ಯೂಟ್ಯೂಬ್ ಮಾದರಿಯಲ್ಲೇ ಅಮೇಜಾನ್ ಟ್ಯೂಬ್ ಲಾಂಚ್ ಮಾಡಲಿದೆಯೇ ಅಮೇಜಾನ್?

By Tejaswini P G
|

ಸಪ್ಟಂಬರ್ ನಲ್ಲಿ ಗೂಗಲ್ ಜನವರಿ 1, 2018 ರಿಂದ 7 ಇಂಚ್ ಟಚ್ ಸ್ಕ್ರೀನ್ ಹೊಂದಿರುವ ಇಖೋ ಶೋ ಮತ್ತು ಫೈರ್ ಟಿವಿ ಯಿಂದ ಯೂಟ್ಯೂಬ್ ಆಪ್ ಅನ್ನು ಹೊರತೆಗೆಯುವುದಾಗಿ ಘೋಷಿಸಿತ್ತು. ಅಮೇಜಾನ್ ತನ್ನ ಸ್ಮಾರ್ಟ್ ಸ್ಪೀಕರ್ ಬಳಸುವ ಯೂಟ್ಯೂಬ್ ಆವೃತ್ತಿಯಿಂದ ಯೂಟ್ಯೂಬ್ ನ ಕೆಲವು ಫೀಚರ್ಗಳಾದ ಆಟೋಪ್ಲೇ ಸಾಮರ್ಥ್ಯ, ಯೂಟ್ಯೂಬ್ ಚ್ಯಾನಲ್ ಗೆ ಸಬ್ಸ್ಕ್ರೈಬ್ ಮಾಡುವ ಸಾಮರ್ಥ್ಯಗಳನ್ನು ತೆಗೆದುಹಾಕಿದೆ. ಈ ಕಾರಣದಿಂದ ಗೂಗಲ್ ಈ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ.

ಯೂಟ್ಯೂಬ್ ಮಾದರಿಯಲ್ಲೇ ಅಮೇಜಾನ್ ಟ್ಯೂಬ್ ಲಾಂಚ್ ಮಾಡಲಿದೆಯೇ ಅಮೇಜಾನ್?

ಇಖೋ ಶೋ ಮತ್ತು ಫೈರ್ ಟಿವಿ ಯಿಂದ ಯೂಟ್ಯೂಬ್ ಹೊರಹೋಗುತ್ತಿರವ ಕಾರಣ ಅಮೇಜಾನ್ ಯೂಟ್ಯೂಬ್ ಮಾದರಿಯ ಅಮೇಜಾನ್ಟ್ಯೂಬ್ ಅನ್ನು ಹೊರತರುವ ನಿರ್ಧಾರಕ್ಕೆ ಮುಂದಾಗಿದೆ.USPTO ಗೆ ಸಲ್ಲಿಸಿದ ಅರ್ಜಿಯೊಂದರ ಆಧಾರದ ಮೇಲೆ ದಿ ವರ್ಜ್ ಈ ಮಾಹಿತಿಯನ್ನು ನೀಡಿದ್ದು, ಅಮೇಜಾನ್ ಸಂಸ್ಥೆಯು ಅಮೇಜಾನ್ಟ್ಯೂಬ್ ಎಂಬ ಹೆಸರಿಗೆ ಟ್ರೇಡ್ಮಾರ್ಕ್ ಗಾಗಿ ಅರ್ಜಿ ಸಲ್ಲಿಸಿರುವುದನ್ನು ಅದು ವರದಿ ಮಾಡಿದೆ.

ಅಲ್ಲದೆ ಅಮೇಜಾನ್ ಓಪನ್ಟ್ಯೂಬ್ ಎಂಬ ಹೆಸರಿನ ಟ್ರೇಡ್ಮಾರ್ಕ್ ಅನ್ನು ಗಳಿಸುವ ಉದ್ದೇಶವನ್ನೂ ಹೊಂದಿದೆಯಂತೆ. ಈ ಎರಡೂ ಹೆಸರುಗಳು ಅಮೇಜಾನ್ ಇಖೋ ಬಳಕೆದಾರರಿಗೆ ವೀಡಿಯೋ ಸ್ಟ್ರೀಮಿಂಗ್ ಫೀಚರ್ ಒದಗಿಸುವ ಉದ್ದೇಶ ಹೊಂದಿರುವುದನ್ನು ಸೂಚಿಸುತ್ತದೆ.

ಅಮೇಜಾನ್ ಸಲ್ಲಿಸಿರುವ ಸಂಪೂರ್ಣ ಟ್ರೇಡ್ಮಾರ್ಕ್ ಅರ್ಜಿಯನ್ನು ಗಮನಿಸಿದರೆ ಗೂಗಲ್ ಯೂಟ್ಯೂಬ್ ನಲ್ಲಿ ನೀಡುವ ಬಹುತೇಕ ಫೀಚರ್ಗಳನ್ನು ಅಮೇಜಾನ್ ಅಮೇಜಾನ್ಟ್ಯೂಬ್ ನಲ್ಲಿ ನೀಡಲಿದೆ.ಅಲ್ಲದೆ ನಿರ್ದಿಷ್ಟ ಕಂಟೆಂಟ್ ಅನ್ನು ನಂತರ ನೋಡುವುದಕ್ಕೆ ನಿಗದಿಪಡಿಸುವ ಸಲುವಾಗಿ ಅಮೇಜಾನ್ಟ್ಯೂಬ್ ಸಾಫ್ಟ್ವೇರ್ ಒಂದನ್ನು ಕೂಡ ಹೊಂದಲಿದೆ.

