ಅಮೆಜಾನ್‌ ಪ್ರೈಮ್‌ ಡೇ 2022 ಸೇಲ್‌: ಈ ಫೋನ್‌ಗಳ ಮೇಲೆ ಸಿಗಲಿದೆ 40% ಡಿಸ್ಕೌಂಟ್‌!

|

ಅಮೆಜಾನ್‌ ಆನ್‌ಲೈನ್‌ ಶಾಪಿಂಗ್‌ ಪ್ರಿಯರ ನೆಚ್ಚಿನ ತಾಣ ಎನಿಸಿಕೊಂಡಿದೆ. ಆನ್‌ಲೈನ್‌ ಶಾಪಿಂಗ್‌ ಗ್ರಾಹಕರಿಗೆ ವಿಶೇಷ ಸೇಲ್‌ಗಳನ್ನು ಆಯೋಜಿಸುತ್ತಾ ಬಂದಿದೆ. ಸದ್ಯ ಇದೀಗ ತನ್ನ ಪ್ರೈಮ್‌ ಮೆಂಬರ್‌ಗಳಿಗಾಗಿ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ನಡೆಸುವುದಕ್ಕೆ ಸಿದ್ಧತೆ ನಡೆಸಿದೆ. ಈಗಾಗಲೇ ಭಾರತದಲ್ಲಿ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಡೇಟ್‌ ಕೂಡ ಬಹಿರಂಗವಾಗಿದೆ. ಇದೀಗ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್‌ ದೊರೆಯಲಿದೆ ಅನ್ನೊದು ಬಹಿರಂಗವಾಗಿದೆ.

ಅಮೆಜಾನ್‌

ಹೌದು, ಅಮೆಜಾನ್‌ ಪ್ರೈಮ್‌ ಡೇ 2022 ಸೇಲ್‌ ಇದೇ ಜುಲೈ 23 ರಂದು ಮಧ್ಯರಾತ್ರಿ 12:00 AMಕ್ಕೆ ಪ್ರಾರಂಭವಾಗಲಿದೆ. ಇನ್ನು ಈ ಸೇಲ್‌ ಜುಲೈ 24 ರಂದು ಕೊನೆಗೊಳ್ಳುತ್ತದೆ. ಈ ಸೇಲ್‌ ಅಮೆಜಾನ್‌ ಪ್ರೈಮ್‌ ಗ್ರಾಹಕರಿಗಾಗಿ ಆಗಿರುವುದರಿಂದ ಈ ಸೇಲ್‌ ಸಮಯದಲ್ಲಿ ವಿಶೇಷ ಆಫರ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಇದೇ ಸಮಯದಲ್ಲಿ ಗ್ರಾಹಕರು ಆಪಲ್‌, ಸ್ಯಾಮ್‌ಸಂಗ್‌, ಒನ್‌ಪ್ಲಸ್‌, ಶಿಯೋಮಿ, ಐಕ್ಯೂ, ರಿಯಲ್‌ಮಿ ಬ್ರ್ಯಾಂಡ್‌ಗಳ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್‌ ಆಫರ್‌ ದೊರೆಯಲಿದೆ.

ಅಮೆಜಾನ್‌

ಇನ್ನು ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ ಖರೀದಿಸುವವರಿಗೆ ವಿವಿಧ ಬ್ಯಾಂಕ್‌ ಆಫರ್‌ಗಳು ಲಭ್ಯವಾಗಲಿವೆ. ಅಮೆಜಾನ್‌ ಡಿಸ್ಕೌಂಟ್‌ ವೋಚರ್‌ ಜೊತೆಗೆ ತ್ವರಿತ ಬ್ಯಾಂಕ್‌ ರಿಯಾಯಿತಿ ಕೂಡ ದೊರೆಯಲಿದೆ. ಇದಲ್ಲದೆ ಸೀಮಿತ ಅವಧಿಗೆ ಫೋನ್‌ ಎಕ್ಸ್‌ಚೇಂಜ್‌ ಆಫರ್‌ ಕೂಡ ದೊರೆಯಲಿದೆ. ಇದಲ್ಲದೆ ಇಎಂಐ ಆಫರ್‌ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಸ್ಯಾಮ್‌ಸಂಗ್‌, ಶಿಯೋಮಿ ಸ್ಮಾರ್ಟ್‌ಫೀನ್‌ಗಳ ಮೇಲೆ ಕ್ರಮವಾಗಿ 30% ಹಾಗೂ 40% ಡಿಸ್ಕೌಂಟ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಇನ್ನುಳಿದಂತೆ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳಿಗೆ ಆಫರ್‌ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒನ್‌ಪ್ಲಸ್‌

