಐಪಿಎಸ್ ಎಲ್ಇಡಿ ಟಿವಿ XT -32A081H (ಕಪ್ಪು), Mi ಎಲ್ಇಡಿ ಟಿವಿ 4C ಪ್ರೊ 80cm (32) ಎಚ್‌ಡಿ ರೆಡಿ ಆಂಡ್ರಾಯ್ಡ್ ಟಿವಿ (ಕಪ್ಪು) ಮತ್ತಿತರ ಟಿವಿಗಳನ್ನು ಈ ವಿಭಾಗದಲ್ಲಿ ಖರೀದಿಸಬಹುದು.

ಪ್ರೀಮಿಯಂ ಟಿವಿಗಳ ಬೆಲೆ ಶೇ.50ರವರೆಗೆ ಕಡಿತ

ಪ್ರೀಮಿಯಂ ಟಿವಿಗಳ ಬೆಲೆ ಶೇ.50ರವರೆಗೆ ಕಡಿತ

ಪ್ರೀಮಿಯಂ ಟಿವಿಗಳನ್ನು ಶೇ.50ರವರೆಗೆ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಪ್ರೀಮಿಯಂ ಟಿವಿಗಳು ಸಾಮಾನ್ಯವಾಗಿ ಹೆಚ್ಚಿನ ಬೆಲೆ ಹೊಂದಿರುತ್ತವೆ. ಈ ಟಿವಿಗಳನ್ನು ಖರೀದಿಸುವಾಗ ನೀವು ಜಿಎಸ್‌ಟಿ ಬಿಲ್‌ ಪಡೆಯುವುದರಿಂದ ಇತರ ವ್ಯವಹಾರ ಖರೀದಿಗಳಲ್ಲಿ ಶೇ.28ರವರೆಗೆ ಉಳಿಸಬಹುದಾಗಿದೆ.

ಸಾಮಾನ್ಯ ಟಿವಿಗಳ ಮೇಲೆ ಶೇ.50ರಷ್ಟು ಆಫ್

ಸಾಮಾನ್ಯ ಟಿವಿಗಳ ಮೇಲೆ ಶೇ.50ರಷ್ಟು ಆಫ್

ಹಲವು ಸಾಮಾನ್ಯ ಟಿವಿಗಳನ್ನು ಬಳಕೆದಾರರು ಶೇ.50ರವರೆಗೆ ರಿಯಾಯಿತಿಯಲ್ಲಿ ಖರೀದಿಸಬಹುದಾಗಿದೆ. ಈ ಟಿವಿಗಳು ಸ್ಮಾರ್ಟ್ ಟಿವಿಗಳಲ್ಲಿ ಕಂಡುಬರುವ ಸ್ಮಾರ್ಟ್ ಫೀಚರ್‌ಗಳನ್ನು ಹೊಂದಿರುವುದಿಲ್ಲ. ಈ ಟಿವಿಗಳನ್ನು ನೋ ಕಾಸ್ಟ್ ಇಎಂಐನಲ್ಲಿ ತಿಂಗಳಿಗೆ 833 ರೂ. ಪಾವತಿಸುವ ಮೂಲಕ ಖರೀದಿಸಬಹುದಾಗಿದೆ. ಅದಲ್ಲದೇ ಈ ಟಿವಿಗಳು ಅಕ್ಕೊದಿಂದ ಉಚಿತವಾದ ವಿಸ್ತೃತ ವಾರಂಟಿಯನ್ನು ಹೊಂದಿರಲಿವೆ.

Best Mobiles in India

English summary
Amazon Great Indian Festival Sale: Offers On TVs That Will Make You Buy One

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X