ಅಂಬ್ರೇನ್‌ ಕಂಪೆನಿಯಿಂದ ಹೊಸ ಸ್ಮಾರ್ಟ್‌ಗ್ಲಾಸ್‌ ಲಾಂಚ್‌! ಬೆಲೆ ಎಷ್ಟು?

|

ಇತ್ತೀಚಿನ ದಿನಗಳಲ್ಲಿ ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಗ್ಲಾಸ್‌ಗಳ ಜನಪ್ರಿಯತೆ ಹೆಚ್ಚಾಗುತ್ತಿದೆ. ನವೀನ ಮಾದರಿಯ ಟೆಕ್ನಾಲಜಿ ಬೆಂಬಲಿತ ಸ್ಮಾರ್ಟ್‌ಗ್ಲಾಸ್‌ಗಳಿಗೆ ಭಾರಿ ಬೇಡಿಕೆಯಿದೆ. ಸಾಕಷ್ಟು ಸ್ಟೈಲಿಶ್‌ ಹಾಗೂ ಹಲವು ಉಪಯೋಗಗಳನ್ನು ಹೊಂದಿರುವ ಸ್ಮಾರ್ಟ್‌ಗ್ಲಾಸ್‌ಗಳು ಗ್ರಾಹಕರನ್ನು ಸೆಳೆಯುತ್ತಿವೆ. ಇದೇ ಕಾರಣಕ್ಕೆ ಹಲವು ಪ್ರಸಿದ್ಧ ಬ್ರ್ಯಾಂಡ್‌ಗಳು ಕೂಡ ಸ್ಮಾರ್ಟ್‌ಗ್ಲಾಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಅಂಬ್ರೇನ್‌ ಕಂಪೆನಿ ತನ್ನ ಮೊದಲ ಸ್ಮಾರ್ಟ್‌ಗ್ಲಾಸ್‌ 'ಗ್ಲೇರ್ಸ್‌' ಅನ್ನು ಲಾಂಚ್‌ ಮಾಡಿದೆ.

ಅಂಬ್ರೇನ್‌

ಹೌದು, ಅಂಬ್ರೇನ್‌ ಕಂಪೆನಿ ಭಾರತದಲ್ಲಿ ತನ್ನ ಮೊದಲ ಸ್ಮಾರ್ಟ್‌ಗ್ಲಾಸ್‌ ಗ್ಲೇರ್ಸ್‌ ಅನ್ನು ಪರಿಚಯಿಸಿದೆ. ಇದು ಆಡಿಯೋ ಸನ್‌ಗ್ಲಾಸ್‌ ಆಗಿದ್ದು ತನ್ನ ವಿನ್ಯಾಸದಿಂದ ಎಲ್ಲರ ಗಮನಸೆಳೆದಿದೆ. ಇನ್ನು ಈ ಸ್ಮಾರ್ಟ್‌ಗ್ಲಾಸ್‌ ಗೈಡೆಡ್‌ ಆಡಿಯೋ ಡಿಸೈನ್‌ ಹೊಂದಿದ್ದು, ಸ್ಪೀಕರ್‌ಗಳನ್ನು ಒಳಗೊಂಡಿದೆ. ಈ ಸನ್‌ಗ್ಲಾಸ್‌ಗಳನ್ನು ಸ್ಕ್ವೇರ್‌ ಮತ್ತು ರೌಂಡೆಡ್‌ ಫ್ರೇಮ್ಸ್‌ ಮೂಲಕ ವಿನ್ಯಾಸಗೊಳಿಸಲಾಗಿದೆ. ಹಾಗಾದ್ರೆ ಅಂಬ್ರೇನ್‌ ಪರಿಚಯಿಸಿರುವ ಗ್ಲೇರ್ಸ್‌ ಸ್ಮಾರ್ಟ್‌ಗ್ಲಾಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಮುಂದೆ ಓದಿರಿ.

