ಅಮೆಜಾನ್ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಸಿಗಲಿದೆ 8,000ರೂ. ತನಕ ಡಿಸ್ಕೌಂಟ್‌!

|

ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಅಮೆಜಾನ್‌ ಮತ್ತೊಂದು ಸೇಲ್‌ನೊಂದಿಗೆ ಬಂದಿದೆ. ಈ ಬಾರಿ ಭಾರತದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಮೂಲಕ ಮರಳಿದೆ. ಇನ್ನು ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಹಲವು ಆಕರ್ಷಕ ರಿಯಾಯಿತಿಗಳನ್ನು ದೊರೆಯುತ್ತಿದ್ದು, ಶಾಪಿಂಗ್‌ ಪ್ರಿಯರಿಗೆ ಬಿಗ್‌ ಆಫರ್‌ ನೀಡುತ್ತಿದೆ. ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂದುಕೊಂಡವರಿಗೆ, ಸ್ಮಾರ್ಟ್‌ಟಿವಿ ಖರೀದಿಸಲು ಬಯಸುವವರಿಗೆ ಈ ಸೇಲ್‌ನಲ್ಲಿ ಅತ್ಯುತ್ತಮವಾದ ಆಫರ್‌ಗಳು ಲಭ್ಯವವಾಗುತ್ತಿವೆ.

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌

ಹೌದು, ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಅನೇಕ ಆಫರ್‌ಗಳನ್ನು ಹೊತ್ತು ತಂದಿದೆ. ಎಂದಿನಂತೆ ಸ್ಮಾರ್ಟ್‌ಫೋನ್‌ ಖರೀದಿದಾರರಿಗೆ ಈ ಸೇಲ್‌ ವಿಶೇಷ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಬ್ಯಾಂಕ್‌ ಕ್ರೇಡಿಟ್‌ ಕಾರ್ಡ್‌ ಆಫರ್‌, ಎಕ್ಸ್‌ಚೇಂಜ್‌ ಆಫರ್‌, ನೋ ಕಾಸ್ಟ್‌ ಇಎಂಐ ಆಫರ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸೇಲ್‌ನಲ್ಲಿ ವಿಶೇಷವಾಗಿ ಐಕ್ಯೂ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು 8,000ರೂ. ವರೆಗೆ ರಿಯಾಯಿತಿ ಪಡೆದುಕೊಂಡಿರುವುದು ವಿಶೇಷ. ಹಾಗಾದ್ರೆ ಅಮೆಜಾನ್‌ ಸೇಲ್‌ನಲ್ಲಿ ಬಿಗ್‌ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾದ ಐಕ್ಯೂ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಐಕ್ಯೂ 7 ಲೆಜೆಂಡ್

ಐಕ್ಯೂ 7 ಲೆಜೆಂಡ್

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಐಕ್ಯೂ 7 ಸ್ಮಾರ್ಟ್‌ಫೋನ್‌ ಕೇವಲ 36,990 ರೂ.ಗಳಿಗೆ ಖರೀದಿಗೆ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ ಮೂಲ ಬೆಲೆ 39,990 ರೂ. ಆಗಿದ್ದು, 3,000ರೂ.ಗಳ ರಿಯಾಯಿತಿ ದೊರೆಯಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಮೇಲೆ ಬ್ಯಾಂಕ್ ಆಫರ್‌ ಕೂಡ ಲಭ್ಯವಿದ್ದು, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಹೆಚ್ಚುವರಿಯಾಗಿ 2,000ರೂ. ರಿಯಾಯಿತಿ ದೊರೆಯಲಿದೆ. ಹಾಗೆಯೇ ಎಕ್ಸ್‌ಚೇಂಜ್‌ ಆಫರ್‌ನಲ್ಲಿ 15,000ರೂ.ತನಕ ಆಫರ್‌ ದೊರೆಯಲಿದೆ. ಜೊತೆಗೆ ಒಂದು ಬಂಡಲ್ ಆಫರ್ ಪ್ರೈಮ್ ಗ್ರಾಹಕರಿಗೆ 6 ತಿಂಗಳ ಉಚಿತ ಸ್ಕ್ರೀನ್ ರಿಪ್ಲೇಸ್ಮೆಂಟ್ ಅನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.62 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 888 5G SoC ಪ್ರೊಸೆಸರ್‌ ಬಲವನ್ನು ಪಡೆದಿದೆ.

