ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ ಡೇಟ್‌ ಬಹಿರಂಗ! ಏನೆಲ್ಲಾ ಆಫರ್‌ಗಳು!

|

ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಗ್ರಾಹಕರಿಗಾಗಿ ವಿಶೇಷ ಸೇಲ್‌ಗಳನ್ನು ನಡೆಸುತ್ತಾ ಬಂದಿದೆ. ವಿಶೇಷ ದಿನಗಳಲ್ಲಿ ಡಿಸ್ಕೌಂಟ್‌ ಮೇಳಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಬಹು ನಿರೀಕ್ಷಿತ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ ಮೂಲಕ ಮರಳಿದೆ. ಈ ಸೇಲ್‌ ಭಾರತದಲ್ಲಿ ಇದೇ ಸೆಪ್ಟೆಂಬರ್ 23 ರಿಂದ ಲೈವ್‌ ಆಗಲಿದೆ ಎಂದು ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಧಿಕೃತವಾಗಿ ದೃಢಪಡಿಸಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್‌ ಇದೇ ಸೆಪ್ಟೆಂಬರ್‌ 23 ರಿಂದ ಲೈವ್‌ ಆಗೋದು ಪಕ್ಕಾ ಆಗಿದೆ. ಅಮೆಜಾನ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸೇಲ್‌ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದೆ. ಆದರೆ ಈ ಸೇಲ್‌ ಅವಧಿಯನ್ನು ಇನ್ನು ಬಹಿರಂಗಪಡಿಸಲಾಗಿಲ್ಲ. ಕೇವಲ ಪ್ರಾರಂಭದ ದಿನಾಂಕವನ್ನು ಮಾತ್ರ ಬಹಿರಂಗಪಡಿಸಿದೆ. ಇನ್ನು ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ಟಿವಿಗಳು, ಗೇಮಿಂಗ್ ಸಾಧನಗಳು, ಗೃಹೋಪಯೋಗಿ ವಸ್ತುಗಳ ಮೇಲೆ ಬಿಗ್‌ ಡಿಸ್ಕೌಂಟ್‌ ಘೋಷಣೆ ಮಾಡಿದೆ. ಹಾಗಾದ್ರೆ ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಏನೆಲ್ಲಾ ಡಿಸ್ಕೌಂಟ್‌ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಡೀಲ್ಸ್‌

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಡೀಲ್ಸ್‌

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳ ಮೇಲೆ ಶೇಕಡಾ 40 ರಷ್ಟು ರಿಯಾಯಿತಿ ದೊರೆಯಲಿದೆ. ಇದರಲ್ಲಿ ಸ್ಯಾಮ್‌ಸಂಗ್‌, ಶಿಯೋಮಿ ಮತ್ತು ಐಕ್ಯೂ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ಡಿಸ್ಕೌಂಟ್‌ಗಳು ಲಭ್ಯವಾಗಲಿದೆ. ಜೊತೆಗೆ ಆಪಲ್‌ ಐಫೋನ್‌ಗಳ ಮೇಲೂ ಕೂಡ ವಿಶೇಷ ರಿಯಾಯಿತಿಯನ್ನು ನಿರೀಕ್ಷಿಸಲಾಗಿದೆ.

ಸಮಯದಲ್ಲಿ

ಇನ್ನು ಇದೇ ಸಮಯದಲ್ಲಿ ಶೀಯೋಮಿ ರೆಡ್ಮಿ 11 ಪ್ರೈಮ್‌ 5G ಮತ್ತು ಐಕ್ಯೂ Z6 ಲೈಟ್‌ 5G ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಲಿವೆ ಎಂದು ಕೂಡ ಹೇಳಲಾಗಿದೆ. ಇದಲ್ಲದೆ ಹೆಚ್ಚುವರಿಯಾಗಿ, ಅಮೆಜಾನ್ ಎಸ್‌ಬಿಐ ಬ್ಯಾಂಕ್ ಕಾರ್ಡ್‌ಗಳು ಮತ್ತು ಐಸಿಐಸಿಐ ಬ್ಯಾಂಕ್ ಕಾರ್ಡ್‌ಗಳ ಮೇಲೆ ಕಾರ್ಡ್ ರಿಯಾಯಿತಿಗಳನ್ನು ನೀಡಲಿದೆ. SBI ಕಾರ್ಡ್ ಹೊಂದಿರುವವರು 10% ತ್ವರಿತ ರಿಯಾಯಿತಿಯನ್ನು ಪಡೆಯುವುದಕ್ಕೆ ಅವಕಾಶ ಸಿಗಲಿದೆ. ಅಲ್ಲದೆ ಅಮೆಜಾನ್‌ ಪೇ ICICI ಬ್ಯಾಂಕ್ ಕ್ಯಾಶ್‌ಬ್ಯಾಕ್‌ ಕೂಡ ದೊರೆಯಲಿದೆ.