ಸ್ಮಾರ್ಟ್‌ಗ್ಲಾಸ್‌

ಅಂಬ್ರೇನ್ ಪರಿಚಯಿಸಿರುವ ಸ್ಮಾರ್ಟ್‌ಗ್ಲಾಸ್‌ ಇಂಟರ್‌ಬಿಲ್ಸ್‌ ಸ್ಪೀಕರ್‌ ಅನ್ನು ಒಳಗೊಂಡಿವೆ. ಇವುಗಳಲ್ಲಿ ಟಚ್‌ ಕಂಟ್ರೋಲ್‌ ಮೂಲಕ ಕಂಟ್ರೋಲ್‌ ಮಾಡಬಹುದಾಗಿದೆ. ಈ ಸ್ಮಾರ್ಟ್‌ಗ್ಲಾಸ್‌ MEMS ಮೈಕ್ರೊಫೋನ್ ಮತ್ತು HD ಸರೌಂಡ್ ಸೌಂಡ್ ಅನ್ನು ಒಳಗೊಂಡಿದೆ. ಇದು ಬ್ಲೂಟೂತ್ 5.1 ಕನೆಕ್ಟಿವಿಟಿ ಮೂಲಕ ಆಡಿಯೊ ಟೆಕ್ನಾಲಜಿಯನ್ನು ಸಂಯೋಜಿಸಲಿದೆ. ಅಲ್ಲದೆ 10 ಮೀಟರ್ ದೂರದವರೆಗೆ ಕನೆಕ್ಟಿವಿಟಿಯನ್ನು ಒದಗಿಸಲಿದೆ. ಇನ್ನು ಗ್ಲಾಸ್‌ನಲ್ಲಿರುವ ಸ್ಪೀಕರ್‌ಗಳು ಹೆಚ್ಚಿನ ಆಂಬಿಯೆಂಟ್‌ ಸೌಂಡ್‌ ಅನ್ನು ನಿವಾರಿಸಲಿದೆ ಎಂದು ಅಂಬ್ರೇನ್‌ ಹೇಳಿಕೊಂಡಿದೆ.

ಅಂಬ್ರೇನ್‌

ಅಂಬ್ರೇನ್‌ ಸ್ಮಾರ್ಟ್‌ಗ್ಲಾಸ್‌ಗಳು ತ್ವರಿತ ಜೋಡಣೆ ಮತ್ತು ಹಾಲ್ ಸ್ವಿಚ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇದು ಟೆಂಪಲ್ಸ್‌ ಅನ್ನು ತೆರೆದ ತಕ್ಷಣ ಕನೆಕ್ಟ್‌ ಆಗಲಿದೆ. ಈ ಸ್ಮಾರ್ಟ್‌ಗ್ಲಾಸ್‌ ಟಚ್‌ ಕಂಟ್ರೋಲ್‌ ಅನ್ನು ಹೊಂದಿದ್ದು, ಕಾಲ್‌ ರಿಸೀಚ್‌ ಮಾಡುವುದು ಇಲ್ಲವೇ ಕರೆಗಳನ್ನು ತಿರಸ್ಕರಿಸುವುದು, ಪ್ಲೇಬ್ಯಾಕ್ ಅನ್ನು ಕಂಟ್ರೋಲ್‌ ಮಾಡುವುದನ್ನು ಮಾಡಬಹುದಾಗಿದೆ. ಅಲ್ಲದೆ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಬಳಸುವಂತಹ ವಿಭಿನ್ನ ಫೀಚರ್ಸ್‌ಗಳನ್ನು ಕೂಡ ಸ್ಮಾರ್ಟ್‌ಗ್ಲಾಸ್‌ ಮೂಲಕ ಕಂಟ್ರೋಲ್‌ ಮಾಡಬಹುದಾಗಿದೆ.