ಒನ್‌ಪ್ಲಸ್‌

ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಒನ್‌ಪ್ಲಸ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಆಫರ್‌ ನೀಡುತ್ತಿದೆ. ಇದರಲ್ಲಿ ಒನ್‌ಪ್ಲಸ್‌ 9 5G ಸ್ಮಾರ್ಟ್‌ಫೋನ್‌ ಮೇಲೆ 15,000ರೂ.ವರೆಗೆ ಬ್ಯಾಂಕ್‌ ರಿಯಾಯಿತಿ ದೊರೆಯಲಿದೆ. ಇದಲ್ಲದೆ ಒನ್‌ಪ್ಲಸ್‌ 10R 5G ಮತ್ತು ಒನ್‌ಪ್ಲಸ್‌ 10ಪ್ರೊ 5G ಸ್ಮಾರ್ಟ್‌ಫೋನ್‌ಗಳ ಮೇಲೆ 9 ತಿಂಗಳವರೆಗೆ ನೋ ಕಾಸ್ಟ್‌ EMI ಜೊತೆಗೆ ಅಮೆಜಾನ್‌ ಕೂಪನ್‌ಗಳಲ್ಲಿ 4000ರೂ. ವರೆಗೆ ರಿಯಾಯಿತಿ ನೀಡಲಿದೆ. ಎಕ್ಸ್‌ಚೇಂಜ್‌ ಆಫರ್‌ನಲ್ಲಿ 7000ರೂ. ವರೆಗೆ ಹೆಚ್ಚುವರಿ ಪ್ರಯೋಜನವನ್ನು ನೀಡಲಿದೆ. ಇದರೊಂದಿಗೆ ಒನ್‌ಪ್ಲಸ್‌ 10R ಸ್ಮಾರ್ಟ್‌ಫೋನ್‌ ಅನ್ನು 34,999 ರೂ.ಗಳಲ್ಲಿ ಕೂಪನ್‌ಗಳು ಸೇರಿದಂತೆ ಹೆಚ್ಚುವರಿ ಬ್ಯಾಂಕ್ ಕೊಡುಗೆಗಳು ಕೂಡ ಲಭ್ಯವಾಗಲಿದೆ.

ಶಿಯೋಮಿ

ಶಿಯೋಮಿ

ಶಿಯೋಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ 40% ರಷ್ಟು ರಿಯಾಯಿತಿಯನ್ನು ನೀಡಲಿದೆ. 600ರೂ.ಗಳ ಕೂಪನ್‌ನಲ್ಲಿ ಹೆಚ್ಚುವರಿ ಪ್ರಯೋಜನಗಳೊಂದಿಗೆ 6,899 ರೂಗಳಿಂದ ಪ್ರಾರಂಭವಾಗುವ ರೆಡ್ಮಿ 9 ಸರಣಿಯನ್ನು ಪಡೆಯಬಹುದು. ಇನ್ನು ರೆಡ್ಮಿ ನೋಟ್‌ 10 ಸರಣಿಯ ರೆಡ್ಮಿ ನೋಟ್‌10T 5G, ರೆಡ್ಮಿ ನೋಟ್‌10ಪ್ರೊ, ರೆಡ್ಮಿ ನೋಟ್‌ 10 ಪ್ರೊ ಮ್ಯಾಕ್ಸ್‌ ಮತ್ತು ರೆಡ್ಮಿ ನೋಟ್‌ 10S ಸ್ಮಾರ್ಟ್‌ಫೋನ್‌ಗಳು ಕೂಡ ರಿಯಾಯಿತಿ ದರದಲ್ಲಿ ದೊರೆಯಲಿವೆ.