ಐಕ್ಯೂ 7 ಸ್ಮಾರ್ಟ್‌ಫೋನ್‌

ಐಕ್ಯೂ 7 ಸ್ಮಾರ್ಟ್‌ಫೋನ್‌

ಇನ್ನು ಐಕ್ಯೂ 7 ಸ್ಮಾರ್ಟ್‌ಫೋನ್‌ ಬೇಸ್‌ ಮಾಡೆಲ್‌ 8GB RAM ಮತ್ತು 128GB ಆಯ್ಕೆಗೆ ಅಮೆಜಾನ್‌ ಸೇಲ್‌ನಲ್ಲಿ ಕೇವಲ 29,990 ರೂ.ಗಳಿಗೆ ಲಭ್ಯವಾಗಲಿದೆ. ಇದರ ಮೂಲ ಬೆಲೆ 31,990ರೂ.ಆಗಿದ್ದು 2,000ರೂ ರಿಯಾಯಿತಿ ದೊರೆಯಲಿದೆ. ಇದಲ್ಲದೆ ಅಮೆಜಾನ್ ಆಫರ್‌ ಕೂಪನ್ ಮೂಲಕ ಹೆಚ್ಚುವರಿಯಾಗಿ 3,000ರೂ.ಗಳ ರಿಯಾಯಿತಿ ಕೂಡ ದೊರೆಯಲಿದ್ದು 26,990ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.62 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 888 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ನಲ್ಲಿ OriginOS ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ.

ಐಕ್ಯೂ Z5 ಸ್ಮಾರ್ಟ್‌ಫೋನ್‌

ಐಕ್ಯೂ Z5 ಸ್ಮಾರ್ಟ್‌ಫೋನ್‌

ಅಮೆಜಾನ್‌ ಸೇಲ್‌ನಲ್ಲಿ ಐಕ್ಯೂ Z5 ಸ್ಮಾರ್ಟ್‌ಫೋನ್‌ ನಿಮಗೆ ಕೇವಲ 23,990ರೂ.ಗಳಿಗೆ ಲಭ್ಯವಾಗಲಿದೆ. ಇದರ ಮೂಲಬೆಲೆ 29,990ರೂ ಆಗಿದ್ದು, 20% ಡಿಸ್ಕೌಂಟ್‌ ಪಡೆದುಕೊಂಡಿದೆ. ಇದಲ್ಲದೆ ಅಮೆಜಾನ್ ಡಿಸ್ಕೌಂಟ್‌ ಕೂಪನ್‌ ಮೂಲಕ ಹೆಚ್ಚುವರಿಯಾಗಿ 2,000ರೂ.ಗಳ ರಿಯಾಯಿತಿ ಕೂಡ ದೊರೆಯಲಿದೆ. ಹಾಗೆಯೇ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 2,000ರೂ. ಆಫರ್‌ ಕೂಡ ದೊರೆಯಲಿದೆ. ಇದೆಲ್ಲದರ ಪರಣಾಮ ಈ ಸ್ಮಾರ್ಟ್‌ಫೋನ್‌ ನಿಮಗೆ ಕೇವಲ 19,990ರೂ.ಗಳಿಗೆ ದೊರೆಯಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಮೇಲೆ 21,000 ರೂ.ಗಳವರೆಗೆ ಎಕ್ಸ್‌ಚೇಂಜ್‌ ಆಫರ್‌ ಕೂಡ ಲಭ್ಯವಿದೆ. ಇನ್ನು ನೋ ಕಾಸ್ಟ್‌ EMI ಆಯ್ಕೆಯ ಮೂಲಕ ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್‌ನ ಬಂಡಲ್ ಆಫರ್‌ಗಳನ್ನು ಪಡೆದುಕೊಳ್ಳ ಬಹುದಾಗಿದೆ.

ಐಕ್ಯೂ Z3

ಐಕ್ಯೂ Z3

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಐಕ್ಯೂ Z3 ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ 22% ಡಿಸ್ಕೌಂಟ್‌ ಪಡೆದಿದೆ. 22,990ರೂ ಮೂಲಬೆಲೆಯ ಈ ಸ್ಮಾರ್ಟ್‌ಫೋನ್‌ ನಿಮಗೆ 17,990ರೂಗಳಲ್ಲಿ ದೊರೆಯಲಿದೆ. ಇದಲ್ಲದೆ ಅಮೆಜಾನ್ ಡಿಸ್ಕೌಂಟ್ ಕೋಡ್ ಮೂಲಕ 2,000ರೂ. ಆಫರ್‌ ಕೂಡ ಲಭ್ಯವಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ 1250ರೂ. ಆಫರ್‌ ದೊರೆಯಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.58 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌+ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 768G ಪ್ರೊಸೆಸರ್ ಅನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್‌ 11ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.

Best Mobiles in India

English summary
iQOO phones are experiencing a huge upfront discount on their prices under the ongoing Republic Day sale by Amazon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X