ಗ್ಲಾಸ್‌ಗಳು

ಇನ್ನು ಈ ಸ್ಮಾರ್ಟ್ ಗ್ಲಾಸ್‌ಗಳು UV400 ಪ್ರಮಾಣೀಕೃತವಾಗಿದ್ದು, ಪರಸ್ಪರ ಬದಲಾಯಿಸಬಹುದಾದ ಬ್ಲೂ-ಲೈಟ್‌ ಫಿಲ್ಟರಿಂಗ್ ಟ್ರಾನ್ಸಫರೆಂಟ್‌ ಲೆನ್ಸ್‌ಗಳನ್ನು ಹೊಂದಿದೆ. ಸ್ಮಾರ್ಟ್ ಗ್ಲಾಸ್‌ಗಳು ನೀಲಿ ಬೆಳಕಿನ ಫಿಲ್ಟರಿಂಗ್‌ನಿಂದ ಸ್ಟ್ಯಾಂಡರ್ಡ್ ಸನ್‌ಗ್ಲಾಸ್‌ಗಳಿಗೆ ಲೆನ್ಸ್‌ಗಳನ್ನು ಬದಲಾಯಿಸಲು ಮ್ಯಾಗ್ನೆಟಿಕ್ ಕ್ಲಿಪ್-ಆನ್‌ನೊಂದಿಗೆ ಬರುತ್ತದೆ.ಇದಲ್ಲದೆ ಈ ಗ್ಲೇರ್ಸ್‌ IPX4 ರೇಟಿಂಗ್‌ ಅನ್ನು ಪಡೆದಿದ್ದು, ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಸಹ ನೀಡಲಾಗಿದೆ. ಈ ಹೊಸ ಗ್ಲೇರ್‌ಗಳು ಒಂದೇ ಚಾರ್ಜ್‌ನಲ್ಲಿ 7 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ಅನ್ನು ಭರವಸೆ ನೀಡುತ್ತವೆ. ಜೊತೆಗೆ ಈ ಸ್ಮಾರ್ಟ್‌ಗ್ಲಾಸ್‌ 99.99% UV ರಕ್ಷಿತವಾಗಿದೆ ಎಂದು ಅಂಬ್ರೇನ್‌ ಕಂಪೆನಿ ಹೇಳಿಕೊಂಡಿದೆ.

ಸ್ಮಾರ್ಟ್‌ಗ್ಲಾಸ್‌

ನಾವು "ನಮ್ಮ ಮೊದಲ ಸ್ಮಾರ್ಟ್ ಗ್ಲಾಸ್‌ಗಳನ್ನು ಪರಿಚಯಿಸಲು ಸಾಕಷ್ಟು ಉತ್ಸುಕರಾಗಿದ್ದೇವೆ. ಸ್ಮಾರ್ಟ್‌ಗ್ಲಾಸ್‌ಗಳ ಮೂಲಕ ಹೊಸ ಆಲಿಸುವಿಕೆ ಅನುಭವಗಳನ್ನು ನೀಡಲಿದೆ. ಇದಕ್ಕಾಗಿ ಗ್ಲೇರ್ಸ್ ನವೀನ ಸೌಂಡ್‌ ಟೆಕ್ನಾಲಜಿ ಮತ್ತು ವಿನ್ಯಾಸವನ್ನು ಬಳಸುತ್ತದೆ. ಅಲ್ಲದೆ ಧ್ವನಿ, ದೃಷ್ಟಿ ಮತ್ತು ಶೈಲಿಯನ್ನು ಸಂಯೋಜಿಸುತ್ತದೆ ಮತ್ತು ಧರಿಸುವವರ ದೈನಂದಿನ ಅನುಭವಗಳನ್ನು ಸುಧಾರಿಸುತ್ತದೆ ಎಂದು ಆಂಬ್ರೇನ್ ಇಂಡಿಯಾದ ಸಹ-ಸಂಸ್ಥಾಪಕ ಮತ್ತು ನಿರ್ದೇಶಕ ಅಶೋಕ್ ರಾಜ್‌ಪಾಲ್ ಹೇಳಿದ್ದಾರೆ.

ಅಂಬ್ರೇನ್

ಇನ್ನು ಅಂಬ್ರೇನ್ ಕಂಪೆನಿ ಪರಿಚಯಿಸಿರುವ ಹೊಸ ಸ್ಮಾರ್ಟ್‌ಗ್ಲಾಸ್‌ಗಳು ಭಾರತದಲ್ಲಿ 4,999ರೂ. ಬೆಲೆಯನ್ನು ಹೊಂದಿವೆ. ಇದನ್ನು ನೀವು ಅಂಬ್ರೇನ್‌ನ ಅಧಿಕೃತ ಆನ್‌ಲೈನ್ ಸ್ಟೋರ್ ಮೂಲಕ ಖರೀದಿಸಬಹುದಾಗಿದೆ. ಇದು ಪ್ರಸ್ತುತ, ಕಪ್ಪು ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಗ್ಲಾಸ್‌ಗಳನ್ನು ಪುರುಷರು ಮತ್ತು ಮಹಿಳೆಯರಿಗೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿದ್ದು, ಒಂದು ವರ್ಷ ಅಥವಾ 365 ದಿನಗಳ ಖಾತರಿಯೊಂದಿಗೆ ಲಭ್ಯವಾಗಲಿದೆ.

Best Mobiles in India

English summary
Ambrane has launched its first smart glasses in india

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X