ಇದಲ್ಲದೆ ಶಿಯೋಮಿ ಕಂಪನಿಯ ಫೋನ್‌ಗಳು ಹೆಚ್ಚುವರಿ ಬ್ಯಾಂಕ್‌ ಆಫರ್‌ ಅನ್ನು ಕೂಡ ಪಡೆದುಕೊಂಡಿವೆ. ಇದರಲ್ಲಿ 23999 ರಿಂದ ಪ್ರಾರಂಭವಾಗುವ ಶಿಯೋಮಿ 11 ಲೈಟ್, 35,999 ರಿಂದ ಪ್ರಾರಂಭವಾಗುವ ಶಿಯೋಮಿ 11T ಪ್ರೊ ಮತ್ತು 56,999ರೂ.ಗಳಿಂದ ಪ್ರಾರಂಭವಾಗುವ ಶಿಯೋಮಿ 12 ಪ್ರೊ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿಯಲ್ಲಿ ಸಿಗಲಿವೆ. ಇವುಗಳಲ್ಲಿ ತ್ವರಿತ ಬ್ಯಾಂಕ್ ರಿಯಾಯಿತಿಗಳು ಮತ್ತು ಕೂಪನ್‌ಗಳು ಸೇರಿದಂತೆ 6000ರೂ. ಮೌಲ್ಯದ ಹೆಚ್ಚುವರಿ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌

ಸ್ಯಾಮ್‌ಸಂಗ್‌ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ 30% ಡಿಸ್ಕೌಂಟ್‌ ಪಡೆದುಕೊಂಡಿವೆ. ಇದರಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್‌ 30% ರಿಯಾಯಿತಿಯ ಜೊತೆಗೆ, ವಿಶೇಷ ಆಫರ್‌ಗಳನ್ನು ಪಡೆಯಬಹುದು. ಹಾಗೆಯೇ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G ಸ್ಮಾರ್ಟ್‌ಫೋನ್‌ ಮೇಲೆ ಫ್ಲಾಟ್ 15000ರೂ. ರಿಯಾಯಿತಿ ಸಿಗಲಿದೆ. ಸ್ಯಾಮ್‌ಸಂಗ್‌ ಗ್ಯಾಲಕ್ಸಿ M53 5G ಸ್ಮಾರ್ಟ್‌ಫೋನ್‌ ಮತ್ತು ಸ್ಯಾಮ್‌ಸಂಗ್‌ ಗ್ಯಾಲಕ್ಸಿ M33 5G ಸ್ಮಾರ್ಟ್‌ಫೋನ್‌ಗಳ ಮೇಲೆ 8,000ರೂ.ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 ಸ್ಮಾರ್ಟ್‌ಫೋನ್‌ ಮೇಲೆ ಫ್ಲಾಟ್ 5,000ರೂ. ರಿಯಾಯಿತಿ ದೊರೆಯಲಿದೆ.

ರಿಯಲ್‌ಮಿ

ರಿಯಲ್‌ಮಿ

ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ಮೇಲೆ 6,000ರೂ. ವರೆಗೆ ರಿಯಾಯಿತಿ ಪಡೆಯಬಹುದು. ಇದರಲ್ಲಿ ರಿಯಲ್‌ಮಿ ನಾರ್ಜೊ 50 5G, ರಿಯಲ್‌ಮಿ ನಾರ್ಜೊ 50ಪ್ರೊ ಮತ್ತು ರಿಯಲ್‌ಮಿ ನಾರ್ಜೊ 50A ಪ್ರೈಮ್‌ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ಆಫರ್‌ ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ರಿಯಲ್‌ಮಿ ಆಯ್ಕೆಯು ಹೆಚ್ಚುವರಿ ಪ್ರಯೋಜನಗಳ ಕೂಪನ್‌ಗಳು ಮತ್ತು ಇನ್‌ಸ್ಟಂಟ್ ಬ್ಯಾಂಕ್ ರಿಯಾಯಿತಿಗಳನ್ನು ನೀಡಲಿದೆ.