ಇಂಡಿಯನ್‌

ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಮೊಬೈಲ್‌ಗಳನ್ನು ಹೊರತುಪಡಿಸಿ ಲ್ಯಾಪ್‌ಟಾಪ್‌ಗಳ ಮೇಲೂ ಕೂಡ ವಿಶೇಷ ಡಿಸ್ಕೌಂಟ್‌ ನೀಡಲಾಗ್ತಿದೆ. ಇದರಲ್ಲಿ LG ಯ ಗ್ರಾಮ್ ಸರಣಿಯ ಮಾದರಿಗಳು 30% ಡಿಸ್ಕೌಂಟ್‌ ಪಡೆದುಕೊಳ್ಳಲಿವೆ ಎಂದು ಹೇಳಲಾಗ್ತಿದೆ. ಇನ್ನು ಸ್ಮಾರ್ಟ್‌ಟಿವಿಗಳು ಕೂಡ 70% ರಿಯಾಯಿತಿಯನ್ನು ಪಡೆಯುತ್ತವೆ ಎಂದು ಪ್ರಚಾರ ಮಾಡಲಾಗಿದೆ. ರೆಫ್ರಿಜರೇಟರ್‌ಗಳು ಮತ್ತು ವಾಷಿಂಗ್ ಮೆಷಿನ್‌ಗಳಂತಹ ಗೃಹೋಪಯೋಗಿ ವಸ್ತುಗಳು 50% ರಿಯಾಯಿತಿಯಲ್ಲಿ ಲಭ್ಯವಾಗಲಿದೆ.

ಡಿವೈಸ್‌ಗಳು

ಇದಲ್ಲದೆ ಗೇಮಿಂಗ್ ಡಿವೈಸ್‌ಗಳು ಮತ್ತು ಟೂಲ್ಸ್‌ಗಳ ಮೇಲೆ 50% ರಿಯಾಯಿತಿಯನ್ನು ಪಡೆದುಕೊಳ್ಳಲಿವೆ. ಇದು ಕನ್ಸೋಲ್‌ಗಳು, ನಿಯಂತ್ರಕಗಳು, ಹೆಡ್‌ಫೋನ್‌ಗಳು, ಗೇಮ್ ಡಿಸ್ಕ್‌ಗಳ ಮೇಲೆ ಕೂಡ ಡಿಸ್ಕೌಂಟ್‌ ಅನ್ನು ನಿರೀಕ್ಷಿಸಲಾಗಿದೆ. ಇನ್ನು ರಿಯಾಯಿತಿಗಳು ಮತ್ತು ಕಾರ್ಡ್ ಕೊಡುಗೆಗಳ ಹೊರತಾಗಿ, ನೋ ಕಾಸ್ಟ್‌ EMI ಆಯ್ಕೆಯೂ ಸಹ ಲಭ್ಯವಿರುತ್ತದೆ. ಬಜಾಜ್ ಫಿನ್‌ಸರ್ವ್ ಕಾರ್ಡ್‌ಗಳು ಮತ್ತು ಅಮೆಜಾನ್‌ ಪೇ ICICI ಕ್ರೆಡಿಟ್ ಕಾರ್ಡ್‌ಗಳಲ್ಲಿ ನೋ ಕಾಸ್ಟ್ EMI ಇರುತ್ತದೆ.

ಅಮೆಜಾನ್‌

ಇದರ ನಡುವೆ ಅಮೆಜಾನ್‌ ಕಿಕ್‌ ಸ್ಟಾರ್ಟರ್‌ ಡೀಲ್ಸ್‌ ನಡೆಸುತ್ತಿದೆ. ಇದರಲ್ಲಿ ಹಲವು ಗ್ಯಾಜೆಟ್ಸ್‌ಗಳ ಮೇಲೆ ಡಿಸ್ಕೌಂಟ್‌ ಅನ್ನು ನೀಡುತ್ತಿದೆ. ಈ ಸೇಲ್‌ನಲ್ಲಿ ಐಕ್ಯೂ, ಒಪ್ಪೋ, ರಿಯಲ್‌ಮಿ ಮತ್ತು ಹಲವು ಜನಪ್ರಿಯ ಬ್ರ್ಯಾಂಡ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ರಿಯಾಯಿತಿ ದೊರೆಯುತ್ತಿದೆ. ಜೊತೆಗೆ, ಸ್ಮಾರ್ಟ್‌ವಾಚ್‌ಗಳು, ಟಿವಿಗಳು, ಟ್ರೂಲಿ ವಾಯರ್‌ಲೆಸ್‌ ಸ್ಟಿರಿಯೊ (TWS) ಇಯರ್‌ಫೋನ್‌ಗಳ ಮೇಲೆ ವಿಶೇಷ ಆಫರ್‌ಗಳನ್ನು ಪ್ರಕಟಿಸಿದೆ.

ಅಮೆಜಾನ್‌

ಅಮೆಜಾನ್‌ ತನ್ನ ಕಿಕ್‌ ಸ್ಟಾರ್ಟರ್‌ ಡೀಲ್ಸ್‌ನಲ್ಲಿ ಸ್ಮಾರ್ಟ್‌ಫೋನ್‌ಗಳ ಜೊತೆಗೆ ಎಲೆಕ್ಟ್ರಾನಿಕ್ಸ್ ಶ್ರೇಣಿಯ ಮೇಲೆ ಹಲವಾರು ಆಫರ್‌ಗಳನ್ನು ಪ್ರಕಟಿಸಿದೆ. ಇದಕ್ಕಾಗಿ ಅಮೆಜಾನ್‌ SBI ಕಾರ್ಡ್ ಮೂಲಕ ಖರೀದಿಸುವವರಿಗೆ 10% ಡಿಸ್ಕೌಂಟ್‌ ನಿಡುತ್ತಿದೆ. ಇದಲ್ಲದೆ, ಪ್ರೈಮ್‌ ಸದಸ್ಯರು ಕನಿಷ್ಠ ಒಂದು ಸಾವಿರ ರೂ ಮೌಲ್ಯದ ಖರೀದಿಗಳ ಮೇಲೆ ಹೆಚ್ಚುವರಿ ಬೋನಸ್‌ಗಳನ್ನು ಪಡೆಯುವುದಕ್ಕೆ ಸಾಧ್ಯವಿದೆ.

Best Mobiles in India

English summary
Amazon Great Indian Festival sale will go live from September 23 in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X