ಅಲ್ಲದೆ ಅಮೇಜಾನ್ ಸಲ್ಲಿಸಿರುವ ಅರ್ಜಿಯ ಅನುಸಾರ ಸಧ್ಯ ಅಭಿವೃದ್ಧಿ ಹಂತದಲ್ಲಿರುವ ಈ ಸೇವೆ ಡೌನ್ಲೋಡ್ ಮಾಡಲಾಗದ, ಈಗಾಗಲೇ ರೆಕಾರ್ಡ್ ಮಾಡಿರುವ ಆಡಿಯೋ, ವೀಡಿಯೋ ಅಥವಾ ಆಡಿಯೋವಿಶುವಲ್ ಕಂಟೆಂಟ್ ಅನ್ನು ವೈರ್ಲೆಸ್ ನೆಟ್ವರ್ಕ್ ಗಳ ಮೂಲಕ ಜನರಿಗೆ ನೀಡಲಿದೆ. ಅಲ್ಲದೆ ಬಳಕೆದಾರರು ಈ ಪ್ಲ್ಯಾಟ್ಫಾರ್ಮ್ ಮೂಲಕ ಫೋಟೋ, ಟೆಕ್ಸ್ಟ್, ಇಮೇಜಸ್ ಡೇಟಾ, ಗೇಮಿಂಗ್, ಫ್ಯಾಶನ್,ಟೆಕ್, ಡ್ಯಾನ್ಸ್ ಮೊದಲಾದ ಕಂಟೆಂಟ್ ಅನ್ನು ಶೇರ್ ಮಾಡಬಹುದಾಗಿದೆ.

ಜಿಯೋಗೆ ಶಾಕ್ ನೀಡಿದ BSNL: ರೂ.499ಕ್ಕೆ ಫೀಚರ್ ಫೋನ್, ರೂ.153ಕ್ಕೆ ವರ್ಷದ ಆಫರ್..!ಜಿಯೋಗೆ ಶಾಕ್ ನೀಡಿದ BSNL: ರೂ.499ಕ್ಕೆ ಫೀಚರ್ ಫೋನ್, ರೂ.153ಕ್ಕೆ ವರ್ಷದ ಆಫರ್..!

ಅಷ್ಟೇ ಅಲ್ಲದೆ ಡೊಮೈನ್ನೇಮ್ವೈರ್ ನ ವರದಿಯೊಂದರ ಅನುಸಾರ ಅಮೇಜಾನ್ AmazonAlexaTube.com, AlexaOpenTube.com,AmazonOpenTube.com ಮೊದಲಾದ ಡೊಮೈನ್ ನೇಮ್ ಗಳನ್ನು ನೋಂದಾಯಿಸಲು ಅರ್ಜಿ ಸಲ್ಲಿಸುತ್ತಿದೆ. ಸಧ್ಯಕ್ಕೆ ಯಾವುದನ್ನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲದಿದ್ದರೂ ಅಮೇಜಾನ್ ಯೂಟ್ಯೂಬ್ ಮಾದರಿಯ ಸೇವೆಯ ಮೂಲಕ ಗೂಗಲ್ ಗೆ ಪೈಪೋಟಿ ನೀಡಲಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ವರ್ಷದ ಹಿಂದ ಕ್ರೋಮ್ಕಾಸ್ಟ್ ಅನ್ನು ತನ್ನ ಇ-ಕಾಮರ್ಸ್ ಪ್ಲ್ಯಾಟ್ಫಾರ್ಮ್ ನಿಂದ ತೆಗೆದು ಹಾಕಿದ್ದ ಅಮೇಜಾನ್ ಇತ್ತೀಚೆಗಷ್ಟೆ ಅದನ್ನು ಮತ್ತೆ ತನ್ನ ಪ್ಲ್ಯಾಟ್ಫಾರ್ಮ್ ಗೆ ತರುವುದಾಗಿ ತಿಳಿಸಿತ್ತು.ಹಲವಾರು ವರ್ಷಗಳಿಂದ ಯೂಟ್ಯೂಬ್ ಮೂಲಕ ವೀಡಿಯೋ ಸ್ಟ್ರೀಮಿಂಗ್ ಕ್ಷೇತ್ರದಲ್ಲಿ ಗೂಗಲ್ ತನ್ನ ಪ್ರಾಬಲ್ಯ ಮೆರೆದಿದೆ. ಈ ಕ್ಷೇತ್ರದ ದಿಗ್ಗಜ ಎನಿಸಿರುವ ಗೂಗಲ್ ಗೆ ಪೈಪೋಟಿ ನೀಡಲು ಅಮೇಜಾನ್ ಏನಾದರೂ ಅದ್ಭುತವಾದುದನ್ನೇ ಜನರಿಗೆ ನೀಡಬೇಕಾಗಿದೆ.

Best Mobiles in India

Read more about:
English summary
Amazon is likely in plans to launch a YouTube rival with the moniker AmazonTube as the company has filed trademark for the name. Amazon is said to have filed the trademark for OpenTube too. Amazon is claimed to have registered for AmazonAlexaTube.com, AlexaOpenTube.com, and AmazonOpenTube.com domain names too.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X