ಆಪಲ್

ಆಪಲ್

ಆಪಲ್‌ ಕಂಪೆನಿಯ ಐಫೋನ್‌ಗಳ ಮೇಲೇ ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ 20,000ರೂ. ವರೆಗೆ ರಿಯಾಯಿತಿ ಪಡೆದುಕೊಳ್ಳಬಹುದಾಗಿದೆ. ಇದರಲ್ಲಿ ಐಫೋನ್‌ 13, ಐಫೋನ್‌ 13ಪ್ರೊ ಮತ್ತು ಐಫೋನ್‌ 13 ಪ್ರೊ ಮ್ಯಾಕ್ಸ್‌ ಗಳ ಮೇಲೆ ರಿಯಾಯಿತಿ ದೊರೆಯಲಿದೆ.

ಅಮೆಜಾನ್‌

ಇನ್ನು ಅಮೆಜಾನ್‌ ಪ್ರೈಮ್‌ ಡೇ ಸೇಲ್‌ನಲ್ಲಿ ಗ್ರಾಹಕರು ICICI ಬ್ಯಾಂಕ್ ಮತ್ತು SBI ಕಾರ್ಡ್‌ಗಳು ಹಾಗೂ EMI ವಹಿವಾಟುಗಳ ಮೂಲಕ ವಿವಿಧ ಉತ್ಪನ್ನಗಳ ಮೇಲೆ 10% ಡಿಸ್ಕೌಂಟ್‌ ಪಡೆಯಲಿದ್ದಾರೆ. ಅಲ್ಲದೆ ಅಮೆಜಾನ್ ತನ್ನ ಎಕೋ, ಫೈರ್ ಟಿವಿ ಮತ್ತು ಕಿಂಡಲ್ ಡಿವೈಸ್‌ಗಳ ಮೇಲೆ 55% ರಿಯಾಯಿತಿಯನ್ನು ನೀಡಲಿದೆ. ಇದಲ್ಲದೆ ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಉಪಕರಣಗಳು, ಟಿವಿಗಳು, ಕಿಚನ್‌, ದೈನಂದಿನ ಅಗತ್ಯ ವಸ್ತುಗಳು ಮತ್ತು ಆಟಿಕೆಗಳ ಮೇಲೂ ಕೂಡ ಈ ಸೇಲ್‌ನಲ್ಲಿ ವಿಶೇಷ ರಿಯಾಯಿತಿಯನ್ನು ನೀಡಲಾಗುತ್ತದೆ ಎಂದು ಅಮೆಜಾನ್‌ ಹೇಳಿದೆ.

ಅಮೆಜಾನ್‌ ಪ್ರೈಮ್‌ ಡೇ ಸೇಲ್‌

ಅಮೆಜಾನ್‌ ಪ್ರೈಮ್‌ ಡೇ ಸೇಲ್‌ ಸ್ಯಾಮ್‌ಸಂಗ್‌, ಶಿಯೋಮಿ, ಮತ್ತು ಇಂಟೆಲ್‌ ಕಂಪೆನಿ ಪ್ರಾಡಕ್ಟ್‌ಗಳು ಬಿಡುಗಡೆಯಾಗಲಿವೆ. ಇದಲ್ಲದೆ XECH, Cos-IQ, Himalayan Origins, SpaceinCart, Mirakii, Karagiri, Nirvi ಯಂತಹ 120 ಕ್ಕೂ ಹೆಚ್ಚು ಸಣ್ಣ ಮತ್ತು ಮಧ್ಯಮ ಬ್ಯುಸಿನೆಸ್‌ಗಳಿಂದ ಕೂಡ 2,000ಕ್ಕೂ ಹೆಚ್ಚು ಹೊಸ ಉತ್ಪನ್ನಗಳು ಬಿಡುಗಡೆಗಯಾಗಲಿವೆ. ಇದರಲ್ಲಿ ಎಲೆಕ್ಟ್ರಾನಿಕ್ಸ್, ಫ್ಯಾಶನ್ ಮತ್ತು ಗ್ರೂಮಿಂಗ್, ಆಭರಣಗಳು ಕೂಡ ಸೇರಿವೆ.

Most Read Articles
Best Mobiles in India

English summary
Amazon Prime Day 2022: Top deals and other Offer details revealed

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X